Wednesday, Jul 8 2020 | Time 06:04 Hrs(IST)
International

ಕೊವಿಡ್‍ ನ ಪ್ರಾಣಿ ಮೂಲವನ್ನು ಪತ್ತೆ ಮಾಡಲು ಚೀನಾಗೆ ತೆರಳಲಿರುವ ವಿಶ್ವ ಆರೋಗ್ಯ ಸಂಸ್ಥೆ ತಜ್ಞರು

07 Jul 2020 | 10:54 PM

ಜಿನೀವಾ, ಜುಲೈ 7 (ಯುಎನ್‌ಐ) ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಜ್ಞರು ಈ ವಾರದ ಅಂತ್ಯಕ್ಕೆ ಚೀನಾಕ್ಕೆ ಪ್ರಯಾಣಿಸಲಿದ್ದು, ಕೋವಿಡ್ -19ನ ಪ್ರಾಣಿ ಮೂಲಗಳನ್ನು ಪತ್ತೆ ಮಾಡುವ ಕೆಲಸವನ್ನು ಪ್ರಾರಂಭಿಸಲಿದ್ದಾರೆ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಂಗಳವಾರ ಪ್ರಕಟಿಸಿದ್ದಾರೆ.

 Sharesee more..

ಆಫ್ಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿ: ಪೊಲೀಸ್ ಕಮಾಂಡರ್ ಸಾವು

07 Jul 2020 | 8:15 PM

ಕಾಬೂಲ್, ಜುಲೈ 7 (ಯುಎನ್‌ಐ) ಭಯೋತ್ಪಾದನೆ ಪೀಡಿತ ದೇಶವಾದ ಆಫ್ಘಾನಿಸ್ತಾನದ ಪೂರ್ವ ರಾಜ್ಯವಾದ ನಂಗರ್‌ಹಾರ್‌ನ ಕುಜ್ ಕುನಾರ್ ಜಿಲ್ಲೆಯ ಜಿಲ್ಲಾ ಮಾರುಕಟ್ಟೆಯಲ್ಲಿ ಆತ್ಮಾಹುತಿ ಬಾಂಬರ್ ತಾನು ಇದ್ದ ವಾಹನ ಸ್ಫೋಟಿಸಿದ್ದರಿಂದ ಪೊಲೀಸ್ ಕಮಾಂಡರ್ ಮಂಗಳವಾರ ಸಾವನ್ನಪ್ಪಿದ್ದಾರೆ.

 Sharesee more..
ಅಮೆರಿಕದಲ್ಲಿ ಕರೋನ ಸೋಂಕಿತರ ಸಂಖ್ಯೆ 30 ಲಕ್ಷ ಸನಿಹಕ್ಕೆ

ಅಮೆರಿಕದಲ್ಲಿ ಕರೋನ ಸೋಂಕಿತರ ಸಂಖ್ಯೆ 30 ಲಕ್ಷ ಸನಿಹಕ್ಕೆ

07 Jul 2020 | 5:07 PM

ನ್ಯೂಯಾರ್ಕ್, ಜುಲೈ 7 (ಕ್ಸಿನ್ಹುವಾ) ಅಮೆರಿಕದಲ್ಲಿ ಕರೋನ ಸೋಂಕು ಪೀಡಿತರ ಸಂಖ್ಯೆ ಸುಮಾರು 30 ಲಕ್ಷ ಸನಿಹಕ್ಕೆ ತಲುಪುತ್ತಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್ಎಸ್ಇ) ತಿಳಿಸಿದೆ.

 Sharesee more..

ಮಂಗೋಲಿಯಾ ಪ್ರವಾಹ : 8 ಮಂದಿ ಸೇರಿದಂತೆ ಸಾವಿರಾರು ಪ್ರಾಣಿಗಳ ಸಾವು

07 Jul 2020 | 3:16 PM

ಉಲಾನ್ ಬಾತೋರ್, ಜುಲೈ 07 (ಕ್ಸಿನ್ಹುವಾ) ಕಳೆದ ನಾಲ್ಕು ದಿನಗಳ ಹಿಂದೆ ಮಂಗೋಲಿಯಾದ ಕೆಲವು ಪ್ರಾಂತ್ಯಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಎಂಟು ಜನರು ಸೇರಿದಂತೆ ಸಾವಿರಾರು ಜಾನುವಾರುಗಳು ಸಾವನ್ನಪ್ಪಿವೆ ಸಹಸ್ರಾರು ಮನೆಗಳಿಗೆ ಪ್ರವಾಹದ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ದೇಶದ ರಾಷ್ಟ್ರೀಯ ತುರ್ತುಸ್ಥಿತಿ ನಿರ್ವಹಣಾ ಸಂಸ್ಥೆ (ನೆಮಾ) ಮಂಗಳವಾರ ವರದಿ ಮಾಡಿದೆ.

