Friday, Oct 22 2021 | Time 22:31 Hrs(IST)
Karnataka

ದಾವಣಗೆರೆ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮ

30 Sep 2021 | 6:59 PM

ದಾವಣಗೆರೆ ಸೆ ೩೦ (ಯುಎನ್‌ಐ) : ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ರಾಜ್ಯ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ದಾವಣಗೆರೆ ಜಿಲ್ಲಾದ್ಯಂತ ಅಕ್ಟೋಬರ್ ೨ ರಿಂದ ನವೆಂಬರ್ ೧೪ ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

 Sharesee more..

ಶೈಕ್ಷಣಿಕ ದಾಖಲೆಗಳ ಡಿಜಿಟಲ್ ಭಂಡಾರ - ಎನ್‌ಎಡಿ ನೋಂದಣಿ ಚುರುಕುಗೊಳಿಸಲು ಅಶ್ವತ್ಥನಾರಾಯಣ ಸೂಚನೆ

30 Sep 2021 | 5:56 PM

ಬೆಂಗಳೂರು, ಸೆ 30 (ಯುಎನ್ಐ) ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಭಂಡಾರಕ್ಕೆ(ನ್ಯಾಷನಲ್ ಅಕಾಡೆಮಿಕ್ ಡಿಪಾಸಿಟರಿ- ಎನ್‌ಎಡಿ) ಶೈಕ್ಷಣಿಕ ಸಂಸ್ಥೆಗಳ ನೋಂದಣಿ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಉನ್ನತ ಶಿಕ್ಷಣ ಸಚಿವ ಡಾ ಸಿ.

 Sharesee more..

ಸದೃಢ ಸಮಾಜಕ್ಕಾಗಿ ನಾಯಕತ್ವ ವಹಿಸಲು ಶಿಕ್ಷಕರಿಗೆ ಅಶ್ವತ್ಥನಾರಾಯಣ ಕರೆ

30 Sep 2021 | 5:52 PM

ಬೆಂಗಳೂರು, ಸೆ 30 (ಯುಎನ್ಐ) ಸಮಾಜವನ್ನು ಸದೃಢಗೊಳಿಸಿ ಭಾರತವನ್ನು ಸಶಕ್ತಗೊಳಿಸುವ ಕಾರ್ಯದಲ್ಲಿ ಶಿಕ್ಷಕ ಸಮುದಾಯವು ನಾಯಕತ್ವ ವಹಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿ.

 Sharesee more..

ಮಂತ್ರಿಮಾಲ್‌ನಿಂದ 5 ಕೋಟಿ ರೂ. ಬಾಕಿ ಆಸ್ತಿ ತೆರಿಗೆ ವಸೂಲಿ: ಬಿಬಿಎಂಪಿ

30 Sep 2021 | 4:42 PM

ಬೆಂಗಳೂರು, ಸೆ 30 (ಯುಎನ್ಐ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಶ್ಚಿಮ ವಲಯದ ಅಭಿಷೇಕ್ ಡೆವಲಪರ್ಸ್‌ ನಿಂದ ಬಿಬಿಎಂಪಿ, ಬರೋಬ್ಬರಿ 10 43 ಕೋಟಿ ರೂ.

