Tuesday, Oct 22 2019 | Time 08:44 Hrs(IST)
  • ಉತ್ತರ ಕರ್ನಾಟಕದಲ್ಲಿ ಮತ್ತೆ ಅತಿವೃಷ್ಠಿ,ನೆರೆ : 6 ಜನ ಪ್ರವಾಹಕ್ಕೆ ಸಿಲುಕಿ ಸಾವು
  • ಹೈಕಮಾಂಡ್ ಮೇಲೆ ಒತ್ತಡ ಹಾಕಿ ಅಧಿಕಾರ ಪಡೆದಿದ್ದಾರೆ : ಸಿ ಟಿ ರವಿ ಆರೋಪ
Entertainment

ಶುಕ್ರವಾರ ಕಚಗುಳಿ ಇಡಲಿದ್ದಾರೆ `ಅಧ್ಯಕ್ಷ ಇನ್ ಅಮೆರಿಕಾ’

30 Sep 2019 | 9:40 PM

ಬೆಂಗಳೂರು, ಸೆ 30(ಯುಎನ್‌ಐ) ಶರಣ್ ಹೆಸರು ಕೇಳಿದರೇನೇ ಎಲ್ಲರ ಮೊಗದಲ್ಲಿ ಮಂದಹಾಸ ಮೂಡುತ್ತದೆ ಈಗಾಗಲೇ ’ಅಧ್ಯಕ್ಷ’ರಾಗಿ ಗುರುತಿಸಿಕೊಂಡಿರುವ ಅವರು, ’ಅಧ್ಯಕ್ಷ ಇನ್ ಅಮೆರಿಕಾ’ ಆಗಿ ಕಚಗುಳಿಯಿಡಲು ಅಕ್ಟೋಬರ್ ೪ರಂದು ಚಿತ್ರಮಂದಿರಗಳಿಗೆ ಬರುತ್ತಿದ್ದಾರೆವಿಷಯ ಏನು ಅಂತ ಗೊತ್ತಾಯ್ತಲ್ವ? ವಿಶ್ವಪ್ರಸಾದ್ ಟಿ ಜಿ ನಿರ್ಮಾಣ ಹಾಗೂ ಯೋಗಾನಂದ್ ಮುದ್ದಾನ್ ನಿರ್ದೇಶನದ ’ಅಧ್ಯಕ್ಷ ಇನ್ ಅಮೆರಿಕಾ’ ಶುಕ್ರವಾರ ತೆರೆ ಕಾಣುತ್ತಿದೆಶರನ್ನವರಾತ್ರಿ ಹಬ್ಬದ ವೇಳೆ ಮೋಜು, ಮಸ್ತಿ, ಕಾಮಿಡಿಗಾಗಿ ಚಿತ್ರ ವೀಕ್ಷಿಸಬೇಕು ಪತಿ, ಪತ್ನಿ ಹೇಗಿರಬೇಕು ಎಂಬ ಸಂದೇಶವಿರುವ ಚಿತ್ರದಿಂದ ಕೊನೆಯವರೆಗೂ ಮನರಂಜನೇ ಖಾತ್ರಿ ಸುಮಾರು ೨೦೦ ಚಿತ್ರಗಳಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆಶಿವರಾಜ್ ಕೆ ಆರ್ ಪೇಟೆ, ಸಾಧು ಕೋಕಿಲ, ತಬಲಾ ನಾಣಿಯವರಂತಹ ಹಾಸ್ಯ ದಿಗ್ಗಜರಿರುವ ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿವೆ.

 Sharesee more..