 Sharesee more..

ಕೋವಿಡ್-19: ರಷ್ಯಾದಲ್ಲಿ ಪೀಡಿತರ ಸಂಖ್ಯೆ 6,94,230

07 Jul 2020 | 1:18 PM

ಮಾಸ್ಕೊ, ಜುಲೈ 7 (ಯುಎನ್ಐ)- ರಷ್ಯಾದಲ್ಲಿ ಕಳೆದ 24 ಗಂಟೆಗಳಲ್ಲಿ 6,368 ಕೊರೊನಾ ಪ್ರಕರಣ ವರದಿಯಾಗಿದ್ದು, ದೇಶದಲ್ಲಿ ಒಟ್ಟು ಪೀಡಿತರ ಸಂಖ್ಯೆ 6,94,230ಕ್ಕೇರಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ "ದೇಶದ 82 ಪ್ರಾಂತ್ಯಗಳಲ್ಲಿ 6,368 ಪ್ರಕರಣ ದಾಖಲಾಗಿದ್ದು, 1,902 ರೋಗಿಗಳಲ್ಲಿ ಲಕ್ಷಣಗಳೇ ಕಂಡು ಬಂದಿಲ್ಲ" ಎಂಬುದು ವಿಶೇಷ.

 Sharesee more..

ದಕ್ಷಿಣ ಕೊರಿಯಾದಲ್ಲಿ 44 ಕೊರೊನಾ ಪ್ರಕರಣ ಪತ್ತೆ, ಒಟ್ಟು ಪ್ರಕರಣ ಸಂಖ್ಯೆ 13,181ಕ್ಕೇರಿಕೆ

07 Jul 2020 | 12:01 PM

ಸಿಯೋಲ್, ಜುಲೈ 7 (ಯುಎನ್ಐ)- ದಕ್ಷಿಣ ಕೊರಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ 44 ಕೊರೊನಾ ಪ್ರಕರಣ ದೃಢ ಪಟ್ಟಿದ್ದು, ದೇಶದಲ್ಲಿ ಒಟ್ಟು ಪೀಡಿತರ ಸಂಖ್ಯೆ 13,181ಕ್ಕೇರಿಕೆ ಆಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

 Sharesee more..

ಲಾಸ್ ಏಂಜಲೀಸ್ ನಲ್ಲಿ ಕರೋನಕ್ಕೆ 3,534 ಜನರ ಬಲಿ

07 Jul 2020 | 9:50 AM

ಲಾಸ್ ಏಂಜಲೀಸ್, ಜು 7 (ಯುಎನ್ಐ) ಲಾಸ್ ಏಂಜಲೀಸ್ ನಲ್ಲಿ ಜುಲೈ ತಿಂಗಳಲ್ಲಿ ಕರೋನ ಸೋಂಕು ಹೆಚ್ಚುತ್ತಿದ್ದು, ಹೊಸದಾಗಿ 48 ಹೊಸ ಸಾವಿನ ಪ್ರಕರಣ ವರದಿಯಾಗಿದೆ ಇವರೆಗೆ ಮೃತರ ಸಂಖ್ಯೆ ಮೃತಪಟ್ಟವರ 3,534 ಕ್ಕೆ ಎರಿಕೆಯಾಗಿದೆ.

 Sharesee more..

ಕೋವಿಡ್-19: ಇಸ್ರೇಲ್ ನಲ್ಲಿ ಒಟ್ಟು ಪ್ರಕರಣ ಸಂಖ್ಯೆ 30,749

07 Jul 2020 | 9:48 AM

ನವದೆಹಲಿ, ಜುಲೈ 7 (ಯುಎನ್ಐ)- ಇಸ್ರೇಲ್ ನಲ್ಲಿ ಕಳೆದ 24 ಗಂಟೆಗಳಲ್ಲಿ 791 ಹೊಸ ಕೊರೊನಾ ವೈರಸ್ ಪ್ರಕರಣ ಕಂಡು ಬಂದಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 30,749 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.

