Wednesday, Feb 26 2020 | Time 13:12 Hrs(IST)
 • ದೆಹಲಿಯ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಇಂದು ಅಜಿತ್ ದೋವಲ್ ಭೇಟಿ
 • ಎಲಿವೇಟೆಡ್ ಕಾರಿಡಾರ್ ಎಂಬ ಖಜಾನೆ ಕದಿಯುವ ಗುಮ್ಮ; ಆಮ್ ಆದ್ಮಿ ಪಕ್ಷದ ಪ್ರತಿಭಟನೆ
 • ದೆಹಲಿ ಹಿಂಸಾಚಾರ; ಮೃತರ ಸಂಖ್ಯೆ 20ಕ್ಕೇರಿಕೆ, ಸೇನೆ ನಿಯೋಜನೆಗೆ ಕೇಜ್ರೀವಾಲ್ ಮನವಿ
 • ಗಲಭೆ ಕೋರರನ್ನು ಮಟ್ಟ ಹಾಕಿ ಪೊಲೀಸರಿಗೆ ದೆಹಲಿ ಹೈಕೋರ್ಟ್ ಖಡಕ್ ಎಚ್ಚರಿಕೆ
 • ದೆಹಲಿ ಹಿಂಸಾಚಾರ: ಸಾವಿನ ಸಂಖ್ಯೆ 20ಕ್ಕೆ ಏರಿದೆ
 • ಕಾಶ್ಮೀರದ ಬುದ್ಗಾಮ್‌ನಲ್ಲಿ ಎನ್‌ಐಎ ದಾಳಿ
 • ದೆಹಲಿ ಹಿಂಸಾಚಾರ: ಸೋನಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
 • ಕಾರ್ಮಿಕನ ಬರ್ಬರ ಹತ್ಯೆ
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
Karnataka Share

ಮಹದಾಯಿ ವಿವಾದ:ಗೋವಾ ಮುಖ್ಯಮಂತ್ರಿ ಭೇಟಿಗೆ ಕ್ರಮ-ಯಡಿಯೂರಪ್ಪ

ಮಹದಾಯಿ ವಿವಾದ:ಗೋವಾ ಮುಖ್ಯಮಂತ್ರಿ ಭೇಟಿಗೆ ಕ್ರಮ-ಯಡಿಯೂರಪ್ಪ
ಮಹದಾಯಿ ವಿವಾದ:ಗೋವಾ ಮುಖ್ಯಮಂತ್ರಿ ಭೇಟಿಗೆ ಕ್ರಮ-ಯಡಿಯೂರಪ್ಪ

ಬೆಂಗಳೂರು/ಬೆಳಗಾವಿ, ಸೆ 10 (ಯುಎನ್‍ಐ) ಕರ್ನಾಟಕ, ಗೋವಾ ನಡುವೆ ತೀವ್ರ ವಿವಾದಕ್ಕೆ ಕಾರಣವಾಗಿರುವ ಮಹದಾಯಿ ನದಿ ನೀರು ಹಂಚಿಕೆ ಸಮಸ್ಯೆ ಬಗೆಹರಿಸಲು ಸರ್ಕಾರ ಕಾರ್ಯೋನ್ಮುಖವಾಗಿದ್ದು, ಈ ಸಂಬಂಧ ಚರ್ಚಿಸಲು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಸಮಯ ಕೇಳಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ

ನವದೆಹಲಿಗೆ ತೆರಳಬೇಕಿದ್ದ ಯಡಿಯೂರಪ್ಪ ತಮ್ಮ ಪ್ರವಾಸವನ್ನು ಕೈಬಿಟ್ಟು ಬೆಳಗಾವಿಯಲ್ಲಿ ನೆರೆಪರಿಸ್ಥಿತಿ ಪರಿಶೀಲನೆಗೆ ತೆರಳಿದ ಅವರು, ಅಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾದಾಯಿ ವಿವಾದ ಬಗೆಹರಿಸುವ ಸಂಬಂಧ ಮೂರು ರಾಜ್ಯಗಳ ಸಭೆ ನಡೆಸಲಾಗುತ್ತಿದ್ದು, ಈ ಸಂಬಂಧ ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ಸಮಾಲೋಚಿಸಲಾಗಿದೆ. ಗೋವಾ ಮುಖ್ಯಮಂತ್ರಿ ಅವರಿಗೆ ಸಮಯ ನಿಗದಿಪಡಿಸುವಂತೆ ಹೇಳಲಾಗಿದೆ. ಸೆ 16 ಅಥವಾ 17 ರಂದು ಗೋವಾಕ್ಕೆ ಭೇಟಿ ನೀಡುತ್ತಿದ್ದು, ಆದಷ್ಟು ಬೇಗ ಮಹಾದಾಯಿ ವಿವಾದ ಬಗೆಹರಿಯಲಿದೆ ಎಂದು ಆಶ‍್ವಾಸನೆ ನೀಡಿದರು.

