Saturday, Jul 11 2020 | Time 11:34 Hrs(IST)
  • ಪುಲ್ವಾಮದಲ್ಲಿ ಭದ್ರತಾ ಪಡೆಯಿಂದ ಶೋಧ ಕಾರ್ಯಾಚರಣೆ
  • ಬಾರಮುಲ್ಲಾ ಗಡಿಯಲ್ಲಿ ಒಳನುಸುಳಲು ಯತ್ನಿಸಿದ ಇಬ್ಬರು ಉಗ್ರರ ಹತ್ಯೆ
Health -Lifestyle Share

ಜಗತ್ತು ಒಗ್ಗೂಡಿದರೆ ಕೋವಿಡ್ ಎದುರಿಸಲು ಸಾಧ್ಯ : ಪುಟಿನ್

ಜಗತ್ತು ಒಗ್ಗೂಡಿದರೆ ಕೋವಿಡ್ ಎದುರಿಸಲು ಸಾಧ್ಯ : ಪುಟಿನ್
ಜಗತ್ತು ಒಗ್ಗೂಡಿದರೆ ಕೋವಿಡ್ ಎದುರಿಸಲು ಸಾಧ್ಯ : ಪುಟಿನ್

ಮಾಸ್ಕೋ, ಜೂನ್ 29 (ಕ್ಸಿನ್ಹುವಾ) ಜಗತ್ತು ಒಗ್ಗೂಡಿದಲ್ಲಿ ಮಾರಕ ಕೋವಿಡ್ 19 ಎದುರಿಸಲು ಸಾಧ್ಯ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಪರಸ್ಪರ ಆರೋಪಗಳನ್ನು ಮಾಡುವುದರ ಬದಲು ಪ್ರಯತ್ನಗಳನ್ನು ಒಂದುಗೂಡಿಸುವಂತೆ ಪುಟಿನ್ ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ ಎಂದು ಟಾಸ್ ಸುದ್ದಿ ಸಂಸ್ಥೆ ಭಾನುವಾರ ವರದಿ ಮಾಡಿದೆ.

"ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ಎದುರಿಸಲು, ನಾವು ಪರಸ್ಪರರ ವಿರುದ್ಧದ ಆರೋಪಗಳನ್ನು ಮಾಡುವ ಬದಲು ಪ್ರಯತ್ನಗಳನ್ನು ಒಂದುಗೂಡಿಸಬೇಕಾಗಿದೆ" ಎಂದು ಪುಟಿನ್ ಹೇಳಿದ್ದಾರೆ

"ಮುಖಾಮುಖಿಯ ಹಾದಿಯಲ್ಲಿರುವುದಕ್ಕಿಂತ ಹೆಚ್ಚಾಗಿ ಒಗ್ಗಟ್ಟಿನಿಂದ ಕೋವಿಡ್ -19 ಬೆದರಿಕೆಯನ್ನು ಜಗತ್ತು ತೊಡೆದುಹಾಕಬಹುದು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯುಎನ್ಐ ಎಸ್ಎ ವಿಎನ್ 1114