 Sharesee more..
ಬೆಂಗಳೂರನ್ನು ರೌಡಿಮುಕ್ತ ಮಾಡಲು ಸೂಚನೆ

ಬೆಂಗಳೂರನ್ನು ರೌಡಿಮುಕ್ತ ಮಾಡಲು ಸೂಚನೆ

30 Sep 2021 | 4:00 PM

ಆಕ್ರಮವಾಗಿ ನೆಲೆಯೂರಿರುವ, ವೀಸಾ ಅವಧಿ ಮುಗಿದರೂ ವಾಪ್ಪಸ್ ತೆರಳದ ವಿದೇಶಿಯರನ್ನು ಗುರುತಿಸಬೇಕು, ಅವರ ಬಗ್ಗೆ ನಿಗಾ ವಹಿಸಬೇಕು. ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಿಂದ ಬರುವ ನುಸುಳುಕೋರರನ್ನು ಬಂಧಿಸಬೇಕು. ವಿದೇಶಿಯರಿಗೆ ಆಧಾರ್ ಕಾರ್ಡ್, ವೋಟರ್ ಐಡಿ ನೀಡುವ ಜಾಲವೇ ನಗರದಲ್ಲಿ ಬೇರೂರಿದೆ. ಇಂಥವುಗಳನ್ನು ಮಟ್ಟ ಹಾಕುವ ಕೆಲಸವಾಗಬೇಕು ನಗರಕ್ಕೆ ಬಂದ ವಿದೇಶಿಯರ ಮಾಹಿತಿ ಎಲ್ಲ ಪೊಲೀಸ್ ಠಾಣೆಯಲ್ಲಿಯೂ ಇರಬೇಕು ಎಂದು ಹೇಳಿರುವುದಾಗಿ ತಿಳಿಸಿದರು.

 Sharesee more..

ಕೊನೆಗೂ ಬೆಂಗಳೂರಿಗೆ ಬಂತು ಇ-ಬಸ್‌; ಸಚಿವ ಶ್ರೀರಾಮುಲು ಚಾಲನೆ

30 Sep 2021 | 3:42 PM

ಬೆಂಗಳೂರು, ಸೆ 30 (ಯುಎನ್ಐ) ಬೆಂಗಳೂರು ಮಹಾನಗರ ಸಾರಿಗೆಯ (ಬಿಎಂಟಿಸಿ) ಬಹುನಿರೀಕ್ಷೆಯ ವಿದ್ಯುತ್‌ ಚಾಲಿತ ಬಸ್‌ಗೆ ಗುರುವಾರ ಸಾರಿಗೆ ಸಚಿವ ಬಿ ಶ್ರೀರಾಮುಲು ಚಾಲನೆ ನೀಡಿದ್ದಾರೆ.

 Sharesee more..
ಪಕ್ಷದ ಶಾಸಕರು, ಸಂಸದರೊದಿಗೆ ಸಿಎಂ ಸಭೆ

ಪಕ್ಷದ ಶಾಸಕರು, ಸಂಸದರೊದಿಗೆ ಸಿಎಂ ಸಭೆ

30 Sep 2021 | 3:20 PM

ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿವಾಸದಲ್ಲಿ ಸಭೆ ನಡೆಯುತ್ತಿದೆ. ಈಗಾಗಲೇ ಕಂದಾಯ ಸಚಿವ ಆರ್ ಅಶೋಕ್ , ಅಮೃತ ದೇಸಾಯಿ, ಮಸಾಲೆ ಜಯರಾಮ್, ಬೆಳ್ಳಿ ಪ್ರಕಾಶ ಬೆಂಗಳೂರು ದಕ್ಷಿಣ ಶಾಸಕ ಕೃಷ್ಣಪ್ಪ ಎಸ್ ರಘು, ರವಿ ಸುಬ್ರಹ್ಮಣ್ಯ, ಎಚ್ ವಿಶ್ವನಾಥ, ಮಾಡಾಳು ವಿರೂಪಾಕ್ಷಪ್ಪ ಆಗಮನ ಉದಯ ಗರುಡಾಚಾರ್, ಸತೀಶ ರೆಡ್ಡಿ, ಉಮಾನಾಥ ಕೋಟ್ಯಾನ್ ಆಗಮಿಸಿದ್ದಾರೆ