ಸರಿಗಮಪ ಚನ್ನಪ್ಪನಿಗೆ `ಲೈಟಾಗಿ ಲವ್ವಾಗಿದೆ’

30 Sep 2019 | 8:14 PM

ಬೆಂಗಳೂರು, ಸೆ ೩೦(ಯುಎನ್‌ಐ) ನೀವು ನಂಬಿದ್ರೆ ನಂಬಿ, ಬಿಟ್ರೆ ಬಿಡಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾದ ಸರಿಗಮಪ ಸಂಗಿತ ಕಾರ್ಯಕ್ರಮದ ವಿನ್ನರ್ ಚನ್ನಪ್ಪ ಹುದ್ದಾರ್ ಗೆ ’ಲೈಟಾಗಿ ಲವ್ವಾಗಿದೆ’ಯಂತೆಯಾರ ಜತೆ, ಹೇಗಾಯ್ತು, ಯಾಕಾಯ್ತು ಎಂಬ ನಿಮ್ಮ ಕುತೂಹಲ ತಣಿಸಿಬಿಡ್ತೀವಿ ತಾಳಿಅದೇನೂಂದ್ರೆ ಚನ್ನಪ್ಪ ಹುದ್ದಾರ್ ನಾಯಕ ನಟನಾಗಿ ಅಭಿನಯಿಸಿರುವ ’ಲೈಟಾಗಿ ಲವ್ವಾಗಿದೆ’ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆಯಾಗಿದೆಪ್ರಜ್ವಲ್ ಸಿನಿ ಕ್ರಿಯೇಷನ್ಸ್ ಲಾಂಛನದಡಿ ಗುರುರಾಜ್ ಗದಾಡಿಯವರು ಕಥೆ, ಚಿತ್ರಕಥೆಯೊಂದಿಗೆ ಸಿನಿಮಾ ನಿರ್ದೇಶಿಸಿರುವುದಲ್ಲದೆ, ಮುಖ್ಯ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ.

 Sharesee more..

`ಮೀನಾ ಬಜಾರ್’ ಟೀಸರ್ ಕಲರ್ ಫುಲ್

30 Sep 2019 | 7:31 PM

ಬೆಂಗಳೂರು, ಸೆ 30 (ಯುಎನ್‌ಐ) ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ’ಮದುವೆ ಮನೆ’ ಸೇರಿದಂತೆ ಹಲವಾರು ಸಿನಿಮಾ ನಿರ್ದೇಶಿಸಿರುವ ಸುನಿಲ್ ಕುಮಾರ್ ಸಿಂಗ್ ಇದೀಗ ಮೀನಾ ಬಜಾರ್ ಸಿನಿಮಾ ಮೂಲಕ ಮತ್ತೊಮ್ಮೆ ನಿರ್ದೇಶನದ ಕ್ಯಾಪ್ ತೊಟ್ಟಿದ್ದಾರೆ ಜೊತೆಗೆ ಚಿತ್ರದಲ್ಲಿ ಒಂದು ಪಾತ್ರಕ್ಕೆ ಬಣವನ್ನೂ ಹಚ್ಚಿದ್ದಾರೆಹೌದು, ಮೀನಾ ಬಜಾರ್ ಚಿತ್ರದ ಮುಖ್ಯಪಾತ್ರಧಾರಿಯಾಗಿ ಸುನಿಲ್ ಕುಮಾರ್ ಸಿಂಗ್ ಅಭಿನಯಿಸಿದ್ದು, ಈ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲೂ ಏಕಕಾಲಕ್ಕೆ ಬಿಡುಗಡೆಗೆ ಸಿದ್ಧವಾಗಿದೆ.

 Sharesee more..

ಆಲಿಯಾ ಜೊತೆ ಕಾರ್ತಿಕ್ ಆರ್ಯನ್!

30 Sep 2019 | 1:25 PM

ಮುಂಬೈ, ಸೆ 30 (ಯುಎನ್ಐ) ಇದೇ ಮೊದಲ ಬಾರಿಗೆ 'ಗಂಗೂಬಾಯಿ' ಚಿತ್ರದಲ್ಲಿ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಮತ್ತು ಆಲಿಯಾ ಭಟ್ ಜೋಡಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಸಂಜಯ್ ಲೀಲಾ ಬನ್ಸಾಲಿ ಅವರು 'ಇನ್ ಶಾ ಅಲ್ಲಾ' ಚಿತ್ರ ನಿರ್ಮಿಸಬೇಕಿತ್ತು.

 Sharesee more..

