Sunday, May 31 2020 | Time 18:33 Hrs(IST)
 • ಅಮೇರಿಕಾ, ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಸಮಸ್ಯೆ ಪರಿಹರಿಸುವಂತೆ ಸಿದ್ದರಾಮಯ್ಯ ಒತ್ತಾಯ
 • ರಾಜ್ಯದಲ್ಲಿ ಒಂದೇ ದಿನ 299 ಕೊರೋನಾ ಸೋಂಕಿತರು ಪತ್ತೆ, ಒಟ್ಟು ಸಂಖ್ಯೆ 3221ಕ್ಕೇರಿಕೆ
 • ತಮ್ಮ ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಇಬ್ಬರು ಭಾರತೀಯರನ್ನು ಹೆಸರಿಸಿದ ಅಂಪೈರ್ ಇಯಾನ್
 • ರಾಜ್ಯ ಸರ್ಕಾರದ ಲಾಕ್‌ ಡೌನ್‌ 5 0 ಹೊಸ ಮಾರ್ಗಸೂಚಿ ಪ್ರಕಟ; ಮೂರು ಹಂತಗಳಲ್ಲಿ ನಿರ್ಬಂಧ ಸಡಿಲಿಕೆ
 • ತೆಲಂಗಾಣದಲ್ಲಿ ಜೂನ್ 30 ರವರೆಗೆ ಲಾಕ್‌ಡೌನ್ ವಿಸ್ತರಣೆ
 • 2007ರ ವಿಶ್ವಕಪ್‌ ವೈಫಲ್ಯದ ಬಳಿಕ ಆತ್ಮವಿಶ್ವಾಸ ಮೂಡಿಸಿದ್ದು ದ್ರಾವಿಡ್: ಇರ್ಫಾನ್
 • ಕೇಂದ್ರದಿಂದ 5 ಸಾವಿರ ಕೋಟಿ ರೂ ನೆರವಿನ ಬೇಡಿಕೆಯಿಟ್ಟ ದೆಹಲಿ
 • ಮುಂಬೈನಲ್ಲಿ ಸಿಲುಕಿದ್ದ ಇನ್ನೂ 180 ವಲಸಿಗರು ವಿಶೇಷ ವಿಮಾನದ ಮೂಲಕ ರಾಂಚಿಗೆ ಆಗಮನ
 • ಬಾಂಗ್ಲಾದೇಶದಲ್ಲಿ ಒಂದೇ ದಿನ ಅತಿಹೆಚ್ಚು 40 ಕೊರೊನವೈರಸ್ ಸೋಂಕಿತರು ಸಾವು
 • ತಳಮಟ್ಟದವರಿಗಾಗಿ ಆನ್ ಲೈನ್ ಕೋಚಿಂಗ್ ತರಬೇತಿ ಖೇಲೋ ಇಂಡಿಯಾ ಇ ಪ್ರತಿಷ್ಠಾನ ಆರಂಭಿಸಲಿರುವ ಸಾಯ್
 • ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಗೆ ಕರ್ನಾಟಕ ಪ್ರಾಂತ ರೈತ ಸಂಘ ತೀವ್ರ ವಿರೋಧ: ಸೋಮವಾರ ಪ್ರತಿಭಟನೆ
 • ಕೊವಿಡ್‍-19: ಪಾಕಿಸ್ತಾನದಲ್ಲಿ ಹೊಸ 88 ಸಾವು ಪ್ರಕರಣಗಳು ವರದಿ
 • ರಾಜ್ಯದಲ್ಲಿ ಸೋಮವಾರದಿಂದ ರಾತ್ರಿ 9 ರಿಂದ ಬೆ, 5 ಗಂಟೆವರೆಗೆ ಮಾತ್ರ ಕರ್ಫ್ಯೂ ಜಾರಿ
 • ಖೇಲ್ ರತ್ನಗೆ ವಿನೇಶ್ ಹೆಸರು ಶಿಫಾರಸಿಗೆ ಸಜ್ಜು
 • ಗ್ರಾಪಂ ಚುನಾವಣೆ ಮುಂದೂಡಿಕೆ: ಕೋರ್ಟ್ ಮೆಟ್ಟಿಲೇರಲು ಸಿದ್ಧತೆ- ಎಚ್‌ ಕೆ ಪಾಟೀಲ್
Entertainment Share

'ವಾರ್’ ನಾಳೆ ತೆರೆಗೆ : ಬೃಹತ್ ಆಕ್ಷನ್ ಎಂಟರ್ ಟೈನರ್ ಚಿತ್ರವಾಗುವ ನಿರೀಕ್ಷೆ

ನವದೆಹಲಿ, ಅ 01(ಯುಎನ್‌ಐ) ಖ್ಯಾತ ನಟ ಹೃತಿಕ್‌ರೋಷನ್ ಹಾಗೂ ಟೈಗರ್ ಶ್ರಾಫ್ ಜತೆಯಾಗಿ ನಟಿಸಿರುವ ’ವಾರ್’ ಬುಧವಾರ ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು, ಬೃಹತ್ ಅಕ್ಷನ್ ಎಂಟರ್ ಟೈನರ್ ಚಿತ್ರವಾಗಲಿದೆ ಎಂಬ ಮಾತು ಕೇಳಿಬಂದಿದೆ.
