Wednesday, Jun 3 2020 | Time 07:53 Hrs(IST)
International Share

ಅನ್ಯ ದೇಶಗಳ ಮೇಲೆ ದಾಳಿ ನಡೆಸುವ ಉದ್ದೇಶ ಭಾರತ ಹೊಂದಿಲ್ಲ; ರಾಜನಾಥ್ ಸಿಂಗ್

ಅನ್ಯ ದೇಶಗಳ ಮೇಲೆ ದಾಳಿ ನಡೆಸುವ ಉದ್ದೇಶ ಭಾರತ ಹೊಂದಿಲ್ಲ; ರಾಜನಾಥ್ ಸಿಂಗ್
ಅನ್ಯ ದೇಶಗಳ ಮೇಲೆ ದಾಳಿ ನಡೆಸುವ ಉದ್ದೇಶ ಭಾರತ ಹೊಂದಿಲ್ಲ; ರಾಜನಾಥ್ ಸಿಂಗ್

ಪ್ಯಾರಿಸ್, ಅ.9 (ಯುಎನ್‌ಐ) ಭಾರತ ತನ್ನ ಭದ್ರತೆಗಾಗಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದೆಯೇ ಹೊರತು, ಯಾವುದೇ ಅನ್ಯ ದೇಶಗಳ ಮೇಲೆ ದಾಳಿ ಮಾಡುವ ಉದ್ದೇಶದಿಂದ ಅಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಫ್ರಾನ್ಸ್‌ನ ಡಾಸೋ ಏವಿಯೇಷನ್ ಕಂಪನಿ ನಿರ್ಮಿತ ಮೊದಲ ರಫೇಲ್ ಯುದ್ಧ ವಿಮಾನವನ್ನು ಮಂಗಳವಾರ ಅಧಿಕೃತವಾಗಿ ಸ್ವೀಕರಿಸಿದ ನಂತರ, ರಾಜನಾಥ್ ಸಿಂಗ್ ವಿಜಯದಶಮಿಯ ಶುಭದಿನದಂದು ರಫೇಲ್ ಯುದ್ಧ ವಿಮಾನಕ್ಕೆ ಆಯುಧ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು ’ಇದೊಂದು ಮಹತ್ವದ ಐತಿಹಾಸಿಕ ದಿನ. ರಫೇಲ್ ಯುದ್ಧ ವಿಮಾನ ಹಸ್ತಾಂತರಿಸುವ ಮೂಲಕ ಭಾರತ ಮತ್ತು ಫ್ರಾನ್ಸ್ ನಡುವಣ ಸಂಬಂಧ ಮತ್ತಷ್ಟು ಬಲಪಡಿಸಿದಂತಾಗಿದೆ ಎಂದರು.

ರಫೇಲ್ ಯುದ್ಧ ವಿಮಾನ ಸೇರ್ಪಡೆ ಭಾರತೀಯ ವಾಯುಪಡೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿದಂತಾಗಿದೆ. ದೇಶದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ರಫೇಲ್ ನಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀಸಲಾಗಿದೆ. ಆದರೆ, ಯಾವುದೇ ಅನ್ಯ ದೇಶಗಳ ಮೇಲೆ ದಾಳಿ ಮಾಡುವ ಉದ್ದೇಶ ನಮಗಿಲ್ಲ ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಆಯುಧ ಪೂಜೆಯ ರಾಜನಾಥ್ ಸಿಂಗ್ ರಫೇಲ್ ಜೆಟ್ ವಿಮಾನದಲ್ಲಿ ಹಾರಾಟ ನಡೆಸಿದರು. ಈ ಸಂಬಂಧ ತಮ್ಮ ಅನುಭವವನ್ನು ವಿವರಿಸಿದ ರಕ್ಷಣಾ ಸಚಿವರು, ರಫೇಲ್ ವಿಮಾನದಲ್ಲಿನ ಪ್ರಯಾಣ ಹೆಚ್ಚು ಆರಾಮದಾಯಕ ಎಂದು ಬಣ್ಣಿಸಿದರು.

