Sunday, Nov 29 2020 | Time 18:56 Hrs(IST)
 • ಆಜಾದ್ ಭವನ ನೂತನ ಕಟ್ಟಡ 1 ಕೋಟಿಯಲ್ಲಿ ನಿರ್ಮಿಸಿರುವುದು ಶ್ಲಾಘನೀಯ - ಎಚ್ ನಾಗೇಶ್
 • ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಜನಬೆಂಬಲ; ಗೋವಿಂದ ಕಾರಜೋಳ
 • ಭಾರತದ ಬೌಲರ್‌ಗಳು ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡಲಿಲ್ಲ: ವಿರಾಟ್‌ ಕೊಹ್ಲಿ
 • ನಮ್ಮಿಂದಲೇ ಕಾಂಗ್ರೆಸ್ ಪಕ್ಷ ಎಂಬ ಭ್ರಮೆ ಬೇಡ: ಡಿ ಕೆ ಶಿವಕುಮಾರ್
 • ಕೃಷ್ಟಿ ಸುಧಾರಣೆಯಿಂದ ರೈತರಿಗೆ ಮುಕ್ತ ಅವಕಾಶ, ಹಕ್ಕು ಲಭ್ಯ; ಪ್ರಧಾನಿ ಪ್ರತಿಪಾದನೆ
 • ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ : ಮಹೇಶ್ ಕುಮಠಹಳ್ಳಿ ವಿಶ್ವಾಸ
 • ಸರ್ಕಾರದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿದ ರೈತ ಸಂಘಟನೆಗಳು
 • ಮಹಿಳೆಗೆ ವಂಚಿಸಿದ ನೈಜೀರಿಯಾ ಪ್ರಜೆ ಬಂಧನ
 • ಯೋಗೇಶ್ವರ್ ಪರ ಮಾತನಾಡುವವರು ಸಚಿವ ಸ್ಥಾನ ತ್ಯಾಗ ಮಾಡಿಲಿ : ಎಂ ಪಿ ರೇಣುಕಾಚಾರ್ಯ
 • ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌
 • ಆರ್‌ಎಂಎಂ ಪದಾಧಿಕಾರಿಗಳೊಂದಿಗೆ ನಾಳೆ ರಜನೀಕಾಂತ್‍ ಮಹತ್ವದ ಭೇಟಿ: ರಾಜಕೀಯ ನಿಲುವು ಕುರಿತು ಸ್ಪಷ್ಟನೆ
 • ಮಾರಕಾಸ್ತ್ರಗಳಿಂದ ಕೊಚ್ಚಿ‌ ಯುವಕನ ಕೊಲೆ
 • ಸಾಗರ ಭದ್ರತೆಯನ್ನು ಹೆಚ್ಚಿಸುವಲ್ಲಿ ಭಾರತ, ಶ್ರೀಲಂಕಾ, ಮಾಲ್ಡೀವ್ಸ್ ನಿಂದ ಮಹತ್ವದ ಕ್ರಮ
 • ವಿದ್ಯುತ್ ತಂತಿ ತಗುಲಿ ಕಂಬದಲ್ಲೇ ಲೈನ್ ಮನ್ ಸಾವು: ಮತ್ತೋರ್ವ ಚಿಂತಾಜನಕ
 • ವಿದ್ಯುತ್ ಸ್ಪರ್ಶ: ಕಂಟೈನರ್ ಕ್ಲೀನರ್ ಗೆ ಗಂಭೀರ ಗಾಯ
Entertainment Share

“ರತ್ನನ್ ಪ್ರಪಂಚ” ದಲ್ಲಿ ತಾರಾ ಗಟ್ಟಿಗಿತ್ತಿ ಗೌಡತಿ

“ರತ್ನನ್ ಪ್ರಪಂಚ” ದಲ್ಲಿ ತಾರಾ ಗಟ್ಟಿಗಿತ್ತಿ ಗೌಡತಿ
“ರತ್ನನ್ ಪ್ರಪಂಚ” ದಲ್ಲಿ ತಾರಾ ಗಟ್ಟಿಗಿತ್ತಿ ಗೌಡತಿ

