Wednesday, Mar 3 2021 | Time 19:50 Hrs(IST)
 • ಆರ್ಥಿಕ ಸಂಕಷ್ಟದ ನಡುವೆ ಬಜೆಟ್ ಅಧಿವೇಶನ: ಬೆಲೆ ಏರಿಕೆ, ಬಿಜೆಪಿ ಆಂತರಿಕ ಕಚ್ಚಾಟ, ಮೀಸಲಾತಿ ವಿಚಾರಗಳಲ್ಲಿ ಸರ್ಕಾರವನ್ನು ತರಾಟೆಗೆ ತೆರೆದುಕೊಳ್ಳಲು ವಿಪಕ್ಷ ಸಜ್ಜು
 • ಮೇಲ್ಮನೆಯಲ್ಲಿ ಸುಗಮ ಕಲಾಪಕ್ಕೆ ಸಭಾಪತಿ ಹೊರಟ್ಟಿ ಪೂರ್ವಭಾವಿ ಸಭೆ:ಸದಸ್ಯರಿಗೆ ಸೂಚನೆ
 • ವನ್ಯಜೀವಿಗಳನ್ನು ಕಾಪಾಡಿ, ಸಂರಕ್ಷಿಸುವಂತೆ ಜನರಿಗೆ ಉಪರಾಷ್ಟ್ರಪತಿ, ಪ್ರಧಾನಿ ಕರೆ
 • ‘ಸಂಘ’ ಅರ್ಥಮಾಡಿಕೊಳ್ಳಲು ರಾಹುಲ್ ಗಾಂಧಿಗೆ ಇನ್ನೂ ಬಹಳಷ್ಟು ಸಮಯಬೇಕಿದೆ; ಜಾವಡೇಕರ್
 • 'ಚಿನ್ನಮ್ಮ' ಶಶಿಕಲಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಅಣ್ಣಾ ಡಿಎಂಕೆ ಮೇಲೆ ಬಿಜೆಪಿ ನಾಯಕರ ಒತ್ತಡ ?
 • ಆಪಾದನೆ ಬಂದ ಮಾತ್ರಕ್ಕೆ ಅಪರಾಧಿಯಲ್ಲ:ಬಿಸಿಪಾ
 • ನವೀಕರಿಸಬಹುದಾದ ಇಂಧನ ವಲಯಲ್ಲಿ ಭಾರತ, ಫ್ರಾನ್ಸ್ ನಡುವೆ ಸಹಕಾರ ಕುರಿತ ಒಪ್ಪಂದಕ್ಕೆ ಸಚಿವ ಸಂಪುಟ ಒಪ್ಪಿಗೆ
 • ರಾಸಲೀಲೆ ಪ್ರಕರಣ:ರಮೇಶ್ ಜಾರಕಿಹೊಳಿ ರಾಜೀನಾಮೆ
 • ಮದರಸಾಗಳಲ್ಲಿ ಭಗವದ್ಗೀತೆ, ರಾಮಾಯಣ !
 • ಹತ್ರಾಸ್ ಪ್ರಕರಣ: ಮುಖ್ಯ ಆರೋಪಿ ತಲೆಗೆ ಒಂದು ಲಕ್ಷ ರೂ ಬಹುಮಾನ ಘೋಷಣೆ
 • ಕೋವಿಡ್ ಲಸಿಕೆ ಹಾಕಿಸಿಕೊಂಡ: ರಾಷ್ಟ್ರಪತಿ ರಾಮನಾಥ್ ಕೋವಿಂದ್
 • ಲಡಾಖ್ಗೆ ಕಾಶ್ಮೀರ ಸಂಪರ್ಕಿಸುವ ಹೆದ್ದಾರಿ ಬಂದ್: ವೈಮಾನಿಕವಾಗಿ 500 ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಳಾಂತರ
 • ನಟ ತಾಪ್ಸಿ ಪನ್ನು , ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಆಸ್ತಿಗಳ ಮೇಲೆ ಐಟಿ ದಾಳಿ
 • ದೇಶಾದ್ಯಂತ ಇದುವರೆಗೆ 1 56 ಕೋಟಿ ಜನರಿಗೆ ಕೋವಿಡ್ ಲಸಿಕೆ
 • ಆ ದೇಶದಲ್ಲಿ ಒಂದೇ ದಿನ 1,641 ಮಂದಿ ಸಾವು
Karnataka Share

ಕೊರೋನ ಕಡಿವಾಣ: ವಿವಾಹ ಸಮಾರಂಭಗಳಿಗೆ ಮಾರ್ಷಲ್ ಕಾವಲು, ದಂಡ ಬೀಳುತ್ತೆ ಹುಷಾರ್…!!

