Friday, Sep 17 2021 | Time 13:34 Hrs(IST)
business economy Share

ಸೆನ್ಸೆಕ್ಸ್ 100 ಅಂಕ ಕುಸಿತ

ಮುಂಬೈ, ಜುಲೈ 14 (ಯುಎನ್‌ಐ)-ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ ಮತ್ತು ಆಟೋ ಷೇರುಗಳ ಮಾರಾಟ ಒತ್ತಡದಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ ಬುಧವಾರ ಆರಂಭಿಕ ವಹಿವಾಟಿನಲ್ಲಿ 158 ಅಂಕ ಕುಸಿತ ಕಂಡು 52,611.97 ಕ್ಕೆ ಇಳಿದಿದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 34.35 ಅಂಕ ಕುಸಿದು 15,778 ಕ್ಕೆ ಇಳಿದಿದೆ.

ಸೆನ್ಸೆಕ್ಸ್, ಆರಂಭಿಕ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 52,801.44 ಮತ್ತು 52,611.97 ರಲ್ಲಿತ್ತು.
ನಿಫ್ಟಿ ಆರಂಭಿಕ ವಹಿವಾಟಿನಲ್ಲಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 15,811.70 ಮತ್ತು 15,764.20ರಲ್ಲಿತ್ತು.
ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ 11 ಏರಿಕೆ ಕಂಡಿದ್ದರೆ 19 ಕಂಪೆನಿಗಳ ಷೇರುಗಳು ಕುಸಿದಿವೆ.
ನಷ್ಟ ಕಂಡ ಷೇರುಗಳ ಪೈಕಿ ಎಚ್‌ಡಿಎಫ್‌ಸಿ, ಹಿಂದ್ ಯೂನಿಲಿವರ್, ಮಾರುತಿ ಸುಜುಕಿ, ಐಸಿಐಸಿಐ ಬ್ಯಾಂಕ್ ಮತ್ತು ನೆಸ್ಲೆ ಇಂಡಿಯಾ ಸೇರಿವೆ.

ಲಾಭಕಂಡ ಷೇರುಗಳಲ್ಲಿ ಟೆಕ್ ಮಹೀಂದ್ರಾ, ಎಲ್ ಅಂಡ್ ಟಿ, ಎಚ್‌ಸಿಎಲ್ ಟೆಕ್ನಾಲಜಿ ಮತ್ತು ಎನ್‌ಟಿಪಿಸಿ ಸೇರಿವೆ.

ಯುಎನ್‍ಐ ಎಸ್ಎಲ್ಎಸ್ 1055