Wednesday, Jul 17 2019 | Time 12:33 Hrs(IST)
  • ಇಂಡೋನೇಷ್ಯಾ ಓಪನ್‌: ಸಿಂಧು, ಶ್ರೀಕಾಂತ್‌ ಶುಭಾರಂಭ
  • ಬಂಡಾಯ ಶಾಸಕರು ವಿಶ್ವಾಸ ಮತಯಾಚನೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ: ಸುಪ್ರೀಂ ತೀರ್ಪು
  • ನರೇಂದರ್‌ : ಅಂತಾರಾಷ್ಟ್ರೀಯ ಗೋಲು ಗಳಿಸಿದ ಭಾರತದ ಎರಡನೇ ಅತಿ ಕಿರಿಯ ಆಟಗಾರ
  • ನಾಲ್ಕೈದು ದಿನಗಳಲ್ಲಿ ಬಿಜೆಪಿ ಸರ್ಕಾರಅಸ್ಥಿತ್ವಕ್ಕೆ : ಬಿಎಸ್ ಯಡಿಯೂರಪ್ಪ ವಿಶ್ವಾಸ
Karnataka Share

ರಾಜೀನಾಮೆ ನೀಡಿದ ಶಾಸಕರು ಸಿದ್ದರಾಮಯ್ಯ ಆಪ್ತರು ಹೇಳಿಕೆಗೆ ಬೇಸರ

ರಾಜೀನಾಮೆ ನೀಡಿದ ಶಾಸಕರು ಸಿದ್ದರಾಮಯ್ಯ ಆಪ್ತರು ಹೇಳಿಕೆಗೆ ಬೇಸರ
ರಾಜೀನಾಮೆ ನೀಡಿದ ಶಾಸಕರು ಸಿದ್ದರಾಮಯ್ಯ ಆಪ್ತರು ಹೇಳಿಕೆಗೆ ಬೇಸರ

ಬೆಂಗಳೂರು, ಜು 11(ಯುಎನ್ಐ) ವಿಧಾನಸಭೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಾಂಗ್ರೆಸ್ ಶಾಸಕರ ಹಿಂದೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಪಾತ್ರವಿದೆ ಎಂಬ ಮಾತುಗಳಿಗೆ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ

ರಾಜೀನಾಮೆ ನೀಡಿರುವ ಶಾಸಕರು ಮಾತ್ರ ತಮಗೆ ಆಪ್ತರಾಗಿಲ್ಲ, ಪಕ್ಷದ ಎಲ್ಲ 78 ಶಾಸಕರೂ ಆಪ್ತರಾಗಿದ್ದಾರೆ ಎಂದು ಟ್ವೀಟ್ ಮಾಡಿ ಅವರು ಸ್ಪಷ್ಟನೆ ನೀಡಿದ್ದಾರೆ,

ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿರುವ ಅವರು, ಮಾಧ್ಯಮಗಳು ಉದ್ದೇಶಪೂರ್ವಕವಾಗಿ ರಾಜೀನಾಮೆ ನೀಡಿರುವ ಶಾಸಕರು ಮಾತ್ರ ತಮಗೆ ಆಪ್ತರು ಎಂದು ಹೇಳುತ್ತಿರುವುದು ಸರಿ ಅಲ್ಲ, ಇದರಿಂದ ತಮ್ಮ ಮನಸ್ಸಿಗೆ ನೋವಾಗಿದೆ ಎಂದಿದ್ದಾರೆ

ಶಾಸಕ ಸ್ಥಾನ ತೊರೆದಿರುವ ಕಾಂಗ್ರೆಸ್‌ನ ಬಹುತೇಕರು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬೆಂಬಲಿಗರು ಎಂಬ ವಿಚಾರ ಮೈತ್ರಿ ಪಕ್ಷಗಳ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದು ಕಾಂಗ್ರೆಸ್‌ನ ಹಿರಿಯ ಮುಖಂಡರ ಅಸಮಾಧಾನಕ್ಕೂ ಕಾರಣವಾಗಿತ್ತು. ಈ ಬಗ್ಗೆ ಕೆಲವು ಮಾಧ್ಯಮಗಳಲ್ಲೂ ವರದಿಯಾಗಿತ್ತು.

ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್, ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್ , ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್ , ಮುನಿರತ್ನ , ಸಿದ್ದರಾಮಯ್ಯ ಆಪ್ತರು. ಪಕ್ಷೇತರ ಶಾಸಕ ಆರ್.ಶಂಕರ್ (ರಾಣೆಬೆನ್ನೂರು) ಅವರಿಗೆ ಸಿದ್ದರಾಮಯ್ಯ ಸಚಿವ ಸ್ಥಾನ ಕೊಡಿಸಿದ್ದರು. ಆನಂದ್ ಸಿಂಗ್ (ವಿಜಯನಗರ) ಅವರನ್ನು ಬಿಜೆಪಿಯಿಂದ ಪಕ್ಷಕ್ಕೆ ಕರೆತಂದಿದ್ದರು. ರಮೇಶ್ ಜಾರಕಿಹೊಳಿ (ಗೋಕಾಕ್) ಸಹ ಒಂದು ಕಾಲದ ಆಪ್ತ ಗೆಳೆಯರು. ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದ ಶಾಸಕರೇ ರಾಜೀನಾಮೆ ನೀಡುತ್ತಿದ್ದರೂ ತಡೆಯುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಹೈಕಮಾಂಡ್ ಸೂಚನೆ ನೀಡಿದರೂ ಕಾರ್ಯಾಚರಣೆಗೆ ಇಳಿಯಲಿಲ್ಲ ಎಂಬ ಆರೋಪ ಕೇಳಿಬಂದಿತ್ತು.

ಯುಎನ್ಐ ಯುಎಲ್ ಎಎಚ್ 1149