Monday, Feb 24 2020 | Time 04:56 Hrs(IST)
Entertainment
ಅಮೂಲ್ಯ ಜೀವನದ ಪವರ್ ಫುಲ್ ಪುರುಷರು ಯಾರು?

ಅಮೂಲ್ಯ ಜೀವನದ ಪವರ್ ಫುಲ್ ಪುರುಷರು ಯಾರು?

22 Feb 2020 | 9:52 PM

ಬೆಂಗಳೂರು, ಫೆ 22 (ಯುಎನ್‍ಐ) ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ಅವರು ತಮ್ಮ ಜೀವನದ ಪವರ್‌ಫುಲ್ ಪುರುಷರು ಯಾರು ಅನ್ನೋದನ್ನ ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ.

 Sharesee more..

ಸಿರಿ ಮ್ಯೂಸಿಕ್ ಪ್ರಶಸ್ತಿ ವಿತರಣೆ

22 Feb 2020 | 7:31 PM

ಬೆಂಗಳೂರು, ಫೆ 22 (ಯುಎನ್‍ಐ) ಸಿರಿ ಮ್ಯೂಸಿಕ್ ಸಂಸ್ಥೆಯು ತನ್ನ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಪುಟ್ಟಣ್ಣ ಕಣಗಾಲ್, ಡಾ ರಾಜಕುಮಾರ್, ಡಾ ವಿಷ್ಣುವರ್ಧನ್, ಶಂಕರನಾಗ್, ಡಾ ಅಂಬರೀಶ್ ಗೌರವಾರ್ಥ ಪ್ರಶಸ್ತಿಗಳನ್ನು ವಿತರಿಸಿದೆ.

 Sharesee more..

ಶುಭ್ ಮಂಗಲ್ ಜ್ಯಾದಾ ಸಾವಧಾನ್ ಚಿತ್ರಕ್ಕೆ ಟ್ರಂಪ್ ಮೆಚ್ಚುಗೆ

22 Feb 2020 | 4:53 PM

ನವದೆಹಲಿ, ಫೆ 22 (ಯುಎನ್ಐ) ಬಾಲಿವುಡ್ ನಿರ್ದೇಶಕ ಹಿತೇಶ್ ಕೇವಲ್ಯ ನಿರ್ದೇಶನದ ಸಲಿಂಗ ಕಾಮಿಗಳ ಕಥಾಹಂದರವನ್ನೊಳಗೊಂಡ 'ಶುಭ್ ಮಂಗಲ್ ಜ್ಯಾದಾ ಸಾವಧಾನ್' ಚಿತ್ರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಸೋಮವಾರ ಭಾರತಕ್ಕೆ ಭೇಟಿ ನೀಡಲಿರುವ ಟ್ರಂಪ್, ಚಿತ್ರದ ಕುರಿತು ಬ್ರಿಟೀಷ್ ಸಲಿಂಗ ಕಾಮಿಗಳ ಪರವಾಗಿ ಕೆಲಸ ಮಾಡುವ ಪೀಟರ್ ತಾತ್ ಚೆಲ್ ಅವರು ಶುಬ್ ಮಂಗಲ ಸಾವಧಾನ್ ಚಿತ್ರದ ಕುರಿತು ಮಾಡಿರುವ ಟ್ವೀಟ್ ಗೆ 'ಗ್ರೇಟ್' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 Sharesee more..
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಯಶ್, ಜಯಪ್ರದಾ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಯಶ್, ಜಯಪ್ರದಾ

22 Feb 2020 | 4:53 PM

ಬೆಂಗಳೂರು, ಫೆ 22 (ಯುಎನ್‍ಐ) ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದೇ 26ರಂದು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ. ಎಸ್‍. ಯಡಿಯೂರಪ್ಪ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ರಾಕಿಂಗ್ ಸ್ಟಾರ್ ಯಶ್‍, ಹಿರಿಯ ನಟಿ ಜಯಪ್ರದಾ, ಬಾಲಿವುಡ್ ನ ಹೆಸರಾಂತ ನಿರ್ಮಾಪಕ ಬೋನಿ ಕಪೂರ್, ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಪಾಲ್ಗೊಳ್ಳಲಿದ್ದಾರೆ.

 Sharesee more..