 Sharesee more..

ಬಾಂಗ್ಲಾದಲ್ಲಿ ಕೊರೊನಾದಿಂದ ಮೃತರ ಸಂಖ್ಯೆ ಎರಡು ಸಾವಿರಕ್ಕೂ ಹೆಚ್ಚು

07 Jul 2020 | 9:32 AM

ಢಾಕಾ, ಜುಲೈ 7 (ಯುಎನ್ಐ)- ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ (ಕೋವಿಡ್ 19) ಪರಿಣಾಮ ಬಾಂಗ್ಲಾದೇಶದಲ್ಲಿ ಈವರೆಗೆ ಎರಡು ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮಾರ್ಚ್ 8 ರಂದು ದೇಶದಲ್ಲಿ ಕೊರೊನಾ ಸೋಂಕಿನಿಂದ ಮೊದಲ ಸಾವು ಸಂಭವಿಸಿದೆ.

 Sharesee more..

ಬ್ರೆಜಿಲ್ ಅಧ್ಯಕ್ಷರಲ್ಲಿ ಕೊರೊನಾ ವೈರಸ್ ಲಕ್ಷಣ

07 Jul 2020 | 9:25 AM

ರಿಯೊ ಡಿ ಜನೈರೊ, ಜುಲೈ 7 (ಯುಎನ್ಐ)- ತಮ್ಮಲ್ಲಿ ಕೊರೊನಾ ವೈರಸ್‌ನ ಲಕ್ಷಣಗಳಿವೆ ಎಂದು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ದೂರದರ್ಶನ ಸಂದರ್ಶನದಲ್ಲಿ ಹೇಳಿದ್ದಾರೆ ಸಿಎನ್ಎನ್ ಬ್ರೆಜಿಲ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, 65 ವರ್ಷದ ಅಧ್ಯಕ್ಷರ ದೇಹದ ಉಷ್ಣತೆಯು 38 ಡಿಗ್ರಿ ಸೆಲ್ಸಿಯಸ್ ಮತ್ತು ರಕ್ತದ ಆಮ್ಲಜನಕದ ಮಟ್ಟವು ಶೇಕಡಾ 96 ಎಂದು ಬೋಲ್ಸನಾರೊ ಹೇಳಿದ್ದಾರೆ.

 Sharesee more..

ಚೀನಾದ ಹುಬೈನಲ್ಲಿ ದಾಖಲಾಗದ ಹೊಸ ಪ್ರಕರಣಗಳು

07 Jul 2020 | 9:24 AM

ವುಹಾನ್, ಜುಲೈ 7 (ಯುಎನ್ಐ) ಮಧ್ಯ ಚೀನಾದ ಹುಬೈ ಪ್ರಾಂತ್ಯದಲ್ಲಿ ಸೋಮವಾರ ಹೊಸ ದೃಡಪಡಿಸಿದ, ಲಕ್ಷಣರಹಿತ ಅಥವಾ ಶಂಕಿತ ಪ್ರಕರಣಗಳು ವರದಿಯಾಗಿಲ್ಲ ಎಂದು ಪ್ರಾಂತೀಯ ಆರೋಗ್ಯ ಆಯೋಗ ಮಂಗಳವಾರ ತಿಳಿಸಿದೆ ಪ್ರಸ್ತುತ, ಹುಬೈ ಒಟ್ಟು ಮೂರು ಲಕ್ಷಣರಹಿತ ಪ್ರಕರಣಗಳು ಮತ್ತು 135 ನಿಕಟ ಸಂಪರ್ಕ ಪ್ರಕರಣಗಳು ವೈದ್ಯಕೀಯ ವೀಕ್ಷಣೆಯ ನಿಗಾದಲ್ಲಿವೆ ಸೋಮವಾರದ ವೇಳೆಗೆ, ಹುಬೈಪ್ರಾಂತ್ಯದಲ್ಲಿ ಒಟ್ಟು 68,135ಕರೋನ ಸೊಂಕು ಪ್ರಕರಣಗಳು ವರದಿಯಾಗಿದ್ದು 63,623 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

 Sharesee more..