ಬೆಂಗಳೂರು, ಅ 21(ಯುಎನ್‍ಐ) ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ “ರತ್ನನ್ ಪ್ರಪಂಚ” ಚಿತ್ರದಲ್ಲಿ ಗಟ್ಟಿಗಿತ್ತಿ ಗೌಡತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.ಈವರೆಗಿನ ಚಿತ್ರಗಳಲ್ಲಿ ಒಂದಕ್ಕಿಂತ ಒಂದು ಭಿನ್ನ ವಿಭಿನ್ನ ಪಾತ್ರವನ್ನು ಪೋಷಿಸುತ್ತ ಬಂದಿರುವ ತಾರಾ ಅವರಿಗೆ ಗಟ್ಟಿಗಿತ್ತಿ ಗೌಡತಿ ಪಾತ್ರ ಮಾಡಲಿಲ್ಲವಲ್ಲ ಎಂಬ ಕೊರಗು ಈ ಚಿತ್ರದಿಂದ ನೀಗಲಿದೆ.ಡಾಲಿ ಧನಂಜಯ್ ನಟಿಸುತ್ತಿರುವ ‘ರತ್ನನ್​ ಪ್ರಪಂಚ’ ಚಿತ್ರ ಅವರಿಗೆ ಈ ಪಾತ್ರ ಕರುಣಿಸಿದೆ.

ಕಾರ್ತಿಕ್​ ಗೌಡ ಮತ್ತು ಯೋಗಿ ಜಿ. ರಾಜ್​ ನಿರ್ಮಾಣ ಮಾಡುತ್ತಿರುವ ರತ್ನನ್​ ಪ್ರಪಂಚ ಸಿನಿಮಾವನ್ನು ‘ದಯವಿಟ್ಟು ಗಮನಿಸಿ’ ಸಿನಿಮಾ ಖ್ಯಾತಿಯ ರೋಹಿತ್​ ಪದಕಿ ನಿರ್ದೇಶನ ಮಾಡುತ್ತಿದ್ದಾರೆ‘ಕಥೆಯ ಒಂದೆಳೆ ಹೇಳುತ್ತಿದ್ದಂತೆ, ನನಗೆ ಇಷ್ಟವಾಯ್ತು.ಆದರೆ ಜೊತೆಗೆ ಆಳಕೂ ಆಯ್ತು..ಅದರಲ್ಲೂ ನಾನು ಈ ರೀತಿಯ ಪಾತ್ರವನ್ನು ಇಲ್ಲಿಯವರೆಗೂ ಮಾಡಿಲ್ಲ. ಖಡಕ್​ ಉತ್ತರ ಕರ್ನಾಟಕ ಭಾಷೆಯನ್ನು ಮಾತನಾಡುವ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮಹಿಳೆಯಾಗಿ ನನ್ನ ಪಾತ್ರ ಸಾಗಲಿದೆ. ನೆಗೆಟಿವ್​ ಶೇಡ್​ ಅಲ್ಲದ, ದೇವತೆಯಂತೆ ಬಿಂಬಿಸುವ ಪಾತ್ರ ಇದು. ಇಂಥ ಪಾತ್ರ ನೀಡಿದಕ್ಕೆ ನಿರ್ದೇಶಕರಿಗೆ ನನ್ನ ಧನ್ಯವಾದ’ ಎಂದಿರುವ ತಾರಾ, ಉತ್ತರ ಕರ್ನಾಟಕ ಭಾಷೆ ಕಲಿಯುವುದಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇಡೀ ಸಿನಿಮಾದಲ್ಲಿ ತಾರಾ ಪಾತ್ರ ಮುಖ್ಯವಾಗಿದ್ದು, ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿಯೇ ಸಂಭಾಷಣೆ ಒಪ್ಪಿಸಬೇಕಿರುವುದರಿಂದ ಅದಕ್ಕಾಗಿ ತಯಾರಿ ನಡೆಸಿದ್ದಾರೆ. ಆ ಸೊಗಡನ್ನು ಉಚ್ಚರಿಸುವುದಕ್ಕೆ ತರಬೇತಿಯನ್ನೂ ಪಡೆದುಕೊಳ್ಳುತ್ತಿದ್ದಾರೆ.

