Tuesday, Oct 22 2019 | Time 09:26 Hrs(IST)
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
Entertainment

ಲೂಸ್ ಮಾದ ಯೋಗಿ ಮಗಳಿಗೆ ನಾಮಕರಣ

04 Oct 2019 | 11:57 AM

ಬೆಂಗಳೂರು, ಅ ೦೪ (ಯುಎನ್‌ಐ) ಚಂದನವನದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಛಾಪು ಮೂಡಿಸಿರುವ ನಟ ಲೂಸ್ ಮಾದ ಯೋಗಿ ಅವರ ಮುದ್ದಾದ ಮಗುವಿಗೆ ನಾಮಕರಣವಾಗಿದೆ ಯೋಗಿ ಸಾಹಿತ್ಯ ದಂಪತಿ ತಮ್ಮ ಕುಟುಂಬದ ಕೆಲವು ಹಿರಿಯರು ಆತ್ಮೀಯ ಸ್ನೇಹಿತರನ್ನು ಕರೆದು ತಮ್ಮ ಮುದ್ದು ಮಗಳಿಗೆ ನಾಮಕರಣ ಶಾಸ್ತ್ರವನ್ನು ಅತ್ಯಂತ ಸರಳವಾಗಿ ನೆರವೇರಿಸಿದ್ದು, ಶ್ರೀನಿಕಾ ಎಂದು ನಾಮಕರಣ ಮಾಡಿದ್ದಾರೆ.

 Sharesee more..

"ಕಂಸಾಳೆ"ಗೆ ಮುಹೂರ್ತ

04 Oct 2019 | 9:56 AM

ಬೆಂಗಳೂರು, ಅ ೦೪ (ಯುಎನ್‌ಐ) ವಿಭಿನ್ನ ಕಥಾಹಂದರದ ಕಂಸಾಳೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ ಎಸ್ ಆರ್ ವೈ ಫಿಲ್ಮ್ಸ್ ಸಂಸ್ಥೆಯ ವತಿಯಿಂದ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಅಥರ್ವ ಖ್ಯಾತಿಯ ಪವನ್ ತೇಜ ಪ್ರಮುಖ ಪಾತ್ರದಲ್ಲಿದ್ದಾರೆ.

 Sharesee more..

ಕೊಂಕಣಿ ವಿವಾದ: ರಾಧಿಕಾ ತಿರುಗೇಟು

04 Oct 2019 | 8:10 AM

ಬೆಂಗಳೂರು, ಅ ೦೪ (ಯುಎನ್‌ಐ) ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ೮ ತಿಂಗಳ ಪುತ್ರಿ ಪೋಟೋದಲ್ಲಿ ತಂದೆಯನ್ನು ಗುರುತಿಸುವ ಸಂಗತಿಯನ್ನು ಹಂಚಿಕೊಂಡಿದ್ದರು ಆದರೆ ಈ ಕುರಿತ ವಿಡಿಯೋ ದಲ್ಲಿ ರಾಧಿಕಾ ಪುತ್ರಿ ಐರಾಳೊಂದಿಗೆ ತಮ್ಮ ಮಾತೃಭಾಷೆ ಕೊಂಕಣಿಯಲ್ಲಿ ಮಾತನಾಡಿದ್ದು, ಇದೇ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ತುತ್ತಾಗಿತ್ತು.

 Sharesee more..

ಇದೇ 13 ರಿಂದ ಬಿಗ್ ಬಾಸ್ ಸೀಸನ್-7: ಸ್ಪರ್ದಿಗಳ ಬಗ್ಗೆ ಹೆಚ್ಚಿದ ಕುತೂಹಲ!

03 Oct 2019 | 2:09 PM

ಬೆಂಗಳೂರು, ಅ 03 (ಯುಎನ್‌ಐ) ಖಾಸಗಿ ವಾಹಿನಿಯಲ್ಲಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ನಡೆಸಿಕೊಡಲಿರುವ ಬಿಗ್ ಬಾಸ್ ಸೀಸನ್ -7 ಇದೇ 13ರಿಂದ ಪ್ರಾರಂಭವಾಗಲಿದ್ದು, ಈಗಾಗಲೇ ಪ್ರೋಮೊ ಬಿಡುಗಡೆಯಾಗಿದೆ ಬಿಗ್ ಮನೆಗೆ ತೆರಳಲಿರುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯೊಂದು ಹೊರಬಿದ್ದಿದೆ.

 Sharesee more..

