Thursday, Aug 22 2019 | Time 14:26 Hrs(IST)
 • ಮಾದಕ ವಸ್ತು ಮಾರಾಟ ಯತ್ನ: ವ್ಯಕ್ತಿ ಬಂಧನ
 • ಕೋಕೇನ್ ಮಾರಾಟ: ನೈಜೀರಿಯಾ ದೇಶದ ನಾಗರಿಕನ ಬಂಧನ
 • ಇಂದು ಸಂಜೆ ದೆಹಲಿಗೆ, ಖಾತೆ ಹಂಚಿಕೆ ಬಗ್ಗೆ ಅಮಿತ್‍ ಷಾರೊಂದಿಗೆ ಚರ್ಚೆ-ಬಿ ಎಸ್ ಯಡಿಯೂರಪ್ಪ
 • ರಾಜೀವ್ ಗಾಂಧಿ ಹತ್ಯೆ ಪ್ರಕರಣ; ತಪ್ಪಿತಸ್ಥೆ ನಳಿನಿ ಪೆರೋಲ್ ಅವಧಿ ಮೂರು ವಾರ ವಿಸ್ತರಣೆ
 • ಅಕ್ರಮ ಹಣ ವರ್ಗಾವಣೆ ಆರೋಪ : ಇಡಿ ಅಧಿಕಾರಿಗಳ ಮುಂದೆ ರಾಜ್ ಠಾಕ್ರೆ
 • ಮಗಳ ಕೊಲೆ ಆರೋಪಿ ಮಹಿಳೆಯ ಸಾಕ್ಷ್ಯಆಧರಿಸಿ ಚಿದಂಬರಂ ಬಂಧನ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‍ ಟೀಕೆ
 • ಗೋವಾಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ
 • ದರೋಡೆಗೆ ಯತ್ನಿಸಿದ ದುಷ್ಕರ್ಮಿಗಳ ಹೆದರಿಸಿ ಓಡಿಸಿದ ದಂಪತಿಗೆ ಪೊಲೀಸ್ ಕಮೀಷನರ್ ಶ್ಲಾಘನೆ
 • ಯುಎಸ್‌ ಓಪನ್‌: ಅಗ್ರ ಸ್ಥಾನ ಅಲಂಕರಿಸಿದ ಜೊಕೊವಿಚ್‌, ಒಸಾಕ
 • ನೇಪಾಳ ಅಧ್ಯಕ್ಷರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಜೈಶಂಕರ್ ಸೌಜನ್ಯದ ಭೇಟಿ
 • ಐಎನ್ಎಕ್ಸ್ ಮಾಧ್ಯಮ ಪ್ರಕರಣ: ಪಿ ಚಿದಂಬರಂ ವಿಚಾರಣೆ, ಇಂದು ಸಿಬಿಐ ನ್ಯಾಯಾಲಯ ಮುಂದೆ ಹಾಜರು
 • ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರುಪಯೋಗ: ಕಾಂಗ್ರೆಸ್ ಆರೋಪ
 • ಬಾರ್ಸಿಲೋನಾದಿಂದ ನೇಯ್ಮಾರ್‌ಗೆ ಎರೆಡನೇ ಬಾರಿ ಅವಕಾಶ ಬಂದಿರಲಿಲ್ಲ: ವರದಿಗಳು
 • ಚೆಕ್ ಬೌನ್ಸ್ ಪ್ರಕರಣ : ಯುಎಇ ನಲ್ಲಿ ತುಷಾರ್ ವೆಲ್ಲಪ್ಪಲ್ಲಿ ಸೆರೆ
 • ಹಾಕಿ ದಂತೆಕೆತೆಗೆ 'ಭಾರತ ರತ್ನ' ನೀಡುವಂತೆ ಪ್ರಧಾನಿಗೆ ಪತ್ರ
International Share

ಮೆಡಿಟೇರಿಯನ್‍ನಲ್ಲಿ ದೋಣಿ ದುರಂತ: 45 ಬಾಂಗ್ಲಾದೇಶಿ ಪ್ರಜೆಗಳು ಇನ್ನೂ ನಾಪತ್ತೆ

ಮೆಡಿಟೇರಿಯನ್‍ನಲ್ಲಿ ದೋಣಿ ದುರಂತ: 45 ಬಾಂಗ್ಲಾದೇಶಿ ಪ್ರಜೆಗಳು ಇನ್ನೂ ನಾಪತ್ತೆ
ಮೆಡಿಟೇರಿಯನ್‍ನಲ್ಲಿ ದೋಣಿ ದುರಂತ: 45 ಬಾಂಗ್ಲಾದೇಶಿ ಪ್ರಜೆಗಳು ಇನ್ನೂ ನಾಪತ್ತೆ

