Wednesday, Jul 24 2019 | Time 01:11 Hrs(IST)
  • ನಾಳೆ ಬಿಜೆಪಿ ಶಾಸಕಾಂಗ ನಾಯಕರಾಗಿ ಬಿಎಸ್ ಯಡಿಯೂರಪ್ಪ ಆಯ್ಕೆ :ಮುರಳೀಧರ ರಾವ್
business economy Share

ಬೆಳಗಾವಿಯಿಂದ ಬೆಂಗಳೂರು, ಅಹ್ಮದಾಬಾದ್‍ಗೆ ಸ್ವಾರ್ ಏರ್ ಸೇವೆ

ಬೆಳಗಾವಿಯಿಂದ ಬೆಂಗಳೂರು, ಅಹ್ಮದಾಬಾದ್‍ಗೆ ಸ್ವಾರ್ ಏರ್ ಸೇವೆ
ಬೆಳಗಾವಿಯಿಂದ ಬೆಂಗಳೂರು, ಅಹ್ಮದಾಬಾದ್‍ಗೆ ಸ್ವಾರ್ ಏರ್ ಸೇವೆ

ಬೆಳಗಾವಿ ಮೇ 15 (ಯುಎನ್‍ಐ)- ಘೋಡಾವತ್ ಕಂಪೆನಿ ಒಡೆತನದ ಸ್ಟಾರ್ ಏರ್, ಉಡಾನ್‍-3 ಯೋಜನೆಯಡಿ ನಗರದ ಸಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರು-ಬೆಳಗಾವಿ, ಅಹಮದಾಬಾದ್-ಬೆಳಗಾವಿ-ಬೆಂಗಳೂರು ಮಾರ್ಗಗಳಲ್ಲಿ ಕಾರ್ಯಾಚರಣೆ ಆರಂಭಿಸಿದೆ.

ಮಂಗಳವಾರ ಹೊರತುಪಡಿಸಿ ಸ್ಟಾರ್ ಏರ್ ವಿಮಾನ ಎಲ್ಲ ದಿನಗಳಲ್ಲೂ ಕಾರ್ಯನಿರ್ವಹಿಸುತ್ತದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಬೆಂಗಳೂರಿಗೆ ಬೆಳಿಗ್ಗೆ 8.40 ಗಂಟೆಗೆ ಆಗಮಿಸುವ ವಿಮಾನ, ಅಹಮದಾಬಾದ್ ಗೆ 9.20 ಗಂಟೆಗೆ ನಿರ್ಗಮಿಸಲಿದೆ. ಅಹಮದಾಬಾದ್‍ನಿಂದ ಇದೇ ವಿಮಾನ ಮಧ್ಯಾಹ್ನ 1.50ಕ್ಕೆ ಬೆಂಗಳೂರಿಗೆ ಹೊರಡಲಿದೆ. ಭಾನುವಾರ ಬೆಂಗಳೂರಿನಿಂದ ಸಂಜೆ 4.15ಕ್ಕೆ ಆಗಮಿಸುವ ವಿಮಾನ, ಅಹಮದಾಬಾದ್‍ಗೆ ಸಂಜೆ 4.40ಕ್ಕೆ ಹೊರಡಲಿದೆ. ರಾತ್ರಿ 8.20ಕ್ಕೆ ಅಹಮದಾಬಾದ್‍ ತಲುಪುವ ವಿಮಾನ ಬೆಂಗಳೂರಿಗೆ ರಾತ್ರಿ 8.40ಕ್ಕೆ ಹೊರಡಲಿದೆ ಎಂದು ಪ್ರಕಟಣೆ ತಿಳಿಸಿದೆ.

ಯುಎನ್‍ಐ ಎಸ್‍ಎಲ್‍ಎಸ್‍ ಕೆವಿಆರ್ 1710