ಚಂದನವಾಹಿನಿಯಲ್ಲಿ `ಗಾನ ಚಂದನ’

03 Oct 2019 | 11:06 AM

ಬೆಂಗಳೂರು, ಅ ೦೩ (ಯುಎನ್‌ಐ) ನಾಡಿನ ಹೆಮ್ಮೆಯ ದೂರದರ್ಶನ ಚಂದನವಾಹಿನಿಯಲ್ಲಿ ಗಾಯನ ಪ್ರತಿಭಾನ್ವೇಷಣೆಯ ವಿನೂತನ ಕಾರ್ಯಕ್ರಮ "ಗಾನ ಚಂದನ" ಪ್ರಾರಂಭವಾಗಿದೆ ಹೆಸರಾಂತ ನಟ ರಾಘವೇಂದ್ರ ರಾಜಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಹಾಡಿ, ಶುಭ ಕೋರಿದರು.

 Sharesee more..

ಪರಿಹಾರ ಧನ ಸಂತ್ರಸ್ತರ ಬ್ಯಾಂಕ್ ಖಾತೆಗೆ ವರ್ಗವಾಗಲಿ: ಜಗ್ಗೇಶ್

03 Oct 2019 | 10:46 AM

ಬೆಂಗಳೂರು, ಅ 03 (ಯುಎನ್‌ಐ) ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ಭೀಕರ ಪ್ರವಾಹದಿಂದ ಅಪಾರ ನಷ್ಟ ಹಾಗೂ ಪ್ರಾಣಹಾನಿಯಾಗಿದ್ದು, ಕೇಂದ್ರ ಸರ್ಕಾರ ಇನ್ನೂ ಪರಿಹಾರ ಧನ ಬಿಡುಗಡೆಗೊಳಿಸಿಲ್ಲ ಇದೇ ವೇಳೆ ಪರಿಹಾರ ಧನ ನೀಡುವುದಾದಲ್ಲಿ ಅದು ನೇರವಾಗಿ ಸಂತ್ರಸ್ತರಿಗೆ ತಲುಪಲಿ ಎಂದು ನಟ ಜಗ್ಗೆಶ್ ಮನವಿ ಮಾಡಿದ್ದಾರೆ.

 Sharesee more..

ಗಾಂಧಿಜಯಂತಿಯಂದು ‘ಮೋಹನದಾಸ’ ಚಿತ್ರ ವೀಕ್ಷಿಸಿದ 1600 ಮಕ್ಕಳು

02 Oct 2019 | 6:59 PM

ಬೆಂಗಳೂರು, ಅ 3 [ಯುಎನ್ಐ] ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಅವರ 150ನೇ ವರ್ಷದ ಜನ್ಮದಿನಾಚರಣೆಯಂದು ಇನ್‌ಫೋಸಿಸ್ ಕನ್‌ವೆನ್ಷನ್ ಹಾಲ್‌ನಲ್ಲಿ ಎಲ್ಸಿಯಾ ಟ್ರಸ್ಟ್ ಆಯೋಜಿಸಿದ್ದ ಮಿತ್ರಚಿತ್ರ ನಿರ್ಮಾಣದ ಪಿ ಶೇಷಾದ್ರಿ ನಿರ್ದೇಶನದ ಗಾಂಧಿಯ ಬಾಲ್ಯ ಕುರಿತ ‘ಮೋಹನದಾಸ’ ಕನ್ನಡ ಚಲನಚಿತ್ರದ ಪ್ರಥಮ ಪ್ರದರ್ಶನವನ್ನು ಸರ್ಕಾರಿ ಶಾಲೆಯ ಸುಮಾರು 1,600 ಮಕ್ಕಳು ಒಟ್ಟಿಗೆ ಕುಳಿತು ವೀಕ್ಷಿಸುವ ಮೂಲಕ ಗಾಂಧಿಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದರು.

 Sharesee more..