ಜೀವನದಲ್ಲಿ ಸೂಪರ್‌ ಸಾನಿಕ್ ವೇಗದಲ್ಲಿ ಪ್ರಯಾಣಿಸುತ್ತೇನೆ ಎಂದು ಊಹಿಸಿರಲಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು. ಭಾರತೀಯ ವಾಯುಪಡೆಗೆ ರಫೇಲ್ ಜೆಟ್‌ಗಳ ಸೇರ್ಪಡೆಗೊಳಿಸಿದ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ದೇಶದ ಭದ್ರತೆಗಾಗಿ ಮೋದಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಫೆಬ್ರವರಿ 2021ರ ವೇಳೆಗೆ ಫ್ರಾನ್ಸ್ ಇನ್ನೂ 18 ರಫೇಲ್ ವಿಮಾನಗಳನ್ನು ಭಾರತಕ್ಕೆ ತಲುಪಿಸಲಿದೆ. ಮೇ 2022 ರ ವೇಳೆಗೆ ದೇಶದ ವಾಯುಪಡೆಗೆ 36 ರಫೇಲ್ ಜೆಟ್ ವಿಮಾನಗಳು ಸೇರಲಿವೆ.

ಯುಎನ್ ಐ ಕೆವಿಆರ್ ಎಎಚ್ 1150

More News
ಕೊವಿಡ್‍-19 ಪರಿಣಾಮ: ಮುಂದಿನ ದಶಕದಲ್ಲಿ ಅಮೆರಿಕ ಆರ್ಥಿಕತೆ 7 9 ಟ್ರಿಲಿಯನ್‍ ಡಾಲರ್‍ ನಷ್ಟು ಕುಸಿತ ಅಂದಾಜು

ಕೊವಿಡ್‍-19 ಪರಿಣಾಮ: ಮುಂದಿನ ದಶಕದಲ್ಲಿ ಅಮೆರಿಕ ಆರ್ಥಿಕತೆ 7 9 ಟ್ರಿಲಿಯನ್‍ ಡಾಲರ್‍ ನಷ್ಟು ಕುಸಿತ ಅಂದಾಜು

02 Jun 2020 | 5:25 PM

ವಾಷಿಂಗ್ಟನ್, ಜೂನ್ 2 (ಕ್ಸಿನ್ಹುವಾ) ಕೊವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮದಿಂದ ಮುಂದಿನ ದಶಕದಲ್ಲಿ ಅಮೆರಿಕ ಆರ್ಥಿಕತೆಯ ಗಾತ್ರ 7.9 ಟ್ರಿಲಿಯನ್ ಡಾಲರ್ ನಷ್ಟು ಕುಸಿತ ಕಾಣಲಿದೆ ಎಂದು ಸಿಬಿಒ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಅಂದಾಜಿಸಲಾಗಿದೆ.

 Sharesee more..
ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 62 ಲಕ್ಷಕ್ಕೂ ಹೆಚ್ಚು, ಸಾವಿನ ಸಂಖ್ಯೆ 3 75

ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 62 ಲಕ್ಷಕ್ಕೂ ಹೆಚ್ಚು, ಸಾವಿನ ಸಂಖ್ಯೆ 3 75

02 Jun 2020 | 4:28 PM

ನವದೆಹಲಿ, ಮೇ 2 (ಯುಎನ್ಐ)- ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ (ಕೋವಿಡ್ 19) ನಿಂದ ಇದುವರೆಗೆ ವಿಶ್ವದಾದ್ಯಂತ 62.66 ಲಕ್ಷ ಜನರು ಪೀಡಿತರಾಗಿದ್ದು, 3.75 ಲಕ್ಷ ಜನರು ಸಾವನ್ನಪ್ಪಿದ್ದಾರೆ.

 Sharesee more..

ಮೆಕ್ಸಿಕೋ: ಮಾರಕ ಸೋಂಕಿಗೆ 10 ಸಾವಿರ ಜನ ಬಲಿ

02 Jun 2020 | 9:06 AM

 Sharesee more..

ಪೋಲೆಂಡ್ : ಶಾಲೆ ಪುನರಾರಂಭ ಯೋಜನೆ ರದ್ದು

02 Jun 2020 | 8:53 AM

 Sharesee more..