Sunday, Dec 15 2019 | Time 18:07 Hrs(IST)
 • ಪೌರತ್ವ ತಿದ್ದುಪಡಿ ಮಸೂದೆ ಜಾರಿಯಿಂದ ದೇಶ ರಕ್ಷಣೆಯಾಗಿದೆ; ಪ್ರಧಾನಿ
 • ಪಂತ್-ಅಯ್ಯರ್ ಅರ್ಧಶತಕ: ವೆಸ್ಟ್‌ ಇಂಡೀಸ್‌ಗೆ 289 ರನ್ ಗುರಿ
 • ಸೈಫ್ ಪುತ್ರಿಯಾಗಿ ಅನನ್ಯ !
 • ದಬಾಂಗ್ -3 ಕುರಿತು ಸಲ್ಮಾನ್ ಮಾತು
 • ಎಚ್ ಡಿ ರೇವಣ್ಣ ಮಂಡ್ಯ ಉಸಾಬರಿಗೆ ಬರುವುದು ಬೇಡ: ನಾರಾಯಣಗೌಡ
 • ಧೋನಿ ನನ್ನ ನೆಚ್ಚಿನ ಕ್ರಿಕೆಟರ್; ಸಲ್ಮಾನ್ ಖಾನ್
 • ಬ್ಯಾಡ್ಮಿಂಟನ್ : ಲಕ್ಷ್ಯ ಸೇನ್‌ಗೆ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜ್ ಮುಕುಟ
 • ಭಾರತಕ್ಕೆೆ ಪಂತ್, ಅಯ್ಯರ್ ಅರ್ಧಶತಕಗಳ ಆಸರೆ
 • ರಾಹುಲ್ ಗಾಂಧಿ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವೆ; ರಂಜಿತ್ ಸಾರ್ವಕರ್
 • ಅಸ್ಸಾಂ ಪರಿಸ್ಥಿತಿ ಕುರಿತು ಮೋದಿ, ಅಮಿತ್‍ ಷಾಗೆ ಮಾಹಿತಿ ನೀಡಲಿರುವ ಸೋನೋವಾಲ್‍
 • ವೃತ್ತಿ ಜೀವನದ 11ನೇ ಬಿಡಬ್ಲ್ಯುಎಫ್ ಫೈನಲ್ಸ್‌ ಗೆದ್ದ ಕೆಂಟೊ ಮೊಮೊಟಾ
 • ಕಾಂಗ್ರೆಸ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದೆ; ಮಾಯಾವತಿ ಲೇವಡಿ
 • ಭಾರತೀಯ ಮೀನುಗಾರರ ದೋಣಿಗಳ ಮೇಲೆ ಶ್ರೀಲಂಕಾ ನೌಕಾಪಡೆಯಿಂದ ದಾಳಿ
 • ವಿಶ್ವ ಸುಂದರಿ ಪಟ್ಟ, ಭಾರತದ ಸುಮನ್ ರಾವ್ ಗೆ ದ್ವಿತೀಯ ಸ್ಥಾನ
 • ಫಿಲಿಪೈನ್ಸ್‌ನಲ್ಲಿ 6 8 ತೀವ್ರತೆಯ ಭೂಕಂಪನ
Karnataka Share

ಅಯೋಧ್ಯ ತೀರ್ಪು: ರಾಜ್ಯದಲ್ಲಿ ಕಟ್ಟೆಚ್ಚರ - ಬಸವರಾಜ ಬೊಮ್ಮಾಯಿ

ಅಯೋಧ್ಯ ತೀರ್ಪು: ರಾಜ್ಯದಲ್ಲಿ ಕಟ್ಟೆಚ್ಚರ - ಬಸವರಾಜ ಬೊಮ್ಮಾಯಿ
ಅಯೋಧ್ಯ ತೀರ್ಪು: ರಾಜ್ಯದಲ್ಲಿ ಕಟ್ಟೆಚ್ಚರ - ಬಸವರಾಜ ಬೊಮ್ಮಾಯಿ

