Monday, Jul 13 2020 | Time 00:20 Hrs(IST)
Entertainment Share

'ಕನಸುಗಾರ'ನಿಗೆ ಜನ್ಮದಿನದಂದು ಶುಭಾಶಯಗಳ ಮಹಾಪೂರ

ಬೆಂಗಳೂರು, ಮೇ 30 (ಯುಎನ್ಐ) ಸ್ಯಾಂಡಲ್ ವುಡ್ ಕ್ರೇಜಿಸ್ಟಾರ್ ರವಿಚಂದ್ರನ್‌ ಅವರು ಇಂದು 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಕೊರೊನಾ ವೈರಸ್‌ ಸಂಕಷ್ಟದ ಹಿನ್ನೆಲೆಯಲ್ಲಿ "ಏಕಾಂಗಿ" ರವಿಚಂದ್ರನ್‌ ಅವರು ತಮ್ಮ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.
'ರಣಧೀರ'ನಿಗೆ ಕನ್ನಡ ಚಿತ್ರರಂಗದ ಗಣ್ಯರು ಸೇರಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರಿದ್ದಾರೆ.
ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅವಾಗವಾಗ ಸಿಗೋಲ್ಲ, ಪ್ರತಿದಿನಾ ಫೋನ್​​ನಲ್ಲಿ ಮಾತಾಡಲ್ಲ . ಆದರೆ, ನಮ್ಮ ಸ್ನೇಹ ಪ್ರೀತಿ ಎಂದಿಗೂ ಕಮ್ಮಿ ಆಗೋಲ್ಲ ಹ್ಯಾಪಿ ಬರ್ತ್ ಡೇ ರವಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ವಿಶ್​ ಮಾಡಿದ್ದಾರೆ.
ನವರಸ ನಾಯಕ ಜಗ್ಗೇಶ್ ಅವರು, ನಾನು ರವಿಸಾರ್ ಭೇಟಿಯಾಗಿದ್ದು 1985 ಪ್ರಳಯಾಂತಕ ಚಿತ್ರಕ್ಕೆ ವೀರಸ್ವಾಮಿರವರು ಕರೆಸಿದರು! ನನ್ನ ಅವಕಾಶ ವಿಜಯಕಾಶಿ ಹೋಯಿತು! ನಂತರ 1987ರಣಧೀರ ನಟಿಸಿದೆ! ಅಲ್ಲಿಂದ ಇಂದಿಗೂ ಸಹೋದರರಂತೆ ಇದ್ದೇವೆ! ಒಟ್ಟಿಗೆ ಅನೇಕ ಚಿತ್ರನಟಿಸಿದೆವು! ನನಗಿಂತ 2 ವರ್ಷ ಹಿರಿಯರು! ಹೃದಯದಿಂದ ಹರಸುವೆ ಅವರ ಹುಟ್ಟು ಹಬ್ಬಕ್ಕೆ! ನೂರ್ಕಾಲ ಸುಖವಾಗಿ ಬಾಳಿ ಸಹೋದರ ..ಶುಭದಿನ ಎಂದು ಅವರೊಂದಿಗಿನ ಫೋಟೋ ಒಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಶುಭಕೋರಿದ್ದಾರೆ.
ನಟ ನಿಖಿಲ್ ಕುಮಾರ್ ಸ್ವಾಮಿ, ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಅಪ್ರತಿಮ ಕಲಾವಿದರಾದ ವಿ.ರವಿಚಂದ್ರನ್ ಅವರಿಗೆ ಜನ್ಮದಿನದ ಶುಭಕೋರುವ ಮೂಲಕ ತಾವು ಹಾಗೂ ಅವರ ತಂದೆ ಕುಮಾರ್ ಸ್ವಾಮಿ ಅವರು ರವಿಚಂದ್ರನ್ ಅವರೊಂದಿಗಿನ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಯುಎನ್ಐ ಪಿಕೆ ಎಎಚ್ 1530
More News

ಬಾಲಿವುಡ್ ಹಾಸ್ಯ ನಟ ಜಗದೀಪ್ ಜಾಫ್ರಿ ನಿಧನ

08 Jul 2020 | 11:30 PM

 Sharesee more..
ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

08 Jul 2020 | 6:18 PM

ಬೆಂಗಳೂರು, ಜುಲೈ 08 (ಯುಎನ್‍ಐ) ಕನ್ನಡದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೊರೋನಾ ಸೋಂಕಿಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

 Sharesee more..