Saturday, Jan 16 2021 | Time 08:07 Hrs(IST)
Karnataka Share

7 ಮಂದಿ ಸಚಿವರು ಸಂಪುಟಕ್ಕೆ ಸೇರ್ಪಡೆ; ಪಟ್ಟಿ ಪ್ರಕಟಿಸಿದ ಬಿ.ಎಸ್.ಯಡಿಯೂರಪ್ಪ

7 ಮಂದಿ ಸಚಿವರು ಸಂಪುಟಕ್ಕೆ ಸೇರ್ಪಡೆ; ಪಟ್ಟಿ ಪ್ರಕಟಿಸಿದ ಬಿ.ಎಸ್.ಯಡಿಯೂರಪ್ಪ
7 ಮಂದಿ ಸಚಿವರು ಸಂಪುಟಕ್ಕೆ ಸೇರ್ಪಡೆ; ಪಟ್ಟಿ ಪ್ರಕಟಿಸಿದ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಜ.13 (ಯುಎನ್ಐ) ಉಮೇಶ ಕತ್ತಿ ಸೇರಿದಂತೆ 7 ಜನ ಶಾಸಕರ ಹೆಸರನ್ನು ಸಚಿವ ಸ್ಥಾನದ ಪ್ರಮಾಣವಚನಕ್ಕಾಗಿ ರಾಜಭವನಕ್ಕೆ ಕಳುಹಿಸಿಕೊಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ ಕತ್ತಿ, ಎಂ.ಟಿ.ಬಿ ನಾಗರಾಜ್, ಆರ್.ಶಂಕರ್, ಮುರುಗೇಶ ನಿರಾಣಿ, ಸಿ.ಪಿ ಯೋಗೇಶ್ವರ, ಎಸ್.ಅಂಗಾರ, ಅರವಿಂದ ಲಿಂಬಾವಳಿ ಅವರು ಇಂದು ಮಧ್ಯಾಹ್ನ 3.30ರ ಬಳಿಕ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.

ಸಿ.ಪಿಯೋಗೇಶ್ವರ್ ಗೆ ಸ್ಥಾನ ದೊರೆತರೆ, ಮುನಿರತ್ನ ಸಂಪುಟ ಸೇರುವ ಪ್ರಯತ್ನ ವಿಫಲವಾಗಿದೆ.

ಯುಎನ್ಐ ಎಎಚ್ 1147