Friday, Oct 22 2021 | Time 21:28 Hrs(IST)
National Share

ನಾಳೆಯಿಂದ 4 ದಿನ ಪ್ರಧಾನಿ ಮೋದಿ ಅಮೆರಿಕ ಪ್ರವಾಸ

ನವದೆಹಲಿ, ಸೆ. 21 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರು ಸೆ. 22 ರಿಂದ 25 ರವರೆಗೆ ಅಮೆರಿಕಾಗೆ ಭೇಟಿ ನೀಡಲಿದ್ದು, ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

ಕ್ವಾಡ್ ಸಭೆಯಲ್ಲಿ ಭಾಗವಹಿಸಲಿರುವ ಮೋದಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ.

ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಪ್ರಧಾನಿಯವರು ಅಮೆರಿಕಾಗೆ ಭೇಟಿ ನೀಡುತ್ತಿರುವ ಸಮಯದಲ್ಲಿ, ಆ ದೇಶದ ಪರಿಸ್ಥಿತಿ ಮತ್ತು ಪ್ರದೇಶದ ಮೇಲಿನ ಅದರ ಪ್ರಭಾವ ಕುರಿತಾದ ಮಾತುಕತೆ ಕಾರ್ಯಸೂಚಿಯಲ್ಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ಶೃಂಗ್ಲಾ ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಭಾರತದಿಂದ ಹೊರಟು, ಸೆ .26 ರಂದು ಹಿಂತಿರುಗಲಿದ್ದಾರೆ. ಕೋವಿಡ್ -19 ಸಾಂಕ್ರಾಮಿಕದ ಆರಂಭದ ನಂತರ ನೆರೆಹೊರೆಯ ಆಚೆಗಿನ ಪ್ರಧಾನ ಮಂತ್ರಿಯವರ ಮೊದಲ ಭೇಟಿ ಇದಾಗಿದೆ. ಪ್ರಧಾನಿ ಈ ವರ್ಷ ಮಾರ್ಚ್‌ನಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದರು.

ಮೋದಿ ಅವರು ಸೆಪ್ಟೆಂಬರ್ 24 ರಂದು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೇಟಿ ಮಾಡಲಿದ್ದಾರೆ ಮತ್ತು ಅಫ್ಘಾನಿಸ್ತಾನದಲ್ಲಿ ಇತ್ತೀಚಿನ ಬೆಳವಣಿಗೆಗಳ ನಂತರ ಪ್ರಸ್ತುತ ಪ್ರಾದೇಶಿಕ ಭದ್ರತೆಯ ಪರಿಸ್ಥಿತಿಯನ್ನು ಉಭಯ ಮುಖಂಡರು ಚರ್ಚಿಸಲಿದ್ದಾರೆ.

"ಆಮೂಲಾಗ್ರತೆ, ಉಗ್ರವಾದ, ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಜಾಗತಿಕ ಭಯೋತ್ಪಾದಕರ ಜಾಲವನ್ನು ಕಿತ್ತುಹಾಕುವ ಅಗತ್ಯವನ್ನು ಉಭಯ ಮುಖಂಡರೂ ಚರ್ಚಿಸಲಿದ್ದಾರೆ” ಎಂದು ಶೃಂಗ್ಲಾ ತಿಳಿಸಿದ್ದಾರೆ.

ಸೆಪ್ಟೆಂಬರ್ 24 ರಂದು ಶ್ವೇತಭವನದಲ್ಲಿ ಕ್ಯೂಯುಎಡಿ ಸಭೆ ನಡೆಯಲಿದ್ದು, ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಯೋಶಿಹೈದೆ ಸುಗಾ ಜೊತೆಗೆ ಮೋದಿ ಮತ್ತು ಬಿಡೆನ್ ಭಾಗವಹಿಸಲಿದ್ದಾರೆ.

ಭೇಟಿಯ ಸಮಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವು ಸಹ ಚರ್ಚೆಯ ಪ್ರಮುಖ ವಿಷಯವಾಗಲಿದೆ. ಹಾಗೂ ಬುಧವಾರ ಅಧ್ಯಕ್ಷ ಜೋ ಬಿಡೆನ್ ಆಯೋಜಿಸುವ ಕೋವಿಡ್ 19 ಜಾಗತಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.

