Tuesday, Sep 28 2021 | Time 04:07 Hrs(IST)
National

ನಿಫಾ ವೈರಸ್: ಕಟ್ಟೆಚ್ಚರಕ್ಕೆ ಸಿ ಎಂ ಸೂಚನೆ

08 Sep 2021 | 9:30 PM

ನವದೆಹಲಿ, ಸೆಪ್ಟೆಂಬರ್ 08 (ಯುಎನ್ಐ) ನಿಫಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇರಳ ಗಡಿಯಲ್ಲಿ ಮತ್ತಷ್ಟು ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ಕಾರ್ಯದರ್ಶಿಗಳಿಗೆ ಹಾಗೂ ತಜ್ಞರ ಸಮಿತಿಗೂ ಸೂಚನೆ ನೀಡಲಾಗಿದೆ ಎಂದರು.

 Sharesee more..

ಮುಂದಿನ 2 ದಶಕಗಳಲ್ಲಿ 350 ದೇಶೀಯ ಯುದ್ಧವಿಮಾನಗಳ ಖರೀದಿ:ಬದೌರಿಯಾ

08 Sep 2021 | 4:11 PM

ನವದೆಹಲಿ, ಸೆ 8 (ಯುಎನ್ಐ) ಸ್ಥಳೀಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ಎರಡು ದಶಕಗಳಲ್ಲಿ ಭಾರತೀಯ ವಾಯುಪಡೆ 350 ದೇಶೀಯವಾಗಿ ತಯಾರಿಸಿದ ಸ್ಥಿರ ವಿಂಗ್ ವಿಮಾನಗಳನ್ನು ಖರೀದಿಸಲಿದೆ ಎಂದು ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಬುಧವಾರ ಹೇಳಿದರು.

 Sharesee more..

ಅಫ್ಘಾನಿಸ್ತಾನ ಬೆಳವಣಿಗೆ: ಭಾರತ, ರಷ್ಯಾ ಭದ್ರತಾ ಮುಖ್ಯಸ್ಥರ ಮಾತುಕತೆ

08 Sep 2021 | 1:14 PM

ನವದೆಹಲಿ, ಸೆ 08(ಯುಎನ್ಐ) ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ರಷ್ಯಾದ ಭದ್ರತಾ ಮುಖ್ಯಸ್ಥ ನಿಕೋಲಾಯ್ ಪತ್ರುಶೇವ್ ಅವರು ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಕುರಿತು ಅಂತರ್ ಸರ್ಕಾರಿ ಸಮಾಲೋಚನೆಯ ಭಾಗವಾಗಿ ಇಂದು ಮಾತುಕತೆ ನಡೆಸಿದ್ದಾರೆ.

 Sharesee more..

ಅಯೋಧ್ಯೆಯ ದೀಪೋತ್ಸವಕ್ಕೆ ಪ್ರಧಾನಿ ಚಾಲನೆ?

08 Sep 2021 | 12:53 PM

ಅಯೋದ್ಯಾ, ಸೆ 8 (ಯುಎನ್ಐ) ಅಯೋಧ್ಯೆಯಲ್ಲಿ 10 ದಿನಗಳ ದೀಪಾವಳಿ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಸಾಧ್ಯತೆಯಿದೆ ಈ ಸಂದರ್ಭದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಹಾಜರಿರಲಿದ್ದಾರೆ.

 Sharesee more..

ಅಫ್ಘಾನ್ ಬೆಳವಣಿಗೆ ಕಳವಳಕಾರಿ: ರಾಯಭಾರಿ ವೆಂಕಟೇಶ್ ವರ್ಮಾ

08 Sep 2021 | 12:03 PM

ನವದೆಹಲಿಮಾಸ್ಕೋ, ಸೆ 08 (ಯುಎನ್ಐ) ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಇಡೀ ಪ್ರದೇಶಕ್ಕೆ ಕಳವಳಕಾರಿಯಾಗಿದೆ ಎಂದು ರಷ್ಯಾದಲ್ಲಿನ ಭಾರತದ ರಾಯಭಾರಿ ವೆಂಕಟೇಶ್ ವರ್ಮಾ ಹೇಳಿದ್ದಾರೆ.

 Sharesee more..

ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆ ಹೊಣೆ, ಮೋದಿ ಹೆಗಲಿಗೆ

08 Sep 2021 | 10:03 AM

ನವದೆಹಲಿ,ಸೆ 8 (ಯುಎನ್ಐ) ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ ( ಗುರುವಾರ) ಬ್ರಿಕ್ ರಾಷ್ಟ್ರಗಳ ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಈ ಸಮಾವೇಶದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್,ಚೀನಾದ ಅಧ್ಯಕ್ಷ ಷಿ ಜಿನ್ ಪಿಂಗ್, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ಉನ್ನತ ನಾಯಕರು ಭಾಗವಹಿಸಲಿದ್ದಾರೆ.