ಬೆಂಗಳೂರು ಫಿಲ್ಮ್ ಫೆಸ್ಟ್ : "ಪ್ಯಾರಾಸೈಟ್" ಸೇರಿ 60 ದೇಶಗಳ 225 ಚಿತ್ರ ಪ್ರದರ್ಶನ

22 Feb 2020 | 3:51 PM

ಬೆಂಗಳೂರು, ಫೆ 22 (ಯುಎನ್‍ಐ) ಹನ್ನೆರಡನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೇ 26 ರಿಂದ ಮಾರ್ಚ್ 04ರ ವರೆಗೆ ನಡೆಯಲಿದೆ ಪಿವಿಆರ್ ಸಿನೆಮಾಸ್‍ ಒರಾಯನ್ ಮಾಲ್, ನವರಂಗ್ ಚಿತ್ರಮಂದಿರ, ಚಾಮರಾಜಪೇಟೆಯ ಕಲಾವಿದರ ಸಂಘ ಹಾಗೂ ಬನಶಂಕರಿ ಸಮೀಪದ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ 'ಪ್ಯಾರಾಸೈಟ್' ಸೇರಿದಂತೆ 60 ದೇಶಗಳ 225 ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಕನ್ನಡ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

 Sharesee more..
ಚಂದನವನದಲ್ಲಿನ್ನು ಹಸಿದ ‘ಮದಗಜ’ದ ರೋರಿಂಗ್

ಚಂದನವನದಲ್ಲಿನ್ನು ಹಸಿದ ‘ಮದಗಜ’ದ ರೋರಿಂಗ್

21 Feb 2020 | 8:38 PM

ಬೆಂಗಳೂರು, ಫೆ 21 (ಯುಎನ್‍ಐ) ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಹಸಿವು, ಇನ್ನಷ್ಟು, ಮತ್ತಷ್ಟು ಪ್ರತಿಭೆ ತೋರಿಸ್ಬೇಕು ಅನ್ನೋ ಹಸಿವು, ಹೊಟ್ಟೆಪಾಡಿನ ಹಸಿವು….

 Sharesee more..
ಬೆಂಗಳೂರು ಚಲನಚಿತ್ರೋತ್ಸವದ ಖರ್ಚು ವೆಚ್ಚ ಎಷ್ಟು?  ಆರ್ ಟಿಐ ಮೊರೆ ಹೋದ ಮದನ್ ಪಟೇಲ್

ಬೆಂಗಳೂರು ಚಲನಚಿತ್ರೋತ್ಸವದ ಖರ್ಚು ವೆಚ್ಚ ಎಷ್ಟು? ಆರ್ ಟಿಐ ಮೊರೆ ಹೋದ ಮದನ್ ಪಟೇಲ್

20 Feb 2020 | 8:39 PM

ಬೆಂಗಳೂರು, ಫೆ 20 (ಯುಎನ್‍ಐ) ಬೆಂಗಳೂರು ಫಿಲ್ಮ್ ಫೆಸ್ಟಿವಲ್ ಉದ್ಘಾಟನೆಗೆ ಇನ್ನು 6 ದಿನಗಳು ಮಾತ್ರ ಬಾಕಿ ಉಳಿದಿವೆ ಇದರ ನಡುವೆಯೇ ಪಾಸ್ ವಿತರಣೆಯಿಂದ ಹಿಡಿದು ಕನ್ನಡ ಚಲನಚಿತ್ರ ಆಯ್ಕೆಯವರೆಗೂ ಸಾಕಷ್ಟು ಗೊಂದಲ ಹಾಗೂ ಆರೋಪ ಕೇಳಿಬಂದಿದ್ದು, ಕನ್ನಡ ಚಲನಚಿತ್ರ ಮಂಡಳಿಯ ಬಗ್ಗೆ ಸಿನಿ ಮಾಧ್ಯಮದ ಹಲವರು ಬೇಸರಿಸಿದ್ದಾರೆ

 Sharesee more..

