Sunday, Dec 15 2019 | Time 19:37 Hrs(IST)
 • ದೇಶದಲ್ಲಿ ಆರ್‌ಎಸ್‌ಎಸ್‌ ಕಾರ್ಯಸೂಚಿ ಜಾರಿಗೆ ಕೇಂದ್ರದಿಂದ ಯತ್ನ: ಸಾಧು ಸಿಂಗ್
 • ಸಿಎಬಿ ಪ್ರತಿಭಟನೆಯಲ್ಲಿ ಜಾಮಿಯಾ ವಿದ್ಯಾರ್ಥಿಗಳು ಪಾಲ್ಗೊಂಡಿಲ್ಲ: ಒಕ್ಕೂಟ ಸ್ಪಷ್ಟನೆ
 • ಬಾಂಗ್ಲಾದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಮುಸ್ಲೀಂ ಸಮುದಾಯವನ್ನು ಹೊರಗಟ್ಟಲು ಪೌರತ್ವ ತಿದ್ದುಪಡಿ ಮಸೂದೆ: ಪೇಜಾವರ ಸ್ವಾಮೀಜಿ
 • ಪಂತ್-ಅಯ್ಯರ್ ಅರ್ಧಶತಕ: ವೆಸ್ಟ್‌ ಇಂಡೀಸ್‌ಗೆ 288 ರನ್ ಗುರಿ
 • ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ರಾಷ್ಟ್ರಾದ್ಯಂತ ಮುಸ್ಲಿಂ ಲೀಗ್‌ನಿಂದ ಆಂದೋಲನ
 • ಶಬರಿಮಲೆ ಅಯ್ಯಪ್ಪ ದೇಗಲ ಪ್ರವೇಶಿಸದಿರಲು ಮಹಿಳೆಯರಿಗೆ ಗಾಯಕ ಡಾ ಕೆ ಜೆ ಏಸುದಾಸ್ ಮನವಿ
 • ರಾಮಾಯಣ ಕಲ್ಪನೆಯಲ್ಲ; ಇತಿಹಾಸ- ಶ್ರೀರಾಘವೇಶ್ವರ ಸ್ವಾಮೀಜಿ
 • ಜನವರಿ 1 ರಿಂದ ಕೃಷಿ ಉತ್ಪನ್ನಗಳ ಖರೀದಿಗೆ ಕ್ರಮ: ಲಕ್ಷ್ಮಣ ಸವದಿ
 • ಸುಕನ್ಯಾ ಸಮೃದ್ದಿ ಯೋಜನೆ ಖಾತೆದಾರರಿಗೆ ಸಿಹಿ ಸುದ್ದಿ !
 • ಪೌರತ್ವ ತಿದ್ದುಪಡಿ ಮಸೂದೆ ಜಾರಿಯಿಂದ ದೇಶ ರಕ್ಷಣೆಯಾಗಿದೆ; ಪ್ರಧಾನಿ
 • ಪಂತ್-ಅಯ್ಯರ್ ಅರ್ಧಶತಕ: ವೆಸ್ಟ್‌ ಇಂಡೀಸ್‌ಗೆ 289 ರನ್ ಗುರಿ
 • ಸೈಫ್ ಪುತ್ರಿಯಾಗಿ ಅನನ್ಯ !
 • ದಬಾಂಗ್ -3 ಕುರಿತು ಸಲ್ಮಾನ್ ಮಾತು
 • ಎಚ್ ಡಿ ರೇವಣ್ಣ ಮಂಡ್ಯ ಉಸಾಬರಿಗೆ ಬರುವುದು ಬೇಡ: ನಾರಾಯಣಗೌಡ
 • ಧೋನಿ ನನ್ನ ನೆಚ್ಚಿನ ಕ್ರಿಕೆಟರ್; ಸಲ್ಮಾನ್ ಖಾನ್
Entertainment Share

’ಕನ್ನಡ್ ಗೊತ್ತಿಲ್ಲ’ ಅಲ್ಲ . . .. ಕನ್ನಡ ಗೊತ್ತಿದೆ ಅನ್ನಿ

’ಕನ್ನಡ್ ಗೊತ್ತಿಲ್ಲ’ ಅಲ್ಲ . . .. ಕನ್ನಡ ಗೊತ್ತಿದೆ ಅನ್ನಿ
’ಕನ್ನಡ್ ಗೊತ್ತಿಲ್ಲ’ ಅಲ್ಲ . . .. ಕನ್ನಡ ಗೊತ್ತಿದೆ ಅನ್ನಿ

ಬೆಂಗಳೂರು, ನ ೨೨ (ಯುಎನ್‌ಐ) ಕರ್ನಾಟಕದಲ್ಲಿ ಕನ್ನಡದ ಇಂದಿನಿ ಸ್ಥಿತಿ,ಪರಭಾಷಿಕರು ತೋರುತ್ತಿರುವ ಅಗೌರವ, ತಾತ್ಸಾರದ ಬಗ್ಗೆ ಇಂದು ರಾಜ್ಯದಾದ್ಯಂತ ತೆರೆಕಂಡಿರುವ ’ಕನ್ನಡ್ ಗೊತ್ತಿಲ್ಲ’ ಚಿತ್ರ ಬೆಳಕು ಚೆಲ್ಲಿದೆ