ಶೋಲೆ ಚಿತ್ರದ ಕಾಲಿಯಾ ಇನ್ನಿಲ್ಲ

30 Sep 2019 | 12:26 PM

ಮುಂಬೈ, ಸೆ 30 (ಯುಎನ್ಐ) ಹಿರಿಯ ಕಲಾವಿದ ಹಾಗೂ ಬಾಲಿವುಡ್ ಸೂಪರ್ ಹಿಟ್' ಶೋಲೆ' ಚಿತ್ರದ ಕಾಲಿಯಾ ಖ್ಯಾತಿಯ ನಟ ವಿಜು ಖೋಟೆ ಸೋಮವಾರ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ ವಿಜು ಅವರಿಗೆ 78 ವರ್ಷ ವಯಸ್ಸಾಗಿತ್ತು.

 Sharesee more..

ಕರ್ನಾಟಕ ಜನತೆಗೆ ಧನ್ಯವಾದ ಅರ್ಪಿಸಿದ ದರ್ಶನ್

30 Sep 2019 | 12:07 PM

ಬೆಂಗಳೂರು, ಸೆ 30 (ಯುಎನ್ಐ) ಚಾಲೆಂಜಿಂಗ್ ಸ್ಟಾರ್ ದರ್ಶನ್, ಕರ್ನಾಟಕ ಜನತೆಗೆ ಟ್ವೀಟ್ ಮಾಡುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ ದರ್ಶನ್, ತಮ್ಮ ಟ್ವಿಟ್ಟರಿನಲ್ಲಿ, “ಕುರುಕ್ಷೇತ್ರ ಚಿತ್ರಕ್ಕೆ ಇಂದಿಗೆ 50 ದಿನಗಳ ಸಂಭ್ರಮ.

 Sharesee more..

ನಿರ್ಮಾಪಕಿಯಾಗಲು ವಿದ್ಯಾ ಗೆ ಇಷ್ಟ ಇಲ್ವಂತೆ

29 Sep 2019 | 4:13 PM

ಮುಂಬೈ 29 ಸೆ (ಯುಎನ್ಐ) ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಬಾಲಿವುಡ್ ನಟಿ ವಿದ್ಯಾ ಬಾಲನ್ ಗೆ ನಿರ್ಮಾಪಕಿ ಆಗಲು ಇಷ್ಟವಿಲ್ಲವಂತೆ ಬಿಟೌನ್ ನಲ್ಲಿ ಅನೇಕ ನಟಿಯರು ಕೇವಲ ನಟನೆಗೆ ಮಾತ್ರ ಸೀಮಿತವಾಗಿರದೇ, ನಿರ್ಮಾಪಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

 Sharesee more..

’ಪೈಲ್ವಾನ್’ ಪೈರಸಿ ಹಿಂದಿರೋದು ಯಾರು?

28 Sep 2019 | 5:15 PM

ಬೆಂಗಳೂರು, ಸೆ ೨೮(ಯುಎನ್‌ಐ) ಪೈರಸಿ ಭೂತ ಚಿತ್ರರಂಗವನ್ನು ಬೆಂಬಿಡದೆ ಕಾಡುತ್ತಿದೆ ಇತ್ತೀಚೆಗಷ್ಟೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಪೈರಸಿಯಾಗಿ ದೊಡ್ಡ ಸುದ್ದಿಯಾಗಿತ್ತು, ಅಲ್ಲದೆ ಸ್ಟಾರ್ ನಟರ ನಡುವಣ ವಾಗ್ಯುದ್ಧಕ್ಕೂ ಕಾರಣವಾಗಿತ್ತು ಪೈರಸಿ ಕಾಟಕ್ಕೊಂದು ಫುಲ್ ಸ್ಟಾಪ್ ಹಾಕಲೇಬೇಕೆಂದು ಹೊರಟ ಪೊಲೀಸರಿಗೆ ಓರ್ವ ಆರೋಪಿ ಸೆರೆ ಸಿಕ್ಕಿದ್ದ ಅನ್ನೋದು ಎಲ್ಲರಿಗೂ ಗೊತ್ತಿದೆ.

 Sharesee more..

'ಜಿಗರ್ ಥಂಡಾ' ರಿಮೇಕ್ ನಲ್ಲಿ ಕಾರ್ತಿಕ್ !

