Sunday, Apr 5 2020 | Time 14:55 Hrs(IST)
 • ಜಮ್ಮು-ಕಾಶ್ಮೀರದ ಕೆರನ್ ಸೆಕ್ಟರ್‍ ನಲ್ಲಿ ಒಳನುಸುಳುವಿಕೆ ಯತ್ನ ವಿಫಲ: 5 ಉಗ್ರರು ಹತ, ಮೂವರು ಯೋಧರು ಹುತಾತ್ಮ
 • ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಿರುವ ಸಿ ಆರ್ ಪಿ ಎಫ್ ಮುಖ್ಯಸ್ಥ ಎ ಪಿ ಮಹೇಶ್ವರಿ
 • ರೈತರ ಸ್ಥಿತಿಗತಿ ಅವಲೋಕನ: ಏ 6 ರಿಂದ ಸಚಿವ ಬಿ ಸಿ ಪಾಟೀಲ್ ಜಿಲ್ಲಾ ಪ್ರವಾಸ
 • ಕೋವಿಡ್ ಪ್ರಕರಣ ಹೆಚ್ಚಳ: ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಮುಖ್ಯಮಂತ್ರಿ ಮನವಿ
 • ಆಸ್ಪತ್ರೆಗೆ ಹೋಗುತ್ತಿದ್ದೆ, ಪಾರ್ಟಿಗಲ್ಲ: ನಟಿ ಶರ್ಮಿಳಾ ಮಾಂಡ್ರೆ ಸ್ಪಷ್ಟನೆ
 • ಪಾಕಿಸ್ತಾನದಲ್ಲಿ ಏಪ್ರಿಲ್ ಅಂತ್ಯಕ್ಕೆ ಕೊರೊನಾ ಸೋಂಕಿತರ ಸಂಖ್ಯೆ 50 ಸಾವಿರಕ್ಕೆ ಏರಿಕೆ
 • ಲಾಕ್‌ಡೌನ್ ಉಲ್ಲಂಘಿಸಿ ಕಾರಿನಲ್ಲಿ ಆಗಮಿಸಿ, ಪೊಲೀಸರಿಗೆ ಬೆದರಿಕೆ ಹಾಕಿದ ಇಬ್ಬರ ಬಂಧನ
 • ರಕ್ಕಸ ಕೊರೊನಾ; ಅಮೆರಿಕಾ, ಸೌದಿಯಲ್ಲಿ ಇಬ್ಬರು ಭಾರತೀಯರ ಸಾವು
 • ರಾಜ್ಯದ ಜನಹಿತವೇ ಪರಮೋಚ್ಚ: ಕರ್ನಾಟಕ-ಕೇರಳ ಗಡಿ ಮುಚ್ಚಿರುವ ಹಿಂದೆ ಪೂರ್ವಗ್ರಹಗಳಿಲ್ಲ: ಎಚ್‌ಡಿಡಿಗೆ ಪತ್ರ ಬರೆದ ಮುಖ್ಯಮಂತ್ರಿ
 • ರೋಗ ಪತ್ತೆ ಕಿಟ್‌ಗಳ ರಫ್ತಿನ ಮೇಲೆ ಸಂಪೂರ್ಣ ನಿಷೇಧ
 • ಕೊರೊನಾ - ಸಾವಿನ ಸಂಖ್ಯೆ ಹೆಚ್ಚಳ : ಟ್ರಂಪ್
 • ತಮಿಳುನಾಡಿನಲ್ಲಿ ಕರೋನವೈರಸ್‍ಗೆ ಇನ್ನೂ ಇಬ್ಬರು ಬಲಿ: ಸಾವಿನ ಸಂಖ್ಯೆ 5ಕ್ಕೆ ಏರಿಕೆ
 • ಕೊರೊನಾ ಅಲರ್ಟ್; ಮಹಾರಾಷ್ಟ್ರದಲ್ಲಿ ಭಾನುವಾರ ಒಂದೇ ದಿನ ೨೬ ಹೊಸ ಪ್ರಕರಣ
 • ಬಾಬು ಜಗಜೀವನ್‌ ರಾಮ್‌ ಜಯಂತಿ: ಪ್ರಧಾನಿ ಗೌರವ ಸಲ್ಲಿಕೆ
 • ಕೋವಿಡ್‌-19: ಸೋಂಕು ಪ್ರಕರಣಗಳ ಸಂಖ್ಯೆ 3374ಕ್ಕೇರಿಕೆ: 77 ಸಾವು, 266 ಮಂದಿ ಗುಣಮುಖ
business economy Share

