Wednesday, Dec 11 2019 | Time 02:57 Hrs(IST)
  • ಸಿದ್ದರಾಮಯ್ಯ ತಮ್ಮ ಜ್ಯೋತಿಷ್ಯಾಲಯಕ್ಕೆ ಬೀಗ ಹಾಕಿದ್ದಾರೆ : ಆರ್ ಅಶೋಕ್ ಲೇವಡಿ
Sports Share

17 ವಯೋಮಿತಿ ವಿಶ್ವಕಪ್: ನ.27 ರಂದು ಭಾರತಕ್ಕೆೆ ಫಿಫಾ ನಿಯೋಗ

ನವದೆಹಲಿ, ನ 22 (ಯುಎನ್‌ಯ) ಫಿಫಾ 17 ವಯೋಮಿತಿ ಫುಟ್ಬಾಲ್ ಮಹಿಳಾ ವಿಶ್ವಕಪ್ ಟೂರ್ನಿಯ ಪಂದ್ಯಗಳು ನಡೆಯುವ ಸ್ಥಳಗಳನ್ನು ಪರಿಶೀಲಿಸಲು ಫಿಪಾ ನಿಯೋಗ ನವೆಂಬರ್ 26 ರಿಂದ ಡಿಸೆಂಬರ್ 1 ರವರೆಗೆ ಭಾರತದಲ್ಲಿ ಪ್ರವಾಸ ಕೈಗೊಳ್ಳಲಿದೆ.
ಕೋಲ್ಕತಾ, ಗುವಾಹಟಿ, ಭುವನೇಶ್ವರ, ಅಹಮದಾಬಾದ್ ಮತ್ತು ಮುಂಬೈಯಲ್ಲಿರುವ ಕ್ರೀಡಾಂಗಣಗಳಿಗೆ ಭೇಟಿ ನೀಡಿ ನಿಯೋಗ ಪರಿಶೀಲಿಸಲಿದೆ.
ಫಿಫಾ 17 ವಯೋಮಿತಿ ಮಹಿಳಾ ವಿಶ್ವಕಪ್ ತಯಾರಿಗಾಗಿ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಫಿಫಾ ನಿಯೋಗವು ಪ್ರತಿ ಕ್ರೀಡಾಂಗಣ ಮತ್ತು ಪ್ರತಿ ನಗರದ ಗೊತ್ತುಪಡಿಸಿದ ಎಲ್ಲ ತರಬೇತಿ ಸ್ಥಳಗಳನ್ನು ಪರಿಶೀಲಿಸಲಿದೆ.
ವಿಶ್ವಕಪ್ 2020ರ ನವೆಂಬರ್ 2 ರಿಂದ 21 ರವರೆಗೆ ಭಾರತದಲ್ಲಿ ನಡೆಯಲಿದೆ ಎಂದು ಸ್ಥಳೀಯ ಸಂಘಟನಾ ಸಮಿತಿ (ಎಲ್ಒಸಿ) ಪ್ರಕಟಣೆಯಲ್ಲಿ ತಿಳಿಸಿದೆ.
ನಿಯೋಗವು ನ. 27 ರಂದು ಮೊದಲು ಕೋಲ್ಕತಾ ಮತ್ತು ನ. 28 ರಂದು ಗುವಾಹಟಿಗೆ ಭೇಟಿ ನೀಡಲಿದೆ. ನಂತರ ನ. 29 ರಂದು ಭುವನೇಶ್ವರ, ನ. 30 ರಂದು ಅಹಮದಾಬಾದ್ ಹಾಗೂ ಕೊನೆಯದಾಗಿ ಡಿ.1 ರಂದು ಮುಂಬೈನಲ್ಲಿ ಪರಿಶೀಲನೆ ನಡೆಸಿ ಪ್ರವಾಸ ಅಂತ್ಯಗೊಳಿಸಲಿದೆ.
ಯುಎನ್‌ಐ ಆರ್ ಕೆ 1817
More News

ಏಕದಿನ ಸರಣಿ: ಧವನ್ ಸ್ಥಾನಕ್ಕೆೆ ಅಗರ್ವಾಲ್

10 Dec 2019 | 10:20 PM

 Sharesee more..
ಮೂರನೇ ಟಿ-20 ಪಂದ್ಯ:ಇಂಡೋ-ವಿಂಡೀಸ್ ನಡುವೆ ಹೈ ವೋಲ್ಟೇಜ್ ಕದನ

ಮೂರನೇ ಟಿ-20 ಪಂದ್ಯ:ಇಂಡೋ-ವಿಂಡೀಸ್ ನಡುವೆ ಹೈ ವೋಲ್ಟೇಜ್ ಕದನ

10 Dec 2019 | 9:46 PM

ಸ್ಥಳ: ವಾಂಖೆಡೆ ಕ್ರೀಡಾಂಗಣ: ಮುಂಬೈ, ಡಿ 10 (ಯುಎನ್‌ಐ) ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿರುವ ಭಾರತ ಹಾಗೂ ವೆಸ್ಟ್‌ ಇಂಡೀಸ್ ತಂಡಗಳು ನಾಳೆ ನಡೆಯುವ ಮೂರನೇ ಅಥವಾ ನಿರ್ಣಾಯಕ ಪಂದ್ಯದ ಗೆಲುವಿನ ಮೇಲೆ ಚಿತ್ತ ನೆಟ್ಟಿವೆ.

 Sharesee more..