28 Sep 2019 | 4:38 PM

ಮುಂಬೈ 28 ಸೆ (ಯುಎನ್ಐ) ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ತಮಿಳು ಹಿಟ್ ಚಿತ್ರ 'ಜಿಗರ್ ಥಂಡಾ' ರಿಮೇಕ್ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಖ್ಯಾತ ಚಲನಚಿತ್ರ ನಿರ್ಮಾಪಕ ಅಭಿಷೇಕ್ ಚೌಬೆ ತಮಿಳಿನ 'ಜಿಗರ್‌ಥಂಡಾ' ಚಿತ್ರವನ್ನು ಹಿಂದಿ ಭಾಷೆಯಲ್ಲಿ ರಿಮೇಕ್ ಮಾಡಲು ಸಜ್ಜಾಗಿದ್ದಾರೆ.

 Sharesee more..

'ಕನಸು ಕಣ್ತೆರೆದಾಗ' ಮುಂದಿನ ವರ್ಷ ತೆರೆಗೆ

28 Sep 2019 | 3:22 PM

ಬೆಂಗಳೂರು, ಸೆ 28 (ಯುಎನ್ಐ) ಅನಾಥ ಮಗುವೊಂದು ತನ್ನೆಲ್ಲ ಕಷ್ಟ ಕಾರ್ಪಣ್ಯ ಮೀರಿ ಓರ್ವ ವ್ಯಕ್ತಿಯ ಸಹಾಯ ಪಡೆದು ಸಂಗೀತ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸುವ ಕಥಾಹಂದರ ಹೊಂದಿರುವ ‘ಕನಸು ಕಣ್ತೆರೆದಾಗ’ ಚಿತ್ರ ಮುಂದಿನ ವರ್ಷದ ತೆರೆ ಕಾಣಲಿದೆ.

 Sharesee more..

ಇನ್ನು `ಪೊಗರು’ `ದರ್ಬಾರ್’ ಧ್ರುವ ಮುಂದಿನ ಚಿತ್ರಕ್ಕೂ ನಂದಕಿಶೋರ್ ಡೈರೆಕ್ಷನ್!

27 Sep 2019 | 7:45 PM

ಬೆಂಗಳೂರು, ಸೆ ೨೭ (ಯುಎನ್‌ಐ) ಸದ್ಯ ಪೊಗರು ಚಿತ್ರದಲ್ಲಿ ಬ್ಯುಸಿಯಾಗಿರುವ ಆಕ್ಷನ್‌ಪ್ರಿನ್ಸ್ ಧ್ರುವ ಸರ್ಜಾ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡ್ತಿದೆ ಏನೆಂದರೆ ಸ್ಯಾಂಡಲ್ವುಡ್ ನ ಮಾಸ್ ಅಂಡ್ ಕ್ಲಾಸ್ ಹೀರೋ ಪೊಗರು ಬಳಿಕ ’ದರ್ಬಾರ್’ ಮಾಡ್ತಾರಂತೆ.

 Sharesee more..

ಇನ್‌ಸ್ಟಾಗ್ರಾಮ್ ಖಾತೆ ತೆರೆದ 'ಚಿನ್ನಾರಿ ಮುತ್ತ'

