Saturday, Jan 18 2020 | Time 20:16 Hrs(IST)
 • ಪಣಂಬೂರ್‌ ಬೀಚ್‌ನಲ್ಲಿ ಗಮನ ಸೆಳೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ
 • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ೧೨ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ
 • ನಾಳೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ: ರಾಜ್ಯದಲ್ಲಿ 64 65 ಲಕ್ಷ ಮಕ್ಕಳಿಗೆ ಲಸಿಕೆ ಗುರಿ
 • ನವೋದ್ಯಮಕ್ಕೆ ಬೆಂಗಳೂರು ರಾಜಧಾನಿ: ರವಿಶಂಕರ್ ಪ್ರಸಾದ್
 • ಪೌರತ್ವ ಕಾಯ್ದೆಯನ್ನು ಸಂಪೂರ್ಣ ಓದಿ ಚರ್ಚೆಗೆ ಬರಲಿ: ರಾಹುಲ್ ಗೆ ಅಮಿತ್ ಶಾ ಸವಾಲು
 • ಭಾರತ ಟೆಸ್ಟ್‌ ತಂಡಕ್ಕೂ ಕಮ್‌ಬ್ಯಾಕ್ ಮಾಡಲಿರುವ ಕನ್ನಡಿಗ ರಾಹುಲ್ ?
 • ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಿದ್ದು ಸುಳ್ಳು ಹೇಳಲು: ಸಿದ್ದರಾಮಯ್ಯ
 • ಸೊಮಾಲಿಯಾ ದಕ್ಷಿಣ ಪ್ರಾಂತ್ಯದಲ್ಲಿ ಸೇನಾ ಪಡೆಗಳಿಂದ 16 ಅಲ್-ಷರಾಬ್ ಉಗ್ರರ ಹತ್ಯೆ
 • ಸೋಲಿನ ಹೊರತಾಗಿಯೂ ಆಸ್ಟ್ರೇಲಿಯಾ ಓಪನ್‌ಗೆ ಅರ್ಹತೆ ಪಡೆದ ಪ್ರಜ್ಞೇಶ್ ಗುಣೇಶ್ವರನ್
 • ಎನ್ ಟಿಆರ್ ಜನ್ಮ ವಾರ್ಷಿಕಾಚರಣೆ : ಚಂದ್ರಬಾಬು ನಾಯ್ಡು ಅವರಿಂದ ಗೌರವ ನಮನ
 • ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ದೊರೆತರೆ ಹಾದಿ ತಪ್ಪುವುದಿಲ್ಲ: ಅಮಿತ್ ಷಾ
 • ಶೀಘ್ರವೇ ಮೈಸೂರು ವಿಮಾನ ನಿಲ್ದಾಣದಿಂದ ಊಟಿ, ಮಡಿಕೇರಿಗೆ ಶೀಘ್ರವೇ ಫ್ಲೈ ಬಸ್ ಸೇವೆ
 • ‘ಕರಾವಳಿ ಗೌರವ’ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಆಯ್ಕೆ
 • ವಿಶ್ವ ಆರ್ಥಿಕ ಒಕ್ಕೂಟ ಸಮಾವೇಶ: ಭಾರತೀಯ ನಿಯೋಗಕ್ಕೆ ಪಿಯೂಷ್ ಗೋಯಲ್ ನೇತೃತ್ವ
 • ಬುರ್ಕಿನಾ ಫಾಸೊದಲ್ಲಿ ರಸ್ತೆ ಬದಿಯ ಬಾಂಬ್ ಸ್ಫೋಟಿಸಿ ಐವರು ಸೈನಿಕರು ಸಾವು
International Share

38 ಜನರಿದ್ದ ಚಿಲಿ ವಾಯುಪಡೆಗೆ ಸೇರಿದ ಯುದ್ಧ ವಿಮಾನ ಪತನ

ಮೆಕ್ಸಿಕೋ ಸಿಟಿ, ಡಿ.10 (ಸ್ಪುಟ್ನಿಕ್) ಕಾಣೆಯಾಗಿದ್ದ ಸಿ130 ಹರ್ಕ್ಯುಲಸ್‌ ಯುದ್ಧ ವಿಮಾನದ ಶೋಧ ಕಾರ್ಯಾಚರಣೆಯ ವೇಳೆ ಅದು ಪತನಗೊಂಡಿರುವುದು ಬೆಳಕಿಗೆ ಬಂದಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಚಿಲಿಯ ವಾಯು ಪಡೆ ತಿಳಿಸಿದೆ.
ಸಿ 130 ಹರ್ಕ್ಯುಲಸ್ ವಿಮಾನ ಸಂಪರ್ಕ ಕಳೆದುಕೊಂಡ ಏಳು ಗಂಟೆಗಳ ನಂತರ, ಅದು ಅಪಘಾತಕ್ಕೀಡಾಗಿದೆ ಎಂದು ತಿಳಿದಿದೆ ಎಂದು ಚಿಲಿಯ ರಕ್ಷಣಾ ಪಡೆಗಳು ವರದಿ ಮಾಡಿವೆ ಎಂದು ಟ್ವಿಟರ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಚಿಲಿಯ ವಾಯುಪಡೆ, ಲಭ್ಯವಿರುವ ಎಲ್ಲಾ ರಾಷ್ಟ್ರೀಯ ಮತ್ತು ವಿದೇಶಿ ವಿಮಾನಗಳು ಮತ್ತು ದುರಂತದ ಪ್ರದೇಶದಲ್ಲಿ ನೆಲೆಗೊಂಡಿರುವ ಹಡಗುಗಳೊಂದಿಗೆ ಜಂಟಿಯಾಗಿ, ಬದುಕುಳಿದವರಿಗಾಗಿ ಶೋಧ ಕಾರ್ಯ ಆರಂಭಿಸಿದೆ.
ಸೋಮವಾರ, ಜಾಗತಿಕ ಕಾಲಮಾನ 21:13 ಕ್ಕೆ, ಚಿಲಿಯ ವಾಯುಪಡೆಯು ಸಿ -130 ಹರ್ಕ್ಯುಲಸ್‌ನ ಸಂಪರ್ಕವನ್ನು ಕಳೆದುಕೊಂಡಿತು, ಅದು ಅಂಟಾರ್ಕ್ಟಿಕ್ ವಾಯುನೆಲೆಗೆ ತೆರಳುತ್ತಿದ್ದ ಈ ವಿಮಾನದಲ್ಲಿ 17 ಸಿಬ್ಬಂದಿ ಮತ್ತು 21 ಪ್ರಯಾಣಿಕರು ಸೇರಿ 38 ಜನರು ಇದ್ದರು ಎಂದು ಟ್ವೀಟ್ ತಿಳಿಸಿದೆ.
ಯುಎನ್ಐ ಎಎಚ್ 1050