 Sharesee more..

ಆದಾಯ ಸಂಗ್ರಹಕ್ಕೆ ರಕ್ಷಣಾ ಪಡೆಗಳಿಗೆ ಹಣಕಾಸಿನ ನೆರವಿಗೆ ರಾಜನಾಥ್‌ ಸಿಂಗ್‌ ಸಮ್ಮತಿ

07 Sep 2021 | 7:35 PM

ನವದೆಹಲಿ, ಸೆ 7 (ಯುಎನ್ಐ) ರಕ್ಷಣಾ ಸೇವೆಗಳಿಗೆ ಹಣಕಾಸು ಅಧಿಕಾರಗಳ ನಿಯೋಜನೆ (ಡಿಎಫ್‌ಪಿಡಿS) 2021 ರ ಆದೇಶವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಬಿಡುಗಡೆ ಮಾಡಿದರು 2021ರ ಡಿಎಫ್‌ಪಿಡಿಎಸ್ ಕ್ಷೇತ್ರ ರಚನೆಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ; ಕಾರ್ಯಾಚರಣೆಯ ಸಿದ್ಧತೆಯ ಮೇಲೆ ಕೇಂದ್ರೀಕರಿಸಿ; ವ್ಯಾಪಾರ ಮಾಡುವ ಸುಲಭತೆಯನ್ನು ಉತ್ತೇಜಿಸಿ ಮತ್ತು ಸೇವೆಗಳ ನಡುವೆ ಜಂಟಿತ್ವವನ್ನು ಹೆಚ್ಚಿಸಿ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

 Sharesee more..

ಕಟೀಲ್, ಬೊಮ್ಮಾಯಿ ನಾಯಕತ್ವಕ್ಕೆ ಜನಮನ್ನಣೆ : ಅರುಣ್ ಸಿಂಗ್

07 Sep 2021 | 3:33 PM

ನವದೆಹಲಿ,ಸೆ 7 (ಯುಎನ್ಐ) ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಕತ್ವಕ್ಕೆ ಜನ ಮನ್ನಣೆ ದೊರಕಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್ ರಾಜ್ಯದ ಮೂರು ಪಾಲಿಕೆ ಚುನಾವಣಾ ಫಲಿತಾಂಶ ಮೇಲ್ವರ್ಗದ ಜನ ವಿಶೇಷವಾಗಿ, ಹೊಸ ಚಿಂತನೆ ಮಾಡುವ ನಗರವಾಸಿಗಳಲ್ಲಿ ಬಿಜೆಪಿ ಬಗ್ಗೆ ಹೆಚ್ಚಿನ ಒಲವು ಇದೆ ಎಂಬುದು ಇದರಿಂದ ಸ್ಪಷ್ಟವಾಗಿ ಗೋಚರಿಸಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 Sharesee more..

ಗೃಹ ಬಂಧನದಲ್ಲಿ ಮಾಜಿ ಸಿಎಂ ಮೆಹಬೂಬಾ ಮುಫ್ತಿ

07 Sep 2021 | 1:27 PM

ನವದೆಹಲಿ, ಸೆ 7 (ಯುಎನ್ಐ) ಅಫ್ಘಾನಿಸ್ತಾನದ ಜನರ ಹಕ್ಕಿನ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸುವ ಕೇಂದ್ರ ಸರ್ಕಾರ ಮತ್ತೊಂದು ಕಡೆ ಕಾಶ್ಮೀರ ಜನರ ಬದುಕಿನ ಹಕ್ಕು ಕಸಿಯುತ್ತಿದೆ ಎಂದು ಪಿಡಿಪಿ ನಾಯಕಿ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.

 Sharesee more..

ಕೊರೋನ: 69 ಕೋಟಿ ಜನರಿಗೆ ಲಸಿಕೆ

07 Sep 2021 | 10:20 AM

ನವದೆಹಲಿ, ಸೆ 7 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 31, ಸಾವಿರದ 122 ಕೊರೋನ ಸೋಂಕು ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ ಇದೇ ವೇಳೆ ಫಲಕಾರಿಯಾಗದೇ 290 ರೋಗಿಗಳು ಮೃತಪಟ್ಟಿದ್ದಾರೆ ಎಂದು ಇಲಾಖೆ ವರದಿ ಹೇಳಿದೆ.

 Sharesee more..

