Friday, May 29 2020 | Time 15:50 Hrs(IST)
  • ಐದನೆ ಹಂತದ ಲಾಕ್ ಡೌನ್ ವಿಸ್ತರಣೆ: ಸದ್ಯವೇ ತೀರ್ಮಾನ
  • ಬೋಧ್ ಗಯಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸೆರೆ
  • ಚೀನಾ ಗಡಿಯಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಜನರಿಗೆ ಮಾಹಿತಿ ನೀಡಿ; ರಾಹುಲ್ ಗಾಂಧಿ
  • ಜಲ್ಲಿಕಲ್ಲು ವ್ಯಾಪಾರಿ ಭೀಕರ ಕೊಲೆ
  • ಠೇವಣಿದಾರರ ಖಾತೆಗೆ ಬ್ಯಾಂಕ್​​ ಉದ್ಯೋಗಿಯಿಂದಲೇ ಕನ್ನ; 13 39 ಲಕ್ಷ ರೂ ದೋಖಾ
  • ಪರಿಷತ್ತಿನ ಆಯ್ಕೆ ಮುಖ್ಯಮಂತ್ರಿಗಳ ಪರಮಾಧಿಕಾರ: ಸಹಕಾರ ಸಚಿವ
  • ಅಂಬಿ ಹುಟ್ಟು ಹಬ್ಬಕ್ಕೆ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ
  • ಭಾರತದಲ್ಲಿ ಒಂದೇ ದಿನ 7476 ಜನರಿಗೆ ಸೋಂಕು, ಸೋಂಕಿತರ ಸಂಖ್ಯೆ 1 06 ಲಕ್ಷಕ್ಕೇರಿಕೆ
  • ಮೇ 31ಕ್ಕೆ ಲಾಕ್ ಡೌನ್ ಸಂಪೂರ್ಣ ಸಡಿಲಿಕೆ ನಿರ್ಧಾರ: ಎಸ್‌ ಟಿ ಸೋಮಶೇಖರ್
  • ಮಂಡ್ಯ ಮೈಶುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ: ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ- ಮುಖ್ಯಮಂತ್ರಿ
  • ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ- ಬಿ ಸಿ ಪಾಟೀಲ್
  • ಕೊರೋನ ಸೋಂಕಿತ ದೇಶಗಳ ಪೈಕಿ ಈಗ ಭಾರತಕ್ಕೆ 9 ನೆ ಸ್ಥಾನ
  • ಸಂತೋಷ್, ಯೋಗೇಶ್ವರ್‌ಗೆ ಪಟ್ಟ , ಬಿಜೆಪಿಯಲ್ಲಿ ಭುಗಿಲೆದ್ದ ಶಾಸಕರ ಆಕ್ರೋಶ
  • ಚಿತ್ರರಂಗಕ್ಕೆ ಅನುದಾನ ನೀಡುವಂತೆ ಸಿಎಂಗೆ ಮನವಿ: ಜೈರಾಜ್
  • ರೆಬಲ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ "ಬ್ಯಾಡ್ ಮ್ಯಾನರ್ಸ್" ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ
Entertainment Share

‘ನನ್ನ ಪುಟ್ಟ ಕಂದ ಮನೆಯ ದೀಪ’ ಪುತ್ರನ ಜನ್ಮದಿನದ ಸಂತಸದಲ್ಲಿ ರಿಷಬ್ ಶೆಟ್ಟಿ

ಬೆಂಗಳೂರು, ಏ 07 (ಯುಎನ್‍ಐ) ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’, ‘ಬೆಲ್ ಬಾಟಮ್’, ‘ಕಥಾ ಸಂಗಮ’ ದಂತಹ ಚಿತ್ರಗಳನ್ನು ನೀಡಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ, ನಟ, ಲೇಖಕ ರಿಷಬ್ ಶೆಟ್ಟಿಯವರಿಗೆ ಇಂದು ಸಂಭ್ರಮದ ದಿನ.

ಕಾರಣ ಏನು ಗೊತ್ತಾ? ಪುತ್ರನ ಮೊದಲ ವರ್ಷದ ಜನ್ಮದಿನ… ಹೌದು. ಮಗ ರಣ್ವಿತ್ ಹುಟ್ಟು ಹಬ್ಬದ ದಿನದಂದು ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಂಪತಿ ಟ್ವಿಟರ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ವರುಷದ ಹಿಂದೆ ಹುಟ್ಟಿದ ಈ ಪುಟ್ಟ ಕಂದನ ಜೊತೆ ನನ್ನಲ್ಲೊಬ್ಬ ಅಪ್ಪನೂ ಹುಟ್ಟಿದ. ಅಂದಿನಿಂದ ಇಂದಿನವರೆಗೆ ನಿತ್ಯ ಹಬ್ಬದಂತಿರುವ ಇವನ ಮುಗ್ಧತೆ ಮನೆಗೆ ದೀಪ, ತೊದಲು ಮಾತೇ ತಳಿರು ತೋರಣ, ಹಾಲುಗಲ್ಲದ ನಗು ಹೋಳಿಗೆಯ ಹೂರಣ. ಮೊದಲ ವರ್ಷ ತುಂಬಿದ ಸಡಗರದಲ್ಲಿ ನಿಮ್ಮೆಲ್ಲರ ಆಶಿರ್ವಾದ ಇವನಿಗಿರಲಿ ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ.

ಇದರ ಜತೆಗೆ ಸರಳವಾಗಿ ಆಚರಿಸಿರುವ ಜನ್ಮದಿನದ ಫೋಟೋಗಳನ್ನೂ, ರಣ್ವಿತ್‍ನ ಆಟಗಳ ವಿಡಿಯೋವನ್ನೂ ಶೇರ್ ಮಾಡಿದ್ದಾರೆ.

ಇನ್ನು ರಿಷಬ್ ಶೆಟ್ಟಿಯವರ ಆತ್ಮೀಯ ಗೆಳೆಯ, ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಕೂಡ ರಣ್ವಿತ್ ಗೆ ಟ್ವಿಟರ್ ಮೂಲಕ ಜನ್ಮದಿನದ ಶುಭ ಕೋರಿದ್ದಾರೆ.

ಯುಎನ್‍ಐ ಎಸ್‍ಎ ವಿಎನ್ 1449