ಕೊರೋನ ಕಡಿವಾಣ: ವಿವಾಹ ಸಮಾರಂಭಗಳಿಗೆ ಮಾರ್ಷಲ್ ಕಾವಲು, ದಂಡ ಬೀಳುತ್ತೆ ಹುಷಾರ್…!!
ಕೊರೋನ ಕಡಿವಾಣ: ವಿವಾಹ ಸಮಾರಂಭಗಳಿಗೆ ಮಾರ್ಷಲ್ ಕಾವಲು, ದಂಡ ಬೀಳುತ್ತೆ ಹುಷಾರ್…!!

ಬೆಂಗಳೂರು,ಫೆ 22 (ಯುಎನ್ಐ) ಕೋವಿಡ್ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಆರೋಗ್ಯ ಇಲಾಖೆ ಇನ್ನುಮುಂದೆ ವಿವಾಹ ಸಮಾರಂಭಗಳಿಗೆ ಮಾರ್ಷಲ್ ಗಳನ್ನು ನಿಗಾವಹಿಸಲು ನೇಮಕ ಮಾಡಲಿದ್ದು ನಿಯಮ ಮೀರಿದರೆ ಸ್ಥಳದಲ್ಲೇ ದಂಡ ಬೀಳಲಿದೆ , ಈ ಸಂಬಂಧ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.

ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಮದುವೆ ಸಮಾರಂಭಗಳಿಗೆ ಹೆಚ್ಚಿನ ಜನಸಂಖ್ಯೆ ಸೇರುತ್ತಿದ್ದು, ಸಾಮಾಜಿಕ ಅಂತರ ಪರಿಪಾಲಿಸದೇ ಇರುವುದು, ಮಾಸ್ಕ್ ಧರಿಸದೇ ಇರುವುದು ಹೆಚ್ಚಾಗುತ್ತಿದೆ.ಇದರಿಂದ ಕೋವಿಡ್ ಸೋಂಕಿತರ ಪ್ರಮಾಣವೂ ಸಹ ಹೆಚ್ಚುತ್ತಿದೆ. ಹೀಗಾಗಿ 500 ಜನಕ್ಕಿಂತ ಹೆಚ್ಚಿನ ಜನರನ್ನು ಮದುವೆ ಸಮಾರಂಭಗಳಿಗೆ ಸೇರದಂತೆ ಆರೋಗ್ಯ ಇಲಾಖೆ ನಿರ್ಬಂಧ ಹೇರಿದ್ದು, ಮಾಸ್ಕ್ ಪತ್ತೆ, ಸಾಮಾಜಿಕ ಅಂತರ ವೀಕ್ಷಣೆಗೆ ಪ್ರತಿ ವಿವಾಹ ಕಾರ್ಯಕ್ರಮಕ್ಕೆ ಓರ್ವ ಮಾರ್ಷಲ್ ಗಳನ್ನು ನೇಮಕ ಮಾಡಲಾಗುವುದು

ಮಾಸ್ಕ್ ಧರಿಸದೇ ಇದ್ದರೆ ಸ್ಥಳದಲ್ಲೇ ದಂಡ ವಸೂಲಿ ಮಾಡಲಾಗುತ್ತದೆ.ಮದುವೆ ಆಯೋಜಕರ ಮೇಲೂ ದಂಡ ಬೀಳಲಿದೆ.ಅಡುಗೆ ಮಾಡುವವರು ಬಾಣಸಿಗರ ಮೇಲೂ ಈ ಮಾರ್ಷಲ್ ಗಳು ನಿಗಾ ವಹಿಸಲಿದ್ದು, ಇವರೆಲ್ಲರೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ಸುತ್ತೋಲೆಯಲ್ಲಿ ಹೇಳಲಾಗಿದೆ.

