Wednesday, Jul 15 2020 | Time 05:05 Hrs(IST)
National

ಚಿನ್ನದ ಕಳ್ಳಸಾಗಣೆ ಪ್ರಕರಣ: ಆರೋಪಿಯೊಂದಿಗೆ ಕೇರಳ ಮುಖ್ಯಮಂತ್ರಿ ಮಾಜಿ ಕಾರ್ಯದರ್ಶಿ, ಸಚಿವ ಸಂಪರ್ಕ

14 Jul 2020 | 11:00 PM

ಕೊಟ್ಟಾಯಂ, ಜುಲೈ 14 (ಯುಎನ್‌ಐ) ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪಿಗಳಾದ ಸ್ವಪ್ನಾ ಸುರೇಶ್ ಮತ್ತು ಸರಿತ್ ಅವರನ್ನು ಸಂಪರ್ಕಿಸಿರುವ ಪ್ರಭಾವಿ ವ್ಯಕ್ತಿಗಳಲ್ಲಿ ಉನ್ನತ ಶಿಕ್ಷಣ ಸಚಿವ ಕೆ ಟಿ ಜಲೀಲ್ ಮತ್ತು ಮುಖ್ಯಮಂತ್ರಿ ಮಾಜಿ ಕಾರ್ಯದರ್ಶಿ ಎಂ.

 Sharesee more..

ಎರಡು ಭಾರತೀಯ ಕಂಪೆನಿಗಳಿಂದ ಕರೋನಾ ಔಷಧ ಮನುಷ್ಯರ ಮೇಲೆ ಪ್ರಯೋಗ-ಐಸಿಎಂಆರ್

14 Jul 2020 | 9:55 PM

ನವದೆಹಲಿ, ಜುಲೈ 14 (ಯುಎನ್‌ಐ) ಎರಡು ಭಾರತೀಯ ಕಂಪನಿಗಳು ದೇಶದ ವಿವಿಧ ಸ್ಥಳಗಳಲ್ಲಿ ಮನುಷ್ಯರ ಮೇಲೆ ಕೊರೊನಾವೈರಸ್ ಔಷಧವನ್ನು ಪ್ರಯೋಗ ನಡೆಸುತ್ತಿದ್ದು, ಶೀಘ್ರದಲ್ಲೇ ಒಳ್ಳೆಯ ಸುದ್ದಿ ನಿರೀಕ್ಷಿಸಲಾಗಿದೆ ಕೋವಿಡ್ -19 ಔಷಧ ಅಭಿವೃದ್ಧಿಪಡಿಸುವ ಹಾದಿಯಲ್ಲಿ ಭಾರತವನ್ನು "ವಿಶ್ವದ ಔಷಧಾಲಯ" ಎಂದು ಬಣ್ಣಿಸಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ಡಾ.

 Sharesee more..

ಯಾದಗಿರಿ ಜಿಲ್ಲೆಯಲ್ಲಿ ಜುಲೈ 15 ರಿಂದ 22 ರವರೆಗೆ ಲಾಕ್ ಡೌನ್

14 Jul 2020 | 9:17 PM

ಯಾದಗಿರಿ, ಜುಲೈ 14 (ಯುಎನ್‌ಐ) ಜಿಲ್ಲೆಯಲ್ಲಿ ತೀವ್ರಗೊಳ್ಳುತ್ತಿರುವ ಕೊವಿಡ್ -19 ಪ್ರಕರಣಗಳ ಏರಿಕೆ ತಡೆಗಟ್ಟುವ ಪ್ರಯತ್ನವಾಗಿ ಜುಲೈ 15 ರಿಂದ 22 ರವರೆಗೆ ಲಾಕ್‌ಡೌನ್ ಹೇರಲು ಜಿಲ್ಲಾಡಳಿತ ನಿರ್ಧರಿಸಿದೆ ಜುಲೈ 15ರ ರಾತ್ರಿ 8 ಗಂಟೆಯಿಂದ 22ರವರೆಗೆ ಒಂದು ವಾರದ ಲಾಕ್‍ಡೌನ್ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.

 Sharesee more..

