Tuesday, Nov 30 2021 | Time 17:47 Hrs(IST)
Entertainment Share

“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!

“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!
ಬೆಂಗಳೂರು, ಅ. 21(ಯುಎನ್ಐ) ಸಿಂಪಲ್ ಸುನಿ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ಅಭಿನಯಿಸಿರುವ “ಸಖತ್ ಬಾಲು” ಚಿತ್ರದ ಟೀಸರ್ ಇದೇ 24ರಂದು ಬಿಡುಗಡೆಯಾಗಲಿದೆ.

ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ವರ್ಷಾಂತ್ಯಕ್ಕೆ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ.

ಅಂದಹಾಗೆ ಟೀಸರ್ ಬಿಡುಗಡೆ ಕುರಿತು ನಟ ಗಣೇಶ್ ಟ್ವೀಟ್ ಮಾಡಿದ್ದು, “ಸಖತ್ ಬಾಲು ನಿಮ್ಮನ್ನೆಲ್ಲ ಮೀಟ್ ಮಾಡೋಕೆ ಬರ್ತಿದ್ದಾನೆ. ಸಿದ್ಧರಾಗಿರಿ ಗೆಳೆಯರೇ …” ಅಂತ ಹೇಳಿದ್ದಾರೆ.

ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಗಣೇಶ್ ಪುತ್ರ ವಿಹಾನ್ ನ ಗ್ಯಾಂಡ್ ಎಂಟ್ರಿಯಾಗಲಿದೆ. ಜೂನಿಯರ್ ಬಾಲು ಪಾತ್ರವನ್ನು ವಿಹಾನ್ ನಿಭಾಯಿಸಿದ್ದಾನೆ.

ಯುಎನ್ಐ ಎಸ್ಎ