ಪ್ರವಾಹಪರಿಹಾರ ಕಾರ್ಯದಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ಅಪಘಾತದಿಂದ ಸಾವಿಗೀಡಾದ ಪಿಎಸ್‍ಐ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದರು.



ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಂತ್ರಸ್ತರಾಗಿರುವ ಒಂದು ಲಕ್ಷ ಹತ್ತು ಸಾವಿರ ಜನರಿಗೆ 10 ಸಾವಿರ ರೂಪಾಯಿ ಪರಿಹಾರ ನೀಡುವ ಕೆಲಸ ಮುಗಿದಿದೆ. ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಮಾಡಲು ತಕ್ಷಣವೇ ಒಂದು ಲಕ್ಷ ರೂಪಾಯಿ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಹೊಸದಿಲ್ಲಿ ಪ್ರವಾಹ ರದ್ದು ಮಾಡಿ ನಿರಾಶ್ರಿತರ ಸಮಸ್ಯೆ ಆಲಿಸಲು ಬಂದಿದ್ದೇನೆ. ಉಳಿದೆಲ್ಲ ಅಭಿವೃದ್ಧಿ ಕಾರ್ಯಗಳಿಗಿಂತ ಸಂತ್ರಸ್ತರ ಸಮಸ್ಯೆ ಬಗೆಹರಿಸುವುದು ಮೊದಲ ಆದ್ಯತೆಯಾಗಿದೆ ಎಂದರು.



ಇದಕ್ಕೂ ಮುನ್ನ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾತನಾಡಿದ ಯಡಿಯೂರಪ್ಪ, ರಾಮದುರ್ಗದ ಸುರೇಬಾನ ಕಾಳಜಿಕೇಂದ್ರದಲ್ಲಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಘೋಷಿಸಿದರು. ಬಾಲಕನ ಸಾವಿಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಯುಎನ್‍ಐ ಯುಎಲ್ ವಿಎನ್ 1556

More News

ಕಾರ್ಮಿಕನ ಬರ್ಬರ ಹತ್ಯೆ

26 Feb 2020 | 11:10 AM

 Sharesee more..
2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ

2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ

26 Feb 2020 | 10:50 AM

ಬೆಂಗಳೂರು, ಫೆ 26 (ಯುಎನ್ಐ) ಇತ್ತೀಚೆಗಷ್ಟೇ ಬಂಧನವಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಆತನ ವಿರುದ್ಧ ತಿಲಕ್ ನಗರದಲ್ಲಿ ದಾಖಲಾಗಿದ್ದ ಪ್ರಕರಣದ ಕುರಿತು ಬುಧವಾರ ಸಿಸಿಬಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

 Sharesee more..
ಸೌಮ್ಯಾರೆಡ್ಡಿ ಈಗ ಆದರ್ಶ ಯುವ ಶಾಸಕಿ

ಸೌಮ್ಯಾರೆಡ್ಡಿ ಈಗ ಆದರ್ಶ ಯುವ ಶಾಸಕಿ

26 Feb 2020 | 10:46 AM

ಬೆಂಗಳೂರು,ಫೆ. 26 (ಯುಎನ್‌ಐ) ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯರೆಡ್ಡಿ ಆದರ್ಶಿ ಯುವ ಶಾಸಕಿ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳು ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ಉತ್ತಮ ಸೇವಾ ಕಾರ್ಯಗಳಿಗಾಗಿ ಭಾರತೀಯ ಛಾತ್ರಾ ಸಂಸದ್ ಸೌಮ್ಯರೆಡ್ಡಿ ಅವರಿಗೆ "ಆದರ್ಶ ಯುವ ಶಾಸಕಿ" ಪ್ರಶಸ್ತಿ ನೀಡಿ ಗೌರವಿಸಿದೆ.

 Sharesee more..

ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ

26 Feb 2020 | 10:09 AM

 Sharesee more..