Tuesday, Oct 20 2020 | Time 13:46 Hrs(IST)
 • ಯುವ ಆಟಗಾರರಿಗೆ ಅವಕಾಶ ನೀಡದ ಧೋನಿ ಮೇಲೆ ಶ್ರೀಕಾಂತ್‌ ಗರಂ
 • ರಾಜಸ್ತಾನ್‌ ರಾಯಲ್ಸ್ ನಮಗಿಂತ ಮಿಗಿಲಾದ ಪ್ರದರ್ಶನ ತೋರಿದೆ: ಸ್ಟಿಫೆನ್‌ ಫ್ಲೆಮಿಂಗ್‌
 • ನಾಳೆ ಕೇಂದ್ರ ಸಂಪುಟ ಸಭೆ
 • ಕಮ್ಯುನಿಸ್ಟ್ ಪಕ್ಷ ಮುಖಂಡ, ರೈತ ಪರ ಹೋರಾಟಗಾರ ಮಾರುತಿ ಮಾನ್ಪಡೆ ನಿಧನ
 • ರೈತ ನಾಯಕ ಮಾರುತಿ ಮಾನ್ಪಡೆ ಕೊರೊನಾಗೆ ಬಲಿ
 • ಯಡಿಯೂರಪ್ಪ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ,ಪಕ್ಷದ ಹೈಕಮಾಂಡ್ ಗೂ ಇವರಿಂದ ಸಾಗಾಗಿ ಹೋಗಿದೆ : ಯತ್ನಾಳ ಹೊಸ ಬಾಂಬ್
 • ಪ್ರತಿಯೊಬ್ಬರಿಗೂ ನಿವೇಶನ,ಸೂರು ಕಲ್ಪಿಸುವುದು ಸರ್ಕಾರದ ಗುರಿ: ಮುಖ್ಯಮಂತ್ರಿ ಯಡಿಯೂರಪ್ಪ
 • ಮುನಿರತ್ನ ಮುಂದಿನ ದಿನಗಳಲ್ಲಿ ಮಂತ್ರಿಯಾಗಲಿದ್ದಾರೆ-ಅವರನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡುತ್ತಾರೆ : ನಾರಾಯಣಗೌಡ
 • ಶೋಪಿಯಾನ್‌ ಎನ್‍ ಕೌಂಟರ್: ಮತ್ತೋರ್ವ ಓರ್ವ ಉಗ್ರ ಹತ, ಒಟ್ಟು ಇಬ್ಬರು ಉಗ್ರರು ಹತ್ಯೆ
 • ಗೆಲುವಿನ ಬೆನ್ನಲ್ಲೆ ಜೋಸ್‌ ಬಟ್ಲರ್‌ ಅವರನ್ನು ಶ್ಲಾಘಿಸಿದ ಸ್ಟೀವನ್‌ ಸ್ಮಿತ್‌
 • ಸಿಎಸ್‌ಕೆ ಸೋಲಿನ ಬಳಿಕ ಅಭಿಮಾನಿಗಳಿಂದ ಟ್ರೋಲ್‌ಗೆ ಗುರಿಯಾದ ಕೇದಾರ್ ಜಾಧವ್‌
 • ಮೂರು ತಿಂಗಳ ಚಳಿಗಾಲದಲ್ಲಿ ಮತ್ತಷ್ಟು ಕಾಡಲಿರುವ ಕೊರೋನ: ಎಚ್ಚರ, ಎಚ್ಚರ !!
 • ಕೊರೊನಾ ಪಾಸಿಟಿವ್ ಪ್ರಕರಣಗಳ ಪ್ರಮಾಣ ಸತತ ನಾಲ್ಕನೇ ದಿನವೂ ಇಳಿಕೆ
Entertainment Share

'ಭೂಮಿ ಬದಲಾಗಿಲ್ಲ, ದೈವ ಕೈಬಿಟ್ಟಿಲ್ಲ' ಕೊರೋನಾ ಹಾಡು ಬಿಡುಗಡೆ

'ಭೂಮಿ ಬದಲಾಗಿಲ್ಲ, ದೈವ ಕೈಬಿಟ್ಟಿಲ್ಲ' ಕೊರೋನಾ ಹಾಡು ಬಿಡುಗಡೆ
'ಭೂಮಿ ಬದಲಾಗಿಲ್ಲ, ದೈವ ಕೈಬಿಟ್ಟಿಲ್ಲ' ಕೊರೋನಾ ಹಾಡು ಬಿಡುಗಡೆ

ಬೆಂಗಳೂರು, ಸೆ 17 (ಯುಎನ್‍ಐ) ಕೊರೋನ ಹಾವಳಿಯಿಂದ ಈ ವರ್ಷ ಸಂಕಷ್ಟ ಒಳಗಾಗಿರುವ ಸಂಖ್ಯೆ ಬಹಳ. ಇತ್ತೀಚೆಗಂತೂ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗೆ ಅದೇ ಸಂಖ್ಯೆಯಲ್ಲಿ ಗುಣಮುಖರಾಗುತ್ತಿದ್ದಾರೆ. ನಾವು ಜಾಗರೂಕತೆಯಿಂದ ಇರಬೇಕು . ಆಗ ಯಾವುದನ್ನು ಧೈರ್ಯವಾಗಿ ಎದುರಿಸಬಹುದು.