ರಷ್ಯಾದಲ್ಲಿ ವಿಮಾನದಿಂದ 80 ಕಾಡಿನ ಬೆಂಕಿ ನಿಯಂತ್ರಣ

07 Jul 2020 | 8:58 AM

ಮಾಸ್ಕೋ, ಜು7(ಯುಎನ್ಐ ) ರಷ್ಯಾದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 80 ಕಾಡಿನ ಬೆಂಕಿಯನ್ನು ವಿಮಾನದ ಮೂಲಕ ನಂದಿಸಲಾಗಿದೆ ಎಂದು ವೈಮಾನಿಕ ಸಂರಕ್ಷಣಾ ಸೇವೆ ಹೇಳಿದೆ 4,874 ಹೆಕ್ಟೇರ್ ಪ್ರದೇಶದಲ್ಲಿನ 80 ಕಾಡಿನ ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ಸೇವೆ ತಿಳಿಸಿದೆ ಹಿಂದಿನ ದಿನ, 2,362 ಹೆಕ್ಟೇರ್ ಪ್ರದೇಶದಲ್ಲಿನ 80 ಕಾಡ್ಗಿಚ್ಚುಗಳನ್ನು ನಂದಿಸಲಾಗಿತ್ತು ಎಂದೂ ಹೇಳಲಾಗಿದೆ.

 Sharesee more..

ಇಂಡೋನೇಷ್ಯಾದಲ್ಲಿ ಭೂಕಂಪನ, ಸುನಾಮಿ ಎಚ್ಚರಿಕೆಯಿಲ್ಲ

07 Jul 2020 | 8:25 AM

ಜಕಾರ್ತಾ, ಜುಲೈ 7 (ಯುಎನ್ಐ) ಇಂಡೋನೇಷ್ಯಾದ ಪಶ್ಚಿಮ ಮಧ್ಯ ಜಾವಾ ಪ್ರಾಂತ್ಯದಲ್ಲಿ ಮಂಗಳವಾರ ಭೂಕಂಪನ ಸಂಭವಿಸಿದೆ, ಆದರೆ ಸುನಾಮಿಯನ್ನು ಪ್ರಚೋದಿಸುವ ಸಾಮರ್ಥ್ಯ ಕಂಪನಕ್ಕೆ ಇರಲಿಲ್ಲ ಎಂದು ಹವಾಮಾನ ಮತ್ತು ಭೂ ಭೌತಶಾಸ್ತ್ರ ಸಂಸ್ಥೆ ತಿಳಿಸಿದೆ.

 Sharesee more..

ಬ್ರೆಜಿಲ್‌ನಲ್ಲಿ ಕರೋನ ಮಾರಿಗೆ 65,ಸಾವಿರ ಜನ ಬಲಿ

07 Jul 2020 | 8:11 AM

ರಿಯೊ ಡಿ ಜನೈರೊ, ಜುಲೈ 7 (ಯುಎನ್‌ಐ) ಬ್ರೆಜಿಲ್‌ನಲ್ಲಿ ಕಳದೆ 24 ಗಂಟೆಗಳ ಗಳ ಅವಧಿಯಲ್ಲಿ ಹೊಸದಾಗಿ 620 ರೋಗಿಗಳುಮೃತಪಟ್ಟಿದ್ದು, ಪರಿಣಾಮ ದೇಶದಲ್ಲಿ ಈವರೆಗೆ ಮೃತರ ಸಂಖ್ಯೆ 65,ಸಾವಿರ ದಾಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

 Sharesee more..
ಉದ್ಯೋಗ ಕಳೆದುಕೊಳ್ಳುವ ಬೀತಿಯಲ್ಲಿ 8 ಲಕ್ಷ  ಭಾರತೀಯರು

ಉದ್ಯೋಗ ಕಳೆದುಕೊಳ್ಳುವ ಬೀತಿಯಲ್ಲಿ 8 ಲಕ್ಷ ಭಾರತೀಯರು

06 Jul 2020 | 9:12 PM

ಕುವೈತ್ , ಜ 6 (ಯುಎನ್ಐ) ಕುವೈತ್ ನ ರಾಷ್ಟ್ರೀಯ ಅಕಾಡೆಮಿಯ ಕಾನೂನು ಮತ್ತು ಜನಪ್ರತಿನಿಧಿಗಳ ಸಮಿತಿ ಮಾಡಿದ ನೂತನ ಉದ್ಯೋಗ ಮೀಸಲು ನಿಯಮಗಳ ಶಿಫಾರಸ್ಸಿನಿಂದಾಗಿ ಕುವೈತ್ ನಲ್ಲಿ 8 ಲಕ್ಷ ಭಾರತೀಯರು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ

 Sharesee more..