 Sharesee more..
ರಾಜ್ಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ

ರಾಜ್ಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ

30 Sep 2021 | 3:17 PM

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ 'ಬದಲಾದ ಉದ್ಯೋಗ ಪರ್ವ' ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕರ್ನಾಟಕದಲ್ಲಿರುವ ಎಲ್ಲ ಸಂಸ್ಥೆಗಳು ಕನ್ನಡಕ್ಕೆ ಮಾನ್ಯತೆ ನೀಡಬೇಕು ಜೊತೆಗೆ ಕನ್ನಡಿಗ ಯುವಕರಿಕೆ ಆದ್ಯತೆ ನೀಡಬೇಕು. ಈ ಬಗ್ಗೆ ಯಾವ ಯಾವ ಹಂತದಲ್ಲಿ ಏನೇನು ಕಾರ್ಯಗಳು ಆಗಬೇಕು ಅವುಗಳನ್ನು ಮಾಡುವುದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪರಿಣಾಮಕಾರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಹಾಗೂ ಕಾರ್ಮಿಕ ಇಲಾಖೆಯೊಂದಿಗೆ ಚರ್ಚಿಸಲಾಗುವುದು. ಇವತ್ತಿನ ವಿಚಾರ ಸಂಕಿರಣದ ವರದಿಯನ್ನು ನನಗೆ ತಲುಪಿಸಿದರೆ ಅದರ ಅನುಷ್ಠಾನದ ಕಾರ್ಯಗಳಿಗೆ ನಾನು ಸಹಕರಿಸುತ್ತೇನೆ ಎಂದು ಭರವಸೆ ನೀಡಿದರು.

 Sharesee more..
ಕಿರುತೆರೆ ನಟಿ ಆತ್ಮಹತ್ಯೆ

ಕಿರುತೆರೆ ನಟಿ ಆತ್ಮಹತ್ಯೆ

30 Sep 2021 | 1:33 PM

ಕಿರುತೆರೆ ನಟಿ ಸೌಜನ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರ ಸಮೀಪದ ರಾಮನಗರ ಜಿಲ್ಲೆಯ ಕುಂಬಳಗೋಡು ಸನ್ ವರ್ತ್ ಅಪಾರ್ಟ್ ಮೆಂಟಿನಲ್ಲಿ ಅವರು ನೇಣು ಬಿಗಿದುಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಡೆತ್ ನೋಟ್ ದೊರೆತಿದೆ.

 Sharesee more..
ಇಂದು ಪೊಲೀಸ್ ಪರಿಶೀಲನಾ ಸಭೆ

ಇಂದು ಪೊಲೀಸ್ ಪರಿಶೀಲನಾ ಸಭೆ

30 Sep 2021 | 11:00 AM

ಇಂದು ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೇರಿದಂತೆ ಹೆಚ್ಚುವರಿ ಪೊಲೀಸ್ ಆಯುಕ್ತರುಗಳು, ಎಲ್ಲ ವಿಭಾಗಗಳ ಡೆಪ್ಯುಟಿ ಕಮೀಷನರ್ ಗಳು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಗರ ಪೊಲೀಸರು ಅಭಿವೃದ್ಧಿಪಡಿಸಿರುವ ಹೊಸ ಆ್ಯಪ್ ಗೆ ಸಚಿವರು ಚಾಲನೆ ನೀಡಲಿದ್ದಾರೆ

 Sharesee more..
ಅಂತೂ ತಾಯಿ ಮಡಿಲು ಸೇರಿದ ಮಗು

ಅಂತೂ ತಾಯಿ ಮಡಿಲು ಸೇರಿದ ಮಗು

30 Sep 2021 | 10:01 AM

ಮಗು ಪತ್ತೆಯಾಯಿತು. ಆದರೆ ಪ್ರಕರಣ ಕಗ್ಗಂಟಾಯಿತು. ಕೊಪ್ಪಳ ಮೂಲದ ದಂಪತಿ ಮಗು ತಮ್ಮದೆಂದು ಪಟ್ಟು ಹಿಡಿದಿದ್ದರು. ಬೆಂಗಳೂರು ನಗರದ ಪಾದರಾಯನಪುರ ನಿವಾಸಿಗಳಾದ ದಂಪತಿಯೂ ಮಗು ತಮ್ಮದೆಂದು ಹಠ ಹಿಡಿದ್ದಿದ್ದರು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಪೊಲೀಸರು ಮಗುವಿನ ಅಸಲಿ ತಾಯಿ ತಂದೆ ಯಾರು ಎಂಬುದನ್ನು ಪತ್ತೆ ಹಚ್ಚಲು ಡಿ.ಎನ್.ಎ. ಮೊರೆ ಹೋಗಲು ನಿರ್ಧರಿಸಿದರು.