ಈ ನಿಟ್ಟಿನಲ್ಲಿ ಡಿ.ಎಸ್ ಮ್ಯಾಕ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಎಸ್.ಪಿ ದಯಾನಂದ್ ರವರು ಸಹ "ಭೂಮಿ ಬದಲಾಗಿಲ್ಲ, ದೈವ ಕೈಬಿಟ್ಟಿಲ್ಲ" ಎಂಬ ಹಾಡನ್ನು ಹೊರತಂದಿದ್ದಾರೆ. ಉತ್ಸಾಹಿ ಕಲಾವಿದರಿಗೆ ಪ್ರತಿಭಾವಂತರಿಗೆ ಅವಕಾಶ ನೀಡಿ ಸಾರ್ವಜನಿಕರಿಗೆ ಡಿಎಕ್ಸ್ ಮ್ಯಾಕ್ಸ್ ಎಸ್. ಪಿ. ದಯಾನಂದ್ ರವರು ಭೂಮಿ ಬದಲಾಗಿಲ್ಲ ದೈವ ಕೈಬಿಟ್ಟಿಲ್ಲ ಎಂಬ ಹಾಡನ್ನು ನಿರ್ಮಿಸಿ ಧೈರ್ಯ ಮತ್ತು ಉತ್ಸಾಹವನ್ನು ತುಂಬಿದ್ದಾರೆ

ಈ ಹಾಡನ್ನು ಅಭಿಲಾಷ್ ಜಿ.ವಿ ಬರೆದು, ಹಾಡಿದ್ದಾರೆ. ನಿರ್ದೇಶನ ಕೂಡ ಅಭಿಲಾಷ್ ಅವರದೆ. ಹಾಡಿನಲ್ಲಿ ವರನಟ ಡಾ. ರಾಜ್​ಕುಮಾರ್, ಡಾ. ವಿಷ್ಣುವರ್ಧನ್, ಕರಾಟೆ ಕಿಂಗ್ ಶಂಕರ್ ನಾಗ್, ರೆಬೆಲ್ ಸ್ಟಾರ್ ಅಂಬರೀಶ್​ ಅವರ ಧ್ವನಿ ಅನುಕರಣೆ ಮಾಡುವ ಮೂಲಕ ಕೋರೋನಾ ಬಗ್ಗೆ ಅಭಿಲಾಷ್ ಎಚ್ಚರಿಸಿದ್ದಾರೆ.

ಈ ಹಾಡಿಗೆ ಅನಂತ್ ಆರ್ಯನ್ ಅವರು ಎಲ್ಲ ವರ್ಗದ ಜನರಿಗೂ ಇಷ್ಟವಾಗುವಂತೆ ಸಂಗೀತ ಸಂಯೋಜಿಸಿದ್ದಾರೆ.

ಧ್ವನಿ ಗ್ರಹಣದಲ್ಲಿ ರಾಜ್ಯ ಪ್ರಶಸ್ತಿ ವಿಜೇತರಾದ ಪಳನಿ ಡಿ ಸೇನಾಪತಿ ರವರು ಮಾಸ್ಟರಿಂಗ್ ಮಿಕ್ಸಿಂಗ್ ಮಾಡಿದ್ದಾರೆ

ಛಾಯಾಗ್ರಹಣ ಪ್ರಶಾಂತ್ ಎಮ್ ಯಾದವ್, ಸಂಕಲನ ರಾಘವೇಂದ್ರ ಕೆ.ಆರ್ , ವಿ ಎಫ್ಎಕ್ಸ್ ಮತ್ತು ಕಲರಿಂಗ್ ಕೀ ಲೈಟ್ಸ್ ಸಂಸ್ಥೆಯ ಮಂಜು ಕೆಬಿ ,ಅನಿಲ್ ಸಾಗರ್ ,ಸಂಗಮೇಶ್ ವಾಲೆ ಮಾಡಿದ್ದಾರೆ

ಎಲ್ಲರೂ ಧೈರ್ಯ ,ಉತ್ಸಾಹ ಮತ್ತು ಆತ್ಮ ವಿಶ್ವಾಸದಿಂದ ನಡೆದು ಕೊರೊನಾಗೆ ಎಚ್ಚರ ವಹಿಸಿ ಕೊರೊನಾದಿಂದ ಭಯಮುಕ್ತರಾಗಿ ಎಂದು ಹೇಳುತ್ತಿದ್ದಾರೆ. A2 Music ಯೂಟ್ಯೂಬ್ ಚಾನೆಲ್ ನಲ್ಲಿ ಹಾಡು ಬಿಡುಗಡೆಯಾಗಿದೆ.

ನಾವು ಮುನ್ನೆಚರಿಕೆಯಿಂದ ಇದ್ದರೆ ಕೊರೊನಾವನ್ನು ಹೋಗಲಾಡಿಸುವುದು ಕಷ್ಟದ ಕೆಲಸವೇನಲ್ಲ ಎಂಬುದು ಈ ಹಾಡಿನ ಸಾರಾಂಶ.

ಯುಎನ್‍ಐ ಎಸ್‍ಎ 1736

More News

‘ಡಿಡಿಎಲ್ ಜೆ’ 25 ವರ್ಷದ ಸಂಭ್ರಮ

20 Oct 2020 | 12:37 PM

 Sharesee more..

ನೋಯ್ಡಾ ಚಲನಚಿತ್ರನಗರಿ ವಿಸ್ತರಣೆಗೆ ಆಗ್ರಹ

20 Oct 2020 | 12:06 PM

 Sharesee more..

ಅರ್ಧ ಶತಕದತ್ತ ‘ಕಾಣದಂತೆ ಮಾಯವಾದನು’

20 Oct 2020 | 10:20 AM

 Sharesee more..