ಢಾಕಾ, ಮೇ 15 (ಯುಎನ್ಐ) ಲಿಬಿಯಾದಿಂದ ಯುರೋಪ್ ತಲುಪಲು ಪ್ರಯತ್ನಿಸುವಾಗ ಮೆಡಿಟರೇನಿಯನ್ ಸಮುದ್ರದಲ್ಲಿ ಶುಕ್ರವಾರ ದೋಣಿ ಮಗುಚಿದ ದುರಂತದಲ್ಲಿ ಇನ್ನೂ 40ರಿಂದ 45 ಬಾಂಗ್ಲಾದೇಶಿ ಪ್ರಜೆಗಳು ಕಾಣೆಯಾಗಿದ್ದಾರೆ ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 50 ಜನರಿದ್ದ ಒಂದು ದೋಣಿ ಹಾಗೂ 70 ಜನರನ್ನು ಹೊತ್ತೊಯ್ಯುತ್ತಿದ್ದ ಮತ್ತೊಂದು ದೋಣಿ ಮೇ 9 ರ ರಾತ್ರಿ ಒಂದೇ ಸಮಯಕ್ಕೆ ಹೊರಟಿವೆ. 50 ಜನರಿದ್ದ ದೋಣಿ ಇಟಲಿಯನ್ನು ಸೇರಿರುವ ಸಾಧ್ಯತೆ ಇದ್ದು, ಎರಡನೇ ದೋಣಿ ಸಮುದ್ರದಲ್ಲಿ ಮುಳುಗಿದೆ ಎಂದು ಲಿಬಿಯಾ ರಾಜಧಾನಿ ಟ್ರಿಪೋಲಿಯಲ್ಲಿರುವ ಬಾಂಗ್ಲಾದೇಶದ ದೂತಾವಾಸ ಕಚೇರಿಯ ಕಾರ್ಮಿಕ ಸಲಹೆಗಾರ ಎಎಸ್ಎಂ ಅಶ್ರಫುಲ್ ಇಸ್ಲಾಂ ತಿಳಿಸಿದ್ದಾರೆ.

ಮುಳುಗಿದ ದೋಣಿಯಿಂದ 14 ಬಾಂಗ್ಲಾ ಪ್ರಜೆಗಳನ್ನು ರಕ್ಷಿಸಲಾಗಿದ್ದು, ಓರ್ವ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತನನ್ನು ಶರಿಯತ್‍ ಪುರದ ನರಿಯಾ ಗ್ರಾಮದ ಉತ್ತಮ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸುಮಾರು 30-35 ಬಾಂಗ್ಲಾ ದೇಶೀಯರು ದೋಣಿ ದುರಂತದಲ್ಲಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಈ ಮುನ್ನ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ತಿಳಿಸಿದ್ದರು. ದುರಂತಕ್ಕೀಡಾದ ದೋಣಿ ಲಿಬಿಯಾದ ಝೌರಾದಿಂದ ಹೊರಟಿತ್ತು ಎನ್ನಲಾಗಿದೆ.

ಲಿಬಿಯಾದ ಬಾಂಗ್ಲಾದೇಶದ ರಾಯಭಾರಿ ಎಸ್.ಕೆ.ಸಿಕಂದರ್ ಅಲಿ ಮತ್ತು ಕಾರ್ಮಿಕ ಸಲಹೆಗಾರರಾದ ಅಶ್ರಸುಲ್ ಇಸ್ಲಾಂ ಅವರು ಪರಿಸ್ಥಿತಿಯನ್ನು ಪರಾಮರ್ಶಿಸಲು ಟುನಿಷಿಯಾದಲ್ಲಿದ್ದಾರೆ.

ಮೆಡಿಟರೇನಿಯನ್ ಸಮುದ್ರದಲ್ಲಿ ಶುಕ್ರವಾರ ಸಂಭವಿಸಿದ ದೋಣಿ ದುರಂತದಲ್ಲಿ 27 ಬಾಂಗ್ಲಾ ದೇಶಿ ಪ್ರಜೆಗಳು ಸಾವನ್ನಪ್ಪಿರುವ ಶಂಕೆ ಇದೆ ಎಂದು ಬಾಂಗ್ಲಾದೇಶ ರೆಡ್ ಕ್ರೆಸೆಂಟ್ ಸೊಸೈಟಿ ದೃಢಪಡಿಸಿದೆ.

