Sunday, May 31 2020 | Time 17:49 Hrs(IST)
 • ಬಾಂಗ್ಲಾದೇಶದಲ್ಲಿ ಒಂದೇ ದಿನ ಅತಿಹೆಚ್ಚು 40 ಕೊರೊನವೈರಸ್ ಸೋಂಕಿತರು ಸಾವು
 • ತಳಮಟ್ಟದವರಿಗಾಗಿ ಆನ್ ಲೈನ್ ಕೋಚಿಂಗ್ ತರಬೇತಿ ಖೇಲೋ ಇಂಡಿಯಾ ಇ ಪ್ರತಿಷ್ಠಾನ ಆರಂಭಿಸಲಿರುವ ಸಾಯ್
 • ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಗೆ ಕರ್ನಾಟಕ ಪ್ರಾಂತ ರೈತ ಸಂಘ ತೀವ್ರ ವಿರೋಧ: ಸೋಮವಾರ ಪ್ರತಿಭಟನೆ
 • ಕೊವಿಡ್‍-19: ಪಾಕಿಸ್ತಾನದಲ್ಲಿ ಹೊಸ 88 ಸಾವು ಪ್ರಕರಣಗಳು ವರದಿ
 • ರಾಜ್ಯದಲ್ಲಿ ಸೋಮವಾರದಿಂದ ರಾತ್ರಿ 9 ರಿಂದ ಬೆ, 5 ಗಂಟೆವರೆಗೆ ಮಾತ್ರ ಕರ್ಫ್ಯೂ ಜಾರಿ
 • ಖೇಲ್ ರತ್ನಗೆ ವಿನೇಶ್ ಹೆಸರು ಶಿಫಾರಸಿಗೆ ಸಜ್ಜು
 • ಗ್ರಾಪಂ ಚುನಾವಣೆ ಮುಂದೂಡಿಕೆ: ಕೋರ್ಟ್ ಮೆಟ್ಟಿಲೇರಲು ಸಿದ್ಧತೆ- ಎಚ್‌ ಕೆ ಪಾಟೀಲ್
 • ಸ್ವಾಮೀಜಿಗಳ ಜೊತೆ ಆರ್‌ಆರ್‌ಎಸ್‌ ಮುಖ್ಯಸ್ಥ ಭಾಗವತ್ ಸಂವಾದ
 • ಮುಂದುವರಿದ ಬಿಜೆಪಿ ಬಂಡಾಯ: ನಿರಾಣಿ ವಿರುದ್ಧ ತಿರುಗಿಬಿದ್ದ ಕತ್ತಿ, ಯತ್ನಾಳ್
 • ದೇವಸ್ಥಾನ ತೆರೆಯುವ ಬಗ್ಗೆ ಆಕಾಶ್‌ ಛೋಪ್ರ ಅಸಂಬದ್ಧ ಹೇಳಿಕೆಗೆ ಅಭಿಮಾನಿಗಳು ಕೆಂಡಮಂಡಲ
 • ಕೇರಳ: ಹೆತ್ತ ತಾಯಿಯನ್ನೇ ಕತ್ತು ಸೀಳಿ ಹತ್ಯೆ ಮಾಡಿದ ಪುತ್ರ
 • ಕೋವಿಡ್-19: ರಾಯಚೂರಿನಲ್ಲಿ ಗುಣಮುಖರಾದ 34 ಮಂದಿ ಬಿಡುಗಡೆ
 • ಹೊಸಪೇಟೆಯಲ್ಲಿ 12 5 ಕೋಟಿ ವೆಚ್ಚದ ವಿವೇಕಾನಂದರ ಪ್ರತಿಮೆ: ಸಚಿವ ಆನಂದ್ ಸಿಂಗ್‌
 • ಷೇರುದಾರರ ಸಹಾಯಕ್ಕಾಗಿ ಆರ್ ಐಎಲ್ ಮೊದಲ ಎಐ ಚಾಟ್ ಬಾಟ್ ಆರಂಭ
 • ಮುಂಗಾರು ಹಂಗಾಮಿಗೆ ಸಿದ್ಧತೆ: ಬಿತ್ತನೆ ಬೀಜಗಳಿಗಿಲ್ಲ ಕೊರತೆ; 2 59 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ
National Share

ಅಯೋಧ್ಯೆ: ಶಾಂತಿ ಕಾಪಾಡುವಂತೆ ಜನರಿಗೆ ಪೇಜಾವರ ಶ್ರೀಗಳ ಮನವಿ

ಅಯೋಧ್ಯೆ: ಶಾಂತಿ ಕಾಪಾಡುವಂತೆ ಜನರಿಗೆ ಪೇಜಾವರ ಶ್ರೀಗಳ ಮನವಿ
ಅಯೋಧ್ಯೆ: ಶಾಂತಿ ಕಾಪಾಡುವಂತೆ ಜನರಿಗೆ ಪೇಜಾವರ ಶ್ರೀಗಳ ಮನವಿ