‘ಈವರೆಗೂ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಪ್ರತಿ ಪಾತ್ರದಲ್ಲಿಯೂ ಕಲಿಯುವುದಕ್ಕೆ ಸಾಕಷ್ಟಿತ್ತು. ಇಷ್ಟು ವರ್ಷಗಳಾದರೂ ಈಗಲೂ ನನಗೆ ಕಲಿಯುವುದಕ್ಕೆ ಇಂಥ ಪಾತ್ರಗಳ ಮೂಲಕ ಅವಕಾಶ ಸಿಗುತ್ತಿದೆ. ಆ ರೀತಿಯ ಪಾತ್ರ ಹಿಡಿದು ಬರುವ ನಿರ್ದೇಶಕರಿಗೆ ಮತ್ತು ನೀವೇ ನಟಿಸಬೇಕು ಎನ್ನುವ ನಿರ್ಮಾಪಕರಿಗೆ ನನ್ನ ನಮನಗಳು’ ಎಂದು ತಾರಾ ಹೇಳಿದ್ದಾರೆ.ಇನ್ನು ಲಾಕ್​ಡೌನ್​ ಮುಗಿಯುತ್ತಿದ್ದಂತೆ ಟಾಮ್​ ಆ್ಯಂಡ್​ ಜೆರ್ರಿ ಮತ್ತು ಬಡವ ರಾಸ್ಕಲ್ ಚಿತ್ರದ ಶೂಟಿಂಗ್​ ಮುಗಿಸಿರುವ ತಾರಾ, ನವೆಂಬರ್​ನಲ್ಲಿ ರತ್ನನ್​ ಪ್ರಪಂಚ ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ. ಇದರ ಜತೆಗೆ ಹೊಸದಾಗಿ ಐದಾರು ಚಲನಚಿತ್ರಗಳನ್ನೂ ಒಪ್ಪಿಕೊಂಡಿದ್ದಾರೆ.ಯುಎನ್ಐ ಎಸ್‍ಎ 1032

More News
ಟಾಲಿವುಡ್​ನಿಂದ ಬಾಲಿವುಡ್​ಗೆ ಬೆಲಂಕೊಂಡ ಸಾಯಿ ಶ್ರೀನಿವಾಸ್

ಟಾಲಿವುಡ್​ನಿಂದ ಬಾಲಿವುಡ್​ಗೆ ಬೆಲಂಕೊಂಡ ಸಾಯಿ ಶ್ರೀನಿವಾಸ್

28 Nov 2020 | 10:01 PM

ಬೆಂಗಳೂರು, ನ 28 (ಯುಎನ್‍ಐ) ಟಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ನಟ ಬೆಲಂಕೊಂಡ ಸಾಯಿ ಶ್ರೀನಿವಾಸ್​ ಇದೀಗ ಬಾಲಿವುಡ್​ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ತಯಾರಿ ನಡೆಸಿದ್ದಾರೆ.