ಕಳೆದ ಜನವರಿಯಿಂದ ನಡೆದ ದೋಣಿ ದುರಂತಗಳಲ್ಲಿ ಶುಕ್ರವಾರ ಸಂಭವಿಸಿರುವ ದುರಂತ ಘೋರವೆನಿಸಿದೆ ಎಂದು ಅಂತಾರಾಷ್ಟ್ರೀಯ ವಲಸೆ ಸಂಘಟನೆ ತಿಳಿಸಿದೆ.

ಪ್ರತಿ ವರ್ಷ ಸಾವಿರಾರು ಬಾಂಗ್ಲಾದೇಶಿ ವಲಸಿಗರು ಯೂರೋಪ್‍ನಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವ ಕನಸಿನೊಂದಿಗೆ ಅಪಾಯಕಾರಿ ಮೆಡಿಟೇರಿಯನ್‍ ಸಮುದ್ರ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಪ್ರಯತ್ನಗಳಲ್ಲಿ ಅನೇಕರು ತಲುಪುವ ಮೊದಲೇ ಸಮುದ್ರದಲ್ಲೇ ಸಾವನ್ನಪ್ಪುತ್ತಾರೆ.

ಯುಎನ್‍ಐ ಎಸ್‍ಎಲ್‍ಎಸ್‍ ಕೆವಿಆರ್ 2029

More News
ಜಮ್ಮು ಕಾಶ್ಮೀರ : ಭಾರತದ ನಿಲುವಿಗೆ ಬಾಂಗ್ಲಾದೇಶ ಬೆಂಬಲ

ಜಮ್ಮು ಕಾಶ್ಮೀರ : ಭಾರತದ ನಿಲುವಿಗೆ ಬಾಂಗ್ಲಾದೇಶ ಬೆಂಬಲ

21 Aug 2019 | 4:35 PM

ಢಾಕಾ, ಆ 21 (ಯುಎನ್ಐ) ಜಮ್ಮು ಕಾಶ್ಮೀರದ ವಿಷಯದಲ್ಲಿ ಭಾರತ ತಳೆದಿರುವ ನಿಲುವಿಗೆ ಬಾಂಗ್ಲಾದೇಶ ಬುಧವಾರ ಬೆಂಬಲ ಸೂಚಿಸಿದೆ

 Sharesee more..
ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿತಿಕೆ ವಹಿಸಲು ಸಿದ್ಧ: ಟ್ರಂಪ್‍

ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿತಿಕೆ ವಹಿಸಲು ಸಿದ್ಧ: ಟ್ರಂಪ್‍

21 Aug 2019 | 3:06 PM

ವಾಷಿಂಗ್ಟನ್‍, ಆ 21 (ಯುಎನ್‍ಐ) ಏಷ್ಯಾದ ನೆರೆಹೊರೆ ರಾಷ್ಟ್ರಗಳ ನಡುವೆ "ಜಿಟಿಲ ಸಮಸ್ಯೆಗಳಿವೆ".

 Sharesee more..
ಭಾರತ-ನೇಪಾಳ ಜಂಟಿ ಆಯೋಗದ ಸಭೆ: ಡಾ ಎಸ್ ಜೈಶಂಕರ್ ಭಾಗಿ

ಭಾರತ-ನೇಪಾಳ ಜಂಟಿ ಆಯೋಗದ ಸಭೆ: ಡಾ ಎಸ್ ಜೈಶಂಕರ್ ಭಾಗಿ

21 Aug 2019 | 2:39 PM

ಕಠ್ಮಂಡು, ಆ 21 (ಯುಎನ್ಐ) ಭಾರತ-ನೇಪಾಳದ ಐದನೇ ಜಂಟಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಬುಧವಾರ ಕಠ್ಮಂಡು ತಲುಪಿದ್ದು, ನೇಪಾಳದ ವಿದೇಶಾಂಗ ಕಾರ್ಯದರ್ಶಿ ಶಂಕರ್ ದಾಸ್ ಬೈರಾಗಿ ಮತ್ತು ನೇಪಾಳದಲ್ಲಿನ ಭಾರತದ ರಾಯಭಾರಿ ನೀಲಾಂಬರ್ ಆಚಾರ್ಯ ಬರಮಾಡಿಕೊಂಡರು.

 Sharesee more..