Tuesday, Jan 21 2020 | Time 21:58 Hrs(IST)
 • ಅಂಧರ ಕ್ರಿಕೆಟ್: ಆಂಧ್ರ ಪ್ರದೇಶ ತಂಡಕ್ಕೆೆ ಟಿ-20 ಮುಕುಟ
 • ಕೃಷಿ ಆಧಾರಿತ ಉದ್ಯಮ ಸ್ಥಾಪನೆ, ಗ್ರಾಮೀಣ ಆರ್ಥಿಕತೆ ಸುಧಾರಣೆಗೆ ಒತ್ತು: ಹೂಡಿಕೆದಾರರಿಗೆ ಯಡಿಯೂರಪ್ಪ ಮನವಿ
 • ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಿಂದ ಇಶಾಂತ್ ಶರ್ಮಾ ಔಟ್
 • ನಾರಾಯಣ ಹೆಲ್ತ್ ಸಿಟಿಯಿಂದ ನಾಲ್ಕು ವರ್ಷದ ಮಗುವಿಗೆ ಹೃದಯ ಕಸಿ: ಮಹತ್ವದ ಸಾಧನೆ
 • ಆನಂದ್ ಸಿಂಗ್, ಕಂಪ್ಲಿ ಗಣೇಶ್ ಖುದ್ದು ಹಾಜರಾಗಲೇಬೇಕು: ಹೈಕೋರ್ಟ್ ಆದೇಶ
 • ಅಮರಾವತಿ ಆಂಧ್ರ ರಾಜಧಾನಿಯಾಗಿ ಮುಂದುವರಿಯಲಿದೆ; ಪವನ್ ಕಲ್ಯಾಣ್
 • ಮನೆ ಮನೆಗೆ ಸಿಎಎ ವಿರುದ್ಧ ಅಭಿಯಾನ ಕೊಂಡೊಯ್ಯಲು ಜೆಡಿಎಸ್ ಸಿದ್ಧತೆ
 • ಪದವೀಧರ, ಶಿಕ್ಷಕರ ಕ್ಷೇತ್ರಗಳ ಮತದಾರರ ನೋಂದಣಿ ಇಳಿಮುಖ: ಮುಖ್ಯಚುನಾವಣಾಧಿಕಾರಿ ಬೇಸರ!
 • ನೇಪಾಳದಲ್ಲಿ ಉಸಿರುಗಟ್ಟಿ ಎಂಟು ಕೇರಳಿಗರು ಸಾವು: ಮುಖ್ಯಮಂತ್ರಿ ವಿಜಯನ್ ಶೋಕ
 • ಮೆಂಟನ್ ಕಪ್ ಶೂಟಿಂಗ್ : ಅಪೂರ್ವಿ, ದಿವ್ಯಾಂಶ್ ಗೆ ಚಿನ್ನದ ಪದಕ
 • ಟ್ರಂಪ್ ಹತ್ಯೆಗೆ 3 ಮಿಲಿಯನ್ ಡಾಲರ್ ಬಹುಮಾನ!
 • ಮಂಗಳೂರು ವಿಮಾನ ನಿಲ್ದಾಣದ್ದು ಬಾಂಬ್ ಪತ್ತೆ ಪ್ರಕರಣವಲ್ಲ, ಅಣಕು ಪ್ರದರ್ಶನ, ಹುಡುಗಾಟ: ಕುಮಾರ ಸ್ವಾಮಿ ಲೇವಡಿ
 • ಎಸ್ ಬಿಐನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಚಲ್ಲ ಶ್ರೀನಿವಾಸುಲು ಶೆಟ್ಟಿ ಅಧಿಕಾರ ಸ್ವೀಕಾರ
 • ಪುಲ್ವಾಮ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮ, ಇಬ್ಬರು ಜೆಇಎಂ ಉಗ್ರರು ಹತ
 • ವಿಶ್ವಕಪ್: ಕಿರಿಯರಿಗೆ ಸುಲಭ ತುತ್ತಾದ ಜಪಾನ್
Karnataka Share

ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ.ಪರಿಹಾರ: ಶಿವಮೊಗ್ಗದಲ್ಲಿ ಯಡಿಯೂರಪ್ಪ ಘೋಷಣೆ

ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ.ಪರಿಹಾರ: ಶಿವಮೊಗ್ಗದಲ್ಲಿ ಯಡಿಯೂರಪ್ಪ ಘೋಷಣೆ
ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ.ಪರಿಹಾರ: ಶಿವಮೊಗ್ಗದಲ್ಲಿ ಯಡಿಯೂರಪ್ಪ ಘೋಷಣೆ

