NationalPosted at: Feb 22 2021 9:59PM
Share11 ತಿಂಗಳ ನಂತರ ಬಾರಾಮುಲ್ಲಾ-ಬನಿಹಾಲ್ ರೈಲು ಸೇವೆ ಭಾಗಶಃ ಪುನರಾರಂಭ
11 ತಿಂಗಳ ನಂತರ ಬಾರಾಮುಲ್ಲಾ-ಬನಿಹಾಲ್ ರೈಲು ಸೇವೆ ಭಾಗಶಃ ಪುನರಾರಂಭಶ್ರೀನಗರ, ಫೆ .22 (ಯುಎನ್ಐ)- ಕೋವಿಡ್ -19 ಸಾಂಕ್ರಾಮಿಕದಿಂದ 11 ತಿಂಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದ ಉತ್ತರ ಕಾಶ್ಮೀರದ ಬಾರಾಮುಲ್ಲಾ ಮತ್ತು ಜಮ್ಮು ಪ್ರದೇಶದ ಬನಿಹಾಲ್ ನಡುವಿನ ರೈಲು ಸೇವೆ ಸೋಮವಾರ ಭಾಗಶಃ ಪುನರಾರಂಭವಾಗಿದೆ.
17 ನಿಲ್ದಾಣಗಳನ್ನು ಒಳಗೊಂಡ 137 ಕಿಲೋಮೀಟರ್ ಉದ್ದದ ಬನಿಹಾಲ್-ಬಾರಾಮುಲ್ಲಾ ಮಾರ್ಗದಲ್ಲಿ ರೈಲು ಸೇವೆಯನ್ನು ಸೋಮವಾರ ಭಾಗಶಃ ಪುನರಾರಂಭಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಯುಎನ್ಐಗೆ ತಿಳಿಸಿದ್ದಾರೆ.ಮೊದಲ ರೈಲು ಬಾರಾಮುಲ್ಲಾದಿಂದ ಬೆಳಿಗ್ಗೆ 9.10 ಗಂಟೆಗೆ ಹೊರಡುತ್ತದೆ. ಎರಡನೇ ರೈಲು ಬನಿಹಾಲ್ ನಿಂದ ಬೆಳಿಗ್ಗೆ 1.125 ಗಂಟೆಗೆ ಹೊರಡಲಿದೆ. ಜನರು ಅನಗತ್ಯ ಪ್ರಯಾಣವನ್ನು ಕೈಗೊಳ್ಳದಂತೆ ಮತ್ತು ರೈಲುಗಳ ಒಳಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ಮೊದಲ ರೈಲಿನಲ್ಲಿ ಉತ್ತಮ ಸಂಖ್ಯೆಯ ಜನರು ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಈ ರೈಲು ಬಾರಮುಲ್ಲಾದಿಂದ ಬೆಳಿಗ್ಗೆ 9.10 ಕ್ಕೆ ಹೊರಟು ಬನಿಹಾಲ್ ತಲುಪಿದೆ. ‘ರೈಲು ಸೇವೆ ಪುನಾರಂಭದಿಂದ ನಿಜವಾಗಿಯೂ ಸಂತೋಷಗಿದೆ. ಇದು ಹಣದ ದೃಷ್ಟಿಯಿಂದ ಮಾತ್ರವಲ್ಲದೆ, ಪ್ರಯಾಣಿಕರಿಗೆ ಸಾಕಷ್ಟು ಸಮಯವನ್ನು ಉಳಿಸುತ್ತದೆ ಎಂದು ಬಾರಾಮುಲ್ಲಾ ನಿವಾಸಿ ಇಮ್ತಿಯಾಜ್ ಅಹ್ಮದ್ ಶೇಖ್ ಯುಎನ್ಐಗೆ ತಿಳಿಸಿದ್ದಾರೆ.
uni sls 1258