 Sharesee more..

ಪರಾಕಾಷ್ಟೆಗೆ ಮುಟ್ಟಿದ ರಾಜಕೀಯ ಕೆಸರು ಎರಚಾಟ….

30 Sep 2021 | 9:10 AM

ಬೆಂಗಳೂರು, ಸೆ 30 (ಯುಎನ್ಐ) 'ಕರ್ನಾಟಕದಲ್ಲಿ 'ತಾಲಿಬಾನಿ' ಎಂಬ ಪದ ರಾಜಕೀಯವಾಗಿ ತೀವ್ರ ಬಳಕೆಯಾಗುತ್ತಿರುವುದನ್ನು ಕಂಡು ಅಫ್ಗಾನಿಸ್ತಾನದ ಮೂಲ ತಾಲಿಬಾನಿಗರಿಗೆ ತೀವ್ರ ಅಸಮಾಧಾನ, ಮುಜುಗರವಾಗಿದ್ದರೆ ಆಶ್ಚರ್ಯವಿಲ್ಲ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಟ್ವೀಟ್ ಮೂಲಕ ಮೂದಲಿಸಿದ್ದಾರೆ.

 Sharesee more..

ಶಾಹೀನ್ ಚಂಡಮಾರುತ: ಇನ್ನೂ ಮೂರು ದಿನ ಮಳೆ ಕಾಟ..!!

30 Sep 2021 | 8:49 AM

ಬೆಂಗಳೂರು, ಸೆ 30 (ಯುಎನ್ಐ) ಗುಲಾಬ್ ಅಯಿತು , ಶಾಹೀನ್ ಚಂಡಮಾರುತ ಅಪ್ಪಳಿಸುವ ಸಾದ್ಯತೆಯ ಹಿನ್ನೆಲೆಯಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇಂದಿನಿಂದ ಮೂರುದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 Sharesee more..
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳ ನೇಮಕ

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳ ನೇಮಕ

30 Sep 2021 | 8:42 AM

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ರಾಜಕೀಯ ಕಾರ್ಯದರ್ಶಿಗಳ ಸ್ಥಾನಗಳು ತೆರವಾಗಿದ್ದವು. ಶಾಸಕ ಎಂ.ಪಿ. ರೇಣುಕಾಚಾರ್ಯ, ಡಿ.ಎನ್. ಜೀವರಾಜ್ ಇಬ್ಬರೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಾಳೆಯದಲ್ಲಿ ಗುರುತಿಸಿಕೊಂಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರೂ ಯಡಿಯೂರಪ್ಪ ಅವರ ಆಪ್ತ ಬಳಗಕ್ಕೆ ಸೇರಿದವರು. ಈ ಹಿನ್ನೆಲೆಯಲ್ಲಿ ಇವರಿಬ್ಬರು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಗಳಾಗಿ ನೇಮಕಾತಿಯಾಗಿದ್ದಾರೆ.

 Sharesee more..

ಕೋವಿಡ್ ಪರಿಹಾರ: ಗಾಯದ ಮೇಲೆ ಉಪ್ಪುಸವರುವ ಜನದ್ರೋಹ…..

30 Sep 2021 | 8:34 AM

(ವಿಶೇಷ ವರದಿ) ಬೆಂಗಳೂರು, ಸೆ 30 (ಯುಎನ್ಐ) ಕೋವಿಡ್ ನಿಂದ ಮೃತಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೊಟ್ಟ ಮಾತಿನಂತೆ ನಡೆಯದಿರುವುದು ಜನತೆಗೆ ಮಾಡುತ್ತಿರುವ ಆತ್ಮವಂಚನೆಯಲ್ಲವೇ? ಹಿಂದಿನ ಮುಖ್ಯಮಂತ್ರಿ ಬಿ.

 Sharesee more..