ಬ್ರಿಕ್ಸ್ ಸಿಸಿಐ ಅಧ್ಯಕ್ಷರಾಗಿ ಯುಎನ್‍ಐ ಅಧ್ಯಕ್ಷ ವಿಶ್ವಾಸ್ ತ್ರಿಪಾಠಿ ಆಯ್ಕೆ

ಬ್ರಿಕ್ಸ್ ಸಿಸಿಐ ಅಧ್ಯಕ್ಷರಾಗಿ ಯುಎನ್‍ಐ ಅಧ್ಯಕ್ಷ ವಿಶ್ವಾಸ್ ತ್ರಿಪಾಠಿ ಆಯ್ಕೆ
ಬ್ರಿಕ್ಸ್ ಸಿಸಿಐ ಅಧ್ಯಕ್ಷರಾಗಿ ಯುಎನ್‍ಐ ಅಧ್ಯಕ್ಷ ವಿಶ್ವಾಸ್ ತ್ರಿಪಾಠಿ ಆಯ್ಕೆ

ನವದೆಹಲಿ, ಮಾ 25 (ಯುಎನ್‍ಐ) ಯುಎನ್‍ಐ ಸುದ್ದಿ ಸಂಸ್ಥೆ ಅಧ್ಯಕ್ಷ, ಯುಎನ್‍ಐ ನಿರ್ದೇಶಕ ಮಂಡಳಿಯ ಮುಖ್ಯಸ್ಥ ವಿಶ್ವಾಸ್ ತ್ರಿಪಾಠಿ ಅವರು ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ ವಾಣಿಜ್ಯ ಮತ್ತು ಉದ್ಯಮ (ಬ್ರಿಕ್ಸ್ ಸಿಸಿಐ) ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬ್ರಿಕ್ಸ್ ಸಿಸಿಐ ಬ್ರಿಕ್ಸ್ ನೆರೆಹೊರೆ ಹಾಗೂ ಮಿತ್ರ ರಾಷ್ಟ್ರಗಳ ಜತೆಗೂಡಿ ವಾಣಿಜ್ಯ ಮತ್ತು ಉದ್ಯಮಕ್ಕೆ ಉತ್ತೇಜನ ನೀಡುವ ಮೂಲ ಸಂಸ್ಥೆಯಾಗಿದೆ.

ಸಂಸ್ಥೆಯ ಪ್ರಧಾನ ನಿರ್ದೇಶಕರಾಗಿ ಚುನಾಯಿತರಾಗಿರುವ ವಿಶ್ವಾಸ್ ತ್ರಿಪಾಠಿ ಹಾಗೂ ಡಾ. ಬಿಬಿಎಲ್ ಮಧುಕರ್, ಇನ್ನಿತರ ಪದಾಧಿಕಾರಿಗಳ ಜತೆ ಮುಂದಿನ ತಿಂಗಳು ನಡೆಯಲಿರುವ ವಾರ್ಷಿಕ ಸಭೆಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸ್ಪರ್ಧಿಯೊಬ್ಬರು ಬ್ರಿಕ್ಸ್ ಸಿಸಿಐ ಉಪಾಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಉಳಿದೆಲ್ಲ ಅಭ್ಯರ್ಥಿಗಳೂ ಅವಿರೋಧವಾಗಿ ಆಯ್ಕೆಯಾಗಿದ್ದು, ಏಪ್ರಿಲ್ 2020 ರಿಂದ ಮಾರ್ಚ್ 2023 ರ ವರೆಗೆ ಅಧಿಕಾರಾವಧಿ ಇರುತ್ತದೆ.

ಅಶೋಕ್ ಕುಮಾರ್ ಸಿಂಗ್ ಮತ್ತು ಸಮೀಪ್ ಶಾಸ್ತ್ರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಂಜಯ್ ವರ್ಮಾ ವಿತ್ತ ನಿರ್ದೇಶಕ ಸ್ಥಾನಕ್ಕೆ ಆಯ್ಕೆಗೊಂಡಿದ್ದಾರೆ. ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿರುವ ಕಾರಣ ಮತಗಳ ಸಂಖ್ಯೆಯನ್ನುಜ ಪರಿಗಣಿಸುವ ಅಗತ್ಯವಿಲ್ಲ ಎಂದು ರಿಟರ್ನಿಂಗ್ ಅಧಿಕಾರಿ ನಿರ್ಮಲ್ ಸಿನ್ಹಾ ಹೇಳಿದ್ದಾರೆ.

ಮುಂದಿನ ವಾರ್ಷಿಕ ಸಾಮಾನ್ಯ ಸಭೆಯ ದಿನಾಂಕವನ್ನು ನಿಗದಿತ ಸಮಯದಲ್ಲಿ ಪ್ರಧಾನ ನಿರ್ದೇಶಕರು ಗೊತ್ತುಪಡಿಸಲಿದ್ದಾರೆ.ಬ್ರಿಕ್ಸ್ ಸಿಸಿಐ ಆಡಳಿತ ಮಂಡಳಿಯ ಸದಸ್ಯರಲ್ಲಿ ಪಿಕೆ ಗುಪ್ತಾ, ಡಾ. ಜೆಕೆ ದಾಸ್‍, ಡಾ. ಹೇಮಂತ್ ಗುಪ್ತಾ, ರುಹೇಲ್ ರಂಜನ್, ಅಜಿತ್ ಕುಮಾರ್ ಸಿಂಗ್, ವಿನೋದ್ ಕುಮಾರ್ ವರ್ಮಾ, ನೀತು ಕಿಶೋರ್, ರಾಜೀವ್ ಅಗರ್ ವಾಲ್‍, ಪ್ರೇಮ್ ಪಂಕಜ್, ರಾಜೀವ್ ಸೋಲಂಕಿ ಇದ್ದಾರೆ.