ಜುರಾಸಿಕ್ ಪಾರ್ಕ್ ನಿರ್ದೇಶಕನ ಮಗಳ ಸಂಚಲನ ತೀರ್ಮಾನ

20 Feb 2020 | 2:31 PM

ನ್ಯೂಯಾರ್ಕ್, ಫೆ ೨೦ (ಯುಎನ್‌ಐ) ಜುರಾಸಿಕ್ ಪಾರ್ಕ್ ನಂತಹ ಚಿತ್ರಗಳನ್ನು ಜಗತ್ತಿಗೆ ನೀಡಿದ ಪ್ರಸಿದ್ಧ ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಪುತ್ರಿ ಮಿಕೇಲಾ ಸಂಚಲನದ ನಿರ್ಧಾರ ಕೈಗೊಂಡಿದ್ದಾರೆ ಪೋರ್ನ್ ತಾರೆಯಾಗಿ ವೃತ್ತಿಜೀವನ ಆರಂಭಿಸಲು ನಿರ್ಣಯಿಸಿರುವ ೨೩ ವರ್ಷದ ಮಿಕೇಲಾ ಅವರನ್ನು ಸ್ಪಿಲ್ ಬರ್ಗ್, ಅವರ ಪತ್ನಿ ಕೇಟ್ ಕಾಪ್ಷಾ ದತ್ತು ಪಡೆದುಕೊಂಡಿದ್ದರು.

 Sharesee more..

ಕಮಲಹಾಸನ್ ನಟನೆಯ ಇಂಡಿಯನ್‍ 2’ ಸೆಟ್ ನಲ್ಲಿ ಅವಘಡ : 2 ಸಾವು

20 Feb 2020 | 1:32 PM

ಬೆಂಗಳೂರು/ಚೆನ್ನೈ, ಫೆ 20 (ಯುಎನ್‍ಐ) ಖ್ಯಾತ ನಟ ಕಮಲಹಾಸನ್ ಅಭಿನಯದ ‘ಇಂಡಿಯನ್ 2’ ಚಿತ್ರೀಕರಣ ನಡೆಯುತ್ತಿದ್ದ ಸೆಟ್ ನಲ್ಲಿ ಭಾರಿ ಅವಘಡ ಸಂಭವಿಸಿದ್ದು, 3 ಮಂದಿ ಸಹಾಯಕ ನಿರ್ದೇಶಕರು ಮೃತಪಟ್ಟಿದ್ದಾರೆ ಚೆನ್ನೈ ಸಮೀಪದ ಇವಿಪಿ ಫಿಲ್ಮ್ ಸೊಸೈಟಿಯಲ್ಲಿ ಬುಧವಾರ ರಾತ್ರಿ ಈ ದುರಂತ ಜರುಗಿದ್ದು, ಇತರ 09 ಜನರು ಗಾಯಗೊಂಡಿದ್ದಾರೆ ಎಂದು ಲೈಕಾ ಪ್ರೊಡಕ್ಷನ್ ಹೌಸ್ ತಿಳಿಸಿದೆ “ಚಿತ್ರೀಕರಣಕ್ಕಾಗಿ ಲೈಟಿಂಗ್ ವ್ಯವಸ್ಥೆ ಪರಿಶೀಲಿಸುತ್ತಿದ್ದಾ ಕ್ರೇನ್ ಗೆ ಕಟ್ಟಿದ್ದ ಹಗ್ಗ ತುಂಡಾಗಿದೆ.

 Sharesee more..

