Tuesday, Oct 22 2019 | Time 09:27 Hrs(IST)
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
Entertainment Share

'ಗಂಗೂಬಾಯಿ' ಆಗಿ ಆಲಿಯಾ

ಮುಂಬೈ, ಸೆ 20 (ಯುಎನ್ಐ) ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮುಂಬರುವ 'ಗಂಗೂಬಾಯಿ' ಚಿತ್ರದಲ್ಲಿ ನಟಿ ಆಲಿಯಾ ಭಟ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಬನ್ಸಾಲಿ, ಆಲಿಯಾ ಭಟ್ ಹಾಗೂ ನಟ ಸಲ್ಮಾನ್ ಖಾನ್ ಮುಖ್ಯಭೂಮಿಕೆಯಲ್ಲಿ 'ಇನ್ ಶಾ ಅಲ್ಲಾ' ಚಿತ್ರ ಹೊರತರಲು ಸಜ್ಜಾಗಿದ್ದರು. ಆದರೆ, ನಿರ್ದೇಶಕರು ಸದ್ಯ ಆ ಚಿತ್ರ ಬದಿಗಿಟ್ಟಿದ್ದಾರೆ. ಈಗ ಬನ್ಸಾಲಿ ಅವರ ಎರಡನೇ ಚಿತ್ರದಲ್ಲಿ ಆಲಿಯಾ ಕಾಣಿಸಿಕೊಳ್ಳುವ ಸಂಭವವಿದೆ ಎಂಬ ಮಾತುಗಳು ಬಿಟೌನ್ ನಲ್ಲಿ ಕೇಳಿಬರುತ್ತಿವೆ.
ಇದಕ್ಕೂ ಮುನ್ನ 'ಗಂಗೂಬಾಯಿ' ಪಾತ್ರಕ್ಕೆ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಅವರ ಹೆಸರು ಕೇಳಿಬಂದಿತ್ತು. ಆದರೆ, ಸಮಯ ಹೊಂದಾಣಿಕೆ ಆಗದ ಕಾರಣ ಚಿತ್ರತಂಡ ಅವರನ್ನು ಕೈಬಿಡಲಾಯಿತಂತೆ.

ಆಲಿಯಾ ಭಟ್ ಸುದ್ದಿಗಾರರೊಂದಿಗೆ ಮಾತನಾಡಿ , “ನಾನು ಸಂಜಯ್ ಲೀಲಾ ಬನ್ಸಾಲಿ ಅವರ 'ಇನ್ ಶಾ ಅಲ್ಲಾ' ಚಿತ್ರದಲ್ಲಿ ನಟಿಸಲು ತುಂಬಾ ಉತ್ಸುಕಳಾಗಿದ್ದು, ಸಲ್ಮಾನ್ ಅವರೊಂದಿಗೆ ನಟಿಸಲು ತುಂಬಾ ಕಾತರಳಾಗಿದ್ದೆ. ಆದರೆ, ಕೆಲವೊಮ್ಮೆ ಎಲ್ಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ. ಶೀಘ್ರವೇ ಸಲ್ಮಾನ್ ಅವರೊಂದಿಗೆ ನಟಿಸುವೆ ಎಂದು ಹೇಳಿದ್ದಾರೆ.
ಯುಎನ್ಐ ಪಿಕೆ ಕೆಎಸ್ ವಿ 1757