Sunday, Apr 5 2020 | Time 16:08 Hrs(IST)
 • ಟೋಕಿಯೊ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್ ನಿಂದ ಥಾಯ್ಲೆಂಡ್, ಮಲೇಷ್ಯಾಅಮಾನತು
 • ಮಾಜಿ ರಾಷ್ಟ್ರಪತಿಗಳು, ಮಾಜಿ ಪ್ರಧಾನಿಗಳ ಜತೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ
 • ಪಿಎಂ ಕೇರ್ಸ್ ನಿಧಿಗೆ ೧೦೦ ಕೋಟಿ, ಕರ್ನಾಟಕಕ್ಕೆ ೫ ಕೋಟಿ ನೆರವು ಪ್ರಕಟಿಸಿದ ಡಿಮಾರ್ಟ್
 • ಜಮ್ಮು-ಕಾಶ್ಮೀರದ ಕೆರನ್ ಸೆಕ್ಟರ್‍ ನಲ್ಲಿ ಒಳನುಸುಳುವಿಕೆ ಯತ್ನ ವಿಫಲ: 5 ಉಗ್ರರು ಹತ, ಮೂವರು ಯೋಧರು ಹುತಾತ್ಮ
 • ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಿರುವ ಸಿ ಆರ್ ಪಿ ಎಫ್ ಮುಖ್ಯಸ್ಥ ಎ ಪಿ ಮಹೇಶ್ವರಿ
 • ರೈತರ ಸ್ಥಿತಿಗತಿ ಅವಲೋಕನ: ಏ 6 ರಿಂದ ಸಚಿವ ಬಿ ಸಿ ಪಾಟೀಲ್ ಜಿಲ್ಲಾ ಪ್ರವಾಸ
 • ಕೋವಿಡ್ ಪ್ರಕರಣ ಹೆಚ್ಚಳ: ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಮುಖ್ಯಮಂತ್ರಿ ಮನವಿ
 • ಆಸ್ಪತ್ರೆಗೆ ಹೋಗುತ್ತಿದ್ದೆ, ಪಾರ್ಟಿಗಲ್ಲ: ನಟಿ ಶರ್ಮಿಳಾ ಮಾಂಡ್ರೆ ಸ್ಪಷ್ಟನೆ
 • ಪಾಕಿಸ್ತಾನದಲ್ಲಿ ಏಪ್ರಿಲ್ ಅಂತ್ಯಕ್ಕೆ ಕೊರೊನಾ ಸೋಂಕಿತರ ಸಂಖ್ಯೆ 50 ಸಾವಿರಕ್ಕೆ ಏರಿಕೆ
 • ಲಾಕ್‌ಡೌನ್ ಉಲ್ಲಂಘಿಸಿ ಕಾರಿನಲ್ಲಿ ಆಗಮಿಸಿ, ಪೊಲೀಸರಿಗೆ ಬೆದರಿಕೆ ಹಾಕಿದ ಇಬ್ಬರ ಬಂಧನ
 • ರಕ್ಕಸ ಕೊರೊನಾ; ಅಮೆರಿಕಾ, ಸೌದಿಯಲ್ಲಿ ಇಬ್ಬರು ಭಾರತೀಯರ ಸಾವು
 • ರಾಜ್ಯದ ಜನಹಿತವೇ ಪರಮೋಚ್ಚ: ಕರ್ನಾಟಕ-ಕೇರಳ ಗಡಿ ಮುಚ್ಚಿರುವ ಹಿಂದೆ ಪೂರ್ವಗ್ರಹಗಳಿಲ್ಲ: ಎಚ್‌ಡಿಡಿಗೆ ಪತ್ರ ಬರೆದ ಮುಖ್ಯಮಂತ್ರಿ
 • ರೋಗ ಪತ್ತೆ ಕಿಟ್‌ಗಳ ರಫ್ತಿನ ಮೇಲೆ ಸಂಪೂರ್ಣ ನಿಷೇಧ
 • ಕೊರೊನಾ - ಸಾವಿನ ಸಂಖ್ಯೆ ಹೆಚ್ಚಳ : ಟ್ರಂಪ್
 • ತಮಿಳುನಾಡಿನಲ್ಲಿ ಕರೋನವೈರಸ್‍ಗೆ ಇನ್ನೂ ಇಬ್ಬರು ಬಲಿ: ಸಾವಿನ ಸಂಖ್ಯೆ 5ಕ್ಕೆ ಏರಿಕೆ
Karnataka Share