'ವಾರ್’ ನಾಳೆ ತೆರೆಗೆ : ಬೃಹತ್ ಆಕ್ಷನ್ ಎಂಟರ್ ಟೈನರ್ ಚಿತ್ರವಾಗುವ ನಿರೀಕ್ಷೆ

01 Oct 2019 | 9:21 PM

ನವದೆಹಲಿ, ಅ 01(ಯುಎನ್‌ಐ) ಖ್ಯಾತ ನಟ ಹೃತಿಕ್‌ರೋಷನ್ ಹಾಗೂ ಟೈಗರ್ ಶ್ರಾಫ್ ಜತೆಯಾಗಿ ನಟಿಸಿರುವ ’ವಾರ್’ ಬುಧವಾರ ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು, ಬೃಹತ್ ಅಕ್ಷನ್ ಎಂಟರ್ ಟೈನರ್ ಚಿತ್ರವಾಗಲಿದೆ ಎಂಬ ಮಾತು ಕೇಳಿಬಂದಿದೆ ಏತನ್ಮಧ್ಯೆ, ಚಿತ್ರದ ಟ್ವಿಸ್ಟ್ ಗಳನ್ನು ಹೊರಗೆಡಹದಂತೆ ಹೃತಿಕ್ ಹಾಗೂ ಟೈಗರ್ ತಮ್ಮ ಅಭಿಮಾನಿಗಳು ಹಾಗೂ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ ಅತ್ಯಂತ ಕಷ್ಟಪಟ್ಟು, ರಕ್ತ, ಬೆವರು ಹರಿಸಿ ಚಿತ್ರ ಮಾಡಲಾಗಿದೆ.

 Sharesee more..

‘ಕಿಲಾಡಿ ಪೊಲೀಸ್’ ಸದ್ಯದಲ್ಲೇ ತೆರೆಗೆ

01 Oct 2019 | 5:00 PM

ಬೆಂಗಳೂರು, ಅ ೦೧(ಯುಎನ್‌ಐ) ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ, ಸಿನಿರಸಿಕರ ಮೆಚ್ಚುಗೆಗೆ ಪಾತ್ರರಾಗಿರುವ ನಟ ಹರೀಶ್‌ರಾಜ್ ‘ಕಿಲಾಡಿ ಪೊಲೀಸ್‘ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ ಯು/ಎ ಅರ್ಹತಾಪತ್ರ ಪಡೆದುಕೊಂಡಿರುವ ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಇತ್ತೀಚೆಗೆ ಖ್ಯಾತ ನಟ ಮೋಹನ್‌ಲಾಲ್ ಪುತ್ರ ನಾಯಕನಾಗಿ ನಟಿಸಿರುವ ಚಿತ್ರ ಸೇರಿದಂತೆ ಮಲೆಯಾಳಂನ ಎರಡು ಚಿತ್ರಗಳಲ್ಲಿ ಮುಖ್ಯ ಖಳನಟನ ಪಾತ್ರದಲ್ಲಿ ಹರೀಶ್ ರಾಜ್ ಅಭಿನಯವಿದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಆರೆಂಜ್‘ ಚಿತ್ರದ ನಂತರ ‘ಕಿಲಾಡಿ ಪೊಲೀಸ್‘ ಚಿತ್ರದಲ್ಲಿ ಅಭಿನಯಿಸಿರುವ ಹರೀಶ್‌ರಾಜ್ ಈ ಚಿತ್ರದ ನಿರ್ದೇಶಕರೂ ಹೌದು ಎಚ್ ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ೪೦ದಿನಗಳ ಚಿತ್ರೀಕರಣ ನಡೆದಿದೆ.

 Sharesee more..

"ಹಿಕೋರ" ಬಿರುಸಿನ ಚಿತ್ರೀಕರಣ

01 Oct 2019 | 4:47 PM

ಬೆಂಗಳೂರು, ಅ ೦೧(ಯುಎನ್‌ಐ) ನೀಲಕಂಠೇಶ್ವರ ಸಿನಿ ಕಂಬೈನ್ಸ್ ಲಾಂಛನದಲ್ಲಿ ರತ್ನ ಶ್ರೀಧರ್ ಅವರು ನಿರ್ಮಿಸುತ್ತಿರುವ ‘ಹಿಕೋರ‘ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ ಇತ್ತೀಚೆಗೆ ನಾಗರಭಾವಿಯ ಅಂಬಾರಿ ಹೌಸ್‌ನಲ್ಲಿ ಚಿತ್ರದ ಹಾಡೊಂದರ ಚಿತ್ರೀಕರಣ ಕೃಷ್ಣಪೂರ್ಣ ಹಾಗೂ ಸ್ಪಂದನ ಪ್ರಸಾದ್ ಅವರ ಅಭಿನಯದಲ್ಲಿ ಮೂರುದಿನಗಳ ಕಾಲ ನಡೆಯಿತು.

 Sharesee more..

