Friday, Apr 10 2020 | Time 09:10 Hrs(IST)
  • ವಿಶ್ವಾದ್ಯಂತ ಕೊರೊನಾ ಸೋಂಕಿನಿಂದ 95 ಸಾವಿರಕ್ಕೂ ಹೆಚ್ಚು ಜನರ ಸಾವು
  • ತೈಲ ಬೆಲೆ ಸ್ಥಿರತೆಗೆ ಸಹಕಾರದ ನಡೆ ಅಗತ್ಯ – ನಾಯಕರ ಪ್ರತಿಪಾದನೆ
Entertainment Share

‘ನಿನ್ನ ಸನಿಹಕೆ’ ಅಣ್ಣಾವ್ರ ಮೊಮ್ಮಗಳ ಮೊದಲ ಚಿತ್ರ ; ಸೂರಜ್ ಗೌಡ ಆಕ್ಸಿಡೆಂಟಲ್ ಡೈರೆಕ್ಟರ್!

‘ನಿನ್ನ ಸನಿಹಕೆ’ ಅಣ್ಣಾವ್ರ ಮೊಮ್ಮಗಳ ಮೊದಲ ಚಿತ್ರ ; ಸೂರಜ್ ಗೌಡ ಆಕ್ಸಿಡೆಂಟಲ್ ಡೈರೆಕ್ಟರ್!
‘ನಿನ್ನ ಸನಿಹಕೆ’ ಅಣ್ಣಾವ್ರ ಮೊಮ್ಮಗಳ ಮೊದಲ ಚಿತ್ರ ; ಸೂರಜ್ ಗೌಡ ಆಕ್ಸಿಡೆಂಟಲ್ ಡೈರೆಕ್ಟರ್!

ಬೆಂಗಳೂರು, ಫೆ 25 (ಯುಎನ್‍ಐ) ಡಾ ರಾಜ್ ಕುಮಾರ್ ಕುಟುಂಬದ ಕುಡಿ, ನಟ ರಾಮ್ ಕುಮಾರ್ ಪುತ್ರಿ ಧನ್ಯಾ ರಾಮ್ ಕುಮಾರ್ ನಟನೆಯ ‘ನಿನ್ನ ಸನಿಹಕೆ’ ಚಿತ್ರೀಕರಣ ಮುಗಿದಿದ್ದು, ತೆರೆಹಿಂದಿನ ತುಣುಕುಗಳು ಬಿಡುಗಡೆಯಾಗಿದೆ ಏಪ್ರಿಲ್ ಕೊನೆಯ ವಾರದಲ್ಲಿ ಚಿತ್ರ ತೆರೆ ಕಾಣುವ ನಿರೀಕ್ಷೆಯಿದೆ



‘ನಿನ್ನ ಸನಿಹಕೆ’ ಚಿತ್ರ ಹಲವು ರೀತಿಯಿಂದ ವಿಶಿಷ್ಟ ಎನಿಸಿಕೊಳ್ಳಲಿದೆ ಡಾ ರಾಜ್ ಕುಟುಂಬದ ಕುಡಿ ಈ ಚಿತ್ರದ ನಾಯಕಿ, ವಿಭಿನ್ನ ರೀತಿಯ ಲವ್ ಸ್ಟೋರಿ ಜತೆಗೆ ನಾಯಕ ನಟ ಸೂರಜ್ ಗೌಡ ಅವರೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರೋದು



ಹೌದು, ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದ ಸುಮನ್ ಜಾದೂಗರ್ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದರಿಂದ ನಾನು ಆಕ್ಸಿಡೆಂಟಲ್ ಡೈರೆಕ್ಟರ್ ಆಗಬೇಕಾಯಿತು ಅಂತ ಸೂರಜ್ ಗೌಡ ಹೇಳಿಕೊಂಡಿದ್ದಾರೆ



“ಈವರೆಗೂ ಐದು ಸಿನಿಮಾಗಳಲ್ಲಿ ನಟಿಸುವಾಗ ಸಿನಿಮಾ ಎಂದರೆ ಏನು ಎಂಬುದನ್ನು ಕಲಿತಿದ್ದೆ ಇದು ನಿರ್ದೇಶನಕ್ಕೆ ಸಹಕಾರಿಯಾಯಿತು ಕಥೆ ಚಿತ್ರಕತೆಯನ್ನು ನಾನೇ ಹೆಣೆದಿದ್ದ ಕಾರಣ ನಿರ್ದೇಶನ ಹೊರೆಯಾಗಲಿಲ್ಲ ಇದೇ ಸ್ಫೂರ್ತಿಯೊಂದಿಗೆ ಮುಂದೆಯೂ ನಿರ್ದೇಶನ ಮಾಡ್ತೀನಿ” ಅಂತ ಸೂರಜ್ ತಿಳಿಸಿದ್ರು



“ನಿನ್ನ ಸನಿಹಕೆ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾದರೂ ನವರಸಗಳೂ ಮಿಳಿತವಾಗಿವೆ ರವಿವರ್ಮ ಸಾಹಸ ನಿರ್ದೇಶನದಲ್ಲಿ ಎರಡು ಫೈಟ್ ಗಳಿದ್ದು, ರಘು ದೀಕ್ಷಿತ್ ಸಂಗೀತವಿದೆ ಧ್ಯನ್ಯಾ ರಾಮ್‍ ಕುಮಾರ್ ಅನುಭವಿ ನಟಿಯಂತೆ ಎಲ್ಲ ದೃಶ್ಯಗಳಲ್ಲೂ ಉತ್ತಮವಾಗಿ ಅಭನಯಿಸಿದ್ದು, ಕನ್ನಡ ಚಿತ್ರರಂಗಕ್ಕೆ ಆಸ್ತಿಯಾಗಬಲ್ಲರು” ಅಂತ ಸೂರಜ್ ಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ರು