27 Sep 2019 | 7:28 PM

ಬೆಂಗಳೂರು, ಸೆ 27 (ಯುಎನ್‌ಐ) ಕೆಲವು ತಿಂಗಳ ಹಿಂದೆ ಮುಹೂರ್ತ ಆಚರಿಸಿಕೊಂಡಿದ್ದ ವಿಜಯ ರಾಘವೇಂದ್ರ ಅಭಿನನಯದ ’ಮಾಲ್ಗುಡಿ ಡೇಸ್ ಚಿತ್ರತಂಡ ಸದ್ದಿಲ್ಲದೆ ಚಿತ್ರೀಕರಣವನ್ನು ಮುಗಿಸಿದೆ ಜೊತೆಗೆ ಮಾತಿನ ಜೋಡಣೆಯನ್ನೂ ಮುಗಿಸಿ ಆದಷ್ಟು ಬೇಗ ತೆರೆಗೆ ಬರಲು ಯೋಜನೆ ರೂಪಿಸಿದೆ ಏತನ್ಮಧ್ಯೆ ಮಾಲ್ಗುಡಿ ಡೇಸ್ ಚಿತ್ರಿಕರಣವನ್ನು ಮುಗಿಸಿ ಜಿ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವ ವಿಜಯ ರಾಘವೇಂದ್ರರವರು ಇದೀಗ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ನಲ್ಲಿ ಖಾತೆ ತೆರೆದಿದ್ದಾರೆ ಅಧಿಕೃತವಾಗಿ ಇನ್‌ಸ್ಟಾಗ್ರಾಮ್ ಖಾತೆ ಅನ್ನು ನಾನೇ ನಿರ್ವಹಿಸುತ್ತಿದ್ದು ಇದರಿಂದ ಅಭಿಮಾನಿಗಳ ಜೊತೆ ನೇರ ಸಂಪರ್ಕ ಸಾಧ್ಯವಾಗುತ್ತದೆ ಅಲ್ಲದೆ ಇತ್ತಿಚಿನ ದಿನಗಳಲ್ಲಿ ಕಲಾವಿದರಾಗಿ ನಮ್ಮೆಲ್ಲ ದಿನ ನಿತ್ಯದ ಆಗು ಹೋಗುಗಳ ವಿಚಾರ ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುತ್ತಾರೆ ಹಾಗಾಗಿ Iಟಿsಣಚಿgಡಿಚಿm ಗೆ ಬಂದೆ "ಎಂದಿದ್ದಾರೆ ಚಿನ್ನಾರಿ ಮುತ್ತ ಇನ್ನು ಮಾಲ್ಗುಡಿ ಡೇಸ್ ಸಿನಿಮಾದ ಮೇಲಿನ ಕುತೂಹಲ ಹೆಚ್ಚಾಗಿದ್ದು ವಿಜಯ ರಾಘವೇಂದ್ರರವರ ಜೀವನದಲ್ಲಿ ಒಂದು ಮೈಲಿಗಲ್ಲು ಆಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ ವಿಜಯ ರಾಘವೇಂದ್ರ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದು ಅವರಿಗೆ ಜೋಡಿಯಾಗಿ ಗ್ರೀಷ್ಮ ಶ್ರೀಧರ್ ಅಭಿಯಿಸಿದ್ದಾರೆ.

 Sharesee more..

ಬೆಳ್ಳಿತೆರೆಗೆ 'ನವರಾತ್ರಿ’

27 Sep 2019 | 7:00 PM

ಬೆಂಗಳೂರು, ಸೆ 27 (ಯುಎನ್‌ಐ) ಚಂದನವನದಲ್ಲಿ ಈ ವಾರ ಹಲವಾರು ಚಿತ್ರಗಳೊಂದಿಗೆ ’ನವರಾತ್ರಿ’ಯೂ ತೆರೆಕಂಡಿದೆಪಿತ್ರಾರ್ಜಿತ ಆಸ್ತಿಯೊಂದನ್ನು ಮಾರಾಟ ಮಾಡಬೇಕೆಂಬ ಸೋದರರ ಪ್ರಯತ್ನಕ್ಕೆ ಶಕ್ತಿಯೊಂದು ಅಡ್ಡಬರುತ್ತಿರುತ್ತದೆ ಅದು ದುಷ್ಟಶಕ್ತಿಯೋ, ಶಿಷ್ಟಶಕ್ತಿಯೋ ಎಂಬುದೇ ಚಿತ್ರದ ತಿರುಳುಚಿತ್ರದ ಕಥಾವಸ್ತು ಉತ್ತಮವಾಗಿದೆಯಾದರೂ ಅದನ್ನು ಸಮರ್ಥವಾಗಿ ನಿರೂಪಿಸುವಲ್ಲಿ ನಿರ್ದೇಶಕ ಲಕ್ಷ್ಮೀಕಾಂತ್ ಚೆನ್ನ ಮತ್ತಷ್ಟು ಪ್ರಯತ್ನ ಮಾಡಿದ್ದರೆ ನವರಾತ್ರಿಯ ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಪ್ರೇಕ್ಷಕರನ್ನು ಚಿತ್ರಮಂದಿರಡೆಗೆ ಆಕರ್ಷಿಸಬಹುದಿತ್ತು ಕಾಳಿಮಾತೆಯ ಇರುವಿಕೆಯನ್ನು ತೋರಿಸುವ ದೃಶ್ಯಗಳು ಅನೇಕ ಕಡೆ ಅಸಮಂಜಸವಾಗಿ ಕಾಣುತ್ತವೆ ಪ್ರೇಕ್ಷಕರನ್ನು ಬಲವಂತವಾಗಿ ನಗಿಸಲು ಹಲವೆಡೆ ದ್ವಂದ್ವಾರ್ಥ ಸಂಭಾಷಣೆ ತುರುಕಲಾಗಿದೆ ಎನಿಸುತ್ತದೆ.