ಮೈಸೂರು ದಸರೆಯಲ್ಲಿ ‘ಪ್ರಾರಂಭ’ ಶೀರ್ಷಿಕೆ ಗೀತೆ ಬಿಡುಗಡೆ

01 Oct 2019 | 4:40 PM

ಬೆಂಗಳೂರು, ಅ 01(ಯುಎನ್‌ಐ) ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ ‘ಪ್ರಾರಂಭ‘ ಚಿತ್ರದ ಟೈಟಲ್ ಸಾಂಗ್‌ನ ಲಿರಿಕಲ್ ವಿಡಿಯೋ ನಾಡಹಬ್ಬ ದಸರಾ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಲಿದೆಅಕ್ಟೋಬರ್ ೩ರ ಗುರುವಾರ ಸಂಜೆ ೫ಕ್ಕೆ ಮೈಸೂರಿನ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಈ ಹಾಡು ಲೋಕಾರ್ಪಣೆಯಾಗಲಿದೆ.

 Sharesee more..

ಇದೇ 18ರಂದು ಕನ್ನಡಿಗರಿಗೆ ಸಿಗಲಿದೆ ’ಗಂಟುಮೂಟೆ’

01 Oct 2019 | 4:31 PM

ಬೆಂಗಳೂರು, ಅ 01 (ಯುಎನ್‌ಐ) ಅಮೇಯುಕ್ತಿ ಸ್ಟುಡಿಯೋಸ್ ನ ರೂಪಾ ರಾವ್ ನಿರ್ದೇಶನದ ’ಗಂಟುಮೂಟೆ’ ಚಿತ್ರ ಇದೇ 18ರಂದು ತೆರೆಗೆ ಬರಲಿದೆ ಈಗಾಗಲೇ ಕೆನಡಾ, ಆಸ್ಟ್ರೇಲಿಯಾ, ಅಮೆರಿಕ, ಇಟಲಿ ಮೊದಲಾದ ದೇಶಗಳಲ್ಲಿ ಪೂರ್ವ ಪ್ರದರ್ಶನ ಕಂಡಿದ್ದು, ಮೆಚ್ಚುಗೆಗೆ ಪಾತ್ರವಾಗಿದೆಹಲವು ವೆಬ್ ಸೀರಿಸ್ ಗಳಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿರುವ ರೂಪಾ ರಾವ್ ಅವರಿಗೆ ’ಗಂಟುಮೂಟೆ’ ಸ್ಯಾಂಡಲ್ ವುಡ್ ನ ಮೊದಲ ಚಿತ್ರ ಹೈಸ್ಕೂಲ್ ಹಂತದ ವಿದ್ಯಾರ್ಥಿಗಳಲ್ಲಿ ಕಂಡು ಬರುವ ಮೊದಲ ಲವ್ ಅಥವಾ ಪ್ರೇಮ, ಕಾಮಗಳ ಬಗ್ಗೆ ಈ ಪ್ರಯೋಗಾತ್ಮಕ ಚಿತ್ರ ನಿರ್ಮಿಸಲಾಗಿದೆಜೀವನವನ್ನು ’ಸಿನಿಮಾ’ದಂತೆ ಎಂದು ಭ್ರಮಿಸುವ ೯೦ರ ದಶಕದ ವಿದ್ಯಾರ್ಥಿನಿ ಮೀರಾ ಪಾತ್ರದಲ್ಲಿ ಪ್ರಕಾಶ್ ಬೆಳವಾಡಿ ಪುತ್ರಿ ತೇಜು ಬೆಳವಾಡಿ ನಟಿಸಿದ್ದಾರೆ ಉದ್ಯೋಗಸ್ಥ ಪೋಷಕರ ಮಗಳಾದ ಮೀರಾ, ಭ್ರಮೆಯಿಂದ ಹೊರಬಂದು ವಾಸ್ತವಿಕ ಜಗತ್ತಿಗೆ ಹೊಂದಿಕೊಳ್ಳಲು ಹೊರಡುವುದೇ ಗಂಟುಮೂಟೆ ಎಂದು ನಿರ್ದೇಶಕಿ ರೂಪಾ ರಾವ್ ಹೇಳಿದ್ದಾರೆ.

 Sharesee more..