ಈ ನಡುವೆ ಸಚಿವ ಸುಧಾಕರ್ ವಿಧಾನಸೌಧದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯ ಕೋವಿಡ್ ಲಸಿಕೆಯಲ್ಲಿ ಇದುವರೆಗೂ ಶೇ 52 ರಷ್ಟು ಸಾಧನೆ ಮಾಡಿದ್ದು,ಇದೇ 28 ರೊಳಗೆ ಶೇ.90 ರಷ್ಟು ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದರು.

ಬೆಂಗಳೂರು ನಗರ ಜಿಲ್ಲೆ ಲಸಿಕೆಯಲ್ಲಿ ಪ್ರಗತಿಯಲ್ಲಿ ಹಿಂದುಳಿದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಆರೋಗ್ಯ ಸಿಬ್ಬಂದಿಗೆ ಲಸಿಕೆ ಹಾಕುವುದರಲ್ಲಿ ಜಿಲ್ಲಾವಾರು ಮಾಹಿತಿ ನೀಡಲಾಗಿದೆ.ಇಲಾಖೆ ನಿಗದಿಪಡಿಸಿದ ಗುರಿ ತಲುಪಲೇಬೇಕು.ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಮದುವೆ, ಜಾತ್ರೆ, ಸಮಾವೇಶಗಳು ನಡೆಯುತ್ತಿವೆ.ತಾಂತ್ರಿಕ ಸಲಹಾ ಸಮಿತಿಗೆ ವಿರುದ್ಧವಾದ ವರ್ತನೆ ಇದಾಗಿದೆ. ರಾಜ್ಯದಲ್ಲಿ ಸೋಂಕು ಹೆಚ್ಚಾದರೆ ಕಠಿಣ ಕ್ರಮ ಅನಿವಾರ್ಯವಾಗಲಿದ್ದು, ಇದಕ್ಕೆ ಸಾರ್ವಜನಿಕರೇ ಹೊಣೆಗಾರರಾಗುತ್ತಾರೆ ಎಂದೂ ಸಚಿವರು ಎಚ್ಚರಿಸಿದರು.

ಯುಎನ್ಐ ಕೆಎಸ್ಆರ್ ಯುಎಲ್ 1403

More News
ಮೇಲ್ಮನೆಯಲ್ಲಿ ಸುಗಮ ಕಲಾಪಕ್ಕೆ ಸಭಾಪತಿ ಹೊರಟ್ಟಿ ಪೂರ್ವಭಾವಿ ಸಭೆ:ಸದಸ್ಯರಿಗೆ ಸೂಚನೆ

ಮೇಲ್ಮನೆಯಲ್ಲಿ ಸುಗಮ ಕಲಾಪಕ್ಕೆ ಸಭಾಪತಿ ಹೊರಟ್ಟಿ ಪೂರ್ವಭಾವಿ ಸಭೆ:ಸದಸ್ಯರಿಗೆ ಸೂಚನೆ

03 Mar 2021 | 5:50 PM

ಬೆಂಗಳೂರು, ಫೆ.3(ಯುಎನ್ಐ) ನಾಳೆಯಿಂದ ಆರಂಭ ಆಗಲಿರುವ ವಿಧಾನಮಂಡಲ ಅಧಿವೇಶನ ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ವಿರೋಧ ಪಕ್ಷಗಳ ಮುಖಂಡರು, ಸಭಾನಾಯಕರು, ಮುಖ್ಯಸಚೇತಕರ ಜೊತೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸದನದಲ್ಲಿ ಸದಸ್ಯರ ನಡವಳಿಕೆ, ವರ್ತನೆ ಹೇಗಿರಬೇಕು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

 Sharesee more..

ಎಲ್ಲರೂ ವನ್ಯಜೀವಿಗಳನ್ನು ಉಳಿಸೋಣ: ನಟ‌ ದರ್ಶನ್

03 Mar 2021 | 5:16 PM

 Sharesee more..