Tuesday, Sep 29 2020 | Time 14:00 Hrs(IST)
 • ವಲಸೆ ಕಾರ್ಮಿಕರ ಹೊಟ್ಟೆ ತುಂಬಿಸಲು ಮಮತಾ ಕಿಚನ್ ರೆಡಿ
 • ಪಾಕ್ ರಡಾರ್ ನಲ್ಲಿ ಶ್ರೀನಗರ: ದಾರಿ ತಪ್ಪಿರುವ ಯುವಕರನ್ನು ವಾಪಸ್ ಕರೆ ತರಲು ಕ್ರಮ- ಡಿಜಿಪಿ ದಿಲ್‍ಬಾಗ್ ಸಿಂಗ್
 • ಗಾಂಜಾ ಮಾರಾಟ ಯತ್ನಿಸುತ್ತಿದ್ದವರ ಬಂಧನ
 • ಪೂಜಿಸುತ್ತಿದ್ದ ಕೃಷಿ ಉಪಕರಣಗಳಿಗೆ ಬೆಂಕಿ ಹಚ್ಚುವುದು ರೈತರನ್ನು ಅವಮಾನಿಸಿದಂತೆ: ಮೋದಿ
 • ಬಾಬ್ರಿ ಮಸೀದಿ ದ್ವಂಸ ಪ್ರಕರಣ: ನಾಳೆ ಅಂತಿಮ ತೀರ್ಪು, ಭದ್ರತೆ ಬಿಗಿ ಗೊಳಿಸಲು ರಾಜ್ಯಗಳಿಗೆ ಕೇಂದ್ರ ಆದೇಶ
 • ಮೂವರು ದರೋಡೆಕೋರರು ಬಂಧನ
 • ದೇಶದಲ್ಲಿ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿದ ಅಮ್ನೆಸ್ಟಿ ಇಂಟರ್ ನ್ಯಾಷನಲ್
 • ಸೂಪರ್‌ ಓವರ್‌ನಲ್ಲಿ ಯಾರ್ಕರ್‌, ನಿಧಾನಗತಿಯ ಎಸೆತಗಳು ನನ್ನ ತಂತ್ರವಾಗಿತ್ತು: ನವದೀಪ್‌ ಸೈನಿ
 • ಪೂಂಚ್‌ನಲ್ಲಿ ಪಾಕ್ ನಿಂದ ಕದನ ವಿರಾಮ ಉಲ್ಲಂಘನೆ
 • ಇಶಾನ್‌ ಕಿಶಾನ್‌ ಸೂಪರ್‌ ಓವರ್‌ನಲ್ಲಿ ಫ್ರೆಶ್‌ ಆಗಿ ಕಾಣಿಸಲಿಲ್ಲ: ರೋಹಿತ್‌ ಶರ್ಮಾ
 • ಸುಶಾಂತ್ ಸಾವಿನ ಕುರಿತು ಏಮ್ಸ್ ಮಹತ್ವದ ವರದಿ
 • ಮಿತ್ರಪಕ್ಷಗಳ ಬಗ್ಗೆ ಬಿಜೆಪಿ ಮಲತಾಯಿ ಧೋರಣೆ: ಸುಖಬೀರ್
 • ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ದಲಿತ ಯುವತಿ ಸಾವು
 • ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ; ಸುರೇಶ್ ಕುಮಾರ್
 • ಬೆಂಗಳೂರು ಉಗ್ರರ ಕೇಂದ್ರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ- ಕುಮಾರಸ್ವಾಮಿ
Karnataka Share

ರಾಜ್ಯದಲ್ಲಿ 7576 ಕೋವಿಡ್‌ ಪ್ರಕರಣ; 7406 ಮಂದಿ ಗುಣಮುಖ; ಒಟ್ಟು ಪ್ರಕರಣಗಳ ಸಂಖ್ಯೆ 4.75 ಲಕ್ಷಕ್ಕೇರಿಕೆ

ರಾಜ್ಯದಲ್ಲಿ 7576 ಕೋವಿಡ್‌ ಪ್ರಕರಣ; 7406 ಮಂದಿ ಗುಣಮುಖ; ಒಟ್ಟು ಪ್ರಕರಣಗಳ ಸಂಖ್ಯೆ 4.75 ಲಕ್ಷಕ್ಕೇರಿಕೆ
ರಾಜ್ಯದಲ್ಲಿ 7576 ಕೋವಿಡ್‌ ಪ್ರಕರಣ; 7406 ಮಂದಿ ಗುಣಮುಖ; ಒಟ್ಟು ಪ್ರಕರಣಗಳ ಸಂಖ್ಯೆ 4.75 ಲಕ್ಷಕ್ಕೇರಿಕೆ

ಬೆಂಗಳೂರು, ಸೆ 15 (ಯುಎನ್ಐ) ರಾಜ್ಯದಲ್ಲಿ ಮಂಗಳವಾರ 7576 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 7406 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಈ ನಡುವೆ, ಕಳೆದ 24 ಗಂಟೆಗಳಲ್ಲಿ 97 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4.75 ಲಕ್ಷಕ್ಕೇರಿಕೆಯಾಗಿದೆ.

