Friday, Apr 10 2020 | Time 08:45 Hrs(IST)
  • ವಿಶ್ವಾದ್ಯಂತ ಕೊರೊನಾ ಸೋಂಕಿನಿಂದ 95 ಸಾವಿರಕ್ಕೂ ಹೆಚ್ಚು ಜನರ ಸಾವು
  • ತೈಲ ಬೆಲೆ ಸ್ಥಿರತೆಗೆ ಸಹಕಾರದ ನಡೆ ಅಗತ್ಯ – ನಾಯಕರ ಪ್ರತಿಪಾದನೆ
International Share

ಬ್ರಿಟನ್‍ ರಾಜಮನೆತನ ಕುಟುಂಬಕ್ಕೂ ತಟ್ಟಿದ ಕೊರೊನಾವೈರಸ್: ರಾಜಕುಮಾರ ಚಾರ್ಲ್ಸ್ ಗೆ ಸೋಂಕು ದೃಢ

ಬ್ರಿಟನ್‍ ರಾಜಮನೆತನ ಕುಟುಂಬಕ್ಕೂ ತಟ್ಟಿದ ಕೊರೊನಾವೈರಸ್: ರಾಜಕುಮಾರ ಚಾರ್ಲ್ಸ್ ಗೆ ಸೋಂಕು ದೃಢ
ಬ್ರಿಟನ್‍ ರಾಜಮನೆತನ ಕುಟುಂಬಕ್ಕೂ ತಟ್ಟಿದ ಕೊರೊನಾವೈರಸ್: ರಾಜಕುಮಾರ ಚಾರ್ಲ್ಸ್ ಗೆ ಸೋಂಕು ದೃಢ

ಲಂಡನ್, ಮಾರ್ಚ್ 25 (ಯುಎನ್‌ಐ) ಮಾರಕ ಕೊವಿದ್‍-19 ಬ್ರಿಟನ್‍ ರಾಜ ಕುಟಂಬಕ್ಕೂ ತಟ್ಟಿದ್ದು, ಬ್ರಿಟನ್‌ ರಾಜಕುಮಾರ ಚಾರ್ಲ್ಸ್ ಗೆ ಬುಧವಾರ ಕರೋನವೈರಸ್‌ ಸೋಂಕು ದೃಢಪಟ್ಟಿದೆ.

ವೈರಾಣು ಸೋಂಕು ಯುನೈಟೆಡ್‍ ಕಿಂಗ್‍ಡಮ್‍ನಲ್ಲಿ 8,000 ಕ್ಕೂ ಹೆಚ್ಚು ತಗುಲಿದ್ದು, 422 ಜನರನ್ನು ಬಲಿಪಡೆದಿದೆ.

ಸುದ್ದಿಯನ್ನು ದೃಢಪಡಿಸಿರುವ ಕ್ಲಾರೆನ್ಸ್ ಹೌಸ್ ವಕ್ತಾರರು, ಚಾರ್ಲ್ಸ್ ಅವರಲ್ಲಿ ಸೋಂಕಿನ ಲಘು ರೋಗಲಕ್ಷಣಗಳು ಕಂಡುಬಂದಿವೆಯಾದರೂ, ಉತ್ತಮ ಆರೋಗ್ಯದಿಂದಿದ್ದಾರೆ ಎಂದು ಹೇಳಿದ್ದಾರೆ.

‘ಸರ್ಕಾರ ಮತ್ತು ವೈದ್ಯಕೀಯ ಸಲಹೆಯಂತೆ ರಾಜಕುಮಾರ ಸದ್ಯ ಸ್ಕಾಟ್ಲೆಂಡ್‌ನ ಮನೆಯಲ್ಲಿ ಸ್ವಯಂ ಸಂಪರ್ಕ ತಡೆಯಲ್ಲಿದ್ದಾರೆ.’ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

‘ಅಬೆರ್‌ಡೀನ್‌ಶೈರ್‌ನಲ್ಲಿನ ಎನ್‌ಎಚ್‌ಎಸ್ ನಲ್ಲಿ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ.ಪರೀಕ್ಷೆಗಳು ಎಲ್ಲ ಮಾನದಂಡಗಳನ್ನೂ ಪೂರೈಸಿವೆ. ರಾಜಕುಮಾರನಿಗೆ ಯಾರಿಂದ ವೈರಸ್ ತಗುಲಿದೆ ಎಂಬುದನ್ನು ಪತ್ತೆ ಮಾಡಲು ಕಷ್ಟ ಸಾಧ್ಯವಾಗಿದೆ. ಏಕೆಂದರೆ, ಅವರು ಇತ್ತೀಚಿನ ವಾರಗಳಲ್ಲಿ ಸಾರ್ವಜನಿಕವಾಗಿಯೂ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು.’ ಎಂದು ಹೇಳಿಕೆ ತಿಳಿಸಿದೆ.

ಚೀನಾದ ವುಹಾನ್‌ನಲ್ಲಿ ಮೊದಲು ಪತ್ತೆಯಾದ ಕರೋನವೈರಸ್ ಅಥವಾ ಕೊವಿದ್ -19 ಸೋಂಕು 50 ಕ್ಕೂ ಹೆಚ್ಚು ದೇಶಗಳಿಗೆ ಹರಡಿ, ಸುಮಾರು 4 ಲಕ್ಷಕ್ಕೂ ಹೆಚ್ಚು ಜನರಿಗೆ ತಟ್ಟಿದೆ. ಸೋಂಕಿನಿಂದ ಸುಮಾರು 20,000 ಜನರು ಬಲಿಯಾಗಿದ್ದಾರೆ.

ಯುಎನ್‍ಐ ಎಸ್ಎಲ್ಎಸ್ 1532

More News
ನೈಜ ನಾಯಕತ್ವ ಗುಣ ಪ್ರದರ್ಶಿಸಲು ಅಮೆರಿಕಾ,ಚೈನಾಕ್ಕೆ ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಆಗ್ರಹ

ನೈಜ ನಾಯಕತ್ವ ಗುಣ ಪ್ರದರ್ಶಿಸಲು ಅಮೆರಿಕಾ,ಚೈನಾಕ್ಕೆ ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಆಗ್ರಹ

09 Apr 2020 | 3:28 PM

ಜಿನಿವಾ, ಏ ೯(ಯುಎನ್‌ಐ) ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸಾಮೂಹಿಕ ಪ್ರಯತ್ನ ನಡೆಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಗೆಬ್ರೆಯೇಸಸ್ ಕರೆ ನೀಡಿದ್ದಾರೆ.

 Sharesee more..