ಅಸ್ಸಾಂನಲ್ಲಿ ಪ್ರವಾಹದಿಂದ ಸಾವಿನ ಸಂಖ್ಯೆ 59ಕ್ಕೆ ಏರಿಕೆ: ಪ್ರಾಣಿಗಳೂ ಹೆಚ್ಚು ಬಾಧಿತ

14 Jul 2020 | 9:00 PM

ಗುವಾಹಟಿ, ಜುಲೈ 14 (ಯುಎನ್‌ಐ) ಅಸ್ಸಾಂನಲ್ಲಿ ಪ್ರವಾಹದಿಂದ ಕಳೆದ 24 ಗಂಟೆಗಳಲ್ಲಿ ಸಾವಿನ ಸಂಖ್ಯೆ 59 ಕ್ಕೆ ಏರಿದ್ದು, ರಾಜ್ಯದಾದ್ಯಂತ ತೀವ್ರಗೊಳ್ಳುತ್ತಿರುವ ಪ್ರವಾಹದಿಂದ ಜನರಲ್ಲದೇ ಪ್ರಾಣಿಗಳು ಸಹ ಹೆಚ್ಚು ಬಾಧಿತವಾಗಿವೆ ದಿಬ್ರುಗಢ ಜಿಲ್ಲೆಯಲ್ಲಿ ಮೂವರು, ಮತ್ತು ಬಾರ್ಪೆಟಾ ಮತ್ತು ತಿನ್ಸುಕಿಯಾದಿಂದ ತಲಾ ಎರಡು ಸೇರಿದಂತೆ ವಿವಿಧ ಭಾಗಗಳಿಂದ ಒಂಬತ್ತು ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 59 ಕ್ಕೆ ತಲುಪಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಸಂಚಿಕೆ ಮಂಗಳವಾರ ಸಂಜೆ ತಿಳಿಸಿದೆ.

 Sharesee more..
ಕರೋನ ನಿಯಂತ್ರಣ: ಸರ್ಕಾರ  ಹೇಳುತ್ತಿರುವುದೇನು? ಮಾಡುತ್ತಿರುವುದೇನು?

ಕರೋನ ನಿಯಂತ್ರಣ: ಸರ್ಕಾರ ಹೇಳುತ್ತಿರುವುದೇನು? ಮಾಡುತ್ತಿರುವುದೇನು?

14 Jul 2020 | 8:55 PM

ನವದೆಹಲಿ,ಜುಲೈ 14 (ಯುಎನ್ಐ) ಸರಕಾರ ಕರೋನ ನಿಯಂತ್ರಣ ವಿಚಾರದಲ್ಲಿ ಹೇಳುತ್ತಿರುವುದೇನು? ಮಾಡುತ್ತಿರುವುದೇನು? ಸ್ಯಾನಿಟೈಜರ್ ಗಳಿಗೆ ಶೇಕಡ 18 ರಷ್ಟು ತೆರಿಗೆ ಹಾಕಲು ಹೊರಟಿರುವುದು ಯಾವ ನ್ಯಾಯ ? ನಿಜಕ್ಕೂ ಈಗಿನ ಸನ್ನಿವೇಶದಲ್ಲಿ ಈ ತೀರ್ಮಾನ ಸೂಕ್ತವೇ? ಸಮಜಂಸವೆ??.

 Sharesee more..

ಕೋವಿಡ್ ಚಿಕಿತ್ಸೆ: ಅಭಿಪ್ರಾಯಗಳನ್ನು ಕೇಂದ್ರಕ್ಕೆ ಸೂಚಿಸುವಂತೆ ಅರ್ಜಿದಾರರಿಗೆ ಸುಪ್ರೀಂಕೋರ್ಟ್‍ ಸೂಚನೆ

14 Jul 2020 | 8:36 PM

ನವದೆಹಲಿ, ಜುಲೈ 14 (ಯುಎನ್‌ಐ) ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಅರ್ಜಿದಾರರು ಮತ್ತು ಕಕ್ಷಿದಾರರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬಹುದಾಗಿದ್ದು, ಇದರಿಂದ ವಿಪತ್ತು ನಿರ್ವಹಣಾ ಕಾಯ್ದೆಯಡಿ ರಾಜ್ಯಗಳಿಗೆ ಯಾವ ನಿರ್ದೇಶನಗಳನ್ನು ನೀಡಬಹುದು ಎಂಬುದನ್ನು ಕೇಂದ್ರ ಸರ್ಕಾರ ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

 Sharesee more..
ದೇಶದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಈ ವಾರ 10 ಲಕ್ಷ ದಾಟುವ ಸಾಧ್ಯತೆ- ರಾಹುಲ್ ಗಾಂಧಿ

ದೇಶದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಈ ವಾರ 10 ಲಕ್ಷ ದಾಟುವ ಸಾಧ್ಯತೆ- ರಾಹುಲ್ ಗಾಂಧಿ

14 Jul 2020 | 5:04 PM

ನವದೆಹಲಿ, ಜುಲೈ 14 (ಯುಎನ್‌ಐ) ದೇಶದಲ್ಲಿ ಒಟ್ಟು ಕರೋನವೈರಸ್ ಪ್ರಕರಣಗಳ ಸಂಖ್ಯೆ 10 ಲಕ್ಷ ದಾಟಲಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.

