Saturday, Dec 5 2020 | Time 23:00 Hrs(IST)
 • ಬರೇವಿ ಚಂಡಮಾರುತ ; ಏಳು ಮಂದಿ ಸಾವು
 • ರೈತರು ಮತ್ತು ಕೇಂದ್ರ ನಡುವಿನ 5ನೇ ಸುತ್ತಿನ ಮಾತುಕತೆ ಅಪೂರ್ಣ: ಡಿ 6 ರಂದು ಮತ್ತೆ ಚರ್ಚೆ
 • ಕೃಷಿ ಸಚಿವ ತೋಮರ್ ಮನವಿ ತಿರಸ್ಕರಿಸಿದ ರೈತ ಪ್ರತಿನಿಧಿಗಳು
 • ಸಕಾಲದಲ್ಲಿ ಸೇವೆ ಒದಗಿಸಲು ಎಸ್ ಆರ್ ವಿಶ್ವನಾಥ್ ಸೂಚನೆ
 • ಬಿಡಿಎ ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಶಾಸ್ತಿ: ಎಸ್ ಆರ್ ವಿಶ್ವನಾಥ್
 • ಡಿಸೆಂಬರ್ 10 ಹೊಸ ಸಂಸತ್ ಭವನ ನಿರ್ಮಾಣಕ್ಕೆ ಶಿಲಾನ್ಯಾಸ
 • ಶಾಸಕ ಸಿದ್ದು ಸವದಿ ಸೇರಿದಂತೆ ದೌರ್ಜನ್ಯ ನಡೆಸಿದವರನ್ನು ಬಂಧಿಸಲು ಡಿ ಕೆ ಶಿವಕುಮಾರ್ ಆಗ್ರಹ
 • ಸುವರ್ಣ ಸೌಧ ಕಟ್ಟಿದ್ದು ಯಾಕೆ? ಬಿಜೆಪಿಗೆ ಜನರ ಬಗ್ಗೆ ಕಾಳಜಿ ಇಲ್ಲ: ಡಿ ಕೆ ಶಿವಕುಮಾರ್
 • ಆಯೋಧ್ಯೆಯಲ್ಲಿ ರಾಮಾಯಣ ಕ್ರೂಸ್ ಕೇಂದ್ರ ಪರಿಶೀಲನೆ
 • ಅಮೆರಿಕದಲ್ಲಿ ಒಂದೇ ದಿನ ಅತಿ ಹೆಚ್ಚು 2,27,000 ಕೋವಿಡ್‍-19 ಪ್ರಕರಣಗಳು ವರದಿ
 • ಹೊಸ ಕೃಷಿ ಸುಧಾರಣಾ ಕಾನೂನುಗಳ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಗೆ ಚಂದ್ರಬಾಬು ನಾಯ್ಡು ಒತ್ತಾಯ
 • ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ; ಸೋಮವಾರದಿಂದ ನಾಮಪತ್ರ ಸಲ್ಲಿಕೆ ಆರಂಭ
 • ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರಕಾರ ಬದ್ಧ; ಕಾರ್ಯಕಾರಿಣಿ ಸಭೆಯಲ್ಲಿ ಮುಖ್ಯಮಂತ್ರಿ ಭರವಸೆ
 • ಶೀಘ್ರವೇ ಗೋಹತ್ಯೆ ನಿಷೇಧ, ಲವ್ ಜಿಹಾದ್ ತಡೆಗೆ ಕಾಯ್ದೆ; ನಳಿನ್‌ ಕುಮಾರ್ ಕಟೀಲ್
 • ಕುಮಾರಸ್ವಾಮಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಮೊದಲೇ ಯೋಚಿಸಬೇಕಿತ್ತು; ಅಶ್ವತ್ಥ ನಾರಾಯಣ್
Entertainment Share

“ಲಕ್ಷ್ಮೀ ಬಾಂಬ್” ಶೀರ್ಷಿಕೆಗೆ ಹಿಂದೂ ಸೇನಾ ವಿರೋಧ, ಬದಲಾವಣೆಗೆ ಆಗ್ರಹ

ಮುಂಬೈ, ಅ 21 (ಯುಎನ್‍ಐ) ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷೆಯ “ಲಕ್ಷ್ಮೀ ಬಾಂಬ್” ಸಿನಿಮಾ ವಿವಾದಲ್ಲಿ ಸಿಲುಕಿದೆ.

ಶೀರ್ಷಿಕೆ ಬದಲಿಸುವಂತೆ ಆಗ್ರಹಿಸಿರುವ ಹಿಂದೂ ಸೇನಾ ಸಂಘಟನೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ದೂರು ಸಲ್ಲಿಸಿದ್ದಾರೆ. ಸಿನಿಮಾದ ಪ್ರಚಾರಕರು, ಪಾತ್ರವರ್ಗ ಮತ್ತು ತಂಡದ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ

ಸಿನಿಮಾಗೆ ಟೈಟಲ್ ಹಿಂದೂ ದೇವತೆ ಲಕ್ಷ್ಮೀ ಹೆಸರನ್ನು ಇಟ್ಟು ಅಪಹಾಸ್ಯ ಮಾಡಲಾಗುತ್ತಿದೆ ಮತ್ತು ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳನ್ನು ನೋಯಿಸಲಾಗಿದೆ' ಎಂದು ಹಿಂದೂ ಸೇನಾ ಅಭಿಪ್ರಾಯ ಪಟ್ಟಿದೆ. ಜೊತೆಗೆ ಚಿತ್ರದ ಟೈಟಲ್ ಅನ್ನು ಬದಲಾಯಿಸಬೇಕೆಂದು ಒತ್ತಾಯಿಸಿದೆ.

