Thursday, Nov 21 2019 | Time 21:05 Hrs(IST)
  • ಕರ್ನಾಟಕಕ್ಕೆೆ 159 ರನ್ ಗುರಿ ನೀಡಿದ ತಮಿಳುನಾಡು
  • ಉಪ ಚುನಾವಣೆಗೆ ಅಖಾಡ ಸಜ್ಜು: 53 ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್, 165 ಅಭ್ಯರ್ಥಿಗಳು ಕಣದಲ್ಲಿ: ಸಂಜೀವ್ ಕುಮಾರ್
  • ಟಿ-20 ಮಹಿಳಾ ಶ್ರೇಯಾಂಕ: ರೊಡ್ರಿಗಸ್, ರಾಧ ಯಾದವ್‌ಗೆ ಬಂಪರ್
  • ದಾದಾ ದಾಖಲೆ ಸನಿಹದಲ್ಲಿ ವಿರಾಟ್ ಕೊಹ್ಲಿ
  • ಬಿಜೆಪಿ ಒತ್ತಡದಿಂದ ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ:ಹೆಚ್ ಡಿ ದೇವೇಗೌಡ
  • ಎಲ್ಲ ಬ್ಯಾಟ್ಸ್‌‌ಮನ್‌ಗಳು ಶೂನ್ಯಕ್ಕೆೆ ಔಟ್ ! : ಶಾಲಾ ಟೂರ್ನಿಯಲ್ಲಿ ಅನಗತ್ಯ ದಾಖಲೆ
  • ನಗರಗಳ ಕಾಡುಗಳೇ ನಗರಗಳ ಶ್ವಾಸಕೋಶ: ಜಾವಡೇಕರ್
  • ಮೀನುಗಾರಿಕೆ ನಿಯಂತ್ರಣ ನೀತಿ ತಿದ್ದುಪಡಿಗೆ ಪ್ರಸ್ತಾವನೆ ; ಸಚಿವ ಶ್ರೀನಿವಾಸ ಪೂಜಾರಿ
  • ಕೊರಿಯಾ ಓಪನ್: ಎರಡನೇ ಸುತ್ತಿನಲ್ಲಿ ಶ್ರೀಕಾಂತ್, ಸಮೀರ್‌ಗೆ ಸೋಲು
  • ರೋಗಿ, ಬಸುರಿ, ಬಾಣಂತಿಯರಿಗಿಲ್ಲಿ ಜೋಲಿಯೇ ಜೀವ, ಸೌರ ವಿದ್ಯುತ್ ಜೀವ ರಕ್ಷಕ: ಮಲೆಮಹದೇಶ್ವರ ಬೆಟ್ಟದ ಗ್ರಾಮಗಳ ಬದುಕು ಬೆಳಗಿಸಿದ ಸೆಲ್ಕೋ
  • ಅರಣ್ಯ ಕಾಯ್ದೆ ಕುರಿತು ಜಾವಡೇಕರ್ ಹೇಳಿಕೆ ಚುನಾವಣಾ ಆಯೋಗದಿಂದ ಪರಿಶೀಲನೆ
  • ಆಯೋಧ್ಯೆ ತೀರ್ಪು; ಪುರಿಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅತೃಪ್ತಿ
  • ಕ್ರಿಕೆಟ್ ಆಡುವ ವಿಚಾರದಲ್ಲಿ ಜಗಳ: ಬಿಬಿಎಂ ವಿದ್ಯಾರ್ಥಿ ಕೊಲೆ
  • ನಾಳೆ ಕಲಬುರಗಿ ವಿಮಾನ ನಿಲ್ದಾಣ ಲೋಕಾರ್ಪಣೆ
  • ರೋಹಿಂಗ್ಯಾ, ಬಾಂಗ್ಲಾ ವಲಸಿಗರ ಗಡೀಪಾರು ಕೋರಿ ಅರ್ಜಿ: 4 ವಾರವರೆಗೆ ಮುಂದೂಡಿದ ಸುಪ್ರೀಂಕೋರ್ಟ್‌
National Share

‘ನೋಟು ಅಮಾನ್ಯೀಕರಣ ಭಯೋತ್ಪಾದಕ ದಾಳಿ'- ಮೋದಿ ಸರ್ಕಾರದ ವಿರುದ್ಧ ರಾಹುಲ್, ಪ್ರಿಯಾಂಕಾ ವಾಗ್ದಾಳಿ