ಅತುಲ್ ಬನ್ಸಾಲ್‍, ಅನಿರುದ್ಧ ರೇ, ಶಬಾನಾ ನಾಸಿಮ್, ರಾಜೇಶ್ ಮೆಹ್ತಾ, ಎಸ್‍ ಕೆ ತ್ರಿಪಾಠಿ, ಶೇಖರ್ ಗುಪ್ತಾ ಮತ್ತು ಸುಶಿ ಸಿಂಗ್ ಕೂಡ ಸದಸ್ಯರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.ವಾಣಿಜ್ಯ ಮತ್ತು ಉದ್ಯಮ ವಲಯಕ್ಕೆ ಬೆಂಬಲ ವ್ಯವಸ್ಥೆಯನ್ನು ಸಕ್ರಿಯಗೊಳಿಸುವ ಉದ್ದೇಶವನ್ನು ಬ್ರಿಕ್ಸ್ ಸಿಸಿಐ ಹೊಂದಿದೆ. ಎಂಎಸ್‍ಎಂಇ ವಿಭಾಗದಲ್ಲಿ ಎಲ್ಲ ಭೌಗೋಳಿಕ ವಲಯದ ವ್ಯಾಪಾರ ಹಾಗೂ ಯುವೋದ್ಯಮಿಗಳ ಬಗ್ಗೆ ಬ್ರಿಕ್ಸ್ ಸಿಸಿಐ ವಿಶೇಷ ಗಮನ ನೀಡುತ್ತದೆ.

ಎಂಟು ವರ್ಷಗಳ ಹಿಂದೆ 2012ರಲ್ಲಿ ಶ್ರೇಷ್ಠ ವೃತ್ತಿಪರರು ಹಾಗೂ ಉದ್ಯಮಿಗಳ ಪರಿಶ್ರಮದಿಂದ ಸ್ಥಾಪನೆಯಾದ ಬ್ರಿಕ್ಸ್ ಸಿಸಿಐ, ಲಾಭದ ದೃಷ್ಟಿ ಹೊಂದಿಲ್ಲದ ಸರ್ಕಾರೇತರ ಸಂಸ್ಥೆಯಾಗಿದೆ.

ಭಾರತ ಸರ್ಕಾರದ ಸೊಸೈಟಿಗಳ ನೋಂದಣಿ ಕಾಯ್ದೆ 1860ರ ಅಡಿಯಲ್ಲಿ ನೋಂದಣಿಯಾಗಿರುವ ಬ್ರಿಕ್ಸ್ ಸಿಸಿಐ ಸಂಸ್ಥೆ ನೀತಿ ಆಯೋಗದ ಪಟ್ಟಿಗೆ ಸೇರಿರುವುದಲ್ಲದೆ ವಿಶ್ವಸಂಸ್ಥೆಯಿಂದಲೂ ಗುರುತಿಸಲ್ಪಟ್ಟಿದೆ.

ಯುಎನ್‍ಐ ಎಸ್‍ಎ ವಿಎನ್ 1842

More News
ಲಾಕ್ ಡೌನ್ ಅವಧಿಯಲ್ಲಿ ವಿಮಾ ಕಂತು ಪಾವತಿಸದಿದ್ದರೂ ಪರಿಹಾರ - ಕೇಂದ್ರದ ಆದೇಶ

ಲಾಕ್ ಡೌನ್ ಅವಧಿಯಲ್ಲಿ ವಿಮಾ ಕಂತು ಪಾವತಿಸದಿದ್ದರೂ ಪರಿಹಾರ - ಕೇಂದ್ರದ ಆದೇಶ

02 Apr 2020 | 3:46 PM

ನವದೆಹಲಿ, ಏ 2 [ಯುಎನ್ಐ] ಲಾಕ್ ಡೌನ್ ಅವಧಿಯಲ್ಲಿ ವಾಹನ ಮತ್ತು ಆರೋಗ್ಯ ವಿಮಾ ಕಂತು ಪಾವತಿಸದಿದ್ದರೂ ಪಾಲಿಸಿದಾರರು ವಿಮಾ ಸೌಲಭ್ಯ ಪಡೆಯಲು ಅರ್ಹರಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

 Sharesee more..