ಚಲನಚಿತ್ರದ ಹೆಸರು ಅತ್ಯಂತ ಅವಹೇಳನಕಾರಿಯಾಗಿದೆ. ಹಿಂದೂ ದೇವತೆ ಲಕ್ಷ್ಮೀ ಅದೃಷ್ಟ ಮತ್ತು ಸಂಪತ್ತಿನ ದೇವತೆ. ಆದರೆ ಚಿತ್ರದಲ್ಲಿ ಲಕ್ಷ್ಮೀ ಜೊತೆಗೆ ಬಾಂಬ್ ಎಂಬ ಪದವನ್ನು ಬಳಸಲಾಗಿದೆ. ಇದು ಹಿಂದೂ ಸಮುದಾಯಕ್ಕೆ ಸ್ವೀಕರಾರ್ಹವಲ್ಲ' ಎಂದು ಬರೆದಿದ್ದಾರೆ.
ಹಿಂದೂ ಸೇನಾ ಮಾತ್ರವಲ್ಲ, ಟ್ರೈಲರ್ ರಿಲೀಸ್ ಆದಾಗಿನಿಂದಲೂ ಸಿನಿಮಾದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿಬಂದ ಬಳಿಕ ಶೀರ್ಷಿಕೆ ಬದಲಾಯಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಈ ಟ್ರೈಲರ್ ಲವ್ ಜಿಹಾದ್ ಗೆ ಉತ್ತೇಜನ ನೀಡುತ್ತಿದೆ ಎಂದು ನೆಟ್ಟಿಗರು ಅಕ್ಷಯ್ ಕುಮಾರ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಲ್ಲದೆ ShameonuAkshayKumar ಎಂದು ಹ್ಯಾಷ್ ಟ್ಯಾಗ್ ಹಾಕಿ ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.

ಪ್ರೇಕ್ಷಕರನ್ನು ಆಕರ್ಷಿಸಲು ಹಾಗೂ ಚಿತ್ರದೊಂದಿಗೆ ಹೆಚ್ಚು ಹೊಂದಿಕೆಯಾಗುವ ಕಾರಣಕ್ಕೆ ತಮಿಳು ಚಿತ್ರ “ಕಾಂಚನಾ”ದ ಹಿಂದಿ ರೀಮೇಕ್‌ಗೆ “ಲಕ್ಷ್ಮೀ ಬಾಂಬ್” ಎಂದು ಹೆಸರಿಸಲು ನಿರ್ಧರಿಸಲಾಯಿತು ಎಂದು ನಿರ್ದೇಶಕ ರಾಘವ ಲಾರೆನ್ಸ್ ಹೇಳಿದ್ದಾರೆ.
ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ಮಂಗಳಮುಖಿಯಾಗಿ ಕಾಣಿಸಿಕೊಂಡಿದ್ದಾರೆ. ನಟ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿದ್ದಾರೆ.

ಯುಎನ್‍ಐ ಎಸ್‍ಎ 1326


ಯುಎನ್‍ಐ ಎಸ್‍ಎ 1326
More News
ಆ ಒಂದು ಕನಸಿಗೆ ಮುಹೂರ್ತ

ಆ ಒಂದು ಕನಸಿಗೆ ಮುಹೂರ್ತ

04 Dec 2020 | 9:26 PM

ಬೆಂಗಳೂರು, ಡಿ 04 (ಯುಎನ್‍ಐ) ರಂಗು ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಆ ಒಂದು ಕನಸು’ ಚಿತ್ರದ ಮುಹೂರ್ತ ಇತ್ತೀಚೆಗೆ ರಾಜರಾಜೇಶ್ವರಿ ನಗರದ ನಿಮಿಷಾಂಬಾ ದೇವಸ್ಥಾನದಲ್ಲಿ ನೆರವೇರಿದೆ.

 Sharesee more..
“ಪದವಿಪೂರ್ವ” ತಂಡಕ್ಕೆ ಜಗ್ಗೇಶ್ ಬೆಂಬಲ

“ಪದವಿಪೂರ್ವ” ತಂಡಕ್ಕೆ ಜಗ್ಗೇಶ್ ಬೆಂಬಲ

04 Dec 2020 | 9:22 PM

ಬೆಂಗಳೂರು, ಡಿ 04 (ಯುಎನ್ಐ) ಹರಿಪ್ರಸಾದ್ ಜಯಣ್ಣ ನಿರ್ದೇಶಿಸಿ, ಯೋಗರಾಜ್ ಭಟ್ ಹಾಗು ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ ಪದವಿಪೂರ್ವ ಚಿತ್ರದ ಶೂಟಿಂಗ್ ಸೆಟ್ ಗೆ ಹಿರಿಯ ನಟ ನವರಸನಾಯಕ ಜಗ್ಗೇಶ್ ಭೇಟಿ ನೀಡಿ ತಂಡಕ್ಕೆ ಶುಭಕೋರಿ ಹಾರೈಸಿದ್ದಾರೆ.

 Sharesee more..