 Sharesee more..

ರಸಗೊಬ್ಬರಗಳ ಅಸಮತೋಲಿತ ಬಳಕೆಯಿಂದ ಸಮಸ್ಯೆ ನಿವಾರಣೆ: ಡಿ.ವಿ. ಸದಾನಂದಗೌಡ

14 Jul 2020 | 4:44 PM

ನವದೆಹಲಿ, ಜು 14 [ಯುಎನ್ಐ] ರಸಗೊಬ್ಬರ ಘಟಕಗಳ ದಕ್ಷತೆಯ ಜೊತೆಗೆ ರಸಗೊಬ್ಬರಗಳ ಅಸಮತೋಲಿತ ಬಳಕೆಯಿಂದ ಸಮಸ್ಯೆ ಪರಿಹಾರ ಸಾಧ್ಯವಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ.

 Sharesee more..

ಬಂಗಲೆ ತೆರವು ವಿಚಾರ : ಕಾಂಗ್ರೆಸ್-ಬಿಜೆಪಿ ವಾಕ್ಸಮರ

14 Jul 2020 | 3:17 PM

ನವದೆಹಲಿ, ಜುಲೈ 14 (ಯುಎನ್‍ಐ) ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಲುಟಿಯನ್ಸ್ ಬಂಗಲೆ ಖಾಲಿ ಮಾಡಲು ಹೆಚ್ಚಿನ ಸಮಯವನ್ನು ಕೋರಿದ್ದಾರೆ ಎಂಬ ಸುದ್ದಿಯ ಬಗ್ಗೆ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ವಾಕ್ಸಮರ ಭುಗಿಲೆದ್ದಿದೆ.

 Sharesee more..

ನಾಳೆ ಸಿಬಿಎಸ್‍ ಇ 10ನೇ ತರಗತಿ ಫಲಿತಾಂಶ ಪ್ರಕಟ

14 Jul 2020 | 2:52 PM

ನವದೆಹಲಿ, ಜುಲೈ 14 (ಯುಎನ್‌ಐ) ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಬುಧವಾರ ಪ್ರಕಟಿಸಲಾಗುವುದು ‘ನನ್ನ ಪ್ರೀತಿಯ ಮಕ್ಕಳು, ಪೋಷಕರು ಮತ್ತು ಶಿಕ್ಷಕರೇ, ಸಿಬಿಎಸ್‌ಇ ಮಂಡಳಿಯ 10ನೇ ತರಗತಿ ಪರೀಕ್ಷಾ ಫಲಿತಾಂಶಗಳನ್ನು ನಾಳೆ ಪ್ರಕಟಿಸಲಾಗುವುದು.

 Sharesee more..

ಪಕ್ಷದ ಶಾಸಕನ ಸಾವು ಪ್ರತಿಭಟಿಸಿ ಉತ್ತರ ಬಂಗಾಳದಲ್ಲಿ ಬಿಜೆಪಿ ಕರೆ ನೀಡಿರುವ ಬಂದ್‍ ಗೆ ಮಿಶ್ರ ಪ್ರತಿಕ್ರಿಯೆ

14 Jul 2020 | 12:45 PM

ರಾಯ್‍ಗುಂಜ್, ಜುಲೈ 14 (ಯುಎನ್‌ಐ) ಪಕ್ಷದ ಶಾಸಕ ದೇಬೇಂದ್ರ ನಾಥ್ ರಾಯ್ ಅವರ ಹತ್ಯೆ ನಡೆದಿದೆ ಎಂದು ಪ್ರತಿಭಟಿಸಿ ಉತ್ತರ ಬಂಗಾಳ ಜಿಲ್ಲೆಯಲ್ಲಿ ಪ್ರತಿಪಕ್ಷವಾದ ಬಿಜೆಪಿ ಮಂಗಳವಾರ ಕರೆ ನೀಡಿದ್ದ 12 ತಾಸಿನ ಬಂದ್‍ ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

 Sharesee more..

ಹೆಚ್ಚಿನ ಕಾಲಾವಕಾಶ ಕೋರಿಲ್ಲ, ಆಗಸ್ಟ್ 1 ರೊಳಗೆ ಸರ್ಕಾರಿ ಬಂಗಲೆ ತೆರವು : ಪ್ರಿಯಾಂಕಾ ವಾದ್ರಾ

14 Jul 2020 | 12:13 PM

ನವದೆಹಲಿ, ಜುಲೈ 14 (ಯುಎನ್‍ಐ) ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆಗಸ್ಟ್ 1 ರೊಳಗೆ ಲೋಧಿ ಎಸ್ಟೇಟ್ ನಲ್ಲಿರುವ ಸರ್ಕಾರಿ ಬಂಗಲೆ ಖಾಲಿ ಮಾಡುವುದಾಗಿ ಹೇಳಿದ್ದಾರೆ ಮತ್ತು ಬಂಗಲೆ ತೆರವಿಗೆ ಹೆಚ್ಚಿನ ಸಮಯವನ್ನು ಕೋರಿದ್ದಾರೆ ಎಂಬ ಸುದ್ದಿ ನಕಲಿ ಎಂದು ಖಂಡಿಸಿದ್ದಾರೆ.