ಬೆಂಗಳೂರು, ನ 8 [ಯಎನ್ಐ] ಅಯೋಧ್ಯೆಯ ರಾಮಜನ್ಮಭೂಮಿ ಬಾಬ್ರಿ ಮಸೀದಿ ವಿವಾದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಅಹಿತಕರ ಘಟನೆಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ನಿಂದ ತೀರ್ಪು ಹೊರಬಂದ ಬಳಿಕ ರಾಜ್ಯದ ಯಾವುದೇ ಭಾಗದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗದಂತೆ, ಶಾಂತಿ-ಸೌಹಾರ್ದತೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ರಾಜಭವನದಲ್ಲಿ ಪೊಲೀಸ್ ಪದಕ ಪ್ರದಾನ ಸಮಾರಂಭ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯಾಕಟ್ಟಿನ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಿದ್ದು, ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ. ಅನುಮಾಸ್ಪದ ವ್ಯಕ್ತಿಗಳು ವಸ್ತುಗಳ ಮೇಲೆ ಕಣ್ಗಾವಲು ಹಾಕಲಾಗಿದೆ. ವದಂತಿಗಳನ್ನು ಹಬ್ಬಿಸದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಅಯೋಧ್ಯೆ ತೀರ್ಪು ಏನೇ ಬರಲಿ, ಶಾಂತಿ-ಸೌಹಾರ್ದ ಕಾಪಾಡುವ ಸಂಬಂಧ ಈಗಾಗಲೇ ಶಾಂತಿ ಪಾಲನಾ ಸಭೆಗಳನ್ನು ನಡೆಸಲಾಗಿದೆ. ಪೊಲೀಸ್ ಅಧಿಕಾರಿಗಳು ಎಲ್ಲಾ ಕಡೆಗಳಲ್ಲಿ ನಿವಾ ವಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೇಲೂ ಗಮನಹರಿಸಲಾಗಿದ್ದು, ಶಾಂತಿ ಕಾಪಾಡಲು ಎಲ್ಲ ರೀತಿಯ ಪಹರೆ ಹಾಕಲಾಗಿದೆ ಎಂದರು.

ಅಯೋಧ್ಯೆ ತೀರ್ಪು ಹೊರ ಬಂದ ಬಳಿಕ ರಾಜ್ಯದಲ್ಲಿ ಶಾಂತಿ ಭಂಗ ಉಂಟಾಗುವಂತಹ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ ಎಂಬ ವಿಶ್ವಾಸವಿದೆ. ಸಮಾಜಘಾತುಕ ವ್ಯಕ್ತಿಗಳ ಮೇಲೂ ನಿಗಾ ಇಟ್ಟಿದ್ದೇವೆ. ಶಾಂತಿ-ಸೌಹಾರ್ದತೆ ಕಾಪಾಡಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದಾಗಿ ಅವರು ಹೇಳಿದರು.

ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಲಾಗಿದೆ. ಕೇಂದ್ರದಿಂದ ಬಂದಿರುವ ಸಲಹೆ-ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸಲಾಗುತ್ತಿದೆ. ಒಟ್ಟಾರೆ ಶಾಂತಿ-ಸೌಹಾರ್ದತೆ ಕಾಪಾಡಲು ಏನು ಬೇಕೋ ಅದನ್ನೆಲ್ಲಾ ಮಾಡಲಾಗಿದೆ ಎಂದರು.

ಏತನ್ಮಧ್ಯೆ ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಅವರು ನಗರದ ಎಲ್ಲಾ ಹೆಚ್ಚುವರಿ ಪೊಲೀಸ್ ಆಯುಕ್ತರುಗಳು ಜಂಟಿ ಆಯುಕ್ತರು ೮ ವಿಭಾಗಗಳ ಡಿಸಿಪಿಗಳ ಸಭೆ ನಡೆಸಿ ರಾಮಜನ್ಮಭೂಮಿ ಬಾಬ್ರಿ ಮಸೀದಿ ವಿವಾದದ ತೀರ್ಪು ಈದ್ ಮಿಲಾದ್ ಹಿನ್ನಲೆಯಲ್ಲಿ ಕೈಗೊಳ್ಳಬೇಕಾದ ಭದ್ರತೆ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಿದರು.

