Friday, Sep 17 2021 | Time 12:34 Hrs(IST)
Entertainment Share

ಚಾಲೆಂಜಿಂಗ್ ಸ್ಟಾರ್ ಹೊಸ ಸಿನಿಮಾ ಘೋಷಣೆ

ಬೆಂಗಳೂರು, ಜುಲೈ 15(ಯುಎನ್ಐ) ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಸಿನಿಮಾ ಘೋಷಣೆಯಾಗಿದೆ. ಇದು ಡಿ ಬಾಸ್ ಅವರ 55 ನೇ ಸಿನಿಮಾಗಲಿದ್ದು, ಅವರೊಡನೆ ಮಾತುಕತೆ ಫೈನಲ್ ಆಗಿದೆಯಂತೆ.

ಈ ಹಿಂದೆ ಸೂಪರ್ ಹಿಟ್ ಆಗಿದ್ದ ‘ಯಜಮಾನ’ ಸಿನಿಮಾ ತಂಡವೇ ಈ ಸಿನಿಮಾವನ್ನೂ ಮಾಡುತ್ತಿದೆ. ಶೈಲಜಾ ನಾಗ್ ನಿರ್ಮಾಣ ಮಾಡುತ್ತಿದ್ದು, ವಿ. ಹರಿಕೃಷ್ಣ ಪೂರ್ಣ ಪ್ರಮಾಣದ ನಿರ್ದೇಶಕರಾಗಲಿದ್ದಾರೆ.
ಟೈಟಲ್ ಸೇರಿದಂತೆ ಉಳಿದ ಮಾಹಿತಿಗಳನ್ನು ಸದ್ಯದಲ್ಲೇ ಚಿತ್ರತಂಡ ಘೋಷಣೆ ಮಾಡಲಿದೆ. “ರಾಬರ್ಟ್” ದರ್ಶನ್ ರ 53 ನೇ ಸಿನಿಮಾವಾಗಿತ್ತು. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ 54 ನೇ ಸಿನಿಮಾವನ್ನೂ ಅವರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಇದೀಗ ಯಜಮಾನ ತಂಡ ಅವರ 55 ನೇ ಸಿನಿಮಾವನ್ನು ಮಾಡಲು ಹೊರಟಿದೆ.

ಯುಎನ್ಐ ಎಸ್ಎ 1400
More News

'ತಲೈವಿ' ಚಿತ್ರ ವೀಕ್ಷಿಸಿದ ರಜನಿಕಾಂತ್‌

15 Sep 2021 | 10:45 PM

 Sharesee more..

"ರಾಣ" ಟೀಸರ್ ರಿಲೀಸ್

15 Sep 2021 | 7:03 PM

 Sharesee more..