 Sharesee more..

ಕನ್ನಡಕ್ಕಾಗಿ ಕಿಚ್ಚೆಬ್ಬಿಸುವ ಹೋರಾಟ. ಹೃದಯ ತಟ್ಟುವ ಭಾವನೆಗಳ ತಾಕಲಾಟ `ಗೀತಾ’

27 Sep 2019 | 6:28 PM

ಬೆಂಗಳೂರು, ಸೆ 27 (ಯುಎನ್‌ಐ) ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷಿತ ಸುಂದರ ಪ್ರೇಮಗಾಥೆ ’ಗೀತಾ’ ತೆರೆ ಕಂಡಿದ್ದು, ಕನ್ನಡ ಕಟ್ಟಾಳಿನ ಭಾಷಾ ಪ್ರೇಮ ಹಾಗೂ ಹಾಗೂ ಪ್ರೀತಿಯ ಕಥೆ ಅಚ್ಚುಕಟ್ಟಾಗಿ ಹೊಂದಿಕೊಂಡಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆಗೋಕಾಕ್ ಚಳವಳಿಯ ವಿಷಯವನ್ನು ಹೇಗೆ ಅಳವಡಿಸಿಕೊಳ್ಳಲಾಗಿದೆ ಎಂಬ ಕುತೂಹಲವನ್ನು ನಿರ್ದೇಶಕರು ಅತ್ಯಂತ ಸಮರ್ಥವಾಗಿ ತಣಿಸಿದ್ದಾರೆಗೋಕಾಕ್ ವರದಿ ಜಾರಿಗಾಗಿ ೧೯೮೧ರಲ್ಲಿ ನಡೆದ ಚಳವಳಿಯ ದೃಶ್ಯಗಳು, ಡಾ ರಾಜ್ ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ಶಂಕರ್ ನಾಗ್ ಮೊದಲಾದವರು ಕನ್ನಡಿಗರನ್ನುದ್ದೇಶಿ ಭಾಷಣ ಮಾಡುವ ಸನ್ನಿವೇಶಗಳನ್ನು ಕಥಾನಾಯಕನ ಹೋರಾಟದೊಡನೆ ಅದ್ಭುತವಾಗಿ ಸಮೀಕರಿಸಿದ್ದಾರೆ.

 Sharesee more..

ಹಾಟ್ ಬೆಡಗಿ ಅಲ್ವಂತೆ ದಿಶಾ ಪಟಾಣಿ!

27 Sep 2019 | 6:00 PM

ಮುಂಬೈ 27 ಸೆ (ಯುಎನ್) ಬಾಲಿವುಡ್ ಹಾಟ್ ನಟಿಯರಲ್ಲಿ ಒಬ್ಬರಾದ ದಿಶಾ ಪಟಾಣಿ, ತಮ್ಮನ್ನು ತಾವು ಹಾಟ್ ಬೆಡಗಿ ಎಂದು ಪರಿಗಣಿಸುವುದಿಲ್ಲವಂತೆ ದಿಶಾ ಅವರ ಕ್ಲಿಕ್ಕಿಸಿಕೊಂಡಿರುವ ಹಾಟ್ ಫೋಟೋಗಳೇ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ.

 Sharesee more..