ಏತನ್ಮಧ್ಯೆ, ಚಿತ್ರದ ಟ್ವಿಸ್ಟ್ ಗಳನ್ನು ಹೊರಗೆಡಹದಂತೆ ಹೃತಿಕ್ ಹಾಗೂ ಟೈಗರ್ ತಮ್ಮ ಅಭಿಮಾನಿಗಳು ಹಾಗೂ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ
ಅತ್ಯಂತ ಕಷ್ಟಪಟ್ಟು, ರಕ್ತ, ಬೆವರು ಹರಿಸಿ ಚಿತ್ರ ಮಾಡಲಾಗಿದೆ. ಆದ್ದರಿಂದ ಚಿತ್ರ ನೋಡಿದ ಬಳಿಕ ಅದರಲ್ಲಿನ ಕೌತುಕ, ಟ್ವಿಸ್ಟ್ ಗಳ ಬಗ್ಗೆ ಗುಟ್ಟು ಬಿಟ್ಟುಕೊಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹೃತಿಕ್ ತಿಳಿಸಿದ್ದಾರೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರ ಬರೋಬ್ಬರಿ ೧೫೦ ಕೋಟಿ ರೂಪಾಯಿಗೂ ಹೆಚ್ಚು ಬಜೆಟ್ ನಲ್ಲಿ ನಿರ್ಮಾಣವಾಗಿದ್ದು, ಆಕ್ಷನ್ ಸೀನ್ ಗಳು ಹಾಲಿವುಡ್ ಸಿನಿಮಾಗಳನ್ನೂ ಮೀರಿಸುವಂತೆ ಮೂಡಿಬಂದಿವೆ.
ಹಿಂದಿ ಮಾತ್ರವಲ್ಲ, ತಮಿಳು ಹಾಗೂ ತೆಲುಗು ಭಾಷೆಗಳಲ್ಲೂ ವಾರ್ ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಬರೋಬ್ಬರಿ ಮೂರೂವರೆ ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆ ಕಾಣಲಿದ್ದು, ಸಿನಿಪ್ರೇಕ್ಷಕರಲ್ಲಿ ಬಹಳಷ್ಟು ಕುತೂಹಲ ಮೂಡಿಸಿದೆ.
’ವಾರ್’ ಚಿತ್ರದಲ್ಲಿ ಹೃತಿಕ್ ಮತ್ತು ಟೈಗರ್ ಪರಸ್ಪರ ಫೈಟ್ ಮಾಡಲಿದ್ದಾರೆ, ನೃತ್ಯ ಮಾಡಲಿದ್ದಾರೆ, ಜೊತೆಗೆ ಬೈಕ್ ರೇಸ್ ಕೂಡಾ ಮಾಡಲಿದ್ದಾರೆ ಎನ್ನಲಾಗಿದೆ.
ಈ ಚಿತ್ರಕ್ಕಾಗಿ ಅವರಿಬ್ಬರೂ ಪೋರ್ಚುಗಲ್‌ನ ಬಹು ಎತ್ತರದ ಪರ್ವತದ ತುಟ್ಟತುದಿಯಲ್ಲಿ ಸೂಪರ್ ಬೈಕ್‌ಗಳಲ್ಲಿ ಅತ್ಯಂತ ವೇಗವಾಗಿ ಚೇಸ್ ಮಾಡುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ.
ನಿರ್ದೇಶಕ ಸಿದ್ಧಾರ್ಥ್ ಆನಂದ್ "ಇಡೀ ಸಿನೆಮಾದಲ್ಲಿ ಹೃತಿಕ್ ಮತ್ತು ಟೈಗರ್ ನಡುವೆ ನಿರಂತರ ಸ್ಪರ್ಧೆ ನಡೆಯುತ್ತಲೇ ಇರುತ್ತದೆ. ಇದು ಪ್ರೇಕ್ಷಕರು ಕುರ್ಚಿಯ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಲಿದೆ" ಎಂದಿದ್ದಾರೆ.
ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ ಚಿತ್ರದಲ್ಲಿ ಆಶುತೋಶ್ ರಾಣಾ, ಅನುಪ್ರಿಯಾ ಗೋಯೆಂಕಾ ಮತ್ತು ದೀಪನ್ನಿತ ಶರ್ಮಾ ನಟಿಸಿದ್ದಾರೆ.
ಯುಎನ್‌ಐ ಎಸ್‌ಎ ವಿಎನ್ 2119