ಉಡುಪಿ, ನ 8 (ಯುಎನ್‌ಐ) ಅಯೋಧ್ಯೆ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ಹೊರಬರುವ ಹಿನ್ನೆಲೆಯಲ್ಲಿ ಸಮಾಜದಲ್ಲಿ ಸಾಮರಸ್ಯ ಕಾಪಾಡಿಕೊಂಡು, ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಸಂಭ್ರಮಾಚರಣೆಯ ಮೆರವಣಿಗೆಗಳನ್ನು ನಡೆಸದಂತೆ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮಿಜೀ ಜನರಿಗೆ ಮನವಿ ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪನ್ನು ಶಾಂತಿಯುತವಾಗಿ ಸ್ವೀಕರಿಸುವ ಅಗತ್ಯವನ್ನು ಒತ್ತಿಹೇಳಿದ ಪೇಜಾವರ ಶ್ರೀಗಳು, ನ್ಯಾಯಾಲಯವು ತನ್ನ ತೀರ್ಪನ್ನು ಯಾರ ಪರವಾಗಿ ಘೋಷಿಸಿದರೂ ಸಮುದಾಯಗಳು ಇಲ್ಲವೇ ಗುಂಪುಗಳು ವಿಜಯದ ಮೆರವಣಿಗೆಯನ್ನು ನಡೆಸಿದರೆ ಅಥವಾ ಹಿಂಸಾಚಾರಕ್ಕೆ ಇಳಿದರೆ ಅನಿರ್ದಿಷ್ಟ ಉಪವಾಸ ನಡೆಸುವುದಾಗಿ ಹೇಳಿದ್ದಾರೆ.

‘ನವೆಂಬರ್ 15 ಕ್ಕಿಂತ ಮೊದಲು ಈ ವಿಷಯದಲ್ಲಿ ಅಂತಿಮ ತೀರ್ಪು ನಿರೀಕ್ಷಿಸಲಾಗಿದೆ. ಜನರು ತೀರ್ಪನ್ನು ಸ್ವಾಗತಿಸಿ ಆಚರಿಸಲು ಬಯಸುವುದಾದರೆ, ಅವರು ತಮ್ಮ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಬಹುದು.’ ಎಂದು ಶ್ರೀಗಳು ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಮ ಮಂದಿರ ನಿರ್ಮಾಣ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸುಪ್ರೀಂಕೋರ್ಟ್ ತೀರ್ಪಿನ ನಂತರ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಟಿಪ್ಪು ಸುಲ್ತಾನ್ ಕುರಿತ ಇತಿಹಾಸದ ಪಾಠ್ಯಗಳನ್ನು ಶಾಲಾ ಪಠ್ಯ ಪುಸ್ತಕಗಳಿಂದ ತೆಗೆದುಹಾಕುವ ಸರ್ಕಾರದ ನಿರ್ಧಾರ ಕುರಿತು ಪ್ರತಿಕ್ರಿಯಿಸಿದ ಅವರು, ಐತಿಹಾಸಿಕ ಸಂಗತಿಗಳು ವ್ಯಕ್ತಿಯ ವ್ಯಕ್ತಿತ್ವ ಮತ್ತು ಕಾರ್ಯಗಳ ಎರಡೂ ಬದಿಗಳನ್ನು ತೋರಿಸಬೇಕು ಎಂದು ಹೇಳಿದರು.

ಟಿಪ್ಪುವಿನ ಆಡಳಿತವು ಉತ್ತಮವಾಗಿದ್ದರೂ, ಕೊಡಗು ಜಿಲ್ಲೆಯವರು ಮತ್ತು ಕ್ರೈಸ್ತರು ಆತನು ನಡೆಸಿದ್ದಾನೆಲ್ಲಾದ ಹತ್ಯಾಕಾಂಡಗಳ ಬಗ್ಗೆ ದೂಷಿಸಿದ್ದಾರೆ. ‘ಒಳ್ಳೆಯದು ಮತ್ತು ಕೆಟ್ಟದ್ದನ್ನು ಮಾಡಿದ ಅನೇಕ ರಾಜರು ಇದ್ದರು. ಅವರನ್ನು ಅತಿಯಾಗಿ ವೈಭವೀಕರಿಸಬಾರದು. ಟಿಪ್ಪು ನಡೆಸಿದ ಕೆಲ ಯುದ್ಧಗಳನ್ನು ಪಾಠದಲ್ಲಿ ಉಲ್ಲೇಖಿಸಿದರೆ ಅದು ತಪ್ಪಾಗುವುದಿಲ್ಲ.’ಎಂದು ಶ್ರೀಗಳು ಹೇಳಿದ್ದಾರೆ.

ಯುಎನ್‍ಐ ಎಸ್‍ಎಲ್‍ಎಸ್ ಕೆವಿಆರ್ 1521