Friday, May 29 2020 | Time 08:46 Hrs(IST)
  • ಮೆಕ್ಸಿಕೋದಲ್ಲಿ ಕೊರೊನಾ ಸೋಂಕಿಗೆ ಮತ್ತೆ 447 ಬಲಿ, ಒಟ್ಟು 9,044 ಸಾವು
  • ಚಿಲಿಯಲ್ಲಿ 87 ಸಾವಿರ ಕೊರೊನಾ ಸೋಂಕು ಪ್ರಕರಣ
  • ರಾಜ್ಯಸಭಾ ಸದಸ್ಯ ವಿರೇಂದ್ರಕುಮಾರ್ ಇನ್ನಿಲ್ಲ
  • ಸೊಲ್ಲಾಪುರ; ಕೃಷಿ ಭೂಮಿಯಲ್ಲಿ ಸುಮಾರು ೭೦೦ ಪುರಾತನ ನಾಣ್ಯಗಳ ಪತ್ತೆ
  • ದಕ್ಷಿಣ ಸೊಮಾಲಿಯಾ; ಅಲ್ ಶಬಾಬ್ ಉಗ್ರರಿಂದ ೯ ವೈದ್ಯರನ್ನು ಅಪಹರಿಸಿ ಹತ್ಯೆ
  • ದಕ್ಷಿಣ ಸೊಮಾಲಿಯಾ; ಅಲ್ ಶಬಾಬ್ ಉಗ್ರರಿಂದ ೯ ವೈದ್ಯರನ್ನು ಅಪಹರಿಸಿ ಹತ್ಯೆ
  • ಲಾಕ್ ಡೌನ್; ರಾಜ್ಯಗಳ ಅಭಿಪ್ರಾಯ ಕೇಳಿದ ಗೃಹ ಸಚಿವ ಅಮಿತ್ ಶಾ
Entertainment Share

‘3 ಈಡಿಯಟ್ಸ್’ ಚಿತ್ರದ ಅತ್ಯುತ್ತಮ ನಿರ್ದೇಶನ: ರಾಜ್ ಕುಮಾರ್ ಹಿರಾನಿಗೆ ಐಐಎಫ್ ಎ ಪ್ರಶಸ್ತಿ

‘3 ಈಡಿಯಟ್ಸ್’  ಚಿತ್ರದ ಅತ್ಯುತ್ತಮ ನಿರ್ದೇಶನ: ರಾಜ್ ಕುಮಾರ್ ಹಿರಾನಿಗೆ ಐಐಎಫ್ ಎ ಪ್ರಶಸ್ತಿ
‘3 ಈಡಿಯಟ್ಸ್’ ಚಿತ್ರದ ಅತ್ಯುತ್ತಮ ನಿರ್ದೇಶನ: ರಾಜ್ ಕುಮಾರ್ ಹಿರಾನಿಗೆ ಐಐಎಫ್ ಎ ಪ್ರಶಸ್ತಿ

ನವದೆಹಲಿ, ಸೆ 19 (ಯುಎನ್ಐ) ಮನರಂಜನೆ ಹಾಗೂ ಸಂದೇಶಾತ್ಮಕ ಚಿತ್ರಗಳಿಗೆ ಹೆಸರಾಗಿರುವ ರಾಜ್ ಕುಮಾರ್ ಹಿರಾನಿ, ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕ ಹಾಗೂ ಸಂಕಲನಕಾರ ಎಂಬುದರಲ್ಲಿ ಎರಡು ಮಾತಿಲ್ಲ.

ಇಂತಹ ಸದಭಿರುಚಿಯ ರಾಜ್ ಕುಮಾರ್ ಹಿರಾನಿ ಮುಡಿಯನ್ನು ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಪ್ರಶಸ್ತಿ (ಐಐಎಫ್ ಎ) ಸಿಂಗರಿಸಿದೆ.

ಕಳೆದ 20 ವರ್ಷಗಳಲ್ಲಿನ ಅತ್ಯುತ್ತಮ ನಿರ್ದೇಶಕರೆಂದು ಗುರುತಿಸಿ, ‘3 ಈಡಿಯಟ್ಸ್’ ಚಿತ್ರಕ್ಕಾಗಿ ಐಐಎಫ್ ಎ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

'3 ಈಡಿಯಟ್ಸ್' ಒಂದು ಅತ್ಯುತ್ತಮ ಚಿತ್ರವಾಗಿದ್ದು ಪ್ರತಿಯೊಬ್ಬರ ಹೃದಯವನ್ನು ಮುಟ್ಟುತ್ತದೆ ಮತ್ತು ಅದೇ ಸಮಯದಲ್ಲಿ ನಗೆಗಡಲಿನಲ್ಲಿ ತೇಲಿಸುತ್ತದೆ. ಪ್ರತಿ ಭಾವನೆಯನ್ನು ಪ್ರೇಕ್ಷಕರು ಅನುಭವಿಸುವಂತೆ ಹಿರಾನಿ ಚಿತ್ರವನ್ನು ನಿರ್ದೇಶಿಸಿದ್ದು, ಹಲವು ವರ್ಷಗಳ ನಂತರವೂ ಜನರು ಚಿತ್ರದ ಎಲ್ಲಾ ದೃಶ್ಯಗಳು ಮತ್ತು ಸಂಭಾಷಣೆಗಳನ್ನು ನೆನಪಿಸಿಕೊಳ್ಳುತ್ತಾರೆ.

'ಮುನ್ನಾ ಭಾಯ್ ಎಂಬಿಬಿಎಸ್' ಮತ್ತು ಇತರ ಬ್ಲಾಕ್ ಬಸ್ಟರ್ ಹಿಟ್ ನೀಡಿದ ನಿರ್ದೇಶಕ ರಾಜ್ ಕುಮಾರ್ ಹಿರಾನಿ, ಇತ್ತೀಚೆಗೆ 'ಶಾಂಘೈ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್' ಗೌರವಕ್ಕೂ ಪಾತ್ರರಾದರು, ಅಲ್ಲಿ ಅವರ ವಿಮರ್ಶಾತ್ಮಕ ಮೆಚ್ಚುಗೆ ಪಡೆದ ಚಿತ್ರ' ಸಂಜು 'ಪ್ರದರ್ಶನಗೊಂಡಿತು.

ಯುಎನ್ಐ ಎಸ್ಎ ಕೆಎಸ್ ವಿ 1548