Monday, Jul 13 2020 | Time 01:12 Hrs(IST)
Karnataka Share

‘ಜೈ ಶ್ರೀರಾಮ್’ ಜಪಿಸಲು ಒತ್ತಾಯ : ನಾಲ್ವರ ವಿರುದ್ಧ ಪ್ರಕರಣ

ಬಂಟ್ವಾಳ, ಮೇ 29 (ಯುಎನ್‍ಐ) ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ 'ಜೈ ಶ್ರೀ ರಾಮ್' ಎಂದು ಜಪಿಸುವಂತೆ ಒತ್ತಾಯಿಸಿದ ಆರೋಪದ ಮೇಲೆ ವಿಟ್ಲ ಪೊಲೀಸರು ಭಜರಂಗದಳದ ಮುಖಂಡ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳನ್ನು ಕನ್ಯಾನ ನಿವಾಸಿ ಭಜರಂಗದಳದ ನಾಯಕ ದಿನೇಶ್ ಮತ್ತು ಕೊಲ್ನಾಡು ಗ್ರಾಮದ 16 ವರ್ಷದ ಇಬ್ಬರು ಹಾಗೂ ಕನ್ಯಾನ ಗ್ರಾಮದ 17 ವರ್ಷದ ಓರ್ವ ಬಾಲಕ ಎಂದು ಗುರುತಿಸಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಹಲ್ಲೆಗೆ ಒಳಗಾದವನನ್ನು ಕುಡ್ತುಮುಗುರುವಿನ ಮೊದಲ ವರ್ಷದ ಪಿಯುಸಿ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಏಪ್ರಿಲ್ 21 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾಲ್ವರು ಆರೋಪಿಗಳು ವಿದ್ಯಾರ್ಥಿಯ ಬೈಕ್‌ಗೆ ಅಡ್ಡಹಾಕಿ ಆತನನ್ನು ನಿಂದಿಸಲು ಪ್ರಾರಂಭಿಸಿದರು. ನಂತರ ಕಾಡುಮಠ ಪ್ರೌಢ ಶಾಲಾ ಮೈದಾನಕ್ಕೆ ಎಳೆದೊಯ್ದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಜೈ ಶ್ರೀ ರಾಮ್ ಎಂದು ಜಪಿಸುವಂತೆ ಒತ್ತಾಯಿಸಿದ್ದಾರೆ.
ಘಟನೆಯ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಸಂತ್ರಸ್ತ ಯುವಕ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ತನಿಖೆ ಪ್ರಗತಿಯಲ್ಲಿದೆ.
ಯುಎನ್‍ಐ ಎಸ್‍ಎ ವಿಎನ್ 1421
More News

ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ 2103ಕ್ಕೆ ಏರಿಕೆ

12 Jul 2020 | 9:35 PM

 Sharesee more..
ರಾಜ್ಯದಲ್ಲಿ 2627 ಹೊಸ ಕೋವಿಡ್ ಪ್ರಕರಣಗಳು ವರದಿ, 71 ಸಾವು; ಸೋಂಕಿತರ ಸಖ್ಯೆ 38843ಕ್ಕೇರಿಕೆ

ರಾಜ್ಯದಲ್ಲಿ 2627 ಹೊಸ ಕೋವಿಡ್ ಪ್ರಕರಣಗಳು ವರದಿ, 71 ಸಾವು; ಸೋಂಕಿತರ ಸಖ್ಯೆ 38843ಕ್ಕೇರಿಕೆ

12 Jul 2020 | 8:35 PM

ಬೆಂಗಳೂರು, ಜು 12 (ಯುಎನ್ಐ) ರಾಜ್ಯದಲ್ಲಿ ಹೊಸದಾಗಿ 2627 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 71 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 38843ಕ್ಕೇರಿಕೆಯಾಗಿದೆ.

 Sharesee more..