'ದೋಸ್ತಾನಾ-2' ತಯಾರಿಯಲ್ಲಿ ಕಾರ್ತಿಕ್

01 Oct 2019 | 3:28 PM

ಮುಂಬೈ, ಅ 1 (ಯುಎನ್ಐ) ಬಾಲಿವುಡ್ ನಟ ಕಾರ್ತಿಕ್ ಆರ್ಯನ್, ತಮ್ಮ ಮುಂಬರುವ 'ದೋಸ್ತಾನಾ-2' ಚಿತ್ರದ ತಯಾರಿಯಲ್ಲಿದ್ದಾರೆ ಸದ್ಯ ಕಾರ್ತಿಕ್ ಆರ್ಯನ್, 'ಪತಿ ಪತ್ನಿ ಔರ್ ಓ' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಮುಂದಿನ ದಿನಗಳಲ್ಲಿ 'ಭುಲ್ ಭುಲಯ್ಯ-2' ಚಿತ್ರದಲ್ಲಿಯೂ ಅವರು ನಟಿಸಲಿದ್ದಾರೆ.

 Sharesee more..

’ಮುಂದಿನ ನಿಲ್ದಾಣ’ ದಲ್ಲಿ ’ಇನ್ನೂನೂ ಬೇಕಾಗಿದೆ’ ಹಾಡಿದ ವಾಸುಕಿ ವೈಭವ್!

30 Sep 2019 | 10:28 PM

ಬೆಂಗಳೂರು, ಸೆ ೩೦ (ಯುಎನ್‌ಐ) "ರಾಮ ರಾಮ ರೇ" ಎಂಬ ಚಿತ್ರದ ಮೂಲಕ ಚಂದನವನಕ್ಕೆ ಸಂಗೀತದ ಕಾಣಿಕೆ ನೀಡಿದ ಯುವ ಪ್ರತಿಭೆ ವಾಸುಕಿ ವೈಭವ್, ಶತ ದಿನಗಳನ್ನು ಮೀರಿ ಮುನ್ನಡೆದು ಕನ್ನಡ ಚಿತ್ರ ರಸಿಕರ ಮನಸ್ಸನ್ನು ಸೂರೆಗೊಳಿಸಿದ "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ" ಚಿತ್ರಕ್ಕಾಗಿ ಅವರು ನಿರ್ದೇಶಿಸಿದ ಹಾಡು ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನೇ ತಂದುಕೊಟ್ಟಿದೆ!ಕಿರಿಕ್ ಪಾರ್ಟಿ ಚಿತ್ರಕ್ಕಾಗಿ ಅವರು ಹಾಡಿರುವ ಕಾಗದದ ದೋಣಿಯಲ್ಲಿ ಎಂಬ ಹಾಡು ಕಲಾರಸಿಕರ ನಾಲಿಗೆಯ ತುದಿಯಲ್ಲಿ ಇಂದಿಗೂ ನಲಿದಾಡುತ್ತಲೇ ಇರುವುದು ಅವರ ಕಂಠ ಸಿರಿಗೆ ಹಿಡಿದ ಕೈಗನ್ನಡಿ.

 Sharesee more..

’ರಾಜಪಥ’ ಆಡಿಯೊ ಬಿಡುಗಡೆ

30 Sep 2019 | 10:10 PM

ಬೆಂಗಳೂರು, ಸೆ ೩೦ (ಯುಎನ್‌ಐ) ಯಾವುದೇ ವ್ಯಕ್ತಿಯ ಕನಸು ನನಸಾಗಲು ನಂಬಿಕೆ, ತಾಳ್ಮೆ ಬೇಕು ಇದೇ ಅಂಶವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿರುವ ’ರಾಜಪಥ’ ಚಿತ್ರದ ಆಡಿಯೊ ಬಿಡುಗಡೆಯಾಗಿದೆಸಂತೋಷ್ ರಾಜ್ ಫಿಲಂಸ್ ಲಾಂಛನದಲ್ಲಿ ಸಂತೋಷ್ ಎಚ್ ರಾಯ್ಕರ್ ಬಂಡವಾಳ ಹೂಡಿದ್ದು, ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ ಮೂಗೂರ್ ಸಿದ್ದು ನಿರ್ದೇಶನವಿದೆ ಚಂದ್ರು ಓಬಯ್ಯ ಸಂಗೀತ ನಿರ್ದೇಶನವಿದೆಕಳೆದ ೧೫ ವರ್ಷದಿಂದ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ ಅನುಭವವಿದೆ ಅದೇ ಆಧಾರದಲಿ ರಾಜಪಥದ ಸಾರಥ್ಯ ವಹಿಸಿಕೊಂಡಿದ್ದಾಗಿ ನಿರ್ದೇಶಕ ಮೂಗೂರು ಸಿದ್ದು ಹೇಳಿದ್ದಾರೆ.

 Sharesee more..