ತಾವೇ ನಿರ್ದೇಶನ ಮಾಡಿದ್ದರೂ, ಬಹುಶಃ ಚಿತ್ರ ಇಷ್ಟು ಚೆನ್ನಾಗಿ ಬರುತ್ತಿರಲಿಲ್ಲ,, ಸೂರಜ್ ಬಹಳ ಚೆನ್ನಾಗಿ ನಿರ್ದೇಶನದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ ಎಂದು ಸುಮನ್ ಜಾದೂಗರ್ ಶ್ಲಾಘಿಸಿದರು

ನನ್ನ ಮಗಳಿಗೆ ಈ ಚಿತ್ರ ಸಿಕ್ಕಿದ್ದು ಪುಣ್ಯ: ಪೂರ್ಣಿಮಾ ರಾಮ್ ಕುಮಾರ್



ನಿನ್ನ ಸನಿಹಕೆ ಚಿತ್ರ ನವಿರಾದ ಪ್ರೇಮ ಕಥೆ ಹೊಂದಿದ್ದು, ಪ್ರೇಮಿಗಳು ಎದುರಿಸಬೇಕಾದ ಹಲವು ಸನ್ನಿವೇಶಗಳನ್ನು ನೈಜವಾಗಿ ಚಿತ್ರೀಕರಿಸಲಾಗಿದೆ ಅಂತ ಧನ್ಯಾ ರಾಮ್ ಕುಮಾರ್ ಹೇಳಿದ್ರು



ಇದೇ ವೇಳೆ ಮಾತನಾಡಿದ ಪೂರ್ಣಿಮಾ ರಾಮ್ ಕುಮಾರ್, “ನನ್ನ ಮಗಳಿಗೆ ಈ ಪ್ರಾಜೆಕ್ಟ್ ಸಿಕ್ಕಿದ್ದು ಪುಣ್ಯ ಚಿತ್ರತಂಡ ಆಕೆಗೆ ಎಲ್ಲ ಬಗೆಯ ಸಹಕಾರ ನೀಡಿದೆ ಕನ್ನಡಿಗರು ಆಕೆಯನ್ನು ಆಶೀರ್ವದಿಸಬೇಕು” ಎಂದು ಕೇಳಿಕೊಂಡರು.



ಯುಎನ್‍ಐ ಎಸ್‍ಎ ವಿಎನ್ 0525

More News

ಹನುಮ‌ ಜಯಂತಿಗೆ ಶುಭಾಶಯ ಕೋರಿದ ದರ್ಶನ್

08 Apr 2020 | 5:07 PM

 Sharesee more..
ಬುಲೆಟ್ ಪ್ರಕಾಶ್ ಅಂತ್ಯಕ್ರಿಯೆ

ಬುಲೆಟ್ ಪ್ರಕಾಶ್ ಅಂತ್ಯಕ್ರಿಯೆ

07 Apr 2020 | 5:23 PM

ಬೆಂಗಳೂರು, ಏ.7 (ಯುಎನ್ಐ) ನಿನ್ನೆ ನಿಧನರಾದ ಸ್ಯಾಂಡಲ್ ವುಡ್ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಅಂತ್ಯಕ್ರಿಯೆಯನ್ನು ನಗರದ ಹೆಬ್ಬಾಳದ ರುದ್ರಭೂಮಿಯಲ್ಲಿಂದು ನೆರವೇರಿಸಲಾಯಿತು.

 Sharesee more..
ಕೊರೊನಾ ವೈರಸ್  ನಮ್ಮನ್ನು ಭಯಭೀತಗೊಳಿಸಿದೆ; ಸಲ್ಮಾನ್ ಖಾನ್

ಕೊರೊನಾ ವೈರಸ್ ನಮ್ಮನ್ನು ಭಯಭೀತಗೊಳಿಸಿದೆ; ಸಲ್ಮಾನ್ ಖಾನ್

06 Apr 2020 | 3:49 PM

ಪುಣೆ, ಏ ೬(ಯುಎನ್‌ಐ) ಕೊರೊನಾ ವೈರಸ್ ಸೋಂಕು ನಮ್ಮನ್ನು ಭಯ ಭೀತಗೊಳಿಸಿದೆ, ನನ್ನಪ್ಪ, ಸಿನಿಮಾ ಬರಹಗಾರ ಸಲೀಂ ಖಾನ್ ಅವರನ್ನು ಭೇಟಿ ಮಾಡಿ ಸುಮಾರು ಮೂರು ವಾರಗಳಾಗಿವೆ ಎಂದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸೋಮವಾರ ಹೇಳಿದ್ದಾರೆ.

 Sharesee more..
ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಸ್ಥಿತಿ ಚಿಂತಾಜನಕ

ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಸ್ಥಿತಿ ಚಿಂತಾಜನಕ

06 Apr 2020 | 3:44 PM

ಬೆಂಗಳೂರು, ಏ 06 (ಯುಎನ್‍ಐ) ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

 Sharesee more..