ಇಲ್ಲಿಯವರೆಗೆ 3.69 ಲಕ್ಷ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ 98536 ಸಕ್ರಿಯ ಪ್ರಕರಣಗಳಿದ್ದು, 7500 ಮಂದಿ ಮೃತಪಟ್ಟಿದ್ದಾರೆ. 794 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ 3084 ಪ್ರಕರಣಗಳು ವರದಿಯಾಗಿದ್ದು, 41 ಮಂದಿ ಮೃತಪಟ್ಟಿದ್ದಾರೆ.

ಬೆಳಗಾಗಿಯಲ್ಲಿ 249, ಬೆಂಗಳೂರು ಗ್ರಾಮಾಂತರದಲ್ಲಿ 143, ಚಿಕ್ಕಬಳ್ಳಾಪುರದಲ್ಲಿ 150, ಹಾಸನದಲ್ಲಿ 291, ಹಾವೇರಿಯಲ್ಲಿ 180. ಚಿಕ್ಕಮಗಳೂರಿನಲ್ಲಿ 262, ಚಿತ್ರದುರ್ಗದಲ್ಲಿ 127, ದಕ್ಷಿಣ ಕನ್ನಡದಲ್ಲಿ 316, ದಾವಣಗೆರೆಯಲ್ಲಿ 405, ಕಲಬುರಗಿಯಲ್ಲಿ 144, ಕೊಪ್ಪಳದಲ್ಲಿ 103, ಮಂಡ್ಯದಲ್ಲಿ 200, ಮೈಸೂರಿನಲ್ಲಿ 312, ರಾಯಚೂರಿನಲ್ಲಿ 160, ಶಿವಮೊಗ್ಗದಲ್ಲಿ 368, ತುಮಕೂರಿನಲ್ಲಿ 223, ಉತ್ತರಕನ್ನಡದಲ್ಲಿ 195, ವಿಜಯಪುರದಲ್ಲಿ 131 ಪ್ರಕರಣಗಳು ವರದಿಯಾಗಿವೆ.

ಬಳ್ಳಾರಿಯಲ್ಲಿ 51, ಬೀದರ್‌ನಲ್ಲಿ 50, ಧಾರವಾಡದಲ್ಲಿ 56, ಗದಗದಲ್ಲಿ 39, ಕೊಡಗಿನಲ್ಲಿ 72, ಕೋಲಾರದಲ್ಲಿ 69, ರಾಮನಗರದಲ್ಲಿ 78, ಉಡುಪಿಯಲ್ಲಿ 1, ಯಾದಗಿರಿಯಲ್ಲಿ 76 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಯುಎನ್ಐ ಎಸ್ಎಚ್ 2127

More News

ಮೂವರು ದರೋಡೆಕೋರರು ಬಂಧನ

29 Sep 2020 | 12:41 PM

 Sharesee more..

ಉಡುಪಿ ಕೃಷ್ಣ ಮಠ : ಭಕ್ತರ ದರ್ಶನಕ್ಕೆ ಮುಕ್ತ

29 Sep 2020 | 12:28 PM

 Sharesee more..
ಬೆಂಗಳೂರು ಉಗ್ರರ ಕೇಂದ್ರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ- ಕುಮಾರಸ್ವಾಮಿ

ಬೆಂಗಳೂರು ಉಗ್ರರ ಕೇಂದ್ರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ- ಕುಮಾರಸ್ವಾಮಿ

29 Sep 2020 | 11:07 AM

ಬೆಂಗಳೂರು,ಸೆ.29 (ಯುಎನ್ಐ) ಕೆಂಪೇಗೌಡರು ಬಲಿದಾನಗಳ ಮೂಲಕ ನಿರ್ಮಿಸಿದ ಬೆಂಗಳೂರು ಈಗಾಗಲೇ ಜಗದ್ವಿಖ್ಯಾತಿ ಗಳಿಸಿದೆ. ದೇಶದ ಬೇರೆಲ್ಲ ನಗರಗಳಿಗಿಂತ ವೇಗವಾಗಿ ಬೆಳೆಯುತ್ತಿದೆ. ಇದನ್ನು ಸಹಿಸದ ಉತ್ತರ ಭಾರತೀಯ ರಾಜಕೀಯ ಲಾಭಿಯ ಷಡ್ಯಂತ್ರದ ಭಾಗವೇ ಈ ಹೇಳಿಕೆ ಎಂಬ ಅನುಮಾನಗಳೂ ಮೂಡುತ್ತಿವೆ. ಯಾಕೆಂದರೆ ಕೆಲ ಮಂದಿಗೆ ತಾಯ್ನಾಡಿನ ಗೌರವಕ್ಕಿಂತ ಉತ್ತರದ ವ್ಯಾಮೋಹ ಅಧಿಕ! ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

 Sharesee more..
ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ; ಸುರೇಶ್ ಕುಮಾರ್

ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ; ಸುರೇಶ್ ಕುಮಾರ್

29 Sep 2020 | 11:05 AM

ಬೆಂಗಳೂರು, ಸೆ.29 (ಯುಎನ್ಐ) ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ. ಸದ್ಯಕ್ಕೆ ಶಾಲೆ-ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಚನೆಯು ಸರ್ಕಾರದ ಮುಂದೆ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ಹಾಕಿರುವ ಅವರು, ಈ ಕುರಿತು ಶಾಸಕರ ಮತ್ತು ಸಂಸದರ ಹಾಗೂ ಇತರೆ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದ್ದೇನೆ

 Sharesee more..