ಕೊರೋನಾ ವೈರಸ್ : ಬೆಂಗಳೂರು ಉಸ್ತುವಾರಿ ಡಾ. ಸುಧಾಕರ್ ಗೆ, ಇಡೀ ರಾಜ್ಯದ ಜವಾಬ್ದಾರಿ ರಾಮಲು ಅವರಿಗೆ

ಕೊರೋನಾ ವೈರಸ್ : ಬೆಂಗಳೂರು ಉಸ್ತುವಾರಿ ಡಾ. ಸುಧಾಕರ್ ಗೆ, ಇಡೀ ರಾಜ್ಯದ ಜವಾಬ್ದಾರಿ ರಾಮಲು ಅವರಿಗೆ
ಕೊರೋನಾ ವೈರಸ್ : ಬೆಂಗಳೂರು ಉಸ್ತುವಾರಿ ಡಾ. ಸುಧಾಕರ್ ಗೆ, ಇಡೀ ರಾಜ್ಯದ ಜವಾಬ್ದಾರಿ ರಾಮಲು ಅವರಿಗೆ

ಬೆಂಗಳೂರು, ಮಾ 25 [ಯುಎನ್ಐ] ರಾಜ್ಯದಲ್ಲಿ ಕೊರೋನಾ ವೈರಸ್ ನಿಯಂತ್ರಿಸುವ ಜವಾಬ್ದಾರಿಯನ್ನು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ನೀಡಿದ್ದು, ಬೆಂಗಳೂರು ಮಹಾನಗರದ ಉಸ್ತುವಾರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರಿಗೆ ವಹಿಸಲಾಗಿದೆ.ಜತೆಗೆ ಶ್ರೀರಾಮುಲು ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜತೆಗೆ ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆಯನ್ನು ಹೆಚ್ಚುವರಿಯಾಗಿ ನೀಡಿದ್ದಾರೆ.ಖಾತೆಗಳ ಪುನರ್ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಶಿಫಾರಸ್ಸಿಗೆ ರಾಜ್ಯಪಾಲ ವಜೂಭಾಯಿ ವಾಲಾ ಅನುಮೋದನೆ ನೀಡಿದ್ದು, ಇದು ರಾಜ್ಯಪತ್ರದಲ್ಲಿ ಪ್ರಕಟವಾಗಿದೆ.ಮುಖ್ಯಮಂತ್ರಿ ಅವರ ತೀರ್ಮಾನಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ತಮಗೆ ಬೆಂಗಳೂರು ನಗರದಲ್ಲಿ ಕೋವಿಡ್ – 19 ನಿಯಂತ್ರಿಸುವ ಜವಾಬ್ದಾರಿಯನ್ನು ಸೀಮಿತಗೊಳಿಸಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಚಿವ ರಾಮುಲು ಅವರು ಹಿರಿಯರಿದ್ದು, ಅವರಿಗೆ ಇಡೀ ರಾಜ್ಯದ ಜವಾಬ್ದಾರಿ ವಹಿಸುವುದು ಸೂಕ್ತ. ಅವರು ಅಥವಾ ಯಾರಾದರೂ ಒಬ್ಬರಿಗೆ ಇಂತಹ ಉಸ್ತುವಾರಿ ವಹಿಸಿದರೆ ಮುತುವರ್ಜಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಅವರು ಹೊರಡಿಸಿರುವ ಆದೇಶದ ಪ್ರಕಾರ, ಶ್ರೀರಾಮಲು ಅವರು ಡಾ. ಸುಧಾಕರ್ ಅವರ ಚಿಕ್ಕಬಳ್ಳಾಪುರ ಒಳಗೊಂಡಂತೆ ಇಡೀ ರಾಜ್ಯದ ಜವಾಬ್ದಾರಿ ನೋಡಿಕೊಳ್ಳಲಿದ್ದಾರೆ. ಇದು ಸುಧಾಕರ್ ಅವರ ಆಕ್ಷೇಪಕ್ಕೆ ಕಾರಣ ಎನ್ನಲಾಗಿದೆ.

ಯುಎನ್ಐ ವಿಎನ್ 1644

More News