Tuesday, Jun 25 2019 | Time 13:41 Hrs(IST)
 • ಜಪಾನ್ ನೊಂದಿಗಿನ ಭದ್ರತಾ ಒಪ್ಪಂದದಿಂದ ಹಿಂದೆ ಸರಿಯಲಿದೆಯೇ ಅಮೆರಿಕ?
 • ಕೃಷಿಗಿಂತ ಹೈನುಗಾರಿಕೆಯಲ್ಲಿ ಹೆಚ್ಚು ಸಂಪಾದನೆ; ಕೇಂದ್ರ ಸರ್ಕಾರ
 • ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮುದಾಯದಿಂದ ಬೃಹತ್ ಪ್ರತಿಭಟನೆ
 • ಭಾರತದ ವಿರುದ್ಧ ಪಾಕ್ ಸೋತ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿತ್ತು !
 • ಕಾರ್ಮಿಕ ಮುಖಂಡ, ಮಾಜಿ ಕೌನ್ಸಿಲರ್‌ ಸತ್ಯನಾರಾಯಣರಾವ್ ನಿಧನ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಭದ್ರತಾ ಮಂಡಳಿ ಒತ್ತಾಯ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
 • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
 • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
 • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
 • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
 • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
 • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
 • ಶ್ರೀನಗರದ ಹಿರಿಯ ಪತ್ರಕರ್ತ ಬಂಧನ
 • ಕಂದಕಕ್ಕೆ ಉರುಳಿದ ಬಸ್: ಐವರು ಸಾವು, 40 ಮಂದಿಗೆ ಗಾಯ
International Share

ಮೋದಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ಮೋದಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
ಮೋದಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ನವದೆಹಲಿ, ಮೆ 26 (ಯುಎನ್ಐ) ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ದಕ್ಷಿಣ ಏಷಿಯಾ ಭಾಗದ ಶಾಂತಿ, ಸೌಹಾರ್ದತೆ ಹಾಗೂ ಸಮೃದ್ಧಿಯ ಧ‍್ಯೇಯವನ್ನು ಪುನರುಚ್ಚರಿಸಿದ್ದು, ಜನರ ಬದುಕಿನ ಸುಧಾರಣೆಗಾಗಿ ಒಟ್ಟಿಗೆ ಕೆಲಸ ಮಾಡುವ ಆಶಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಭಾನುವಾರ ಟ್ವೀಟ್ ಮಾಡಿರುವ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು, ಇಂದು ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತದ ಪ್ರಧಾನಿ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಉಭಯ ನಾಯಕರು ಜನರ ಸುಧಾರಣೆಗೆ ಒಟ್ಟಿಗೆ ಕೈಜೋಡಿಸಿ ಕೆಲಸ ಮಾಡುವ ಆಶಯ ವ್ಯಕ್ತಪಡಿಸಿದ್ದಾರೆ ಎಂದರು.

ದಕ್ಷಿಣ ಏಷಿಯಾದ ಶಾಂತಿ, ಪ್ರಗತಿ ಹಾಗೂ ಸಮೃದ್ಧಿಯ ಅಗತ್ಯವನ್ನು ಪುನರುಚ್ಚರಿಸಿರುವ ಇಮ್ರಾನ್ ಖಾನ್, ಈ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರ ಸಹಕಾರ ನಿರೀಕ್ಷಿಸುತ್ತಿದ್ದಾರೆ ಎಂದರು.

ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಟ್ವೀಟ್ ಮಾಡಿದ್ದ ಇಮ್ರಾನ್ ಖಾನ್, ಬಿಜೆಪಿ ಹಾಗೂ ಮೋದಿಗೆ ಅಭಿನಂದನೆ ಸಲ್ಲಿಸಿದ್ದರು.

ಯುಎನ್ಐ ಎಸ್ಎಚ್ ಎಎಚ್ 1727

More News

ಶಾಲೆಯ ಗೋಡೆ ಕುಸಿದು ಆರು ಮಕ್ಕಳ ಸಾವು

24 Jun 2019 | 7:19 PM

 Sharesee more..
ಉತ್ತರ ಇರಾಕ್ ನಲ್ಲಿ ಸೇನಾ ಕಾರ್ಯಾಚರಣೆ: 14 ಐಎಸ್ ಉಗ್ರರ ಹತ್ಯೆ

ಉತ್ತರ ಇರಾಕ್ ನಲ್ಲಿ ಸೇನಾ ಕಾರ್ಯಾಚರಣೆ: 14 ಐಎಸ್ ಉಗ್ರರ ಹತ್ಯೆ

24 Jun 2019 | 4:33 PM

ಬಾಗ್ದಾದ್, ಜೂನ್ 24 (ಕ್ಸಿನ್ಹುವಾ) ಇರಾಕ್ ಉತ್ತರ ಪ್ರಾಂತ್ಯದ ಕಿರ್ಕುಕ್ ನಲ್ಲಿ ಅಮೆರಿಕ ಹಾಗೂ ಇರಾಕಿ ಭಯೋತ್ಪಾದನಾ ನಿಗ್ರಹದಳ ಜಂಟಿಯಾಗಿ ಸೋಮವಾರ ನಡೆಸಿದ ಸೇನಾ ಕಾರ್ಯಾಚರಣೆಯಲ್ಲಿ 14 ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ತಿಳಿಸಿದೆ.

 Sharesee more..