‘ನೋಟು ಅಮಾನ್ಯೀಕರಣ ಭಯೋತ್ಪಾದಕ ದಾಳಿ'- ಮೋದಿ ಸರ್ಕಾರದ ವಿರುದ್ಧ ರಾಹುಲ್, ಪ್ರಿಯಾಂಕಾ ವಾಗ್ದಾಳಿ
‘ನೋಟು ಅಮಾನ್ಯೀಕರಣ ಭಯೋತ್ಪಾದಕ ದಾಳಿ'- ಮೋದಿ ಸರ್ಕಾರದ ವಿರುದ್ಧ ರಾಹುಲ್, ಪ್ರಿಯಾಂಕಾ ವಾಗ್ದಾಳಿ

ನವದೆಹಲಿ, ನ 6 (ಯುಎನ್ಐ) –ನೋಟು ಅಮಾನ್ಯೀಕರಣದ ಮೂರನೇ ವರ್ಷಾಚರಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಶುಕ್ರವಾರ ನರೇಂದ್ರ ಮೋದಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಕಾಂಗ್ರೆಸ್‍ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನೋಟು ಅಮಾನ್ಯೀಕರಣವನ್ನು 'ಭಯೋತ್ಪಾದಕ ದಾಳಿ' ಎಂದು ಬಣ್ಣಿಸಿದ್ದಾರೆ.



‘ಭಾರತೀಯ ಆರ್ಥಿಕತೆಯನ್ನು ನಾಶಪಡಿಸಿದ, ಅನೇಕ ಜೀವಗಳನ್ನು ಬಲಿ ತೆಗೆದುಕೊಂಡ, ಲಕ್ಷಾಂತರ ಸಣ್ಣ ಉದ್ಯಮಗಳನ್ನು ನಾಶಪಡಿಸಿದ ಮತ್ತು ಲಕ್ಷಾಂತರ ಭಾರತೀಯರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ ನೋಟು ಅಮಾನ್ಯೀಕರಣ ಭಯೋತ್ಪಾದಕ ದಾಳಿಗೆ ಮೂರು ವರ್ಷಗಳಾಗಿದೆ.’ ಎಂದು ರಾಹುಲ್‍ ಗಾಂಧಿ ಟ್ವೀಟ್ ಮಾಡಿದ್ದಾರೆ.



2016ರ ನವೆಂಬರ್ 6 ರಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ದೂರದರ್ಶನದಲ್ಲಿ ಮಾಡಿದ ಭಾಷಣದಲ್ಲಿ ನರೇಂದ್ರ ಮೋದಿ, ಭ್ರಷ್ಟಾಚಾರ, ಕಪ್ಪು ಹಣ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ಕೊನೆಗೊಳಿಸುವುದಕ್ಕೆ ನೋಟು ಅಮಾನ್ಯೀಕರಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದರು.



'ನೋಟು ಅಮಾನ್ಯೀಕರಣ' ದಿಂದ ಆಗಿರುವ ಅನಾಹುತದ ಹೊಣೆಯನ್ನು ಯಾರಾದರೂ ಹೊರುವರೇ? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಸರ್ಕಾರವನ್ನು ಟೀಕಿಸಿದ್ದಾರೆ.



‘ ನೋಟು ಅಮಾನ್ಯೀಕರಣಗೊಂಡು ಮೂರು ವರ್ಷಗಳಾಗಿದ್ದು, ಈ ಅವಧಿಯಲ್ಲಿ ನಮ್ಮ ಆರ್ಥಿಕತೆ ನಾಶವಾಗಿರುವುದು ನಾಶಪಡಿಸಿರುವುದು ಸಾಬೀತಾಗಿದೆ.’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಎಐಸಿಸಿ ಸಂವಹನ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸರ್ಕಾರದ ಕ್ರಮವನ್ನು ಟೀಕಿಸಿ, ಮೋದಿ ಅವರನ್ನು 'ಇಂದಿನ ತುಘಲಕ್' ಎಂದು ಬಣ್ಣಿಸಿದ್ದಾರೆ.



‘1330 ರಲ್ಲಿ ಸುಲ್ತಾನ್ ಮುಹಮ್ಮದ್ ಬಿನ್ ತುಘಲಕ್ ದೇಶದ ಕರೆನ್ಸಿಯನ್ನು ನಿಷ್ಪ್ರಯೋಜಕಗೊಳಿಸಿದರು. ಇಂದಿನ ತುಘಲಕ್ 2016 ರ ನವೆಂಬರ್ 8 ರಂದು ಅದೇ ರೀತಿ ಮಾಡಿದರು.’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.



