Friday, Sep 17 2021 | Time 11:47 Hrs(IST)
Special Share

ರಾಜ್‌ ಕುಂದ್ರಾ ವಿರುದ್ದ ಬಿಜೆಪಿ ನಾಯಕನ ಗಂಭೀರ ಆರೋಪ

ರಾಜ್‌ ಕುಂದ್ರಾ ವಿರುದ್ದ ಬಿಜೆಪಿ ನಾಯಕನ ಗಂಭೀರ ಆರೋಪ
ರಾಜ್‌ ಕುಂದ್ರಾ ವಿರುದ್ದ ಬಿಜೆಪಿ ನಾಯಕನ ಗಂಭೀರ ಆರೋಪ

ಮುಂಬೈ, ಜುಲೈ 30(ಯುಎನ್‌ ಐ) ಅಶ್ಲೀಲ ಚಿತ್ರಗಳ ನಿರ್ಮಾಣ, ಪ್ರಸಾರ ಪ್ರಕರಣದಲ್ಲಿ ಕುತ್ತಿಗೆಯವರೆಗೂ ಮುಳುಗಿ, ಪೊಲೀಸ್ ಕಸ್ಟಡಿಯಲ್ಲಿರುವ ರಾಜ್‌ ಕುಂದ್ರಾ ವಿರುದ್ಧ ಬಿಜೆಪಿ ನಾಯಕ ರಾಮ್ ಕದಮ್ ಶುಕ್ರವಾರ ಗಂಭೀರ ಆರೋಪ ಮಾಡಿದ್ದಾರೆ.

ರೂಪದರ್ಶಿಯೊಬ್ಬರಿಗೆ ದೈಹಿಕ ಕಿರುಕುಳ ನೀಡಿದ್ದ ಆರೋಪದ ಜೊತೆಗೆ, ಆನ್‌ಲೈನ್ ಗೇಮ್ಸ್‌ ಹೆಸರಿನಲ್ಲಿ ಸುಮಾರು 3,000 ಕೋಟಿ ರೂಪಾಯಿಗಳ ಅಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಆನ್‌ ಲೈನ್‌ ಗೇಮ್‌ ಹೆಸರಿನಲ್ಲಿ ಲಕ್ಷಾಂತರ ಮಂದಿಯನ್ನು ವಂಚಿಸಿದ್ದು, ಪ್ರಚಾರಕ್ಕಾಗಿ ಪತ್ನಿ ಶಿಲ್ಪಾ ಶೆಟ್ಟಿಯನ್ನು ಬಳಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮುಂಬೈನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ರಾಮ್ ಕದಮ್, ಈ ವರ್ಷದ ಏಪ್ರಿಲ್ 14 ರಂದು ಜುಹು ಪೊಲೀಸ್ ಠಾಣೆಯಲ್ಲಿ ರಾಜ್‌ ಕುಂದ್ರಾ ವಿರುದ್ದ ಪ್ರಮುಖ ರೂಪದರ್ಶಿ ಹಾಗೂ ನಟಿ ದೈಹಿಕ ಕಿರುಕುಳದ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡ ನಂತರ. ಆಕೆಯ ಮೇಲೆ ಒತ್ತಡ ಹೇರಲಾಗಿದೆ. ಪ್ರಕರಣವನ್ನು ದಾಖಲಿಸಬಾರದು ಎಂದು ಆಕೆಯ ಮೇಲೆ ಒತ್ತಡ ತಂದವರು ಯಾರು? ಎಂದು ಪ್ರಶ್ನಿಸಿರುವ ಅವರು, ಕುಂದ್ರಾ ವಿರುದ್ಧ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂಬುದಕ್ಕೆ ರಾಜ್ಯ ಸರ್ಕಾರ ಉತ್ತರಿಸಬೇಕು ಎಂದು ರಾಮ್‌ ಕದಂ ಆಗ್ರಹಿಸಿದ್ದಾರೆ.

ರಾಜ್‌ ಕುಂದ್ರಾ ಸಂಸ್ಥೆ, ವಿಯಾನ್ ಇಂಡಸ್ಟ್ರೀಸ್ ಲಿಮಿಟೆಡ್ 'ಗೇಮ್ ಆಫ್ ಡಾಟ್' ಎಂಬ ಆನ್‌ಲೈನ್ ಗೇಮ್ ಅನ್ನು ಪ್ರಾರಂಭಿಸಿದ್ದು, ಸಾರ್ವಜನಿಕರಿಂದ ಭಾರಿ ಪ್ರಮಾಣದ ಹಣ ಸಂಗ್ರಹಿಸಿದೆ ಎಂದು ಆರೋಪಿಸಿದರು. ಪತ್ನಿ, ನಟಿ ಶಿಲ್ಪಾ ಶೆಟ್ಟಿ ಅವರು ಫೋಟೋ ಮೂಲಕ ಆನ್‌ಲೈನ್ ಗೇಮ್‌ ಗೆ ಜನರನ್ನು ಆಕರ್ಷಿಸುತ್ತಿದ್ದಾರೆ ಎಂದು ದೂರಿದ್ದಾರೆ. ಸರ್ಕಾರದಿಂದ ಮಾನ್ಯತೆ ಪಡೆದ ಆನ್‌ಲೈನ್ ಆಟ ಎಂದು ಹೇಳುವ ಮೂಲಕ ವಿ ಯಾನ್ ಇಂಡಸ್ಟ್ರೀಸ್ 2,500 ಕೋಟಿ ರೂ.ಗಳಿಂದ 3,000 ಕೋಟಿ ರೂ.ಗಳ ಹಗರಣ ನಡೆಸಿರುವ ಆರೋಪವಿದೆ. ದೇಶಾದ್ಯಂತ ನೂರಾರು ಮಂದಿ ವಂಚನೆಗೊಳಗಾಗಿದ್ದಾರೆ. ಮಹಾರಾಷ್ಟ್ರ ಸರ್ಕಾರ ಕೂಡಲೇ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಯುಎನ್‌ ಐ ಕೆವಿಆರ್‌ 2125