 Sharesee more..

ಫಸಲ್ ಬಿಮಾ ಯೋಜನೆ: ಕಾಲಮಿತಿಯಲ್ಲಿ ಪ್ರೀಮಿಯಂ ಬಿಡುಗಡೆ ಮಾಡುವಂತೆ ರಾಜ್ಯಗಳಿಗೆ ನಿರ್ಮಲಾ ಸೀತಾರಾಮನ್‍ ಕರೆ

13 Jul 2020 | 10:59 PM

ನವದೆಹಲಿ, ಜುಲೈ 13(ಯುಎನ್ಐ)- ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಬಗ್ಗೆ ಎಲ್ಲಾ ರೈತರಿಗೆ ಮಾಹಿತಿ ತಿಳಿಸಲು ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳುವ ಅಗತ್ಯವನ್ನು ಪ್ರತಿಪಾದಿಸಿರುವ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಯೋಜನೆಯಡಿ ಅರ್ಜಿಗಳ ತ್ವರಿತ ಇತ್ಯರ್ಥಕ್ಕಾಗಿ ಪ್ರೀಮಿಯಂ ಸಬ್ಸಿಡಿಯನ್ನು ರಾಜ್ಯಗಳು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಬೇಕು ಎಂದು ಕರೆ ನೀಡಿದ್ದಾರೆ.

 Sharesee more..

ಅಸ್ಸಾಂನಲ್ಲಿ ಪ್ರವಾಹದಿಂದ 21 ಲಕ್ಷಕ್ಕೂ ಹೆಚ್ಚು ಜನರು ಬಾಧಿತ: ಸಾವಿನ ಸಂಖ್ಯೆ 50ಕ್ಕೆ ಏರಿಕೆ

13 Jul 2020 | 10:19 PM

ಗುವಾಹಟಿ, ಜುಲೈ 13 (ಯುಎನ್‌ಐ) ಅಸ್ಸಾಂನಲ್ಲಿ ಪ್ರವಾಹದಿಂದ ಹೊಸ ಪ್ರದೇಶಗಳು ಮುಳುಗುವುದರೊಂದಿಗೆ ಸಾವನ್ನಪ್ಪಿದವರ ಸಂಖ್ಯೆ 50 ಕ್ಕೆ ತಲುಪಿದ್ದು, ರಾಜ್ಯದ 21 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆರು ಸಾವುಗಳು ವರದಿಯಾಗಿದ್ದು, ಒಟ್ಟಾರೆ ಸಂಖ್ಯೆ 50 ಕ್ಕೆ ತಲುಪಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಸಂಚಿಕೆ ಇಂದು ಸಂಜೆ ತಿಳಿಸಿದೆ.

 Sharesee more..

ವೀಡಿಯೊ ಸಂದೇಶಗಳ ಮೂಲಕ ಜನರೊಂದಿಗೆ ಸತ್ಯಾಂಶ ಹಂಚಿಕೊಳ್ಳುವೆ-ರಾಹುಲ್‍ಗಾಂಧಿ

13 Jul 2020 | 9:06 PM

ನವದೆಹಲಿ, ಜುಲೈ 13 (ಯುಎನ್‌ಐ) ಭಾರತೀಯ ಮಾಧ್ಯಮಗಳು, ವಿಶೇಷವಾಗಿ ಟಿವಿ ಸುದ್ದಿ ವಾಹಿನಿಗಳು ದೇಶದಲ್ಲಿ 'ದ್ವೇಷ ಪೂರಿತ ನಿರೂಪಣೆ' ಯನ್ನು ಹರಡುತ್ತಿವೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮಂಗಳವಾರದಿಂದ ದೇಶದ ಜನರೊಂದಿಗೆ ಪ್ರಸ್ತುತ ವಿದ್ಯಮಾನಗಳು, ಇತಿಹಾಸ ಮತ್ತು ಬಿಕ್ಕಟ್ಟುಗಳ ಬಗ್ಗೆ ವೀಡಿಯೊ ಸಂದೇಶಗಳನ್ನು ಹಂಚಿಕೊಳ್ಳುವೆ ಎಂದು ಹೇಳಿದ್ದಾರೆ.

 Sharesee more..