ಕನ್ನಡಿಗರು ತಮ್ಮ ಮಾತೃಭಾಷೆಗಾಗುವ ಅಪಮಾನ ಸಹಿಸುತ್ತಲೇ ಪರಭಾಷೆಗೆ ಗೌರವ ಕೊಡುವಾಗ, ನೆರೆಯ ರಾಜ್ಯಗಳಲ್ಲಿ ಕನ್ನಡಿಗರಿಗಾಗುವ ಹಿಂಸೆ, ದೌರ್ಜನ್ಯಗಳ ಮೇಲೆ ಚಿತ್ರದಲ್ಲಿ ಕನ್ನಡಿ ಹಿಡಿಯಲಾಗಿದೆ

ಉದ್ಯೋಗ ನಿಮಿತ್ತ ಹೊರ ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದವವರು, ಅದರಲ್ಲೂ ಕನ್ನಡ ಗೊತ್ತಿಲ್ಲ ಎನ್ನುವ ಮಂದಿ ಒಬ್ಬೊರ ಹಿಂದೊಬ್ಬರಂತೆ ಕಾಣೆಯಾಗುತ್ತಿರುತ್ತಾರೆ ೮ ಜನರು ನಾಪತ್ತೆಯಾಗುತ್ತಿದ್ದಂತೆ ಪೊಲೀಸರಿಗೆ ತಲೆನೋವು ಶುರುವಾಗುತ್ತದೆ ಪ್ರಕರಣ ಭೇದಿಸಲು ಪೊಲೀಸ್ ಅಧಿಕಾರಿ ಶ್ರುತಿ ಚಕ್ರವರ್ತಿ(ಹರಿಪ್ರಿಯಾ)ಯನ್ನು ನೇಮಿಸಲಾಗುತ್ತದೆ

ಹಾಗಾದರೆ ಈ ೮ ಜನರು ಯಾರು? ’ಕನ್ನಡ್ ಗೊತ್ತಿಲ್ಲ’ ಎನ್ನುವ ಅವರ ನಾಪತ್ತೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಭೇದಿಸುವುದೇ ಚಿತ್ರದ ತಿರುಳು

ಡಾಟರ್ ಆಫ್ ಪಾರ್ವತಮ್ಮ ಚಿತ್ರದಂತೆಯೇ ’ಕನ್ನಡ್ ಗೊತ್ತಿಲ್ಲ’ ದಲ್ಲೂ ಹರಿಪ್ರಿಯಾ ಸುಂದರವಾದ ಖಡಕ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದಾರೆ ಟ್ಯಾಕ್ಸಿ ಚಾಲಕನಾಗಿ ಧರ್ಮಣ್ಣ, ಪೊಲೀಸ್ ಅಧಿಕಾರಿಗೆ ಸಹಾಯಕನಾಗಿ ಪವನ್ ಉತ್ತಮವಾಗಿ ನಟಿಸಿದ್ದಾರೆ

ವಿಶೇಷ ಹಿರಿಯ ಪೊಲೀಸ್ ಅಧಿಕಾರಿಯಾಗಿ ಸುಧಾರಾಣಿ ಕಾಣಿಸಿಕೊಂಡಿದ್ದು, ಮಯೂರ್ ರಾಘವೇಂದ್ರ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನವಿದೆ ಕುಮಾರ ಕಂಠೀರವ ಬಂಡವಾಳ ಹೂಡಿದ್ದಾರೆ

ಕಚೇರಿ, ಹೋಟೆಲ್, ವ್ಯಾಪಾರ ಸ್ಥಳಗಳು, ಮಾರುಕಟ್ಟೆ, ಟ್ಯಾಕ್ಸಿಗಳಲ್ಲಿ ಪರಭಾಷಿಕರು ತೋರುವ ದರ್ಪದ ನಡವಳಿಕೆ, ಕನ್ನಡ ಭಾಷೆಯ ನಿರ್ಲಕ್ಷ್ಯದ ಜೊತೆಗೆ ’ಕನ್ನಡ್ ಗೊತ್ತಿಲ್ಲ’ ಎನ್ನುತ್ತಿದ್ದ ಮಂದಿ ’ಕನ್ನಡ ಗೊತ್ತಿದೆ’ ಎಂದು ಹೇಳುವುದರೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ ಕನ್ನಡದ ಬಗ್ಗೆ ಒಲವಿರುವ ಜನರು, ಕನ್ನಡ ಕಲಿಯಬೇಕೆಂಬ ಆಸಕ್ತಿಯಿರುವ ಪರಭಾಷಿಕರು ಚಿತ್ರವನ್ನು ನೋಡಿ ಆನಂದಿಸಹುದು.

ಯುಎನ್‌ಐ ಎಸ್‌ಎ ವಿಎನ್ ೧೯೩೪