ಕಿಲ್ಲರ್ ವೆಂಕಟೇಶ್ ಚಿಕಿತ್ಸೆಗೆ 1 ಲಕ್ಷ ರೂ ನೀಡಿದ ದಚ್ಚು : ಕಲಾಬಂಧುವನ್ನು ಮೆಚ್ಚಿದ ಜಗ್ಗೇಶ್

19 Feb 2020 | 7:38 PM

ಬೆಂಗಳೂರು, ಫೆ 19 (ಯುಎನ್‍ಐ) ಕನ್ನಡ ಚಿತ್ರರಂಗ ದೊಡ್ಡ ಕುಟುಂಬದಂತೆ ಎಂಬ ಮಾತು ಆಗಾಗ ಕೇಳಿಬರುತ್ತದೆ ಅದು ನಿಜ ಎಂಬುದನ್ನು ಅನೇ ಘಟನೆಗಳು ಆಗಾಗ್ಗೆ ಸಾಬೀತುಪಡಿಸುತ್ತವೆ ಇಂದೂ ಸಹ ಅಂತಹುದೇ ಸಂಗತಿಯೊಂದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉದಾಹರಣೆಯಾಗಿದ್ದಾರೆ ಹಿರಿಯ ನಟ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ನಟ ಕಿಲ್ಲರ್ ವೆಂಕಟೇಶ್ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಬಗ್ಗೆ ನವರಸ ನಾಯಕ ಜಗ್ಗೇಶ್ ಕೆಲ ದಿನಗಳ ಹಿಂದೆ ನಟನ ಹೆಸರು ಹೇಳದೆಯೇ ಹಂಚಿಕೊಂಡಿದ್ದರು ಬಳಿಕ ನಟ ವೆಂಕಟೇಶ್ ಜತೆಗಿನ ಭಾವಚಿತ್ರವನ್ನೂ ಟ್ವಿಟರ್ ಮೂಲಕ ಪೋಸ್ಟ್ ಮಾಡಿದ್ದರು ಅಷ್ಟೇ ಅಲ್ಲದೆ ತಮ್ಮ ಗೆಳೆಯನ ಚಿಕಿತ್ಸೆಗೆ ಸಹಕರಿಸುವಂತೆ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಆರೋಗ್ಯ ಸಚಿವ ಬಿ ಶ್ರೀರಾಮುಲು ಮೊದಲಾದವರಿಗೆ ಮನವಿ ಮಾಡಿದ್ದರಿಂದ ಅವರೆಲ್ಲರೂ ಸ್ಪಂದಿಸಿದ್ದರು ಇದೇ ಸಂದರ್ಭದಲ್ಲಿ ನಟ ದರ್ಶನ್ ಅವರಿಗೂ ಕರೆ ಮಾಡಿದ್ದ ಜಗ್ಗೇಶ್ ಸಹಾಯ ಕೋರಿದ್ದರು ಕೂಡಲೇ ಸ್ಪಂದಿಸಿದ ದರ್ಶನ್ ಒಂದು ಲಕ್ಷ ರೂಪಾಯಿ ನೀಡಿದ್ದಾರೆ ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, “ಕಿಲ್ಲರ್ ವೆಂಕಟೇಶ ವಿಷಯವಾಗಿ ನಾನು ಕರೆ ಮಾಡಿದ 1 ಗಂಟೆಯಲ್ಲಿ 1 ಲಕ್ಷ ರೂಪಾಯಿ ಕಳುಹಿಸಿಕೊಟ್ಟ ಕಲಾಬಂಧು ನಿನ್ನ ಶ್ರೇಷ್ಠ ಗುಣ ನನ್ನ ಹೃದಯದಲ್ಲಿ ಅಚ್ಚಾಯಿತು ನೂರ್ಕಾಲ ಸುಖವಾಗಿ ಬಾಳಿ” ಎಂದು ಮನದುಂಬಿ ಧನ್ಯವಾದ ಸಲ್ಲಿಸಿದ್ದಾರೆ.

 Sharesee more..

ಬೈಕ್ ಸ್ಟಂಟ್ : ಕಾಲಿವುಡ್ ಸ್ಟಾರ್ ಅಜಿತ್ ಗೆ ಗಾಯ

19 Feb 2020 | 6:57 PM

ಚೆನ್ನೈ/ಬೆಂಗಳೂರು, ಫೆ 19 (ಯುಎನ್‍ಐ) ತಮಿಳಿನ ಖ್ಯಾತ ನಟ ಅಜಿತ್ ಚಿತ್ರೀಕರಣದ ವೇಳೆ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ ವಲಿಮೈ ಚಿತ್ರದ ಚಿತ್ರೀಕರಣ ಸಮಯದಲ್ಲಿ ಈ ಅವಘಡ ಸಂಭವಿಸಿದ್ದು ಅದೃಷ್ಟವಶಾತ್ ಅಜಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 Sharesee more..

