Friday, Apr 10 2020 | Time 08:00 Hrs(IST)
  • ವಿಶ್ವಾದ್ಯಂತ ಕೊರೊನಾ ಸೋಂಕಿನಿಂದ 95 ಸಾವಿರಕ್ಕೂ ಹೆಚ್ಚು ಜನರ ಸಾವು
  • ತೈಲ ಬೆಲೆ ಸ್ಥಿರತೆಗೆ ಸಹಕಾರದ ನಡೆ ಅಗತ್ಯ – ನಾಯಕರ ಪ್ರತಿಪಾದನೆ
Entertainment Share

‘ಬೊಮ್ಮನಗುಡ್ಡೆ’ ಚಿತ್ರಕ್ಕೆ ಚಾಲನೆ

‘ಬೊಮ್ಮನಗುಡ್ಡೆ’ ಚಿತ್ರಕ್ಕೆ ಚಾಲನೆ
‘ಬೊಮ್ಮನಗುಡ್ಡೆ’ ಚಿತ್ರಕ್ಕೆ ಚಾಲನೆ

ಬೆಂಗಳೂರು, ಫೆ 25 (ಯುಎನ್‍ಐ) ಜೆ ಕೆ ಪ್ರೊಡಕ್ಶನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಎಡೆಯೂರು ಸುರೇಶ್ ಹಾಗೂ ಭದ್ರಣ್ಣ ಸಹ ನಿರ್ಮಾಣವಿರುವ ‘ಬೊಮ್ಮನ ಗುಡ್ಡೆ‘ ಚಿತ್ರದ ಮುಹೂರ್ತ ಸಮಾರಂಭ ಮಹಾ ಶಿವರಾತ್ರಿ ಶುಭದಿನದಂದು ಬೊಮ್ಮನಗುಡ್ಡೆ ಮುನೇಶ್ವರ ದೇವಸ್ಥಾನದಲ್ಲಿ ನೆರವೇರಿತುಚಿತ್ರದ ಮೊದಲ ದೃಶ್ಯಕ್ಕೆ ಮಹದೇವಯ್ಯ ಆರಂಭ ಫಲಕ ತೋರಿದರೆ, ಕೃಷ್ಣಪ್ಪ ಕ್ಯಾಮೆರಾ ಚಾಲನೆ ಮಾಡಿದರು ಒಂದು ವರ್ಷದ ಮಗು ಗೋಪಾಲಕೃಷ್ಣನ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿತುಶಾಸಕ ರಂಗನಾಥ್, ಕಿಲಾರ ವಿಜಿ, ಟಿ.ಮಲ್ಲಿಕಾರ್ಜುನ, ಕೃಷ್ಣಪ್ಪ ಹಾಗೂ ಗ್ರಾಮದ ಮುಖ್ಯಸ್ಥರು ಸಮಾರಂಭಕ್ಕೆ ಅಗಮಿಸಿ ಶುಭ ಕೋರಿದರು ಬೊಮ್ಮನಗುಡ್ಡೆ ಗ್ರಾಮದಲ್ಲೇ ಮೂವತ್ತು ದಿನಗಳ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆನೈಜ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಶಿವರಾಜ್ ಬಿ.ಎಂ.(ಹಳ್ಳಿಹುಲಿ) ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತರಚನೆ ಕೂಡ ಶಿವರಾಜ್ ಅವರದೆ. 2010ರಲ್ಲಿ ತೆರೆಕಂಡ ‘ನಮಿತಾ ಐ ಲವ್ ಯೂ‘ ಚಿತ್ರದ ಮೂಲಕ ಹಾಸ್ಯನಟನಾಗಿ ಪಾದಾರ್ಪಣೆ ಮಾಡಿ ನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಹಾಗೂ ಹಲವು ನಿರ್ದೆಶಕರ ಬಳಿ ನಿರ್ದೇಶನ ತಂಡದಲ್ಲೂ ಕಾರ್ಯ ನಿರ್ವಹಿಸಿರುವ ಅನುಭವ ಶಿವರಾಜ್ ಬಿ ಎಂ ಅವರಿಗಿದೆ.ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ತರುಣ್ ಸೈಮೆಂಟ್ ಸಂಗೀತ ನಿರ್ದೇಶನವಿದೆ. ರಾಜೇಶ್ ಗೌಡ ಛಾಯಾಗ್ರಹಣ, ಹಾಗೂ ಕವಿತಾ ಭಂಡಾರಿ ಸಂಕಲನವಿದೆ. ಬಿರಾದಾರ್, ಟೆನ್ನಿಸ್ ಕೃಷ್ಣ ಹಾಗೂ ಬ್ಯಾಂಕ್ ಜನಾರ್ದನ್ ಮುಂತಾದವರು ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.ಯುಎನ್‍ಐ ಎಸ್‍ಎ ವಿಎನ್ 0538

More News

ಹನುಮ‌ ಜಯಂತಿಗೆ ಶುಭಾಶಯ ಕೋರಿದ ದರ್ಶನ್

08 Apr 2020 | 5:07 PM

 Sharesee more..
ಬುಲೆಟ್ ಪ್ರಕಾಶ್ ಅಂತ್ಯಕ್ರಿಯೆ

ಬುಲೆಟ್ ಪ್ರಕಾಶ್ ಅಂತ್ಯಕ್ರಿಯೆ

07 Apr 2020 | 5:23 PM

ಬೆಂಗಳೂರು, ಏ.7 (ಯುಎನ್ಐ) ನಿನ್ನೆ ನಿಧನರಾದ ಸ್ಯಾಂಡಲ್ ವುಡ್ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಅಂತ್ಯಕ್ರಿಯೆಯನ್ನು ನಗರದ ಹೆಬ್ಬಾಳದ ರುದ್ರಭೂಮಿಯಲ್ಲಿಂದು ನೆರವೇರಿಸಲಾಯಿತು.

 Sharesee more..
ಕೊರೊನಾ ವೈರಸ್  ನಮ್ಮನ್ನು ಭಯಭೀತಗೊಳಿಸಿದೆ; ಸಲ್ಮಾನ್ ಖಾನ್

ಕೊರೊನಾ ವೈರಸ್ ನಮ್ಮನ್ನು ಭಯಭೀತಗೊಳಿಸಿದೆ; ಸಲ್ಮಾನ್ ಖಾನ್

06 Apr 2020 | 3:49 PM

ಪುಣೆ, ಏ ೬(ಯುಎನ್‌ಐ) ಕೊರೊನಾ ವೈರಸ್ ಸೋಂಕು ನಮ್ಮನ್ನು ಭಯ ಭೀತಗೊಳಿಸಿದೆ, ನನ್ನಪ್ಪ, ಸಿನಿಮಾ ಬರಹಗಾರ ಸಲೀಂ ಖಾನ್ ಅವರನ್ನು ಭೇಟಿ ಮಾಡಿ ಸುಮಾರು ಮೂರು ವಾರಗಳಾಗಿವೆ ಎಂದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸೋಮವಾರ ಹೇಳಿದ್ದಾರೆ.

 Sharesee more..
ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಸ್ಥಿತಿ ಚಿಂತಾಜನಕ

ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಸ್ಥಿತಿ ಚಿಂತಾಜನಕ

06 Apr 2020 | 3:44 PM

ಬೆಂಗಳೂರು, ಏ 06 (ಯುಎನ್‍ಐ) ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

 Sharesee more..