ಶಿವಮೊಗ್ಗ, ಆ 13 (ಯುಎನ್ಐ) ಶಿವಮೊಗ್ಗದಲ್ಲಿ ಪ್ರವಾಹಕ್ಕೆ ಸಂತ್ರಸ್ತರಾದವರಿಗೆ ತಕ್ಷಣದ ಪರಿಹಾರವಾಗಿ 10 ಸಾವಿರ ರೂಪಾಯಿ, ಮನೆ ಕಳೆದುಕೊಂಡವರಿಗೆ 5 ಲಕ್ಷ ಹಾಗೂ ಭಾಗಶಃ ಮನೆ ಹಾನಿಯಾದವರಿಗೆ 1 ಲಕ್ಷ ರೂಪಾಯಿ ನೀಡುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ

ಇಂದು ನಗರದ ರಾಮಣ್ಣಶ್ರೇಷ್ಟಿ ಪಾರ್ಕ್ ಗಣಪತಿ ದೇವಾಲಯದಲ್ಲಿರುವ ಸಂತ್ರಸ್ತರ ಕೇಂದ್ರಕ್ಕೆ ಭೇಟಿ ನೀಡಿ ಅವರ ಅಹವಾಲು ಆಲಿಸಿದ ಅವರು, ನೆರೆಯಿಂದ 40 ಕುಟುಂಬಗಳು ತೊಂದರೆಗೊಳಲಾಗಿವೆ, ನೆರೆಯಿಂದ ಜಲಾವೃತವಾಗಿರುವ ಮನೆಗಳ ಸಂತ್ರಸ್ತರಿಗೆ ಬಟ್ಟೆ, ಪಾತ್ರೆ, ಇತರ ಆಹಾರ ಸಾಮಗ್ರಿಗಳ ಖರೀದಿಗೆ ತಕ್ಷಣ 10 ಸಾವಿರ ರೂಪಾಯಿ ನೀಡಲಾಗುವುದು ಎಂದರು.

ಪರಿಹಾರ ಪಡೆದುಕೊಂಡ ಸಂತ್ರಸ್ತರು ಸ್ವತಃ ತಾವೇ ಮನೆ ನಿರ್ಮಿಸಿಕೊಳ್ಳಬೇಕು, ಮುಂದಿನ ದಿನಗಳಲ್ಲಿ ನೀವು ಬಯಸುವುದಾದರೆ, ಎರಡು ಅಂತಸ್ತಿನ ಅಪಾರ್ಟ್ ಮೆಂಟ್ ನಿರ್ಮಿಸಿ, ಎರಡು ಕೊಠಡಿಗಳ ಮನೆ ನಿರ್ಮಾಣ ಮಾಡಿಕೊಡಲು ಸರ್ಕಾರ ಸಿದ್ಧವಿದೆ. ಈ ಬಗ್ಗೆ ಶಾಸಕರು, ಅಧಿಕಾರಿಗಳು ಸಂತ್ರಸ್ತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಸಂತ್ರಸ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾನಿಗೀಡಾದ ರಸ್ತೆ, ಸೇತುವೆ, ಆಸ್ತಿಪಾಸ್ತಿಗಳ ನಿರ್ಮಾಣಕ್ಕೆ ತುರ್ತು 50 ಕೋಟಿ ರೂ. ಬಿಡುಗಡೆ ಮಾಡುವುದಾಗಿ ತಿಳಿಸಿದ ಮುಖ್ಯಮಂತ್ರಿ, ನಗರದಲ್ಲಿ ತಡೆಗೋಡೆ ನಿರ್ಮಾಣ ಸೇರಿದಂತೆ ನೆರೆ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ರಾಜ್ಯದಲ್ಲಿ ಪ್ರವಾಹದಿಂದ ಸಂತ್ರಸ್ತರಾಗಿರುವ ಸುಮಾರು 40 ಸಾವಿರ ಕುಟುಂಬಗಳ ಪುವರ್ವಸತಿಗೆ ಸರ್ಕಾರ ಬದ್ಧವಾಗಿದೆ. ಪ್ರವಾಹದಿಂದ ಹಾನಿಗೊಳಗಾದ ಗೋಶಾಲೆಗೆ ಮೇವು ಸೇರಿದಂತೆ, ಪರಿಹಾರಕ್ಕಾಗಿ 4 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರವಾಹ ಮತ್ತು ಮಳೆಯಿಂದ ಹಾನಿಗೀಡಾಗಿರುವ ರಾಜೀವ್ ಗಾಂಧಿ ಬಡಾವಣೆ, ಮಹಾವೀರ ಗೋಶಾಲೆ, ವಿದ್ಯಾನಗರ, ರಾಮಣ್ಣ ಶ್ರೇಷ್ಟಿ ಪಾರ್ಕ್ ಪರಿಹಾರ ಕೇಂದ್ರಗಳಿಗೆ ಭೇಟಿ ಪರಿಶೀಲನೆ ನಡೆಸಿದರು.

ಶಾಸಕ ಕೆ.ಎಚ್. ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಯುಎನ್ಐ ಯುಎಲ್ ಎಎಚ್ 1106