Tuesday, Sep 28 2021 | Time 04:50 Hrs(IST)
Sports Share

ಬಾಕ್ಸಿಂಗ್: ಪೂಜಾ ರಾಣಿಗೆ ಸೋಲು

ಟೋಕಿಯೊ, ಜು.31 (ಯುಎನ್ಐ)- ಮೀರಾಬಾಯಿ ಚಾನು ಭಾರತಕ್ಕೆ ಮೊದಲ ಪದಕ ಗೆದ್ದರು, ಅಂದಿನಿಂದ ಭಾರತಕ್ಕೆ ಒಂದೇ ಒಂದು ಪದಕ ಸಿಕ್ಕಿಲ್ಲ. ಪೂಜಾ ರಾಣಿ ಕ್ವಾರ್ಟರ್ ಫೈನಲ್ ನಲ್ಲಿ ಸೋತಿದ್ದಾರೆ.

75 ಕೆಜಿ ವಿಭಾಗದಲ್ಲಿ ಭಾರತದ ಪೂಜಾ ರಾಣಿ ಅವರ ಒಲಿಂಪಿಕ್ ಪ್ರಯಾಣ ಮುಗಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೂಜಾ ರಾಣಿ 5-0 ಅಂತರದಿಂದ ಚೀನಾದ ಆಟಗಾರ್ತಿ ವಿರುದ್ಧ ಸೋತರು. ಈ ಪಂದ್ಯವು ಏಕಪಕ್ಷೀಯವಾಗಿತ್ತು. ಚೀನಾದ ಆಟಗಾರ್ತಿ ಲಿ ಕಿಯಾನ್ ಎಲ್ಲಾ ಮೂರು ಸುತ್ತುಗಳಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ.

ಈ ಮೊದಲು, ಭಾರತೀಯ ಬಾಕ್ಸರ್ ಪೂಜಾ ರಾಣಿ (75 ಕೆಜಿ) ಕ್ವಾರ್ಟರ್ ಫೈನಲ್ ಪ್ರವೇಶಿಸಲು ಅಲ್ಜೀರಿಯಾದ ಇಚ್ರಾಕ್ ಚೀಬ್ ರನ್ನು 5-0 ಅಂತರದಿಂದ ಸೋಲಿಸಿ ತನ್ನ ಒಲಿಂಪಿಕ್ ಪದಾರ್ಪಣೆ ಮಾಡಿದ್ದರು.

ಯುಎನ್ಐ ವಿಎನ್ಎಲ್ 1738