 Sharesee more..
“ರಾಣಿ ಜೇನು” ರೊಮ್ಯಾಂಟಿಕ್ ಮ್ಯೂಸಿಕ್ ಆಲ್ಬಂ ಬಿಡುಗಡೆ

“ರಾಣಿ ಜೇನು” ರೊಮ್ಯಾಂಟಿಕ್ ಮ್ಯೂಸಿಕ್ ಆಲ್ಬಂ ಬಿಡುಗಡೆ

28 Nov 2020 | 9:58 PM

ಬೆಂಗಳೂರು, ನ 28 (ಯುಎನ್‍ಐ) ಸಂಗೀತ ಕ್ಷೇತ್ರದಲ್ಲಿ ತನ್ನದೇ ಹೆಸರು ಮಾಡಿರುವ ಜಂಕಾರ್ ಮ್ಯೂಸಿಕ್ ಸಂಸ್ಥೆ ಈವರೆಗೂ ಸಾಕಷ್ಟು ವಿಡಿಯೋ ಆಲ್ಬಂ ಬಿಡುಗಡೆ ಮಾಡಿದ್ದು, ಈ ಬಾರಿ ಸೋನಿ ಆಚಾರ್ಯ ಅವರ ಸಾರಥ್ಯದಲ್ಲಿ “ರಾಣಿ ಜೇನು” ಎಂಬ ರೊಮ್ಯಾಂಟಿಕ್ ವಿಡಿಯೋ ಬಿಡುಗಡೆಗೊಳಿಸಿದೆ.

 Sharesee more..
'ಆ ಒಂದು ಕನಸು' ಶೀರ್ಷಿಕೆ ಅನಾವರಣ

'ಆ ಒಂದು ಕನಸು' ಶೀರ್ಷಿಕೆ ಅನಾವರಣ

28 Nov 2020 | 9:56 PM

ಬೆಂಗಳೂರು, ನ 28 (ಯುಎನ್ಐ) ರಂಗು ಕ್ರಿಯೇಷನ್ಸ್ ಲಾಂಛನದಲ್ಲಿ ದಿಲೀಪ ಬಿ.ಎಂ ನಿರ್ಮಿಸುತ್ತಿರುವ ನೂತನ ಚಿತ್ರ 'ಆ ಒಂದು ಕನಸು' ಚಿತ್ರದ ಶೀರ್ಷಿಕೆಯನ್ನು ಹಿರಿಯ ನಟರಾದ ಎಸ್ ಉಮೇಶ್ , ಹೊನ್ನವಳ್ಳಿ ಕೃಷ್ಣ ಹಾಗೂ ಹಿರಿಯ ಕಂಠದಾನ ಕಲಾವಿದೆ ಆಶಾ ಬಿಡುಗಡೆ ಮಾಡಿದ್ದಾರೆ.

 Sharesee more..
“ಆಕ್ಟ್-1978” ಬೆಂಗಳೂರು ಡಿಸಿಪಿ ನಿಶಾ ಜೇಮ್ಸ್ ಮೆಚ್ಚುಗೆ

“ಆಕ್ಟ್-1978” ಬೆಂಗಳೂರು ಡಿಸಿಪಿ ನಿಶಾ ಜೇಮ್ಸ್ ಮೆಚ್ಚುಗೆ

28 Nov 2020 | 9:52 PM

ಬೆಂಗಳೂರು, ನ 28 (ಯುಎನ್‍ಐ) ಲಾಕ್ ಡೌನ್ ಬಳಿಕ ಬಿಡುಗಡೆಯಾದ ದಕ್ಷಿಣದ ಮೊದಲ ನೂತನ ಚಿತ್ರ ಎಂಬ ಹೆಗ್ಗಳಿಗೆ ಪಾತ್ರವಾಗಿರುವ “ಆಕ್ಟ್ -1978” ಚಿತ್ರಕ್ಕೆ ಡಿಸಿಪಿ ನಿಶಾ ಜೇಮ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 Sharesee more..
ಆಲ್ಬಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ

ಆಲ್ಬಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ "ಜೊತೆ ಜೊತೆಯಲಿ" ಮೇಘಾ ಶೆಟ್ಟಿ

28 Nov 2020 | 9:49 PM

ಬೆಂಗಳೂರು, ನ 28 (ಯುಎನ್‍ಐ) ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದು, ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ನಟಿ ಮೇಘಾ ಶೆಟ್ಟಿ, ಇದೀಗ ಆಲ್ಬಂ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ.

 Sharesee more..