ಯುಎನ್ಐ ಎಸ್ಎ 1755
More News
95% ಜನರಿಗೆ ಪೆಟ್ರೋಲ್, ಡೀಸೆಲ್ ಅಗತ್ಯವಿಲ್ಲ ಎಂದ ಯುಪಿ ಸಚಿವ; ಜನರಿಗೂ ಕೂಡ ಬಿಜೆಪಿ ಅಗತ್ಯವಿಲ್ಲವೆಂದ ಅಖಿಲೇಶ್ ಯಾದವ್

95% ಜನರಿಗೆ ಪೆಟ್ರೋಲ್, ಡೀಸೆಲ್ ಅಗತ್ಯವಿಲ್ಲ ಎಂದ ಯುಪಿ ಸಚಿವ; ಜನರಿಗೂ ಕೂಡ ಬಿಜೆಪಿ ಅಗತ್ಯವಿಲ್ಲವೆಂದ ಅಖಿಲೇಶ್ ಯಾದವ್

22 Oct 2021 | 8:03 PM

ಲಕ್ನೋ : ಅ, 22 (ಯುಎನ್‌ಐ) ಶೇಕಡಾ 95 ರಷ್ಟು ಜನರಿಗೆ ಪೆಟ್ರೋಲ್ ಮತ್ತು ಡೀಸೆಲ್ ಅಗತ್ಯವಿಲ್ಲ ಎಂದು ಉತ್ತರಪ್ರದೇಶದ ಸಚಿವ ಉಪೇಂದ್ರ ತಿವಾರಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಆ ಜನರಿಗೆ ಬಿಜೆಪಿ ಅಗತ್ಯವಿಲ್ಲ ಎಂಬುದು ಕೂಡ ಸತ್ಯ ಎಂದು ಟಾಂಗ್​ ನೀಡಿದ್ದಾರೆ.

 Sharesee more..
ಪ್ರೀತಿ ತಿರಸ್ಕಾರ ಮಾಡಿದ ಯುವತಿ: ಸೇಡು ತೀರಿಸಿಕೊಳ್ಳಲು ಹೋಗಿ ಜೈಲು ಪಾಲಾದ ಪ್ರಿಯತಮ!

ಪ್ರೀತಿ ತಿರಸ್ಕಾರ ಮಾಡಿದ ಯುವತಿ: ಸೇಡು ತೀರಿಸಿಕೊಳ್ಳಲು ಹೋಗಿ ಜೈಲು ಪಾಲಾದ ಪ್ರಿಯತಮ!

22 Oct 2021 | 7:50 PM

ವಿಶಾಖಪಟ್ಟಣಂ: ಅ, 22 (ಯುಎನ್‌ಐ) : ಪ್ರೀತಿ ತಿರಸ್ಕಾರ ಮಾಡಿದ ಯುವತಿ ಮೇಲೆ ಕೋಪ ತೀರಿಸಿಕೊಳ್ಳುವ ಉದ್ದೇಶದಿಂದ ಇಲ್ಲೋರ್ವ ಮಾಡಬಾರದ್ದನ್ನು ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

 Sharesee more..
ಮೂರು ತಿಂಗಳ ಮಗುವನ್ನು ಹತ್ಯೆ ಮಾಡಿದ ಅಜ್ಜಿ, ಮತ್ತೊಂದು ಮಗುವಿನ ಹತ್ಯೆಗೂ ಯತ್ನ

ಮೂರು ತಿಂಗಳ ಮಗುವನ್ನು ಹತ್ಯೆ ಮಾಡಿದ ಅಜ್ಜಿ, ಮತ್ತೊಂದು ಮಗುವಿನ ಹತ್ಯೆಗೂ ಯತ್ನ

22 Oct 2021 | 7:47 PM

ಕೊಯಮತ್ತೂರು: ಅ, 22 (ಯುಎನ್‌ಐ) ಅಜ್ಜಿಯೋರ್ವಳು ತನ್ನ ಮೂರು ತಿಂಗಳ ಮೊಮ್ಮಗನನ್ನೇ ಕೊಲೆ ಮಾಡಿ ಕ್ರೌರ್ಯ ಮೆರೆದಿದ್ದಾಳೆ.

 Sharesee more..

“ಅಭ್ಯಾಸ್” ಪರೀಕ್ಷಾರ್ಥ ಹಾರಾಟ ಯಶಸ್ವಿ

22 Oct 2021 | 7:21 PM

 Sharesee more..

ನಟಿ ಸುಧಾ ಚಂದ್ರನ್‌ ಕ್ಷಮೆಯಾಚಿಸಿದ ಸಿಐಎಸ್ಎಫ್

22 Oct 2021 | 7:04 PM

 Sharesee more..