ಸಿಲಿಕಾನ್ ನಗರಿ ಬೆಂಗಳೂರು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಇಡೀ ಜಗತ್ತಿನ ಗಣ್ಯಾತಿಗಣ್ಯರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಯಾವುದೇ ರೀತಿಯಲ್ಲೂ ಶಾಂತಿ ಕದಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಯುಎನ್ಐ ವಿಎನ್ ೧೭೦೯

More News
ಕ್ಯಾಂಪಸ್ ಫ್ರಂಟ್ ವತಿಯಿಂದ 'ದಸ್ತೂರ್ ಬಚಾವೋ' ಪ್ರತಿಭಟನೆ

ಕ್ಯಾಂಪಸ್ ಫ್ರಂಟ್ ವತಿಯಿಂದ 'ದಸ್ತೂರ್ ಬಚಾವೋ' ಪ್ರತಿಭಟನೆ

15 Dec 2019 | 2:06 PM

ಬೆಂಗಳೂರು, ಡಿ.15 (ಯುಎನ್ಐ) ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಎನ್.ಆರ್.ಸಿ ಮತ್ತು ಸಿ.ಎ.ಬಿ ಕಾಯ್ದೆ ಹಾಗೂ ಬಾಬರಿ ಮಸೀದಿ ತೀರ್ಪು ಖಂಡಿಸಿ ದಸ್ತೂರ್ ಬಚಾವೋ ಬೃಹತ್ ಪ್ರತಿಭಟನಾ ಸಭೆಯು ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ನಡೆಯಿತು.

 Sharesee more..
ಉಪ ಚುನಾವಣೆ ಗೆಲುವಿನ ಬಳಿಕ ಯಡಿಯೂರಪ್ಪ ಅವರಿಂದ ಶತ್ರು ಸಂಹಾರಕ್ಕಾಗಿ ಸುದರ್ಶನ ನರಸಿಂಹ ಹೋಮ

ಉಪ ಚುನಾವಣೆ ಗೆಲುವಿನ ಬಳಿಕ ಯಡಿಯೂರಪ್ಪ ಅವರಿಂದ ಶತ್ರು ಸಂಹಾರಕ್ಕಾಗಿ ಸುದರ್ಶನ ನರಸಿಂಹ ಹೋಮ

15 Dec 2019 | 1:54 PM

ಬೆಂಗಳೂರು,ಡಿ 15(ಯುಎನ್ಐ)ಉಪ ಚುನಾವಣೆ ಬಳಿಕ ಪಕ್ಷ ಹಾಗೂ ಸರ್ಕಾರದ ಮೇಲೆ ಹಿಡಿತ ಸಾಧಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶತ್ರುಗಳ ಆತಂಕವೂ ಹೆಚ್ಚಾಗಿದೆ.

 Sharesee more..
ಸಿದ್ದರಾಮಯ್ಯ ಆಸ್ಪತ್ರೆಯಿಂದ ಬಿಡುಗಡೆ: ಎಲ್ಲಕ್ಕಿಂತ ಮಾನವೀಯತೆ ದೊಡ್ಡದು ಎಂದ ಮಾಜಿ ಮುಖ್ಯಮಂತ್ರಿ

ಸಿದ್ದರಾಮಯ್ಯ ಆಸ್ಪತ್ರೆಯಿಂದ ಬಿಡುಗಡೆ: ಎಲ್ಲಕ್ಕಿಂತ ಮಾನವೀಯತೆ ದೊಡ್ಡದು ಎಂದ ಮಾಜಿ ಮುಖ್ಯಮಂತ್ರಿ

15 Dec 2019 | 1:47 PM

ಬೆಂಗಳೂರು, ಡಿ.15 (ಯುಎನ್ಐ) ಇಲ್ಲಿನ ಮಲ್ಲೇಶ್ವರದ ವೆಗಾಸ್ ಆಸ್ಪತ್ರೆಯಲ್ಲಿ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಕಳೆದ ಐದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬಿಡುಗಡೆಯಾಗಿದ್ದಾರೆ.

 Sharesee more..