Monday, Jul 13 2020 | Time 00:35 Hrs(IST)
Entertainment Share

“ಭಾಯ್ ಭಾಯ್” ಹಾಡಿನ ಯಶಸ್ಸಿನಿಂದ ಸಂತೋಷವಾಗಿದ್ದಾರೆ ಸಲ್ಮಾನ್ ಖಾನ್

ಮುಂಬೈ, ಮೇ 28 (ಯುಎನ್ಐ)- ಬಾಲಿವುಡ್‌ನ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ 'ಭಾಯ್ ಭಾಯ್' ಹಾಡಿನ ಯಶಸ್ಸಿನಿಂದ ತುಂಬಾ ಸಂತೋಷವಾಗಿದ್ದಾರೆ.

ಸಲ್ಮಾನ್ ಖಾನ್ ಅಭಿಮಾನಿಗಳು ಈದ್ ನಿಮಿತ್ಯ ಉಡುಗೊರೆ ನೀಡಿದ್ದು, ಅವರು 'ಭಾಯ್ ಭಾಯ್' ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡಿನಲ್ಲಿ ಸಲ್ಮಾನ್ ಖಾನ್ ಧಾರ್ಮಿಕ ಏಕತೆಯ ಸಂದೇಶವನ್ನು ನೀಡುತ್ತಿದ್ದಾರೆ. ಸಲ್ಮಾನ್ ತಮ್ಮ ಭಾಯ್ ಭಾಯ್ ಹಾಡನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಹಾಡಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಇದಕ್ಕಾಗಿ ಸಲ್ಮಾನ್ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಸಲ್ಮಾನ್ ಈ ಹಾಡನ್ನು ಟ್ವಿಟ್ಟರ್ ನಲ್ಲಿ ಮತ್ತೆ ಹಂಚಿಕೊಂಡಿದ್ದಾರೆ ಮತ್ತು "ಹಾಡಿಗೆ ಪ್ರತಿಕ್ರಿಯಿಸಿದ ಭಾಯ್ ಭಾಯ್ ಧನ್ಯವಾದಗಳು" ಎಂದು ಬರೆದಿದ್ದಾರೆ. ದಯವಿಟ್ಟು ಹೊಸ ಪೀಳಿಗೆಯ ಜನರಿಗೆ ಈ ಹಾಡನ್ನು ಮತ್ತೆ ಮತ್ತೆ ಕೇಳಿಸಿ. ನಿಮ್ಮ ಕಿರಿಯ ಸಹೋದರು, ನಿಮ್ಮ ಮಕ್ಕಳು, ನಿಮ್ಮೆಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. ದೇವರು ಯಾವಾಗಲೂ ನಿಮ್ಮೆಲ್ಲರನ್ನೂ ರಕ್ಷಿಸುತವಾಗಿಡಲಿ" ಎಂದು ಬರೆದಿದ್ದಾರೆ.

ಯುಎನ್ಐ ವಿಎನ್ಎಲ್ 1449
More News

ಬಾಲಿವುಡ್ ಹಾಸ್ಯ ನಟ ಜಗದೀಪ್ ಜಾಫ್ರಿ ನಿಧನ

08 Jul 2020 | 11:30 PM

 Sharesee more..
ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

08 Jul 2020 | 6:18 PM

ಬೆಂಗಳೂರು, ಜುಲೈ 08 (ಯುಎನ್‍ಐ) ಕನ್ನಡದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೊರೋನಾ ಸೋಂಕಿಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

 Sharesee more..