ಶುಕ್ರವಾರ ‘ಸಿರಿ ಮಲ್ಲಿಗೆ ತೊಟ್ಟ ಸೀತಮ್ಮ’ ದರ್ಶನ

19 Feb 2020 | 4:31 PM

ಬೆಂಗಳೂರು, ಫೆ 19 (ಯುಎನ್‍ಐ) ಇದೇ ಶುಕ್ರವಾರ ಬಿಡುಗಡೆಯಾಗುತ್ತಿರುವ ಹಲವು ಚಿತ್ರಗಳ ಸಾಲಿನಲ್ಲಿ ‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’ ಕೂಡ ಸೇರಿದ್ದು, ಇದೊಂದು ಕಲಾತ್ಮಕ ಚಿತ್ರ ಎಂದು ಚಿತ್ರತಂಡ ತಿಳಿಸಿದೆ ವಿಧವೆಯ ಅಂತರಂಗಕ್ಕೆ ಕನ್ನಡಿ ಹಿಡಿವ 1990ರ ಕಾಲಘಟ್ಟದ ಕಥೆಯಿರುವ ಮಹಿಳಾ ಪ್ರಧಾನ ಚಿತ್ರದಲ್ಲಿ ಸಂಹಿತಾ ವಿನ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಗಂಡನನ್ನು ಕಳೆದುಕೊಂಡ ವಿಧವೆ ಬೇರೆ ಮದುವೆಯಾದರೆ ಆಕೆಯನ್ನು ಈ ಸಮಾಜ ಹೇಗೆ ಕಾಣುತ್ತದೆ, ವಿಧವೆಯೊಂದಿಗೆ ಎಷ್ಟು ನಿಕೃಷ್ಟವಾಗಿ ನಡೆದುಕೊಳ್ಳುತ್ತದೆ ಎಂಬುದು ಚಿತ್ರದ ತಿರುಳು ಕುಟುಂಬ ಸಮೇತ ನೋಡಬಹುದಾದ ಚಿತ್ರ ಎಂದು ನಟಿ ಸಂಹಿತಾ ವಿನ್ಯ ತಿಳಿಸಿದರು ಈ ಸಿನಿಮಾ ಅಪರೂಪದ ದೃಶ್ಯ ಕಾವ್ಯವಾಗಿದ್ದು, ಮಲೆನಾಡಿನಲ್ಲಿ ಚಿತ್ರೀಕರಣಗೊಂಡಿದೆ ಪುರಾತನ ಕಾಲದ ದೇವಾಲಯಗಳನ್ನು ಪರಿಚಯಿಸುವ ಪತ್ರಕತರ್ತನ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದು ನಟ ನಂದೀಶ್ ಕುಮಾರ್ ಹೇಳಿದರು ಈ ಸಮಾಜದಲ್ಲಿ ಹೆಂಡತಿ ಸತ್ತರೆ ಗಂಡ ಬೇರೆ ಮದುವೆಯಾಗಬಹುದು.

 Sharesee more..