ರೈತರು 'ನಿರ್ಭೀತರು' ಮತ್ತು 'ದೃಢಸಂಕಲ್ಪವುಳ್ಳವರು' : ರಾಹುಲ್‌ ಗಾಂಧಿ

06 Sep 2021 | 12:57 PM

ನವದೆಹಲಿ, ಸೆ 6 (ಯುಎನ್ಐ) ಉತ್ತರಪ್ರದೇಶದ ಮುಜಫರ್‌ನಗರದಲ್ಲಿ ರೈತರು 'ಮಹಾಪಂಚಾಯತ್'ನಲ್ಲಿ ನಡೆಸಿದ ಒಂದು ದಿನದ ಪ್ರತಿಭಟನೆಗೆ ಬೆಂಬಲ ತೋರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರೈತರು 'ನಿರ್ಭೀತರು' ಹಾಗೂ 'ದೃಢಸಂಕಲ್ಪ'ವುಳ್ಳವರು ಆಗಿದ್ದಾರೆ ಎಂದು ಸೋಮವಾರ ಹೇಳಿದ್ದಾರೆ.

 Sharesee more..

ಕೋವಿಡ್‌ ಸಮಯದಲ್ಲಿ ಶಿಕ್ಷಕರ ಪಾತ್ರ ಶ್ಲಾಘಿಸಿದ ಪ್ರಧಾನಿ

05 Sep 2021 | 12:35 PM

ನವದೆಹಲಿ, ಸೆ 5 (ಯುಎನ್ಐ) ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಬೋಧನಾ ಭ್ರಾತೃತ್ವವನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ಶಿಕ್ಷಕರು ಹೊಸತನವನ್ನು ಕಂಡುಕೊಂಡಿದ್ದು, ಕೋವಿಡ್‌-19 ಸಮಯದಲ್ಲಿ ಕೂಡ ವಿದ್ಯಾರ್ಥಿಗಳ ಶಿಕ್ಷಣ ಪ್ರಯಾಣ ಮುಂದುವರಿಕೆಯನ್ನು ಖಾತರಿಪಡಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.

 Sharesee more..

ಕೇರಳ: ನಿಫಾ ವೈರಸ್ ಗೆ 12 ವರ್ಷದ ಬಾಲಕ ಬಲಿ

05 Sep 2021 | 10:37 AM

ನವದೆಹಲಿ, ಸೆ 5 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 42,ಸಾವಿರದ 766 ಪ್ರಕರಣ ದಾಖಲಾಗಿದೆ ಚಿಕಿತ್ಸೆ ಫಲಕಾರಿಯಾಗದೆ 308 ರೋಗಿಗಳು ಮೃತಪಟ್ಟಿದ್ದಾರೆ ಎಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

 Sharesee more..

ದೇಶಕಟ್ಟುವಲ್ಲಿ ಶಿಕ್ಷಕರ ಪಾತ್ರ ಅನನ್ಯ: ಪ್ರಧಾನಿ

05 Sep 2021 | 9:32 AM

ನವದೆಹಲಿ, ಸೆ 5 (ಯುಎನ್ಐ ) ಯುವಕರು, ವಿದ್ಯಾರ್ಥಿ ಸಮುದಾಯದಲ್ಲಿ ಸಕಾರಾತ್ಮಕ ಚಿಂತನೆ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರ ಸೇವೆ ಸ್ಮರಿಸಿದ ಅವರು, ಯುವಕರಲ್ಲಿ ಪ್ರೇರಣೆ ಮತ್ತು ಸಕಾರಾತ್ಮಕ ಚಿಂತನೆ, ಹೊಸ ಭರವಸೆ ಮೂಡಿಸುವ ಮೂಲಕ ದೇಶದ ಭವಿಷ್ಯಕ್ಕೆ ಭದ್ರ ಅಡಿಪಾಯ ಹಾಕುವಲ್ಲಿ ಶಿಕ್ಷಕಕರು ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ ಎಂದು ಟ್ವೀಟ್ ಸಂದೇಶದಲ್ಲಿ ಪ್ರಧಾನಿ ಹೇಳಿದ್ದಾರೆ .

 Sharesee more..

ತಿಂಗಳಾಂತ್ಯಕ್ಕೆ ಪ್ರಧಾನಿ ಅಮೆರಿಕಾ ಪ್ರವಾಸ

05 Sep 2021 | 9:09 AM

ನವದೆಹಲಿ, ಸೆ 5 (ಯುಎನ್ಐ ) ಕೊರೋನಾ ಕಾರಣಕ್ಕಾಗಿ ಕಳದೆ ಒಂದೂವರೆ ವರ್ಷಗಳಿಂದ ವಿದೇಶ ಪ್ರವಾಸದಿಂದ ದೂರವಿರುವ ಪ್ರಧಾನಿ ನರೇಂದ್ರ ಮೋದಿ ಈ ತಿಂಗಳಾಂತ್ಯಕ್ಕೆ ಅಮೆರಿಕಾ ಪ್ರವಾಸ ಹಮ್ಮಿಕೊಂಡಿದ್ದಾರೆ ಪ್ರವಾಸ ಕಾಲದಲ್ಲಿ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

 Sharesee more..