Thursday, Jan 21 2021 | Time 03:53 Hrs(IST)
  • ಉಪ ಸಭಾಪತಿ ಚುನಾವಣೆ ನಂತರ ಸಭಾಪತಿ ಸ್ಥಾನಕ್ಕೆ ಕೆ ಪ್ರತಾಪ ಚಂದ್ರ ಶೆಟ್ಟಿ ರಾಜೀನಾಮೆ !?
  • ವಿಧಾನ ಮಂಡಲ ಕಲಾಪ ಅಧಿಸೂಚನೆಗೂ ಮುನ್ನವೇ ಸಭಾಪತಿ ವಿರುದ್ಧ ಅವಿಶ್ವಾಸ ನೋಟೀಸ್ ಸ್ವೀಕರಿಸಿದ ಕಾರ್ಯದರ್ಶಿ
Entertainment Share

'ಆ ಒಂದು ಕನಸು' ಶೀರ್ಷಿಕೆ ಅನಾವರಣ

'ಆ ಒಂದು ಕನಸು' ಶೀರ್ಷಿಕೆ ಅನಾವರಣ
'ಆ ಒಂದು ಕನಸು' ಶೀರ್ಷಿಕೆ ಅನಾವರಣ

ಬೆಂಗಳೂರು, ನ 28 (ಯುಎನ್‍ಐ) ರಂಗು ಕ್ರಿಯೇಷನ್ಸ್ ಲಾಂಛನದಲ್ಲಿ ದಿಲೀಪ ಬಿ.ಎಂ ನಿರ್ಮಿಸುತ್ತಿರುವ ನೂತನ ಚಿತ್ರ 'ಆ ಒಂದು ಕನಸು' ಚಿತ್ರದ ಶೀರ್ಷಿಕೆಯನ್ನು ಹಿರಿಯ ನಟರಾದ ಎಸ್ ಉಮೇಶ್ , ಹೊನ್ನವಳ್ಳಿ ಕೃಷ್ಣ ಹಾಗೂ ಹಿರಿಯ ಕಂಠದಾನ ಕಲಾವಿದೆ ಆಶಾ ಬಿಡುಗಡೆ ಮಾಡಿದ್ದಾರೆ.

ಡಿಸೆಂಬರ್ 3ರಿಂದ ಚಿತ್ರೀಕರಣ ಆರಂಭ ವಾಗಲಿದ್ದು, ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿಷ್ಣು ನಾಚನೇಕರ್ ನಿರ್ದೇಶಿಸುತ್ತಿದ್ದಾರೆ.

ಕನ್ನಡದ ಕೆಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ, ಕಿರುತೆರೆಯ ಹಲವು ಧಾರಾವಾಹಿಗಳ ಸಂಚಿಕೆ ನಿರ್ದೇಶಕರಾಗಿ, ಪ್ರಸಿದ್ಧ “ಶನಿ” ಧಾರಾವಾಹಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ವಿಷ್ಣು ನಾಚನೇಕರ್ ಅವರಿಗೆ ಹಿರಿ ತೆರೆಯಲ್ಲಿ ಇದು ಚೊಚ್ಚಲ ನಿರ್ದೇಶನದ ಚಿತ್ರ.

ಕೆ.ಉದಯಂ ಕಥೆ, ಚಿತ್ರಕಥೆ ಹಾಗೂ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ವೀನಸ್ ಮೂರ್ತಿ‌ ಛಾಯಾಗ್ರಹಣ, ಅಭಿಷೇಕ್ ಜೆ ರಾಯ್ ಸಂಗೀತ ನಿರ್ದೇಶನ, ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಹಾಗೂ ಹೈಟ್ ಮಂಜು, ಸ್ಟಾರ್ ಗಿರಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

'ಆ ಒಂದು ಕನಸು' ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ನಾಲ್ಕು ಸಾಹಸ ಸನ್ನಿವೇಶಗಳಿವೆ. ಬೆಂಗಳೂರು, ಸಾಗರ, ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯಲಿದೆ.ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ವಿಶ್ವಾಸ್ ನಾಯಕರಾಗಿ ನಟಿಸುತ್ತಿರುವ ಎರಡನೇ ಚಿತ್ರವಿದು. ಬಾಲ ರಾಜವಾಡಿ, ಅಮಿತ್ ಗಿರೀಶ್ ಶಿವಣ್ಣ, ರಮೇಶ್ ಭಟ್, ಗಿರೀಜಾ ಲೋಕೇಶ್, ಕುರಿ ಬಾಂಡ್ ರಂಗ, ಹರ್ಷವರ್ಧನ್, ಶ್ವೇತಾರಾವ್, ಜಯಶ್ರೀ, ನಾರಾಯಣ ಸ್ವಾಮಿ ಮುಂತಾದವರು ತಾರಾಬಳಗದಲ್ಲಿದ್ದಾರೆ.ಯುಎನ್‍ಐ ಎಸ್‍ಎ 1753

More News

‘ಕುಂಬಳಕಾಯಿ’ ಒಡೆದು ದಾಖಲೆ ಬರೆದ’ ಸಾಲ್ಟ್’

20 Jan 2021 | 12:26 PM

 Sharesee more..
ಗಾಜನೂರು: ಇದು ಡಾ  ರಾಜ್ ಗಾಜನೂರಿನ ಕಥೆಯಲ್ಲ

ಗಾಜನೂರು: ಇದು ಡಾ ರಾಜ್ ಗಾಜನೂರಿನ ಕಥೆಯಲ್ಲ

19 Jan 2021 | 9:25 PM

ಬೆಂಗಳೂರು, ಜ 19 (ಯುಎನ್ಐ) ಗಾಜನೂರು ಹೆಸರಿನಲ್ಲಿ ಚಿತ್ರವೊಂದು ಸಿದ್ಧವಾಗುತ್ತಿದೆ. ಹಾಗೆಂದು ಗಾಜನೂರು ಶೀರ್ಷಿಕೆಯ ಚಿತ್ರಕ್ಕೂ ಅಣ್ಣಾವ್ರ ಹುಟ್ಟೂರು ಗಾಜನೂರಿಗೆ ಯಾವುದೇ ಸಂಬಂಧವಿಲ್ಲ,

 Sharesee more..
ಈ ವಾರ ಪ್ರೇಕ್ಷಕರಿಗೆ ‘ಲಡ್ಡು’

ಈ ವಾರ ಪ್ರೇಕ್ಷಕರಿಗೆ ‘ಲಡ್ಡು’

19 Jan 2021 | 9:22 PM

ಬೆಂಗಳೂರು, ಜ 19 (ಯುಎನ್‍ಐ) ರೊಮ್ಯಾಂಟಿಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಚಿತ್ರ ‘ಲಡ್ಡು’ ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.

 Sharesee more..
ಡ್ರಗ್ ಪ್ರಕರಣ: ಆದಿತ್ಯ ಆಳ್ವಾ ಒಂದು ವಾರ

ಡ್ರಗ್ ಪ್ರಕರಣ: ಆದಿತ್ಯ ಆಳ್ವಾ ಒಂದು ವಾರ

19 Jan 2021 | 6:13 PM

ಬೆಂಗಳೂರು, ಜ 19 (ಯುಎನ್ಐ) ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ, ಆರನೇ ಆರೋಪಿ ಆದಿತ್ಯ ಆಳ್ವಾ ಅವರನ್ನು ಒಂದು ವಾರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

 Sharesee more..