‘ಥರ್ಡ್ ಕ್ಲಾಸ್‍’ ಅಲ್ಲ ಫಸ್ಟ್ ಕ್ಲಾಸ್

19 Feb 2020 | 4:15 PM

ಬೆಂಗಳೂರು, ಫೆ 19 (ಯುಎನ್‍ಐ) ತಂದೆ, ಮಗಳ ಬಾಂಧವ್ಯ ಸಾರುವ ಥರ್ಡ್‍ ಕ್ಲಾಸ್ ಚಿತ್ರ 3ನೇ ವಾರದತ್ತ ಮುನ್ನಗುತ್ತಿದ್ದು 35ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಫಸ್ಟ್ ಕ್ಲಾಸ್ ‍ಪ್ರದರ್ಶನ ಕಾಣುತ್ತಿದೆ ಚಿತ್ರದ ಯಶಸ್ಸಿನ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡ ನಿರ್ಮಾಪಕ ಹಾಗೂ ನಾಯಕ ನಟ ನಮ್ ಜಗದೀಶ್‍, “ಜನರು ನಿಧಾನವಾಗಿ ಥಿಯೇಟರ್ ನತ್ತ ಬರುತ್ತಿದ್ದಾರೆ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರು ಭಾವುಕರಾಗಿ ಕಂಬನಿ ಮಿಡಿದಿದ್ದಾರೆ ಆರಂಭದಲ್ಲಿ 100 ಥಿಯೇಟರ್ ಗಳಲ್ಲಿದ್ದ ಚಿತ್ರ ಇದೀಗ 35 ಚಿತ್ರಮಂದಿರಗಳಲ್ಲಿದೆ” ಎಂದು ಹೇಳಿದ್ರು “ಮೂಲತಃ ಬಿಸಿನೆಸ್ ಮ್ಯಾನ್ ಆದ ನನಗೆ ಕಲೆಯ ಬಗ್ಗೆ ಆಸಕ್ತಿ ಇದ್ದಿದ್ದರಿಂದ ಚಿತ್ರ ಮಾಡಿದೆ ಇದರಿಂದ ಹೆಚ್ಚು ಗಳಿಕೆಯಾಗಲಿಲ್ಲವಾದರೂ, ಉತ್ತಮ ಚಿತ್ರ ನೀಡಿದ್ದೇನೆ ಎಂಬ ಆತ್ಮತೃಪ್ತಿಯಿದೆ” ಎಂದು ಸಂತಸ ಹಂಚಿಕೊಂಡರು ಚಿತ್ರದ ನಾಯಕಿ ರೂಪಿಕಾ, “ಎಲ್ಲ ವಯೋಮಾನದವರೂ ಚಿತ್ರವನ್ನು ಇಷ್ಟಪಟ್ಟಿದ್ದಾರೆ ಮಗಳಿಂದ ದೂರವಿದ್ದ ವೃದ್ಧರೊಬ್ಬರು, ಚಿತ್ರ ವೀಕ್ಷಿಸಿದ ನಂತರ, ಭಾವೋದ್ವೇಗಕ್ಕೆ ಒಳಗಾಗಿ, ನನ್ನ ತಪ್ಪಿನ ಅರಿವಾಗಿದೆ ಈಗಲೇ ಹೋಗಿ ಮಗಳನ್ನು ಭೇಟಿಯಾಗುತ್ತೇನೆ ಎಂದ ಮಾತನ್ನು ಮರೆಯಲಾಗದು ಚಿತ್ರ ಚೆನ್ನಾಗಿದೆ ಎಂಬುದಕ್ಕೆ ಇದು ಉತ್ತಮ ಸಾಕ್ಷಿ” ಎಂದು ಹೇಳಿಕೊಂಡರು ಸದ್ಯದಲ್ಲೇ ‘ಚಿತ್ರ ಜೀವ ಒಂದೇ ಜೀವನವೊಂದೇ’ ಹೆಸರಿನ ನೂತನ ಚಿತ್ರ ಸೆಟ್ಟೇರಲಿದೆ ಎಂದು ನಿರ್ಮಾಪಕ, ನಟ ನಮ್ ಜಗದೀಶ್ ಮಾಹಿತಿ ನೀಡಿದ್ದಾರೆ ಅಂಧ ಮಕ್ಕಳಿಗೆ ನೆರವು, ನೆರೆ ಪೀಡಿತ ಗ್ರಾಮಗಳಿಗೆ ನೆರವು ಹಾಗೂ ಗ್ರಾಮವೊಂದನ್ನು ದತ್ತು ಪಡೆಯುವುದರ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿಯೂ ನಮ್ ಜಗದೀಶ್ ತೊಡಗಿಸಿಕೊಂಡಿರುವುದು ವಿಶೇಷ.

 Sharesee more..

ಸ್ಯಾಂಡಲ್ ವುಡ್ ಸೆಲೆಬ್ರಿಟಿ ಕ್ಯಾಲೆಂಡರ್ ಲಾಂಚ್

19 Feb 2020 | 3:55 PM

ಬೆಂಗಳೂರು, ಫೆ 19 (ಯುಎನ್‍ಐ) ಸೆಲೆಬ್ರಿಟಿ ಫ್ಯಾಷನ್ ಢಿಸೈನರ್ ಲಕ್ಶ್ಮೀ ಕ್ರಷ್ಣ ಲೇಬಲ್ 2020 ಕ್ಯಾಲೇಂಡರ್ ಬಿಡುಗಡೆಯಾಗಿದೆ ಖ್ಯಾತ ನಟಿ ಪ್ರಿಯಾಂಕಾ ಉಪೇಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕ್ಯಾಲೆಂಡರ್ ನ ರೂಪದರ್ಶಿಗಳಾದ ಕಾರುಣ್ಯ ರಾಮ್,.

 Sharesee more..

‘ಬ್ಯಾರೇನಾ ಐತಿ’ ಹಾಡಿಗೆ ಮರು ಚಿತ್ರೀಕರಣ

19 Feb 2020 | 3:29 PM

ಬೆಂಗಳೂರು, ಫೆ 19 (ಯುಎನ್‍ಐ) ‘ಚುಟು ಚಟು ಅಂತೈತಿ’ ನಂತರ ಅತಿಹೆಚ್ಚು ಜನಪ್ರಿಯತೆ ಗಿಟ್ಟಿಸುವ ಹಾಡುಗಳ ಸಾಲಿನಲ್ಲಿರುವ ಬ್ಯಾರೇನಾ ಐತಿ ಹಾಡು ಮರು ಚಿತ್ರೀಕರಣಗೊಂಡಿದೆ  Sharesee more..