Friday, Feb 28 2020 | Time 11:15 Hrs(IST)
 • ಟೆಸ್ಟ್‌, ಟಿ20 ಕ್ರಿಕೆಟ್‌ ನಮಗೆ ನಂ 1 ಆದ್ಯತೆ: ರವಿ ಶಾಸ್ತ್ರಿ
 • ವರದಕ್ಷಿಣೆ ಗಾಗಿ ಪತ್ನಿಗೆ ಬೆಂಕಿ ಹಚ್ಚಿದ ಪತಿ
 • ಪುಡಿ ರೌಡಿಗಳಿಂದ ಮಾರಕಾಸ್ತ್ರಗಳಿಂದ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
 • ರೈಲಿಗೆ ತಲೆಕೊಟ್ಟು ಪ್ರಿಯಕರ ಆತ್ಮಹತ್ಯೆ
 • ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಸುಧಾರಣೆಯಾಗಬೇಕು: ರವಿಶಾಸ್ತ್ರಿ
 • ಪ್ರಕಾಶ್ ರಾಜ್ ಗೆ ಮದ್ರಾಸ್ ಹೈಕೋರ್ಟ್ ನಿಂದ ನೋಟೀಸ್ ಜಾರಿ
 • ಜಪಾನ್, ದಕ್ಷಿಣ ಕೋರಿಯಾ ಆಗಮನ ವೀಸಾ ಸೌಲಭ್ಯ ತಾತ್ಕಾಲಿಕ ರದ್ದು; ಭಾರತ ನಿರ್ಧಾರ
 • ಕೇರಳದ ಇಡುಕ್ಕಿಯಲ್ಲಿ ಲಘು ಭೂಕಂಪ
 • ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕ ಪೊಲೀಸರ ವಶಕ್ಕೆ
 • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
 • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
 • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
 • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
 • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
 • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
Entertainment Share

‘ದಾರಿ ಯಾವುದಯ್ಯ ವೈಕುಂಠಕೆ’

ಬೆಂಗಳೂರು, ಜ 20 (ಯುಎನ್‍ಐ) ದಾರಿ ಯಾವುದಯ್ಯ ವೈಕುಂಠಕೆ . . . ಇದು ದಾಸರ ಪದವಲ್ಲ ದಾಸರ ಪದವನ್ನೇ ಶೀರ್ಷಿಕೆಯನ್ನಾಗಿಸಿಕೊಂಡಿರುವ ಚಿತ್ರ ಖ್ಯಾತ ನಿರ್ದೇಶಕ, ನಟ ರಿಷಬ್ ಶೆಟ್ಟಿ, ಇತ್ತೀಚೆಗೆ ಈ ಶೀರ್ಷಿಕೆ ಅನಾವರಣಗೊಳಿಸಿದರು

ಶ್ರೀಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸುತ್ತಿರುವ ‘ದಾರಿಯಾವುದಯ್ಯ ವೈಕುಂಠಕ್ಕೆ‘ ಚಿತ್ರದ ಚಿತ್ರೀಕರಣ ಫ಼ೆಬ್ರವರಿಯಲ್ಲಿ ಆರಂಭವಾಗಲಿದ್ದು, ಬೆಂಗಳೂರು, ರಾಮನಗರ, ಮಂಡ್ಯ ಮುಂತಾದ ಕಡೆ ಚಿತ್ರಕ್ಕೆ ೩೦ ದಿನಗಳ ಕಾಲ ಎರಡು ಹಂತಗಳಲ್ಲಿ ನಡೆಯಲಿದೆ

ಈ ಹಿಂದೆ ‘ಕೃಷ್ಣ ಗಾರ್ಮೆಂಟ್ಸ್‘ ಚಿತ್ರವನ್ನು ನಿರ್ದೇಶಿಸಿದ್ದ ಸಿದ್ದು ಪೂರ್ಣಚಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ಮನುಷ್ಯತ್ವ ಇಲ್ಲದೆ ಕೇವಲ ಹಣ ಅಂತ ಓಡಾಡಿಕೊಂಡು ಮಜಾ ಮಾಡುತ್ತಿದ್ದವನು ಆಕಸ್ಮಿಕವಾಗಿ ಸ್ಮಶಾನಕ್ಕೆ ಬರುತ್ತಾನೆ ಅಲ್ಲಿಗೆ ಬಂದು ಹೋದ ಮೇಲೆ ಅವನ ಮನಸ್ಥಿತಿ ಹೇಗಿರುತ್ತದೆ ಅನ್ನೊ ಕಥಾ ಹಂದರ ಈ ಚಿತ್ರದಲ್ಲಿದೆ.

ವರ್ಧನ್, ‘ತಿಥಿ‘ ಖ್ಯಾತಿಯ ಪೂಜಾ, ಬಾಲ ರಾಜವಾಡಿ, ಶೀಬಾ, ಅರುಣ್ ಮೂರ್ತಿ, ಸ್ಪಂದನ, ಪ್ರಶಾಂತ್‌ರಾವ್ ವರ್ಕು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಿತಿನ್ ಛಾಯಾಗ್ರಹಣ ಹಾಗೂ ರಾಜೀವ್ ಅವರ ಸಂಕಲನ ಈ ಚಿತ್ರಕ್ಕಿದೆ.

ಯುಎನ್‍ಐ ಎಸ್‍ಎ ವಿಎನ್ 2135
More News
’99 ಲಕ್ಷಕ್ಕೊಬ್ಬ’ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್

’99 ಲಕ್ಷಕ್ಕೊಬ್ಬ’ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್

27 Feb 2020 | 9:00 PM

ಬೆಂಗಳೂರು, ಫೆ 27 (ಯುಎನ್‍ಐ) ಬಿಗ್ ಬಾಸ್ ವಿನ್ನರ್ ಪ್ರಥಮ್ ಅಭಿನಯದ ಹೈ ವೋಲ್ಟೇಜ್ ಕಾಮಿಡಿ ಹಾರರ್ ‘ನಟ ಭಯಂಕರ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಪರೀಕ್ಷೆಗಳು ಮುಗಿದ ನಂತರ ರಿಲೀಸ್ ಆಗಲಿದೆ

 Sharesee more..
‘ಎಂಆರ್ ಪಿ ಚಿತ್ರದ ತುಣುಕು-ಹಾಸ್ಯದ ಮಿಣುಕು

‘ಎಂಆರ್ ಪಿ ಚಿತ್ರದ ತುಣುಕು-ಹಾಸ್ಯದ ಮಿಣುಕು

26 Feb 2020 | 10:25 PM

ಬೆಂಗಳೂರು, ಫೆ 26 (ಯುಎನ್‍ಐ) ಹಾಸ್ಯ ಲೇಪನದೊಡನೆ ಸಂದೇಶವನ್ನೂ ಒಳಗೊಂಡಿರುವ ಮನರಂಜನಾತ್ಮಕ ಚಿತ್ರ ‘ಎಂಆರ್‍ಪಿ’ ಯ ಟ್ರೇಲರ್ ಬಿಡುಗಡೆಯಾಗಿದೆ

 Sharesee more..