Tuesday, Jun 25 2019 | Time 13:52 Hrs(IST)
  • ಕಾಂಗ್ರೆಸ್ ಮುಕ್ತ ಭಾರತ ಕನಸು ನನಸಾಗಲಿದೆ: ಯಡಿಯೂರಪ್ಪ
  • ಜಪಾನ್ ನೊಂದಿಗಿನ ಭದ್ರತಾ ಒಪ್ಪಂದದಿಂದ ಹಿಂದೆ ಸರಿಯಲಿದೆಯೇ ಅಮೆರಿಕ?
  • ಕೃಷಿಗಿಂತ ಹೈನುಗಾರಿಕೆಯಲ್ಲಿ ಹೆಚ್ಚು ಸಂಪಾದನೆ; ಕೇಂದ್ರ ಸರ್ಕಾರ
  • ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮುದಾಯದಿಂದ ಬೃಹತ್ ಪ್ರತಿಭಟನೆ
  • ಭಾರತದ ವಿರುದ್ಧ ಪಾಕ್ ಸೋತ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿತ್ತು !
  • ಕಾರ್ಮಿಕ ಮುಖಂಡ, ಮಾಜಿ ಕೌನ್ಸಿಲರ್‌ ಸತ್ಯನಾರಾಯಣರಾವ್ ನಿಧನ
  • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಭದ್ರತಾ ಮಂಡಳಿ ಒತ್ತಾಯ
  • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
  • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
  • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
  • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
  • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
  • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
  • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
  • ಶ್ರೀನಗರದ ಹಿರಿಯ ಪತ್ರಕರ್ತ ಬಂಧನ
Special Share

‘ವಾಯು’ ಚಂಡಮಾರುತ: ಪರಿಸ್ಥಿತಿ ಎದುರಿಸಲು ಕೇಂದ್ರ ಗೃಹ ಸಚಿವರಿಂದ ಸನ್ನದ್ಧತೆ ಪರಿಶೀಲನೆ

‘ವಾಯು’ ಚಂಡಮಾರುತ: ಪರಿಸ್ಥಿತಿ ಎದುರಿಸಲು ಕೇಂದ್ರ ಗೃಹ ಸಚಿವರಿಂದ  ಸನ್ನದ್ಧತೆ ಪರಿಶೀಲನೆ
‘ವಾಯು’ ಚಂಡಮಾರುತ: ಪರಿಸ್ಥಿತಿ ಎದುರಿಸಲು ಕೇಂದ್ರ ಗೃಹ ಸಚಿವರಿಂದ ಸನ್ನದ್ಧತೆ ಪರಿಶೀಲನೆ

ನವದೆಹಲಿ, ಜೂನ್ 11(ಯುಎನ್‌ಐ)- 'ವಾಯು' ಚಂಡಮಾರುತದಿಂದ ಎದುರಾಬಹುದಾದ ಪರಿಸ್ಥಿತಿಯ ನಿಭಾಯಿಸುವ ದೃಷ್ಟಿಯಿಂದ ರಾಜ್ಯಗಳು ಮತ್ತು ಕೇಂದ್ರೀಯ ಸಂಸ್ಥೆಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳವಾರ ಸನ್ನದ್ಧತೆಯನ್ನು ಪರಿಶೀಲಿಸಿದ್ದಾರೆ.





'ವಾಯು' ಚಂಡಮಾರುತ ಜೂನ್ 13 ರ ಮುಂಜಾನೆ 110 ರಿಂದ 135 ಕಿ.ಮೀ. ವೇಗದಲ್ಲಿ ಬಿರಗಾಳಿಯೊಂದಿಗೆ ಗುಜರಾತ್‍ ಕರಾವಳಿಯ ಪೋರ್ ಬಂದರ್ ಮತ್ತು ಮಹುವಾ ನಡುವೆ ಹಾಗೂ ವೆರಾವಲ್‍ ಮತ್ತು ಡಿಯು ಪ್ರಾಂತ್ಯದಲ್ಲಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.



ಚಂಡಮಾರುತದಿಂದ ಗುಜರಾತ್ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಸಮುದ್ರ ಅಲೆಗಳು ಸಾಮಾನ್ಯಕ್ಕಿಂತ 1.0ರಿಂದ 1.5 ಮೀಟರ್ ನಷ್ಟು ಎತ್ತರಕ್ಕೆ ಏಳುವುದರಿಂದ ಕರಾವಳಿಯ ತಗ್ಗು ಪ್ರದೇಶಗಳಾದ ಕಚ್, ದೇವಭೂಮಿ ದ್ವಾರಕಾ, ಪೋರಬಂದರ್, ಜುನಾಗಢ್, ಡಿಯು, ಗಿರ್‍ ಸೋಮನಾಥ್, ಅಮ್ರೇಲಿ ಮತ್ತು ಭಾವ್‍ನಗರ್ ಜಿಲ್ಲೆಗಳು ಜಲಾವೃತವಾಗುವ ಸಾಧ್ಯತೆ ಇದೆ.



ಭಾರತೀಯ ಹವಾಮಾನ ಇಲಾಖೆ ಈ ಕುರಿತಂತೆ ಏಪ್ರಿಲ್ 9 ರಿಂದ ಸಂಬಂಧಪಟ್ಟ ಎಲ್ಲ ರಾಜ್ಯಗಳಿಗೆ ನಿರಂತರವಾಗಿ ಮಾಹಿತಿ ಸಂಚಿಕೆಗಳನ್ನು ನೀಡುತ್ತಿದೆ.

ಚಂಡಮಾರುತದಿಂದ ಹಾನಿ ಮತ್ತು ಸಂಕಷ್ಟ ಎದುರಾದದಲ್ಲಿ ಜನರು ಸುರಕ್ಷಿತವಾಗಿ ಸ್ಥಳಾಂತರಿಸುವುದು ಮತ್ತು ವಿದ್ಯುತ್, ದೂರ ಸಂಪರ್ಕ, ಆರೋಗ್ಯ, ಕುಡಿಯುವ ನೀರು ಮುಂತಾದ ಎಲ್ಲ ಅಗತ್ಯ ಸೇವೆಗಳನ್ನು ಸೂಕ್ತವಾಗಿ ನಿರ್ವಹಿಸುವಂತೆ ಅಮಿತ್‍ ಶಾ ಸೂಚಿಸಿದ್ದಾರೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



ನಿಯಂತ್ರಣಾ ಕೊಠಡಿಗಳ ಕಾರ್ಯ ನಿರ್ವಹಣೆಗು ಅವರು ಸೂಚಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇಂದಿನ ಸಭೆಯಲ್ಲಿ ಗೃಹ ಕಾರ್ಯದರ್ಶಿ, ಭೂ ವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಮತ್ತು ಹವಾಮಾನ ಇಲಾಖೆ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಯುಎನ್‍ಐ ಎಸ್‍ಎಲ್‍ಎಸ್‍ ಕೆವಿಆರ್ 1712