‘ ನೋಟು ಅಮಾನ್ಯೀಕರಣದಿಂದ ಆರ್ಥಿಕತೆ ಕುಸಿಯಿತು, ಉದ್ಯೋಗ ಇಲ್ಲವಾಯಿತು. ಭಯೋತ್ಪಾದನೆ ನಿಲ್ಲಲಿಲ್ಲ. ನಕಲಿ ನೋಟುಗಳ ವ್ಯವಹಾರವೂ ನಿಂತಿಲ್ಲ. ಮೂರು ವರ್ಷಗಳ ನಂತರವೂ ದೇಶವು ನರಳುತ್ತಿದೆ.’ ಎಂದು ಸುರ್ಜೆವಾಲ ಟೀಕಿಸಿದ್ದಾರೆ.



ಯುಎನ್‍ಐ ಎಸ್‍ಎಲ್‍ಎಸ್‍ ಕೆವಿಆರ್ 1609

More News
ಐಎನ್ ಎಕ್ಸ್ ಮೀಡಿಯಾ; ಜೈಲಿನಲ್ಲಿ ಚಿದಂಬರಂ ವಿಚಾರಣೆಗೆ ಸುಪ್ರೀಂ ಅನುಮತಿ

ಐಎನ್ ಎಕ್ಸ್ ಮೀಡಿಯಾ; ಜೈಲಿನಲ್ಲಿ ಚಿದಂಬರಂ ವಿಚಾರಣೆಗೆ ಸುಪ್ರೀಂ ಅನುಮತಿ

21 Nov 2019 | 8:18 PM

ನವದೆಹಲಿ, ನ 21 (ಯುಎನ್ಐ) ಐಎಸ್ ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರ ವಿಚಾರಣೆ ನಡೆಸಲು ಸಿಬಿಐ ವಿಶೇಷ ನ್ಯಾಯಾಧೀಶರಾದ ಅಜಯ್ ಕುಮಾರ್ ಕುಹಾರ್ ಅನುಮತಿ ನೀಡಿದ್ದಾರೆ.

 Sharesee more..
ನಗರಗಳ  ಕಾಡುಗಳೇ  ನಗರಗಳ  ಶ್ವಾಸಕೋಶ: ಜಾವಡೇಕರ್

ನಗರಗಳ ಕಾಡುಗಳೇ ನಗರಗಳ ಶ್ವಾಸಕೋಶ: ಜಾವಡೇಕರ್

21 Nov 2019 | 8:08 PM

ನವದೆಹಲಿ, ನವೆಂಬರ್ 21( ಯುಎನ್‌ಐ) ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಹಾವಳಿ ತಡೆಯಲು ಜನರ ಸಹಕಾರ ಬಹಳ ಅಗತ್ಯ, ನಗರಗಳಲ್ಲಿ ಹೆಚ್ಚು ಗಿಡ ಮರ ಬೆಳಸಿದರೆ ಅವುಗಳೇ ನಗರಗಳ ಶ್ವಾಸಕೋಶವಾಗಿ ಉತ್ತಮ ಬದುಕಿಗೆ ಮುನ್ನಡಿ ಬರೆಯಲಿವೆ ಎಂದು ಪರಿಸರ, ಅರಣ್ಯ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

 Sharesee more..
ರೋಹಿಂಗ್ಯಾ, ಬಾಂಗ್ಲಾ ವಲಸಿಗರ ಗಡೀಪಾರು ಕೋರಿ ಅರ್ಜಿ: 4 ವಾರವರೆಗೆ ಮುಂದೂಡಿದ ಸುಪ್ರೀಂಕೋರ್ಟ್‌

ರೋಹಿಂಗ್ಯಾ, ಬಾಂಗ್ಲಾ ವಲಸಿಗರ ಗಡೀಪಾರು ಕೋರಿ ಅರ್ಜಿ: 4 ವಾರವರೆಗೆ ಮುಂದೂಡಿದ ಸುಪ್ರೀಂಕೋರ್ಟ್‌

21 Nov 2019 | 6:01 PM

ನವದೆಹಲಿ, ನ.21 (ಯುಎನ್ಐ) ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳು ಸೇರಿದಂತೆ ಎಲ್ಲಾ ಅಕ್ರಮ ವಲಸಿಗರು ಮತ್ತು ಒಳನುಸುಳುಕೋರರನ್ನು ಗುರುತಿಸಿ ಅವರನ್ನು ಗಡೀಪಾರು ಮಾಡುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಲ್ಕು ವಾರಗಳವರೆಗೆ ಮುಂದೂಡಿದೆ.

 Sharesee more..