Sunday, Aug 25 2019 | Time 02:39 Hrs(IST)
Karnataka Share

ನಾವೆಲ್ಲಾ ಅಣ್ಣ ತಮ್ಮಂದಿರಂತೆ ವಾಪಸ್ ಬಂದು ಬಿಡಿ, ಅತೃಪ್ತ ಶಾಸಕರಿಗೆ ಡಿಕೆ ಶಿವಕುಮಾರ್ ಮನವಿ

ನಾವೆಲ್ಲಾ ಅಣ್ಣ ತಮ್ಮಂದಿರಂತೆ ವಾಪಸ್ ಬಂದು ಬಿಡಿ, ಅತೃಪ್ತ ಶಾಸಕರಿಗೆ  ಡಿಕೆ ಶಿವಕುಮಾರ್ ಮನವಿ
ನಾವೆಲ್ಲಾ ಅಣ್ಣ ತಮ್ಮಂದಿರಂತೆ ವಾಪಸ್ ಬಂದು ಬಿಡಿ, ಅತೃಪ್ತ ಶಾಸಕರಿಗೆ ಡಿಕೆ ಶಿವಕುಮಾರ್ ಮನವಿ

ಬೆಂಗಳೂರು ,ಜು 16(ಯುಎನ್ಐ) ಬಿಜೆಪಿ ನಾಯಕರು ನಿಮ್ಮನ್ನು( ಅಸಮಾಧಾನಿತ ಶಾಸಕರು) ಯಾಮಾರಿಸುತ್ತಿದ್ದಾರೆ. ಇದನ್ನೆಲ್ಲ ಅರ್ಥ ಮಾಡಿಕೊಳ್ಳಿ ನಾವೆಲ್ಲ ಅಣ್ಣ-ತಮ್ಮಂದಿರು ಇದ್ದಂತೆ ವಾಪಸ್ ಬಂದು ಬಿಡಿ ಎಂದು ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಸಚಿವ ಡಿ ಕೆ ಶಿವಕುಮಾರ್ ಮಂಗಳವಾರ ಕಳಕಳಿಯ ಮನವಿ ಮಾಡಿದ್ದಾರೆ.ಕುಮಾರ ಕೃಪಾ ಅಥಿತಿ ಗೃಹದಲ್ಲಿ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಿಂದ ಯಾವುದೇ ತಪ್ಪು ನಡೆದಿಲ್ಲ, ಬಿಜೆಪಿ ನಾಯಕರು ನಿಮ್ಮನ್ನು ಯಾಮಾರಿಸುತ್ತಿದ್ದಾರೆ. ಅವರನ್ನು ನಂಬಿ ನಿಮ್ಮ ರಾಜಕೀಯ ಜೀವನ ನೀವೇ ಹಾಳು ಮಾಡಿಕೊಳ್ಳಬೇಡಿ.ಅತೃಪ್ತ ಶಾಸಕರು ಇದನ್ನು ಅರ್ಥಮಾಡಿಕೊಳ್ಳಬೇಕು. ಇದು ನಿಮ್ಮ ಮನೆ, ನೀವೇ ಕಟ್ಟಿದ ಮನೆ, ವಾಪಸ್ ಬನ್ನಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧವಿದ್ದೇವೆ ಎಂದು ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಅತೃಪ್ತ ಕಾಂಗ್ರೆಸ್‌ ಶಾಸಕರಿಗೆ ಅವರು ಮನವಿ ಮಾಡಿದರು.

ಸುಪ್ರೀಂ ಕೋರ್ಟ್‌ನಿಂದ ನಮಗೆ ಅನ್ಯಾಯವಾಗುವುದಿಲ್ಲ.ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸುತ್ತೇವೆ. ನ್ಯಾಯಾಲಯದಿಂದ ನಮ್ಮ ಪರ ತೀರ್ಪು ಬರಲಿದೆ ಎನ್ನುವ ಬಲವಾದ ವಿಶ್ವಾಸವಿದೆ ಎಂಬ ಆಶಯ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಶಾಸಕರು ಸ್ಪೀಕರ್​ಗೆ ರಾಜೀನಾಮೆ ಸಲ್ಲಿಸಿದ್ದರು. ಹಿಂದೆ ಶಾಸಕರು ಸಲ್ಲಿಸಿದ್ದ ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್​ ಅವರ ರಾಜೀನಾಮೆಗಳನ್ನು ತಿರಸ್ಕರಿಸಿದ್ದರು.ರಾಜೀನಾಮೆ ವಿಷಯ ಈಗ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ ಎಂದು ಅವರು ತಿಳಿಸಿದರು.

ಯುಎನ್ಐ ಎಸ್ಎಂಆರ್ ವಿಎನ್ 1910